ಕರಣ್ ಜೋಹರ್ ಪಾರ್ಟಿ ವಿಡಿಯೋ ಕಂಟಕ: ಸೆಲೆಬ್ರಿಟಿಗಳೆಲ್ಲಾ ಸೇಫ್
ಬಾಲಿವುಡ್‌ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಮನೆಯಲ್ಲಿ ನಡೆದಿದ್ದ ಪಾರ್ಟಿ ವಿಡಿಯೋಗಳು ಬಿಟೌನ್ ಸೆಲೆಬ್ರಿಟಿಗಳಿಗೆ ಕಂಟಕ ತಂದೊಡ್ಡಿತ್ತು. ಡ್ರಗ್ಸ್ ಪ್ರಕರಣದಲ್ಲಿ ತನಿಖೆ ಮಾಡುತ್ತಿದ್ದ ಎನ್‌ಸಿಬಿ ಅಧಿಕಾರಿಗಳು ಕರಣ್ ಜೋಹರ್ ಮನೆಯಲ್ಲಿ ನಡೆದಿದ್ದ ಪಾರ್ಟಿ ವಿಡಿಯೋ ಆಧಾರದಲ್ಲಿ ಕೇಸ್ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದರು.
ಕರಣ್ ಮನೆಯಲ್ಲಿ ನಡೆದಿದ್ದ ಪಾರ್ಟಿಗಳಲ್ಲಿ ಸೆಲೆಬ್ರಿಟಿಗಳು ಡ್ರಗ್ಸ್ ಸೇವಿಸಿದ್ದರು ಎಂಬ ಅನುಮಾನ ಬಲವಾಗಿ ಕಾಡಿತ್ತು. ಈ ಪಾರ್ಟಿಯಲ್ಲಿ ಯಾರೂ ಡ್ರಗ್ಸ್ ಅಥವಾ ಮಾದಕ ವಸ್ತುಗಳನ್ನು ಸೇವಿಸಿಲ್ಲ ಎಂದು ಕರಣ್ ಸಹ ಸ್ಪಷ್ಟನೆ ನೀಡಿದ್ದರು. ಇದೀಗ, ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ (Forensic Science Laboratory) ಈ ವಿಡಿಯೋಗೆ ಕ್ಲೀನ್ ಚಿಟ್ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮುಂದೆ ಓದಿ....

ಡ್ರಗ್ಸ್ ಸೇವನೆ ಬಗ್ಗೆ ಸಾಕ್ಷ್ಯಗಳಿಲ್ಲ
ಕರಣ್ ಜೋಹರ್ ಅವರ ಪೋಸ್ಟ್ ಮಾಡಿದ್ದ ವಿಡಿಯೋದಲ್ಲಿ ಡ್ರಗ್ಸ್ ಅಥವಾ ಯಾವುದೇ ಮಾದಕ ವಸ್ತುಗಳು ಬಳಕೆಯಾಗಿವೆ ಎನ್ನುವುದಕ್ಕೆ ಪುರಾವೆಗಳಿಲ್ಲ ಎಂದು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ ತಿಳಿಸಿದೆ. ಆ ವಿಡಿಯೋದಲ್ಲಿ ಬರುವ ಪ್ರತಿಬಿಂಬ ಬೆಳಕಿನದ್ದು ಎಂದು ಸ್ಪಷ್ಟ ಪಡಿಸಿದೆ. ಈ ಮೂಲಕ ಕರಣ್ ಮನೆಯಲ್ಲಿ ನಡೆದಿದ್ದ ಪಾರ್ಟಿಗೆ ಕ್ಲೀನ್ ಚಿಟ್ ಸಿಕ್ಕಂತಾಗಿದೆ.

ಯಾರೆಲ್ಲ ಪಾರ್ಟಿಯಲ್ಲಿದ್ದರು?
ಕರಣ್ ಜೋಹರ್ ಮನೆಯಲ್ಲಿ ನಡೆದಿದೆ ಎನ್ನಲಾದ ಪಾರ್ಟಿಯಲ್ಲಿ ದೀಪಿಕಾ ಪಡುಕೋಣೆ, ಅರ್ಜುನ್ ಕಪೂರ್, ಶಾಹಿದ್ ಕಪೂರ್, ಧಿಯಾ, ವಿಕ್ಕಿ ಕೌಶಲ್, ರಣಬೀರ್ ಕಪೂರ್, ವರುಣ್ ಧವನ್, ಜೋಯಾ ಅಖ್ತರ್ ಸೇರಿದಂತೆ ಹಲವು ಖ್ಯಾತ ನಾಮರ ಹೆಸರು ಪಾಲ್ಗೊಂಡಿದ್ದರು. ಈ ವಿಡಿಯೋದಲ್ಲಿ ಎಲ್ಲರೂ ಮತ್ತಿನಲ್ಲಿರುವಂತೆ ಕಾಣಿಸಿಕೊಂಡಿದ್ದರು.

ದೀಪಿಕಾ ವಿಚಾರಣೆ ಎದುರಿಸಿದ್ದರು
ರಿಯಾ ಚಕ್ರವರ್ತಿ ಹೇಳಿಕೆ ಹಿನ್ನೆಲೆ ಬಾಲಿವುಡ್ ನಟಿಯರನ್ನು ಎನ್‌ಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್, ರಕುಲ್ ಪ್ರೀತ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಡ್ರಗ್ಸ್ ಕೇಸ್‌ನಲ್ಲಿ ವಿಚಾರಣೆ ಎದುರಿಸಿದ್ದರು.
Recommended Video

ಸ್ಪಷ್ಟನೆ ನೀಡಿದ್ದ ಕರಣ್ ಜೋಹರ್
ಸೆಲೆಬ್ರಿಟಿಗಳು ಪಾಲ್ಗೊಂಡಿದ್ದ ಪಾರ್ಟಿ ವಿಡಿಯೋ ಬಗ್ಗೆ ನಿರ್ಮಾಪಕ ಕರಣ್ ಜೋಹರ್ ಈ ಹಿಂದೆಯೇ ಸ್ಪಷ್ಟೀಕರಣ ನೀಡಿದ್ದರು. "2019ರಲ್ಲಿ ಕರಣ್ ಜೋಹರ್ ಆಯೋಜಿಸಿದ್ದ ಪಾರ್ಟಿಯಲ್ಲಿ ಡ್ರಗ್ಸ್ ಬಳಕೆಯಾಗಿತ್ತು ಎನ್ನುವ ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿದೆ. ಇದು ಸುಳ್ಳು ಸುದ್ದಿ. ಆಧಾರ ರಹಿತವಾದ ಆರೋಪವಾಗಿದೆ. ಪಾರ್ಟಿಯಲ್ಲಿ ಯಾವುದೇ ಡ್ರಗ್ಸ್ ಬಳಕೆಯಾಗಿಲ್ಲ, ಡ್ರಗ್ಸ್ ಬಗ್ಗೆ ಪ್ರಚಾರ ಮಾಡಿಲ್ಲ, ಡ್ರಗ್ಸ್ ತೆಗೆದುಕೊಳ್ಳುವಂತೆ ಪ್ರಚೋದನೆಯನ್ನು ಮಾಡಿಲ್ಲ." ಎಂದು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದರು.


Click it and Unblock the Notifications











