ಲಿಪ್ ಕಿಸ್ ಮಾಡಿದ, ಶರ್ಟ್ ಒಳಗೆ ಕೈ ಹಾಕಿದ ; ನಿರ್ಮಾಪಕನಿಂದ ದೌರ್ಜನ್ಯ- ಕರಾಳ ಅನುಭವ ಹಂಚಿಕೊಂಡ ನಟಿ
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುವ ಮಾತು ಇದೆ. ಈ ಮಾತು ಚಿತ್ರರಂಗಕ್ಕೆ ಹೆಚ್ಚು ಸೂಕ್ತವಾಗುತ್ತೆ. ಯಾಕೆಂದರೆ.. ಹೊರಗಡೆಯಿಂದ ತುಂಬಾನೇ ಕಲರ್ ಫುಲ್ ಆಗಿ ಕಾಣುವ ಈ ಬಣ್ಣದ ಲೋಕದಲ್ಲಿ ನಾನಾ ಬಗೆಯ ವೇಷಭೂಷಣ ಹಾಕಿಕೊಂಡ ಹಲವಾರು ಜನ ಇದ್ದಾರೆ. ಅದರಲ್ಲಿಯೂ ನಾಯಕಿಯಾಗಿ ನೆಲೆಯೂರಬೇಕೆಂದು ಕನಸೊತ್ತು ಬರುವ ಹಲವರ ಪಾಲಿಗೆ ಚಿತ್ರರಂಗ ಕಲ್ಲು ಮುಳ್ಳಿನ ಹಾದಿಯೇ.
ಅಡಿಗಡಿಗೂ ಈ ಚಿತ್ರರಂಗದಲ್ಲಿ ಸವಾಲುಗಳಿಗೆ ಎದೆಯೊಡ್ಡಬೇಕಾಗುತ್ತದೆ. ಪಾತ್ರಕ್ಕೆ ಪಲ್ಲಂಗವೇರಬೇಕು ಎಂಬ ಷರತ್ತನ್ನು ಒಪ್ಪಿಕೊಂಡರೆ ಮಾತ್ರ ಇಲ್ಲಿ ಅವಕಾಶ ಎಂದು ದುಷ್ಟ ವ್ಯವಸ್ಥೆಯೊಂದು ಇವರಿಗೆ ಮಾನಸಿಕ ಕಿರಿಕಿರಿ ನೀಡುತ್ತದೆ. ಒಟ್ನಲ್ಲಿ ಚಿತ್ರರಂಗದಲ್ಲಿ ಇಂದು ಹೆಸರು ಮಾಡಿರುವವರು.. ಹೆಸರು ಮಾಡಲಾಗದೇ ಮನೆ ಸೇರಿದವರು.. ಒಂದಿಲ್ಲೊಂದು ದಿನ.. ಒಂದಿಲ್ಲೊಂದು ರೀತಿಯಲ್ಲಿ.. ಈ ಝಗಮಗ ಲೋಕದಲ್ಲಿನ ವಿಕೃತ ಲೋಕವನ್ನು ಕಂಡು ಬೆಚ್ಚಿ ಬಿದ್ದಿಯೇ ಬಿದ್ದಿರುತ್ತಾರೆ. ಉದಾಹರಣೆಗೆ ಡಾಲಿ ಸಿಂಗ್.

ಹೌದು, ಡಾಲಿ ಸಿಂಗ್.. ಬಾಲಿವುಡ್‌ನ ಚೆಲುವೆ.''ಥ್ಯಾಂಕ್ ಯೂ ಫಾರ್ ಕಮಿಂಗ್''..''ಡಬಲ್ ಎಕ್ಸ್ ಎಲ್''.. ''ಭಾಗ್ ಬಿನ್ನಿ ಭಾಗ್''.. ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಡಾಲಿ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕೂಡ ಹೌದು. ಇಂಥಾ ಡಾಲಿ ಸಿಂಗ್ 19ನೇ ವರ್ಷದಲ್ಲಿ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ.
ಈ ಕುರಿತು ''ಜೂಮ್''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಡಾಲಿ, ನನಗೆ ಆಗಿನ್ನೂ 19-20 ವರ್ಷ. ದೆಹಲಿಯಲ್ಲಿ ಅವಕಾಶಕ್ಕಾಗಿ ಅಲೆಯುತ್ತಿದ್ದ ದಿನಗಳವು ಎಂದು ಆ ದಿನಗಳನ್ನು ಮೆಲುಕು ಹಾಕಿದ್ದಾರೆ.
ದೆಹಲಿಯಲ್ಲಿ ಓಡಾಡುತ್ತಿದ್ದಾಗ ಕಾಸ್ಟಿಂಗ್ ಡೈರೆಕ್ಟರ್ ಒಬ್ಬರಿಗೆ ನಾನು ಕರೆ ಮಾಡಿದ್ದೇ, ಮೊದಲ ಮಾತು ಕಥೆಯಲ್ಲಿಯೇ ಅವರ ಮಾತುಗಳು ತುಂಬಾ ವಿಚಿತ್ರವಾಗಿದ್ದವು ಎಂದು ಹೇಳಿರುವ ಡಾಲಿ, ಆದರೂ ಕೂಡ ನಾನು ಮಾತು ಮುಂದುವರೆಸಿದೆ. ಯಾಕೆಂಧರೆ ನಾವು ಹೊಸಬರು. ಮಾತನಾಡದಿದ್ದರೆ ಕೆಲಸದಲ್ಲಿ ಇವರಿಗೆ ಆಸಕ್ತಿ ಇಲ್ಲ ಎನ್ನುವ ಭಾವನೆ ಅವರಿಗೆ ಬರಬಹುದು. ಹೀಗಾಗಿ ನಾನು ಮನಸಿಲ್ಲದಿದ್ದರೂ ಅವತ್ತು ತುಂಬಾ ಸಮಯ ಅವರ ಜೊತೆ ಮಾತನಾಡಿದೆ ಎಂದು ಹೇಳಿದ್ದಾರೆ.
ಮುಂದುವರೆದು ಆ ನಂತರ ಆ ವ್ಯಕ್ತಿ ನನ್ನ ಹೊಟೇಲ್‌ಗೆ ಕರೆದ, ನಿರ್ಮಾಪಕರನ್ನು ಭೇಟಿ ಮಾಡಿಸುತ್ತೇನೆ ಬನ್ನಿ ಎಂದು ಹೇಳಿದ. ನಾನು ಕೂಡ ತುಂಬಾ ಖುಷಿ ಖುಷಿಯಲ್ಲಿ ಅಲ್ಲಿ ಹೋದೆ. ಆ ನಂತರ ನಿರ್ಮಾಪಕರು ಕೂಡ ಬಂದರು ಎಂದು ಹೇಳಿರುವ ಡಾಲಿ, ಅವರು ಬಂದವರೇ ಸೀದಾ ಎಣ್ಣೆ ಹೊಡೆಯಲು ಶುರು ಮಾಡಿದರು. ಅದೃಷ್ಟವಶಾತ್ ನನಗೆ ಕುಡಿಯುವ ಅಭ್ಯಾಸ ಇಲ್ಲ ಹೀಗಾಗಿ ನಾನು ಸುಮ್ಮನೆ ಕುಳಿತಿದ್ದೇ ಎಂದು ಹೇಳಿದ್ದಾರೆ.

ಆ ನಂತರ ನಾವು ಕಾರಿನಲ್ಲಿ ಮರಳಿ ಹೋಗುವ ಸಂದರ್ಭದಲ್ಲಿ ಆ ನಿರ್ಮಾಪಕ ಹಠಾತ್ತನೇ ನನಗೆ ಲಿಪ್ ಕಿಸ್ ಮಾಡಿದ, ನನ್ನ ಶರ್ಟ್ ಒಳಗಡೆ ಕೈ ಹಾಕಲು ಕೂಡ ಪ್ರಯತ್ನ ಮಾಡಿದ ಎಂದು ಹೇಳಿರುವ ಡಾಲಿ ಸಿಂಗ್ ಆ ಕ್ಷಣಕ್ಕೆ ನನಗೆ ನಿಂತ ನೆಲ ಕುಸಿದಂತೆ ಆಗಿತ್ತು. ಸಂಪೂರ್ಣವಾಗಿ ನಾನು ನಡಗುತ್ತಿದ್ದೆ, ಏನು ಮಾಡಬೇಕೆನ್ನುವುದೇ ನನಗೆ ಗೊತ್ತಾಗಲಿಲ್ಲ ಎಂದು ಹೇಳಿದ್ದಾರೆ.
ನನಗೆ ಆಗ 19-20 ವಯಸ್ಸು. ಏನೂ ಹೇಳದ ಸ್ಥಿತಿಯಲ್ಲಿ ನಾನು ಇದ್ದೆ, ತಪ್ಪಿಸಿಕೊಳ್ಳಲು ಕೂಡ ಸಾಧ್ಯವಾಗಲಿಲ್ಲ ಎಂದು ಹೇಳಿರುವ ಡಾಲಿ ಸಿಂಗ್, ಧೈರ್ಯ ಮಾಡಿ ಮೆಟ್ರೋ ನಿಲ್ದಾಣದ ಕಡೆ ನನ್ನನ್ನೂ ಬಿಡುವಂತೆ ನಾಣು ಹೇಳಿದೆ. ಮುಂದೇನು ಆಗದಿರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದೆ. ನನ್ನ ಅದೃಷ್ಟ. ಪವಾಡ ಎಂಬಂತೆ ನಾನು ಅವನ ಕಪಿಮುಷ್ಠಿಯಿಂದ ಪಾರಾದೆ, ಮೆಟ್ರೋ ನಿಲ್ದಾಣದ ಬಳಿ ಇಳಿದುಕೊಂಡೆ ಎಂದು ಹೇಳಿದ್ದಾರೆ. ನನಗೆ ತುಂಬಾ ಅನಿರೀಕ್ಷಿತವಾಗಿತ್ತು. ಇದರಿಂದ ನಾನು ಆಘಾತಕ್ಕೊಳಗಾಗಿದ್ದೇ ಎಂದು ಕೂಡ ಡಾಲಿ ಸಿಂಗ್ ಹೇಳಿದ್ದಾರೆ.


Click it and Unblock the Notifications











