»   » 'ಪದ್ಮಾವತಿ' ಸಿನಿಮಾ ಬಿಡುಗಡೆಗೆ ಜೈಪುರ ರಾಜ ಮನೆತನದ ವಿರೋಧ!

'ಪದ್ಮಾವತಿ' ಸಿನಿಮಾ ಬಿಡುಗಡೆಗೆ ಜೈಪುರ ರಾಜ ಮನೆತನದ ವಿರೋಧ!

Posted By:
Subscribe to Filmibeat Kannada

'ಪದ್ಮಾವತಿ' ಸಿನಿಮಾದ ಬಿಡುಗಡೆಯ ದಿನಾಂಕ ಹತ್ತಿರಕ್ಕೆ ಬರುತ್ತಿದ್ದ ಹಾಗೆ ಚಿತ್ರಕ್ಕೆ ದೊಡ್ಡ ವಿರೋಧ ವ್ಯಕ್ತವಾಗುತ್ತಿದೆ. ಸದ್ಯ ಜೈಪುರದ ಮಾಜಿ ರಾಜಮನೆತನ ಕೂಡ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಯೂಟ್ಯೂಬ್ ನಲ್ಲಿ ನಂ1 ಟ್ರೆಂಡಿಂಗ್ ಆದ 'ಪದ್ಮಾವತಿ' ಮೊದಲ ಹಾಡು

ಮಾಜಿ ರಾಜಕುಮಾರಿ ಹಾಗೂ ಬಿಜೆಪಿ ಶಾಸಕಿ ದಿಯಾ ಕುಮಾರಿ 'ಪದ್ಮಾವತಿ' ಚಿತ್ರದಲ್ಲಿ ಐತಿಹಾಸಿಕ ಸತ್ಯಗಳನ್ನು ತಿರುಚಿದರೇ ಅದಕ್ಕೆ ವಿರೋಧ ವ್ಯಕ್ತ ಪಡಿಸುವುದಾಗಿ ಹೇಳಿಕೆ ನೀಡಿದ್ದಾರೆ. ಚಿತ್ರದಲ್ಲಿ ಸಮುದಾಯದ ಜನರ ಭಾವನೆಗಳಿಗೆ ನೋವುಂಟು ಮಾಡುವ ಅಂಶಗಳಿದ್ದರೇ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಈ ಹಿಂದೆ ಬಿಜೆಪಿ ಶಾಸಕ ರಾಜಾ ಸಿಂಗ್ ಕೂಡ ರಾಜಮನೆತನದ ಬಗ್ಗೆ ಯಾವುದೇ ವಿರೋಧಾತ್ಮಕ ಅಂಶಗಳು ಕಂಡು ಬಂದರೆ ಚಿತ್ರ ಪ್ರದರ್ಶನ ಮಾಡುವ ಚಿತ್ರಮಂದಿರಕ್ಕೆ ಬೆಂಕಿ ಹಚ್ಚುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Former royal family of jaipur threatens to oppose 'Padmavati' movie release

ಅಂದಹಾಗೆ, 'ಪದ್ಮಾವತಿ' ಸಿನಿಮಾ ಚಿತ್ತೂರಿನ ರಾಣಿ ಪದ್ಮಾವತಿ ಜೀವನ ಆಧಾರಿತ ಚಿತ್ರವಾಗಿದೆ. ಸಂಜಯ್ ಲೀಲಾ ಬನ್ಸಾಲಿ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇಲ್ಲಿ ನಟಿ ದೀಪಿಕಾ ಪಡುಕೋಣೆ ರಾಣಿ 'ಪದ್ಮಾವತಿ' ಆಗಿ ಶಾಹಿದ್ ಕಪೂರ್ 'ಮಹಾರಾವಲ್ ರತನ್ ಸಿಂಗ್' ಮತ್ತು ರಣ್ವೀರ್ ಸಿಂಗ್ 'ಅಲಾವುದ್ದೀನ್ ಖಿಲ್ಜಿ' ಆಗಿ ಅವತಾರ ಎತ್ತಿದ್ದಾರೆ. ಅಂದುಕೊಂಡಂತೆ ಆದರೆ 'ಪದ್ಮಾವತಿ' ಸಿನಿಮಾ ಡಿಸೆಂಬರ್ 1ಕ್ಕೆ ದೇಶಾದ್ಯಂತ ತೆರೆಗೆ ಬರಲಿದೆ.

English summary
Former royal family of jaipur threatens to oppose 'Padmavati' movie release. ಪದ್ಮಾವತಿ' ಸಿನಿಮಾದ ಬಿಡುಗಡೆಗೆ ಜೈಪುರದ ಮಾಜಿ ರಾಜಮನೆತನ ಕೂಡ ವಿರೋಧ ವ್ಯಕ್ತಪಡಿಸಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X