»   » ಬಿಟೌನ್‌ ಅಂಗಳದ ಬೆಸ್ಟ್ ಕಿಸ್ಸರ್ ಯಾರು? ರಣವೀರ್‌ನಿಂದ ಬಹಿರಂಗ!

ಬಿಟೌನ್‌ ಅಂಗಳದ ಬೆಸ್ಟ್ ಕಿಸ್ಸರ್ ಯಾರು? ರಣವೀರ್‌ನಿಂದ ಬಹಿರಂಗ!

Posted By:
Subscribe to Filmibeat Kannada

ಬಾಲಿವುಡ್ ಬಾಜಿರಾವ್ ರಣವೀರ್ ಸಿಂಗ್ ಸ್ಟೈಲಿಗೆ ಫಿದಾ ಆಗದವರು ಯಾರಿಲ್ಲ. ಸದಾ ವಿಭಿನ್ನ ಪಾತ್ರಗಳ ಮೂಲಕ ಸೌಂಡ್ ಮಾಡುವ ರಣವೀರ್ ಬಹುಸಂಖ್ಯಾತ ನಟಿಯರ ಹಾಟ್ ಫೇವರಿಟ್ ನಟನೂ ಹೌದು. ಈಗ ಇವರು ಖಾಸಗಿ ವಾಹಿನಿಯೊಂದರಲ್ಲಿ ನೀಡಿದ ಉತ್ತರ ಒಂದರಿಂದ ಸಖತ್ ಸದ್ದು ಮಾಡುತ್ತಿದ್ದಾರೆ.

ದೀಪಿಕಾ ಪಡುಕೋಣೆ ಡೇಟಿಂಗ್ ಕುರಿತು ಹೀಗೊಂದು ಸ್ಫೋಟಕ ಸುದ್ದಿ?

ರಣವೀರ್ ಸಿಂಗ್ ಇತ್ತೀಚೆಗೆ ನಟಿ ನೇಹಾ ದೂಪಿಯಾ ನಡೆಸಿಕೊಡುವ 'ನೋ ಫೀಲ್ಟರ್ ನೇಹಾ' ಸೀಸನ್ 2 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ನೇಹಾ ರವರು 'ನಿಮ್ಮ ಪ್ರಕಾರ ಯಾವ ನಟಿ ಬೆಸ್ಟ್ ಕಿಸ್ಸರ್?' ಎಂಬ ಪ್ರಶ್ನೆ ಕೇಳಿದ್ದರು. ಇದಕ್ಕೆ ನೇರವಾಗಿಯೇ ಉತ್ತರಿಸುವ ರಣವೀರ್ ಅಂತೂ ತಮ್ಮ ದೃಷ್ಟಿಯಲ್ಲಿ ಬೆಸ್ಟ್ ಕಿಸ್ಸರ್ ಯಾರು ಎಂದು ರಿವೀಲ್ ಮಾಡಿದ್ದಾರೆ.

For Ranveer Singh, alleged ladylove Deepika Padukone is the best kisser

ನಟ ರಣವೀರ್ ಪ್ರಕಾರ ಆಕೆಯ ರೂಮರ್ಸ್ ಗರ್ಲ್‌ ಫ್ರೆಂಡ್ ದೀಪಿಕಾ ಪಡುಕೋಣೆ ಬೆಸ್ಟ್‌ ಕಿಸ್ಸರ್ ಎಂದು ಹೇಳಿದ್ದಾರೆ. ಈ ಆಡಿಯೋ ತುಣುಕು ಈಗ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ.

For Ranveer Singh, alleged ladylove Deepika Padukone is the best kisser

ಅಂದಹಾಗೆ ರಣವೀರ್ ಪ್ರಕಾರ ಬೆಸ್ಟ್ ಕಿಸ್ಸರ್ ಡಿಪ್ಪಿ ಎಂಬ ಉತ್ತರ ಎಲ್ಲರ ನಿರೀಕ್ಷಿತ ಉತ್ತರವು ಎಂದರೆ ತಪ್ಪಿಲ್ಲ. ಕಾರಣ ಈ ನಟ-ನಟಿ ಇಬ್ಬರ ಕಾಂಬಿನೇಷನ್, ಚಿತ್ರಗಳಲ್ಲಿನ ಅವರ ಕೆಮಿಸ್ಟ್ರಿ ನೋಡಿದರೆ ಎಲ್ಲರಿಗೂ ತಿಳಿಯುವ ವಿಷಯವಿದು. 'ರಾಮಲೀಲಾ' ಚಿತ್ರದಲ್ಲಿ 'ಅಂಗ್ ಲಗಾ ದೆ ರೇ.. ಮುಜೇ ರಂಗ್ ಲಗಾ ದೆ ರೇ' ಹಾಡನ್ನು ನೋಡಿದವರಿಗೆ ಇವರ ಕೆಮಿಸ್ಟ್ರಿಯನ್ನು ಮತ್ತೆ ಮತ್ತೆ ನೋಡುವ ಆಸೆ ಹುಟ್ಟದಿರದು.

'ಪದ್ಮಾವತಿ' ಆಗಲು ನಟಿ ದೀಪಿಕಾ ಪಡುಕೋಣೆ ಪಡೆದ ಸಂಭಾವನೆ ಎಷ್ಟು.?

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಇಬ್ಬರ ನಡುವೆ ಬಿರುಕು ಉಂಟಾಗಿದೆ ಎಂಬ ಗಾಳಿಸುದ್ದಿ ಬಿಟೌನ್ ನಲ್ಲಿ ಇತ್ತೀಚೆಗೆ ಹರಿದಾಡಿತ್ತು. ಆದರೆ ಈ ಇಬ್ಬರ ರಿಲೇಶನ್‌ಶಿಪ್‌ ಅವರ ಚಿತ್ರಗಳಿಂದಲೇ ಮಾತ್ರ ತಿಳಿಯುವುದು. ಪ್ರಸ್ತುತ ಇಬ್ಬರು ಸಹ 'ಪದ್ಮಾವತಿ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

English summary
For Ranveer Singh, alleged ladylove Deepika Padukone is the best kisser

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada