"ಐಶ್ವರ್ಯಾ ರೈನ ಮದ್ವೆ ಆದ ಮಾತ್ರಕ್ಕೆ ಪವಿತ್ರವಾದ ಮಕ್ಕಳು ಹುಟ್ಟಬೇಕು ಅಂದ್ರೆ ಹೇಗೆ?": ಅಬ್ದುಲ್ ರಜಾಕ್ ಕೀಳುಮಟ್ಟದ ಹೇಳಿಕೆ

ಭಾರತದಲ್ಲೇ ನಡೆಯುತ್ತಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023 ಟೂರ್ನಿಯಿಂದ ಪಾಕ್ ತಂಡ ಹೊರಬಿದ್ದಿದೆ. ದೊಡ್ಡ ಟೂರ್ನಿಯಲ್ಲಿ ಲೀಗ್ ಹಂತದಲ್ಲೇ ಪಾಕ್ 4 ಪಂದ್ಯಗಳನ್ನು ಮಾತ್ರ ಗೆದ್ದು ಗಂಟುಮೂಟೆ ಕಟ್ಟಿದೆ. ಆಸ್ಟ್ರೆಲಿಯಾ, ಭಾರತ, ಅಫ್ಘಾನಿಸ್ತಾನ ಹಾಗೂ ಇಂಗ್ಲೆಂಡ್‌ ತಂಡಗಳ ಎದುರು ಸೋಲುಂಡು ಸೆಮಿಫೈನಲ್‌ ಪ್ರವೇಶಿಸಲು ವಿಫಲವಾಗಿತ್ತು.

ಈ ರೀತಿ ಪಾಕ್ ತಂಡ ವಿಶ್ವಕಪ್ ಸರಣಿಯಲ್ಲಿ ಹೀನಾಯ ಪ್ರದರ್ಶನದಿಂದ ಹೊರಬಿದ್ದ ಬಗ್ಗೆ ಪಾಕಿಸ್ತಾನದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಮಾತ್ರವಲ್ಲ ಪಾಕ್ ಮಾಜಿ ಆಟಗಾರರು ಇದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿದೆ. ನೇರವಾಗಿಯೇ ತಮ್ಮ ಬೇಸರ ಹೊರ ಹಾಕುತ್ತಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿ ಮಾಜಿ ಆಟಗಾರ ಅಬ್ದುಲ್ ರಜಾಕ್ ನೀಡಿರುವ ಹೇಳಿಕೆ ಭಾರೀ ಚರ್ಚೆ ಹುಟ್ಟಾಕ್ಕಿದೆ.

Abdul-Razzaq-about-Aishwarya-Rai

ಪಾಕ್ ತಂಡದ ಹೀನಾಯ ಪ್ರದರ್ಶನದ ಬಗ್ಗೆ ಮಾತನಾಡುವ ವೇಳೆ ಮಾಜಿ ವಿಶ್ವಸುಂದರಿ, ಬಾಲಿವುಡ್ ನಟಿ ಐಶ್ವರ್ಯ ರೈ ಹೆಸರು ಎಳೆದು ತಂದು ರಜಾಕ್ ಎಡವಟ್ಟು ಮಾಡಿಕೊಂಡಿದ್ದಾರೆ. ರಜಾಕ್ ಹೇಳಿಕೆ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ತಮ್ಮ ಮಾತಿಗೂ ಐಶ್ವರ್ಯ ರೈಗೂ ಸಂಬಂಧವೇ ಇಲ್ಲ. ಸುಖಾಸುಮ್ಮನೆ ಆಕೆಯ ಹೆಸರು ಹೇಳಿಕ ಕೀಳುಮಟ್ಟದಲ್ಲಿ ಕಾಮೆಂಟ್ ಮಾಡಿದ್ದು ಎಷ್ಟು ಸರಿ ? ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಅಬ್ದುಲ್ ರಜಾಕ್ ಪಾಕ್‌ ಕ್ರಿಕೆಟ್ ಬೋರ್ಡ್ ನಡೆಯನ್ನು ಪ್ರಶ್ನಿಸಿದ್ದಾರೆ. ಇದೇ ವೇಳೆ ಐಶ್ವರ್ಯಾ ರೈ ಬಗ್ಗೆ ಮಾತನಾಡಿದ್ದಾರೆ. ಪಾಕ್ ಮಾಜಿ ಕ್ರಿಕೆಟಿಗರಾದ ಶಾಹಿದ್ ಅಫ್ರಿದಿ, ಉಮರ್ ಗಿಲ್ ಹಾಗೂ ಅಬ್ದುಲ್ ರಜಾಕ್ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಈ ವೇಳೆ ಪಾಕ್ ತಂಡದ ಪ್ರದರ್ಶನದ ಬಗ್ಗೆ ಚರ್ಚೆ ಶುರುವಾಗಿದೆ. ಈ ಚರ್ಚೆ ವೇಳೆಗೆ ರಜಾಕ್ ಮಿತಿ ಮೀರಿ ಮಾತನಾಡಿದ್ದಾರೆ.

"ಆಗ ಪಾಕ್ ಕ್ರಿಕೆಟ್ ತಂಡದ ನಾಯಕ ಯೂನಿಸ್ ಖಾನ್ ಉತ್ತಮ ಪ್ರದರ್ಶನ ತೋರುತ್ತಾರೆ ಎನ್ನುವ ನಂಬಿಕೆ ಇತ್ತು. ನಾನು ಚೆನ್ನಾಗಿ ಆಡಲು ಆತ ಕೂಡ ಕಾರಣ. ಆತನ ಬೆಂಬಲ, ಪ್ರೋತ್ಸಾಹದಿಂದ ಚೆನ್ನಾಗಿದೆ ಆಡಿದೆ. ಈಗ ಒಳ್ಳೆ ಆಟಗಾರರನ್ನು ಬೆಳೆಸಬೇಕು, ಪಾಕ್‌ನಲ್ಲಿ ಕ್ರಿಕೆಟ್ ಮೆರೆಯಬೇಕು ಎಂದು ಪಾಕ್ ಕ್ರಿಕೆಟ್‌ ಬೋರ್ಡ್‌ಗೆ ಅನ್ನಿಸುತ್ತಿಲ್ಲ. ಹಾಗಿರುವಾದ ಫಲಿತಾಂಶ ಹೇಗೆ ಸಾಧ್ಯ? ಎಂದಿದ್ದಾರೆ.

ರಜಾಕ್ ಮಾತು ಅಲ್ಲಿಗೆ ಮುಕ್ತಾಯವಾಗಿದ್ದರೆ ಚೆನ್ನಾಗಿತ್ತು. ಆದರೆ ನಾಲಿಗೆ ಹರಿಬಿಟ್ಟ ಆತ "ಐಶ್ವರ್ಯ ರೈನ ಮದುವೆ ಆದ ಮಾತ್ರಕ್ಕೆ ಸುಂದರವಾದ, ಪವಿತ್ರವಾದ ಮಕ್ಕಳು ಹುಟ್ಟುತ್ತಾರೆ ಎಂದುಕೊಂಡರೆ ಅದು ಯಾವತ್ತಿಗೂ ನಡೆಯುವುದಿಲ್ಲ. ಇದು ಕೂಡ ಅಷ್ಟೇ, ಪಾಕ್ ಕ್ರಿಕೆಟ್ ಬೋರ್ಡ್ ಸಂಕಲ್ಪ ಧೃಡವಾಗಿದ್ದರೆ ಮಾತ್ರ ಏನಾದರೂ ಸಾಧ್ಯ" ಎಂದು ರಜಾಕ್ ಉದಾಹರಣೆ ನೀಡಿ ಹೇಳಿದ್ದಾರೆ.

ಮಾಜಿ ಪಾಕ್ ಕ್ರಿಕೆಟಿಗ ರಜಾಕ್ ಹೇಳಿಕೆಗೆ ಕೆಲವರು ಚಪ್ಪಾಳೆ ತಟ್ಟಿದ್ದಾರೆ. ಪಕ್ಕದಲ್ಲೇ ಕುಳಿತಿದ್ದ ಶಾಹಿದ್ ಅಫ್ರೀದಿ, ಗಿಲ್ ಕೂಡ ನಕ್ಕು ಚಪ್ಪಾಳೆ ತಟ್ಟಿದ್ದಾರೆ. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಭಾರತ ಕ್ರಿಕೆಟ್ ಪ್ರೇಮಿಗಳು ರಜಾಕ್ ಹೇಳಿಕೆಯನ್ನು ಖಂಡಿಸುತ್ತಿದ್ದಾರೆ. ನಿಮ್ಮ ಕ್ರಿಕೆಟ್ ಬೋರ್ಡ್ ಬಗ್ಗೆ ನೀನು ಮಾತನಾಡು, ಅದು ಬಿಟ್ಟು ಐಶ್ವರ್ಯ ರೈ ಹೆಸರು ಯಾಕೆ ಎಳೆದು ತರ್ತೀಯಾ? ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

1996ರಲ್ಲಿ ಪಾಕ್ ಪರ ಅಂತರಾಷ್ಟ್ರೀಯ ಕ್ರಿಕೆಟ್ ಆಡಲು ಆರಂಭಿಸಿದ ಅಬ್ದುಲ್ ರಜಾಕ್, ಒಟ್ಟು 265 ಏಕ ದಿನ ಪಂದ್ಯಗಳು ಹಾಗೂ 46 ಟೆಸ್ಕ್ ಪಂದ್ಯಗಳಲ್ಲಿ ಆಡಿದ್ದಾರೆ. ಬಲಗೈ ಬ್ಯಾಟ್ಸ್‌ಮನ್ ಹಾಗೂ ಬಲ ಗೈ ಮೀಡಿಯಂ ಫಾಸ್ಟ್ ಬೌಲರ್ ಆಗಿದ್ದ ರಜಾಕ್ ಕೆಲ ಪಂದ್ಯಗಳಲ್ಲಿ ತಂಡವನ್ನು ಗೆಲ್ಲಿಸಿದ್ದರು. 2013ರಲ್ಲಿ ಕೊನೆಯದಾಗಿ ಟಿ20 ಪಂದ್ಯ ಆಡಿದ್ದರು.

More from Filmibeat

English summary
Abdul Razzaq says it is "Impossible if you marry Aishwarya Rai and u expect Good-natured kids from her
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X