ದೃಶ್ಯ ರೂಪದಲ್ಲಿ ಬರಲಿದೆ ದಾದಾ ಗಂಗೂಲಿ ಲೈಫ್ ಸ್ಟೋರಿ
ಭಾರತ ಕ್ರಿಕೆಟ್ ತಂಡದ ಆಟಗಾರರಾದ ಸಚಿನ್, ಅಜರ್ ಉದ್ದೀನ್ ಹಾಗೂ ಧೋನಿ ಅವರ ಜೀವನದ ಬಗ್ಗೆ ಈಗಾಗಲೇ ಸಿನಿಮಾ ಬಂದಿದೆ. ಆದರೆ ಈಗ ಬಂಗಾಳದ ಹುಲಿ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಲೈಫ್ ಸ್ಟೋರಿ ಕೂಡ ದೃಶ್ಯ ರೂಪ ಪಡೆದುಕೊಳ್ಳುತ್ತಿದೆ.
ಟೆಲಿವಿಸನ್ ಕ್ವೀನ್ ಏಕ್ತಾ ಕಪೂರ್ ಒಡೆತನದ ಅಲ್ಟ್ ಬಾಲಾಜಿ ಪ್ರೊಡಕ್ಷನ್ ಹೌಸ್ ಈ ಕೆಲಸಕ್ಕೆ ಕೈ ಹಾಕಿದೆ. ಅಂದಹಾಗೆ, ಇಲ್ಲಿ ಗಂಗೂಲಿ ಜೀವನದ ಕಥೆ ಸಿನಿಮಾ ರೂಪ ಪಡೆದುಕೊಳ್ಳುತ್ತಿಲ್ಲ. ಬದಲಿಗೆ ಇದೊಂದು ವೆಬ್ ಸೀರಿಸ್ ಆಗಲಿದೆ. ಇಂದಿನ ದಿನದಲ್ಲಿ ವೆಬ್ ಸೀರಿಸ್ ಹೆಚ್ಚು ಜನಪ್ರಿಯತೆ ಹೊಂದಿದ್ದು, ಅದೇ ಕಾರಣಕ್ಕೆ ಹೊಸ ರೀತಿಯಲ್ಲಿ ಇದನ್ನು ಮಾಡುವ ತಯಾರಿ ನಡೆಸಿದ್ದಾರಂತೆ.

ಈ ವೆಬ್ ಸೀರಿಸ್ ಗಂಗೂಲಿ ಅವರ 'ಎ ಸೆಂಚೂರಿ ಇಸ್ ನಾಟ್ ಇನಫ್' ಪುಸ್ತಕವನ್ನು ಆಧಾರವಾಗಿಟ್ಟುಕೊಂಡು ಮಾಡಲಾಗುತ್ತದೆ. ಡಾಕ್ಯುಮೆಂಟರಿ ಶೈಲಿಯಲ್ಲಿ ಈ ವೆಬ್ ಸೀರಿಸ್ ಇರಲಿದೆ. ಸದ್ಯ ಇದರ ಬಗ್ಗೆ ಕೊನೆಯ ಹಂತದ ಮಾತುಕತೆ ನಡೆಯುತ್ತಿದೆ. ಇದರಲ್ಲಿ ಗಂಗೂಲಿ ಅವರ ಬಗ್ಗೆ ಗೊತ್ತಿರದ ಅನೇಕ ವಿಚಾರಗಳು ತಿಳಿಯಲಿದೆಯಂತೆ. ಇನ್ನು ಈ ವಿಷಯ ಗಂಗೂಲಿ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದ್ದು, ವೆಬ್ ಸೀರಿಸ್ ಮೇಲೆ ನಿರೀಕ್ಷೆ ಹೆಚ್ಚಿದೆ.


Click it and Unblock the Notifications











