»   » ಫೆಮೀನಾ ಮಿಸ್ ಇಂಡಿಯಾ ನಟಿ ಜೇನ್ಗೆ ಕಲ್ಲೇಟು

ಫೆಮೀನಾ ಮಿಸ್ ಇಂಡಿಯಾ ನಟಿ ಜೇನ್ಗೆ ಕಲ್ಲೇಟು

Posted By:
Subscribe to Filmibeat Kannada

ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದ ತಾರೆ ಹಾಗೂ ಮಾಜಿ ಫೆಮೀನಾ ಮಿಸ್ ಇಂಡಿಯಾ ಸರಾಹ್ ಜೇನ್ ಡಯಾಸ್ ಎಂಬ ತಾರೆಗೆ ಕಲ್ಲೇಟು ಬಿದ್ದಿದೆ. ಈ ಘಟನೆ ಫರೀದಾಬಾದ್ ನಲ್ಲಿ ನಡೆದಿದೆ. ಅಪರಿಚಿತನೊಬ್ಬ ಬೀಸಿದ ಕಲ್ಲು ಸೀದಾ ಈಕೆಯ ಮುಖಕ್ಕೆ ಬಡಿದಿದೆ.

ಈಕೆ 'ಗೇಮ್' ಹಾಗೂ 'ಕ್ಯಾ ಸೂಪರ್ ಕೂಲ್ ಹೈ ಹಮ್' ಎಂಬ ಎರಡು ಹಿಂದಿಯ ಚಿತ್ರಗಳ ಜೊತೆಗೆ ತೆಲುಗು ನಟ ಪವನ್ ಕಲ್ಯಾಣ್ ಜೊತೆಗೆ 'ಪಂಜಾ' ಎಂಬ ಚಿತ್ರದಲ್ಲಿ ಅಭಿನಯಿಸಿದ್ದಾರೆ. ತಮಿಳಿನ 'ಥೀರದ ವಿಲಯಟ್ಟು ಪಿಲ್ಲೈ' ಎಂಬ ಚಿತ್ರದಲ್ಲೂ ಅಭಿನಯಿಸಿದ್ದಾರೆ.


ಕಲ್ಲೇಟಿನ ರಭಸಕ್ಕೆ ಸರಾಹಾ ಜೇನ್ ತುಟಿಗಳಿಗೆ ಪೆಟ್ಟಾಗಿದೆ. ಸದ್ಯಕ್ಕೆ ಈಕೆ ಹಿಂದಿಯ 'ಕ್ಯಾ ಸೂಪರ್ ಕೂಲ್ ಹೈ ಹಮ್' ಎಂಬ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ವಯಸ್ಕರ ಕಾಮಿಡಿ ಚಿತ್ರವಾದ ಈ ಚಿತ್ರ ಜುಲೈ 27ರಂದು ತೆರೆಗೆ ಅಪ್ಪಳಿಸುತ್ತಿದೆ.

ಫರೀದಾಬಾದ್ ನ ಮಾಲ್ ಒಂದರಲ್ಲಿ ತಮ್ಮ ಚಿತ್ರದ ಪ್ರಚಾರಕಾರ್ಯದಲ್ಲಿರಬೇಕಾದರೆ ಯಾರೋ ಅಪರಿಚಿತನೊಬ್ಬ ಕಲ್ಲು ಬೀಸಿದ್ದಾನೆ. ಈ ಬಗ್ಗೆ ಚಿತ್ರತಂಡ ತೀವ್ರವಾಗಿ ಖಂಡಿಸಿದೆ. ವೇದಿಕೆ ಮೇಲೆ ಚಿತ್ರದ ಸಹ ಕಲಾವಿದರಾದ ರಿತೇಶ್ ದೇಶ್ ಮುಖ್, ತುಷಾರ್ ಕಪೂರ್ ಹಾಗೂ ನೇಹಾ ಶರ್ಮಾ ಕೂಡ ಉಪಸ್ಥಿತರಿದ್ದರು.

ಫರೀದಾಬಾದ್ ನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಸಿಕ್ಕಾಪಟ್ಟೆ ಜನ ಬಂದಿದ್ದರಂತೆ. ಜನಸಂದಣಿಯಿಂದ ಯಾರೋ ಒಬ್ಬ ಕಲ್ಲು ಬೀಸಿದ್ದಾನೆ. ಅದು ಸೀದಾ ಬಂದು ಸರಾಹ್ ಜೇನ್ ಮುಖಕ್ಕೆ ಬಡಿದಿದೆ. ಚಿತ್ರದ ಪ್ರಚಾರದ ಬಳಿಕ ಸರಾಹ್ ಅಭಿಮಾನಿಗಳ ಜೊತೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದರು.

ಅಷ್ಟರಲ್ಲಾಗಲೇ ಆಕೆಯ ಮುಖಕ್ಕೆ ಕಲ್ಲು ಬಿದ್ದು ಪ್ರೋಗ್ರಾಂ ಕ್ಯಾನ್ಸಲ್ ಆಗಿದೆ. ಈ ಬಗ್ಗೆ ಟ್ವೀಟಿಸಿ ಸರಾಹ್ ತಮ್ಮ ನೋವನ್ನು ತೋಡಿಕೊಂಡಿದ್ದಾರೆ, "ಫರೀದಾಬಾದ್ ನಲ್ಲಿ ನನ್ನ ಮೇಲೆ ಕಲ್ಲು ಎಸೆಯಲಾಯಿತು. ಅದು ನನಗೆ ಬಿದ್ದು ತುಟಿಗೆ ಗಾಯವಾಗಿದೆ..."

"ಇನ್ನೂ ನೋವನ್ನು ಅನುಭವಿಸುತ್ತಿದ್ದೆನೆ. ಮೊಟ್ಟ ಮೊದಲ ಬಾರಿಗೆ ನನಗೆ ವೇದಿಕೆ ಮೇಲೆ ಹೀಗಾಗುತ್ತಿರುವುದು. ನಿಜಕ್ಕೂ ಇದೊಂದು ನಾಚಿಕೆಗೇಡಿನ ಸಂಗತಿ. ನನ್ನ ತೇಜೋವಧೆ ಮಾಡುವ ಪ್ರಯತ್ನ ಇದು. ಆದರೆ ನನ್ನ ವಿರೋಧಿಗಳಿಗೆ ಖಂಡಿತ ಇದು ಸಾಧ್ಯವಾಗುವುದಿಲ್ಲ" ಎಂದಿದ್ದಾರೆ ಸರಾಹ್. (ಏಜೆನ್ಸೀಸ್)

English summary
Bollywood actress Sarah Jane Dias, who was acted in Telugu, Tamil and Hindi films was hit by a stone by an unidentified person in Faridabad. The actress was hurt her lip in that attack. Sarah Jane Dias is presently acting in a Hindi film titled "Kya Super Cool Hai Hum".
Please Wait while comments are loading...