ಕಂಗನಾ-ಹೃತಿಕ್ ಅಫೇರ್ ಕೇಸ್ ನಲ್ಲಿ ಮಹತ್ತರ ತಿರುವು
ಬಾಲಿವುಡ್ ನ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಮತ್ತು ಬಹು ಬೇಡಿಕೆಯ ನಟಿ ಕಂಗನಾ ರನೌತ್ ಅವರ ನಡುವಿನ ಸಮರ ಇದೀಗ ಹೊಸ ತಿರುವು ಪಡೆದುಕೊಂಡಿದೆ. ನಟಿ ಕಂಗನಾ ಮತ್ತು 'ಕ್ರಿಷ್' ನಟ ಹೃತಿಕ್ ರೋಷನ್ ಅವರ ನಡುವೆ ಅಫೇರ್ ಇದೆ ಅನ್ನೋ ವಿಚಾರ ಕೋರ್ಟ್ ನಲ್ಲಿದೆ.
ಇದೀಗ ಈ ಅಫೇರ್ ಕೇಸ್ ನಲ್ಲಿ ಒಂದು ಮಹತ್ತರ ವಿಚಾರ ಬೆಳಕಿಗೆ ಬಂದಿಗೆ. ಈ ಮೊದಲು ನಟಿ ಕಂಗನಾ ರನೌತ್ ಅವರ ವಕೀಲರು, ನಟ ಹೃತಿಕ್ ರೋಷನ್ ಅವರು ಕಂಗನಾ ಅವರ ಇಮೇಲ್ ಹ್ಯಾಕ್ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು.['ಕ್ವೀನ್' ಕಂಗನಾ-ಹೃತಿಕ್ ಬಗ್ಗೆ ಹೊರಬಿದ್ದಿರುವ ಶಾಕಿಂಗ್ ನ್ಯೂಸ್]

ಆದರೆ ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ ಹೃತಿಕ್ ಅವರು ಕಂಗನಾ ಅವರ ಇಮೇಲ್ ಹ್ಯಾಕ್ ಮಾಡಿಲ್ಲ, ಮಾತ್ರವಲ್ಲದೇ ಹ್ಯಾಕ್ ಮಾಡಲು ಅವರು ಪ್ರಯತ್ನ ಮಾಡಲು ಇಲ್ಲ ಎಂದು ಫಾರೆನ್ಸಿಕ್ ಲ್ಯಾಬ್ (Forensic Lab) ನಿಂದ ಬಂದ ವರದಿ ಹೇಳುತ್ತಿದೆ.
ನಟಿ ಕಂಗನಾ ಅವರು ಹೃತಿಕ್ ಮೇಲೆ ಹೊರಿಸಿರುವ ಆರೋಪದಲ್ಲಿ ಯಾವುದೇ ಸತ್ಯಾಂಶ ಇಲ್ಲ. ಅಲ್ಲದೇ ನಟ ಹೃತಿಕ್ ರೋಷನ್ ಅವರಿಗೆ ಹ್ಯಾಕಿಂಗ್ ಡಿವೈಸ್ ಇಟ್ಟುಕೊಳ್ಳುವ ಅಧಿಕಾರ ಕೂಡ ಇಲ್ಲ. ಆದ್ದರಿಂದ ಕಂಗನಾ ಹಾಗು ಅವರ ವಕೀಲರು ಹೊರಿಸಿರುವ ಆರೋಪ ಶುದ್ಧ ಸುಳ್ಳು ಎಂದು ಸಾಬೀತಾಗಿದೆ.[ಅಮಿತಾಬ್ ಬಚ್ಚನ್, ಕಂಗನಾಗೆ ರಾಷ್ಟ್ರ ಪ್ರಶಸ್ತಿ]
ಈ ಮೊದಲು ನಟಿ ಕಂಗನಾ ರನೌತ್ ಅವರು ಹೃತಿಕ್ ರೋಷನ್ ಅವರಿಗೆ ಮಾಡಿರುವ ಸುಮಾರು 3000 ಇಮೇಲ್ ಗಳು ಲೀಕ್ ಆಗಿದ್ದವು. ಇದರಿಂದ ಬಿಟೌನ್ ನಲ್ಲಿ ಹೃತಿಕ್ ಮತ್ತು ಕಂಗನಾ ಅವರ ಬಗ್ಗೆ ಅಂತೆ-ಕಂತೆಗಳ ಸುದ್ದಿಯೇ ಹೆಚ್ಚಾಗಿ ಹರಿದಾಡಿದ್ದು, ಸ್ಟಾರ್ ನಟ-ನಟಿ ಭಾರಿ ವಿವಾದಕ್ಕೆ ಗುರಿಯಾಗಿದ್ದರು.[ಟಾಪ್ ನಟಿ ಕಂಗನಾ ಒಂದು ಕಾಲದಲ್ಲಿ ಮನೆಯವರಿಗೆ ಬೇಡವಾಗಿದ್ದ ಮಗು]
ಈಗಲೂ ಕೋರ್ಟ್ ನಲ್ಲಿ ಈ ಕೇಸ್ ನಡೆಯುತ್ತಿದ್ದು, ಇದು ಎಲ್ಲಿಯವರೆಗೆ ಹೋಗಿ ಮುಟ್ಟುತ್ತದೆ ಹಾಗೂ ಯಾವಾಗ ಅಂತ್ಯ ಕಾಣುತ್ತದೆ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ. 'ಕ್ರಿಷ್ 3' ಚಿತ್ರದ ಪ್ರೊಮೋಷನ್ ನಲ್ಲಿ ಕಂಗನಾ-ಹೃತಿಕ್ ಝಲಕ್ ನ ಫೋಟೊ ಗ್ಯಾಲರಿ ನೋಡಿ...


Click it and Unblock the Notifications











