ಟಿಕ್ ಟಾಕ್ ನಲ್ಲಿ ಕೋಮು ಪ್ರಚೋದನೆ ವಿಡಿಯೋ ಮಾಡುತ್ತಿದ್ದ ಬಿಗ್ ಬಾಸ್ ನಟ ಅರೆಸ್ಟ್
ಬಿಗ್ ಬಾಸ್ ಖ್ಯಾತಿಯ ನಟ ಅಜಾಝ್ ಖಾನ್ ವಿವಾದಾತ್ಮಕ ಟಿಕ್ ಟಾಕ್ ವೀಡಿಯೋಗಳನ್ನು ಮಾಡಿ ಹರಿಬಿಡುತ್ತಿದ್ದ ಕಾರಣ ಬಂದನಕ್ಕೊಳಗಾಗಿದ್ದಾರೆ. ಕೋಮು ಸಂಗರ್ಷಕ್ಕೆ ಪ್ರಚೋದನೆ ನೀಡುವಂತಹ ಒಂದಿಷ್ಟು ವಿಡಿಯೋಗಳನ್ನು ಮಾಡುತ್ತಿದ್ದ ಆರೋಪದಡಿ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಸೈಬರ್ ಸೆಲ್ ಪೊಲೀಸರು ಬಂಧಿಸಿದ್ದಾರೆ.
ಅಜಾಝ್ ಖಾನ್ ಕೋಮುಗಲಭೆಗೆ ಕುಮ್ಮುಕ್ಕು ನೀಡುವಂತಹ ಅನೇಕ ವಿಡಿಯೋಗಳನ್ನು ಮಾಡಿ ಪೋಸ್ಟ್ ಮಾಡುತ್ತಿದ್ದರು. ಅಜಾಝ್ ಜೊತೆಗೆ ಮತ್ತೊಬ್ಬ ವ್ಯಕ್ತಿ ಫೈಸಲ್ ಖಾನ್ ಕೂಡ ಇದೆ ಕೆಲಸ ಮಾಡುತ್ತಿದ್ದರು. ಗ್ರೂಪ್ 7 ಹೆಸರಿನಲ್ಲಿ ವಿಡಿಯೋಗಳನ್ನು ಮಾಡಿ ಪೋಸ್ಟ್ ಮಾಡುತ್ತಿದ್ದರು. ಇತ್ತೀಚಿಗೆ ಜಾರ್ಖಂಡ್ ನಲ್ಲಿ ಮುಸ್ಲಿಂ ಸಮುದಾಯದ ಯುವಕನನ್ನು ವಾಹನ ಕಳವು ಮಾಡಿದ ಆರೋಪದಡಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ವಿಡಿಯೋಗಳನ್ನು ಮಾಡಿದ್ದಾರೆ.
ಇನ್ನು ಗೋಮು ಸಂಗರ್ಷಕ್ಕೆ ಪ್ರಚೋದನೆ ನೀಡುವಂತಹ ವಿಡಿಯೋಗಳನ್ನು ಮಾಡುತ್ತಿದ್ದ ಐವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದು ಮುಂಬೈ ಪೊಲೀಸರನ್ನು ಅಪಹಾಸ್ಯ ಮಾಡಿ ಟಿಕ್ ಟಾಕ್ ವಿಡಿಯೋಗಳನ್ನು ಮಾಡಿ ವೈರಲ್ ಮಾಡುತ್ತಿದ್ದರು.

ರಾಜಕಾರಣಿಗಳ ವಿರುದ್ಧವು ಒಂದಿಷ್ಟು ವಿಡಿಯೋಗಳನ್ನು ಮಾಡಿ ಹರಿಬಡುತ್ತಿದ್ದ ಅಜಾಝ್ ಮತ್ತು ಅವರ ಸ್ನೇಹಿತರು. ಸದ್ಯ ಅಜಾಝ್ ಖಾನ್ ಅನ್ನು ಬಂಧಿಸಿ ಸೆಕ್ಷನ್ 157 ಎ ಮತ್ತು 67ರ ಅಡಿ ಪ್ರಕರಣ ದಾಖಲಿಸಲಾಗಿದೆ. ನಟ ಅಜಾಝ್ ನನ್ನು ಬಂಧಿಸುವಂತೆ ಶಿವಸೇನ ಕಾರ್ಯಕರ್ತ ರಮೇಶ್ ಸೋಲಂಕಿ ಎನ್ನುವರು ದೂರು ನೀಡಿದ್ದರು.


Click it and Unblock the Notifications











