twitter
    For Quick Alerts
    ALLOW NOTIFICATIONS  
    For Daily Alerts

    ಫೋಟೋ ನೋಡಿ: ಅರಿಶಿಣ ಶಾಸ್ತ್ರ ಮುಗಿಸಿದ ರಣ್ವೀರ್ ಸಿಂಗ್

    |

    ಬಾಲಿವುಡ್ ನ ತಾರಾ ಜೋಡಿಯ ಮದುವೆಗೆ ದಿನಗಣನೆ ಶುರುವಾಗಿದೆ. ನವೆಂಬರ್ 14 ಹಾಗೂ 15 ರಂದು ನಟ ರಣ್ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ವಿವಾಹ ಮಹೋತ್ಸವ ನಡೆಯಲಿದೆ.

    ಅನುಷ್ಕಾ ಶರ್ಮ ಹಾಗೂ ವಿರಾಟ್ ಕೊಹ್ಲಿಯಂತೆ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ರಣ್ವೀರ್ ಸಿಂಗ್-ದೀಪಿಕಾ ಪಡುಕೋಣೆ ಕಾಲಿಡಲಿದ್ದಾರೆ. ನಂತರ ಬೆಂಗಳೂರು ಹಾಗೂ ಮುಂಬೈನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ.

    ಫೋಟೋ ನೋಡಿ: ದೀಪಿಕಾ ಪಡುಕೋಣೆ ಮನೆಯಲ್ಲಿ ಮದುವೆ ಸಂಭ್ರಮ ಶುರುಫೋಟೋ ನೋಡಿ: ದೀಪಿಕಾ ಪಡುಕೋಣೆ ಮನೆಯಲ್ಲಿ ಮದುವೆ ಸಂಭ್ರಮ ಶುರು

    ಈಗಾಗಲೇ ಗಂಡು-ಹೆಣ್ಣಿನ ಮನೆಯಲ್ಲಿ ವಿವಾಹ ಪೂರ್ವ ಶಾಸ್ತ್ರಗಳು ಆರಂಭಗೊಂಡಿದೆ. ಮೊನ್ನೆಯಷ್ಟೇ ಬೆಂಗಳೂರಿನ ದೀಪಿಕಾ ಪಡುಕೋಣೆ ಮನೆಯಲ್ಲಿ ನಂದಿ ಪೂಜೆ ನೆರವೇರಿತ್ತು. ಇದೀಗ ರಣ್ವೀರ್ ಸಿಂಗ್ ಮನೆಯಲ್ಲಿ ಅರಿಶಿಣ ಶಾಸ್ತ್ರ ನಡೆದಿದೆ.

    First picture: Ranveer Singh looks dashing at Haldi ceremony

    ಮದುವೆಗೆ ಬರುವ ಅತಿಥಿಗಳಿಗೆ ದೀಪಿಕಾ-ರಣ್ವೀರ್ ಕಡೆಯಿಂದ ಹೀಗೊಂದು ಮನವಿ.!ಮದುವೆಗೆ ಬರುವ ಅತಿಥಿಗಳಿಗೆ ದೀಪಿಕಾ-ರಣ್ವೀರ್ ಕಡೆಯಿಂದ ಹೀಗೊಂದು ಮನವಿ.!

    ಬಿಳಿ ಬಣ್ಣದ ಕುರ್ತಾ ಪೈಜಾಮ ಧರಿಸಿ ಹಳದಿ ಶಾಸ್ತ್ರದಲ್ಲಿ ಮದುಮಗ ರಣ್ವೀರ್ ಸಿಂಗ್ ಪಾಲ್ಗೊಂಡಿದ್ದರು. ಆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕುಟುಂಬಸ್ಥರು ಹಾಗೂ ಸ್ನೇಹಿತರ ಸಮಕ್ಷಮದಲ್ಲಿ ರಣ್ವೀರ್ ಸಿಂಗ್ ಹಳದಿ ಶಾಸ್ತ್ರ ನೆರವೇರಿದೆ.

    ರಣ್ವೀರ್ ಸಿಂಗ್ ಮೊಗದಲ್ಲಿ ಮದುಮಗನ ಕಳೆ ಝಗಮಗಿಸುತ್ತಿದೆ. ಅದಕ್ಕೆ ಈ ಫೋಟೋಗಳೇ ಸಾಕ್ಷಿ.

    English summary
    First picture: Ranveer Singh looks dashing at Haldi ceremony.
    Monday, November 5, 2018, 18:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X