For Quick Alerts
  ALLOW NOTIFICATIONS  
  For Daily Alerts

  ಅತಿ ಹೆಚ್ಚು ಫ್ಲಾಪ್ ಸಿನಿಮಾ ನೀಡಿದ ಬಾಲಿವುಡ್ ನಾಯಕ ನಟರು

  |

  ನಾಯಕ ನಟನನ್ನು ಸ್ಟಾರ್, ಸೂಪರ್ ಸ್ಟಾರ್ ಆಗಿ ಮಾಡುವುದು ಆತ ನೀಡಿದ ಹಿಟ್ ಸಿನಿಮಾಗಳು. ಎಷ್ಟು ಹಿಟ್ ಸಿನಿಮಾ ನೀಡಿದ್ದಾನೆ ಎಂಬುದರ ಮೇಲೆ ನಾಯಕ ನಟನ ಬೇಡಿಕೆ ನಿರ್ಧಾರವಾಗುತ್ತದೆ.

  Ayogya ಸಿನಿಮಾದಲ್ಲಿ Satish Neenasam ಕೆಂಡದ ಮೇಲೆ ಓಡಿದ್ದು ಹೇಗೆ ನೋಡಿ|Ayogya song Making| Oneindia Kannada

  ಇಂದು ಬಹುದೊಡ್ಡ ಸ್ಟಾರ್‌ ನಟರೆನಿಸಿಕೊಂಡವರೂ ಸಹ ಹಲವಾರು ಫ್ಲಾಫ್‌ ಸಿನಿಮಾಗಳನ್ನು ನೀಡಿದವರೇ. ಹಾಗೆ ನೋಡಿದರೆ ಭಾರತದಲ್ಲಿ ಅತಿ ಹೆಚ್ಚು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಏಕೈಕ ನಾಯಕ ನಟ ನಮ್ಮ ಹೆಮ್ಮೆಯ ಡಾ.ರಾಜ್‌ಕುಮಾರ್.

  ಯಾರು ಈ ರಿಯಾ ಚಕ್ರವರ್ತಿ? ಬೆಂಗಳೂರಿಗೆ ಇರುವ ನಂಟು ಏನು ಗೊತ್ತೇ?ಯಾರು ಈ ರಿಯಾ ಚಕ್ರವರ್ತಿ? ಬೆಂಗಳೂರಿಗೆ ಇರುವ ನಂಟು ಏನು ಗೊತ್ತೇ?

  ಬಾಲಿವುಡ್‌ನ ದಂತಕತೆ ಎಂದೇ ಕರೆಯಲಾಗುವ ಅಮಿತಾಬ್ ಬಚ್ಚನ್ ಸಹ ಹಲವಾರು ಫ್ಲಾಫ್‌ ಸಿನಿಮಾಗಳನ್ನು ನೀಡಿದ್ದಾರೆ. ಶಾರುಖ್, ಸಲ್ಮಾನ್ ಸಹ ಇದಕ್ಕೆ ಹೊರತಾಗಿಲ್ಲ. ಬಾಲಿವುಡ್‌ನಲ್ಲಿ ಅತಿ ಹೆಚ್ಚು ಫ್ಲಾಫ್‌ ನೀಡಿದವರಾರು ಎಂದು ನೋಡುವುದಾದರೆ...

  ಅಮಿತಾಬ್ ಬಚ್ಚನ್ ಖಾತೆಯಲ್ಲಿ ಹಲವು ಫ್ಲಾಪ್

  ಅಮಿತಾಬ್ ಬಚ್ಚನ್ ಖಾತೆಯಲ್ಲಿ ಹಲವು ಫ್ಲಾಪ್

  ಅಮಿತಾಬ್ ಬಚ್ಚನ್‌ ಗೆ. ಶೋಲೆ, ದೀವಾರ್ ಅಂಥಹಾ ದಾಖಲೆ ನಿರ್ಮಿಸಿದ ಸಿನಿಮಾಗಳನ್ನು ಮಾಡಿರುವ ಅಮಿತಾಬ್ ಖಾತೆಯಲ್ಲಿ 66 ಫ್ಲಾಪ್‌ ಸಿನಿಮಾಗಳಿವೆ. 16 ಸಿನಿಮಾಗಳು ಇನ್ನಿಲ್ಲದಂತೆ ಸೋತಿವೆ. ಅಮಿತಾಬ್ ಈಗಲೂ ನಟಿಸುತ್ತಿದ್ದಾರೆ. ಇತ್ತೀಚಿನ ಅವರ ಎಲ್ಲ ಸಿನಿಮಾಗಳು ಹಿಟ್ ಆಗಿವೆ. ಅಮಿತಾಬ್ ಒಟ್ಟು 200 ಸಿನಿಮಾಗಳಲ್ಲಿ ನಟಿಸಿದ್ದಾರೆ.

  ಶಾರುಖ್ ಹೆಸರಿನಲ್ಲಿದೆ ಹಲವು ಫ್ಲಾಪ್‌ಗಳು

  ಶಾರುಖ್ ಹೆಸರಿನಲ್ಲಿದೆ ಹಲವು ಫ್ಲಾಪ್‌ಗಳು

  ಬಾಲಿವುಡ್ ಬಾದ್‌ಶಾ 93 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ 24 ಸಿನಿಮಾಗಳು ಫ್ಲಾಪ್ ಆಗಿವೆ. ಅವರ ಇತ್ತೀಚಿನ ಸಿನಿಮಾಗಳು ಬಹುತೇಕ ಫ್ಲಾಪ್ ಆಗಿವೆ. ಜೀರೋ, ರಯೀಸ್, ಹ್ಯಾರಿ ಮೀಟ್ ಸೇಜಲ್, ಫ್ಯಾನ್ ಸಿನಿಮಾಗಳೆಲ್ಲ ಫ್ಲಾಪ್ ಆಗಿವೆ.

  ವಿಶ್ವದಲ್ಲೇ ಅತಿ ಹೆಚ್ಚು ಜನ ನೋಡಿರುವ ಸಿನಿಮಾ ಯಾವುದು? ಟೈಟ್ಯಾನಿಕ್, ಅವತಾರ್ ಅಲ್ಲ!ವಿಶ್ವದಲ್ಲೇ ಅತಿ ಹೆಚ್ಚು ಜನ ನೋಡಿರುವ ಸಿನಿಮಾ ಯಾವುದು? ಟೈಟ್ಯಾನಿಕ್, ಅವತಾರ್ ಅಲ್ಲ!

  ಸಲ್ಮಾನ್ ಖಾನ್ ಫ್ಲಾಪ್‌ಗಳ ಸುಲ್ತಾನ ಸಹ ಹೌದು!

  ಸಲ್ಮಾನ್ ಖಾನ್ ಫ್ಲಾಪ್‌ಗಳ ಸುಲ್ತಾನ ಸಹ ಹೌದು!

  ಬಾಲಿವುಡ್ ಸುಲ್ತಾನ್ ಎಂದು ಕರೆಯಲ್ಪಡುವ ಸಲ್ಮಾನ್ ಖಾನ್ 108 ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿದ್ದಾರೆ. ಅವುಗಳಲ್ಲಿ 34 ಸಿನಿಮಾಗಳು ಫ್ಲಾಪ್. 8 ಸಿನಿಮಾಗಳು ಅಟ್ಟರ್ ಫ್ಲಾಪ್. ಅವರ ಕೊನೆಯ ಫ್ಲಾಪ್ ಸಿನಿಮಾ ಭರತ್. ಅದಕ್ಕೂ ಮುನ್ನ ಟ್ಯೂಬ್‌ಲೈಟ್.

  ಅಮಿರ್ ಖಾನ್ ಸಹ ಫ್ಲಾಪ್ ನೀಡಿದ್ದಾರೆ

  ಅಮಿರ್ ಖಾನ್ ಸಹ ಫ್ಲಾಪ್ ನೀಡಿದ್ದಾರೆ

  ಮಿಸ್ಟರ್ ಪರ್ಫೆಕ್‍ಶನಿಸ್ಟ್ ಅಮಿರ್ ಖಾನ್ 51 ಸಿನಿಮಾಗಳಲ್ಲಿ ನಟಿಸಿದ್ದಾರಷ್ಟೆ. ಬಹಳ ಎಚ್ಚರಿಕೆಯಿಂದ ಆಯ್ದುಕೊಳ್ಳುವ ಅವರ ಸಿನಿಮಾಗಳು ಸಹ ಫ್ಲಾಪ್ ಆಗಿವೆ. ಒಟ್ಟು 15 ಸಿನಿಮಾಗಳು ಫ್ಲಾಪ್ ಆಗಿದ್ದು, ಅವುಗಳಲ್ಲಿ 4 ಅಟ್ಟರ್ ಫ್ಲಾಪ್ ಆಗಿವೆ. ನೆನಪಿರಲಿ 'ಅಂದಾಜ್ ಅಪ್ನಾ ಅಪ್ನಾ' ಸಹ ಫ್ಲಾಪ್ ಆಗಿತ್ತು ಆಗ. ಮಂಗಲ್ ಪಾಂಡೆ ಸಹ.

  ಸಾವಿರಾರು ಜನರಿಗೆ ಸಹಾಯ ಮಾಡುತ್ತಿರುವ ನಿಜ ಜೀವನದ ಹೀರೋ ಸೋನು ಸೂದ್ ಆಸ್ತಿ ಎಷ್ಟು?ಸಾವಿರಾರು ಜನರಿಗೆ ಸಹಾಯ ಮಾಡುತ್ತಿರುವ ನಿಜ ಜೀವನದ ಹೀರೋ ಸೋನು ಸೂದ್ ಆಸ್ತಿ ಎಷ್ಟು?

  ಅತಿ ಹೆಚ್ಚು ಸಂಭಾವನೆ ಪಡೆವ ನಟನ ಫ್ಲಾಪ್ ಗಳೆಷ್ಟು?

  ಅತಿ ಹೆಚ್ಚು ಸಂಭಾವನೆ ಪಡೆವ ನಟನ ಫ್ಲಾಪ್ ಗಳೆಷ್ಟು?

  ಅತಿ ಹೆಚ್ಚು ಸಂಭಾವನೆ ಪಡೆವ ನಟ ಅಕ್ಷಯ್ ಕುಮಾರ್ 137 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ 52 ಫ್ಲಾಪ್ ಆಗಿವೆ. 17 ಅಟ್ಟರ್ ಫ್ಲಾಪ್ ಆಗಿವೆ. ಆದರೆ ಈಗಲೂ ಅವರು ಬಾಲಿವುಡ್‌ನ ನಂಬರ್ 1 ನಟ. ಅತಿ ಹೆಚ್ಚು ಸಂಭಾವನೆ ಪಡೆವ ನಟರೂ ಹೌದು.

  ಗೋವಿಂದ ಕೊಟ್ಟಿದ್ದಾರೆ ಸಾಕಷ್ಟು ಫ್ಲಾಪ್

  ಗೋವಿಂದ ಕೊಟ್ಟಿದ್ದಾರೆ ಸಾಕಷ್ಟು ಫ್ಲಾಪ್

  ಒಂದು ಕಾಲದ ಯುವಕರ ಕಣ್ಮಣಿ ಗೋವಿಂದ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಫ್ಲಾಫ್‌ ಸಿನಿಮಾಗಳನ್ನು ನೀಡಿದ ನಟನೆಂದು ಅಪಖ್ಯಾತಿ ಗಳಿಸಿದ್ದಾರೆ. ಗೋವಿಂದ 74 ಫ್ಲಾಪ್ ಸಿನಿಮಾ ನೀಡಿದ್ದಾರೆ. ಅದರಲ್ಲಿ 24 ಅಂತೂ ಹೀನಾಯ ಸೋಲು ಕಂಡಿದ್ದವು. 125 ಸಿನಿಮಾಗಳಲ್ಲಿ ಗೋವಿಂದ ನಟಿಸಿದ್ದಾರೆ.

  ಸಂಜಯ್ ದತ್‌ ಸಹ ಹಲವು ಫ್ಲಾಪ್ ನೀಡಿದ್ದಾರೆ

  ಸಂಜಯ್ ದತ್‌ ಸಹ ಹಲವು ಫ್ಲಾಪ್ ನೀಡಿದ್ದಾರೆ

  ಎರಡನೇ ಸ್ಥಾನ ನಟ ಸಂಜಯ್ ದತ್‌ ಗೆ. 154 ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ಸಂಜಯ್ ದತ್, 69 ಫ್ಲಾಪ್‌ ಸಿನಿಮಾಗಳನ್ನು ನೀಡಿದ್ದಾರೆ. ಅವುಗಳಲ್ಲಿ 18 ಅಟ್ಟರ್ ಫ್ಲಾಪ್. ಪ್ರಸ್ತುತ ಕ್ಯಾನ್ಸರ್‌ ಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಸಂಜಯ್.

  ಅನಿಲ್ ಕಪೂರ್ ಫ್ಲಾಪ್ ಸಿನಿಮಾಗಳೆಷ್ಟು?

  ಅನಿಲ್ ಕಪೂರ್ ಫ್ಲಾಪ್ ಸಿನಿಮಾಗಳೆಷ್ಟು?

  ಅನಿಲ್ ಕಪೂರ್ ನಾಯಕರಾಗಿ 120 ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಮೊದಲ ಸಿನಿಮಾ ಮಾಡಿದ್ದ ಅನಿಲ್ ಕಪೂರ್, 54 ಫ್ಲಾಪ್ ಸಿನಿಮಾಗಳನ್ನು ನೀಡಿದ್ದಾರೆ. 10 ಸಿನಿಮಾಗಳಂತೂ ಇನ್ನಿಲ್ಲದಂತೆ ಸೋಲು ಕಂಡಿದ್ದವು. ಅನಿಲ್ ಕಪೂರ್ ಈಗಲೂ ನಟಿಸುತ್ತಿದ್ದಾರೆ. ಬಹುತೇಕ ಪೋಷಕ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ.

  ಅಜಯ್ ದೇವಗನ್ ಕೊಟ್ಟಿರುವ ಫ್ಲಾಪ್ ಎಷ್ಟು?

  ಅಜಯ್ ದೇವಗನ್ ಕೊಟ್ಟಿರುವ ಫ್ಲಾಪ್ ಎಷ್ಟು?

  ಒಂದು ಕಾಲದ ಆಕ್ಷನ್ ಹೀರೋ ಸನ್ನಿ ಡಿಯೋಲ್ 93 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ 49 ಫ್ಲಾಪ್‌ ಸಿನಿಮಾಗಳು. ಸರಾಸರಿ ಲೆಕ್ಕ ಹಾಕಿದರೆ ಇವರೇ ಅತಿ ಹೆಚ್ಚು ಫ್ಲಾಪ್ ನೀಡಿರುವ ನಟ ಎನ್ನಬಹುದು. 49 ರಲ್ಲಿ 18 ಸಿನಿಮಾಗಳು ಪೂರ್ಣ ನೆಲಕಚ್ಚಿವೆ. ಆಕ್ಷನ್ ಹೀರೋ ಅಜಯ್ ದೇವಗನ್ 122 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ 44 ಫ್ಲಾಪ್‌ ಸಿನಿಮಾಗಳು. 20 ಸಿನಿಮಾಗಳು ಅಟ್ಟರ್ ಫ್ಲಾಪ್.

  English summary
  There are many star heroes in Bollywood. Every star hero delivered number of flop movie. here is the individual numbers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X