Theater: 'ಕೆಜಿಎಫ್ 2' ಪ್ರದರ್ಶಿಸುತ್ತಿದ್ದ ಲಕ್ಷಾಂತರ ಮೌಲ್ಯದ ಸ್ಕ್ರೀನ್ ಹರಿದ ದುರುಳರು
'ಕೆಜಿಎಫ್ 2' ಸಿನಿಮಾದಕ್ಕೆ ದೇಶದಾದ್ಯಂತ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾವನ್ನು ಕನ್ನಡಿಗರು ಮಾತ್ರವೇ ಅಲ್ಲ ಪರಭಾಷೆಯ ಜನರೂ ಮೆಚ್ಚಿ ರಾಕಿಭಾಯ್ ಅನ್ನು ಆರಾಧಿಸುತ್ತಿದ್ದಾರೆ.
ಆದರೆ ಗುಜರಾತ್‌ನಲ್ಲಿ 'ಕೆಜಿಎಫ್ 2' ಸಿನಿಮಾ ಪ್ರದರ್ಶಿಸುತ್ತಿದ್ದ ಚಿತ್ರಮಂದಿರದಲ್ಲಿ ಗಲಾಟೆ ಮಾಡಿ ಸ್ಕ್ರೀನ್ ಅನ್ನು ಹರಿದು ಧ್ವಂಸ ಮಾಡಲಾಗಿದೆ. ಆದರೆ ಇದು ಸಿನಿಮಾದ ಮೇಲಿನ ಸಿಟ್ಟಿಗಾಗಿ ಮಾಡಿದ್ದಲ್ಲ.
ಗುಜರಾತ್‌ನ ವಡೋದರಾನಲ್ಲಿ 'ಕೆಜಿಎಫ್ 2' ಸಿನಿಮಾ ಪ್ರದರ್ಶಿಸಲಾಗುತ್ತಿದ್ದು, ಈ ಚಿತ್ರಮಂದಿರ ಹೆಚ್ಚು ರಶ್ ಆಗಿತ್ತು. ನಾಲ್ಕು ಮಂದಿ ತಮಗೆ ನೀಡಲಾದ ಸೀಟುಗಳಲ್ಲಿ ಕುಳಿತುಕೊಳ್ಳದೆ ಬೇರೆ ಸೀಟಿನ ಮೇಲೆ ಕುಳಿತಿದ್ದರು. ಇದನ್ನು ಚಿತ್ರಮಂದಿರದಲ್ಲಿ ಟಿಕೆಟ್ ಚೆಕ್ ಮಾಡುವ ವ್ಯಕ್ತಿ ಪ್ರಶ್ನಿಸಿ, ಅವರಿಗೆ ನೀಡಲಾಗಿದ್ದ ಸೀಟುಗಳಲ್ಲಿ ಕುಳಿತುಕೊಳ್ಳಲು ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆ ನಾಲ್ವರು ಚಿತ್ರಮಂದಿರದಲ್ಲಿ ಜಗಳ ಮಾಡಿದ್ದಾರೆ.

ಚಿತ್ರಮಂದಿರದಲ್ಲಿ ಜಗಳ ಮಾಡಿದ ಆ ನಾಲ್ವರು, ಇಬ್ಬರು ಟಿಕೆಟ್ ಚೆಕರ್‌ಗಳನ್ನು ಹೊಡೆದಿದ್ದಲ್ಲದೆ, ಸಿನಿಮಾ ಪ್ರದರ್ಶಿಸುತ್ತಿದ್ದ 17 ಅಡಿ ಅಗಲ ಮತ್ತು ಉದ್ದದ ದುಬಾರಿ 3ಡಿ ಸ್ಕ್ರೀನ್ ಅನ್ನು ಧ್ವಂಸ ಮಾಡಿದ್ದಾರೆ.
ನಾಲ್ವರ ವಿರುದ್ಧ ಚಿತ್ರಮಂದಿರದ ಕ್ಯಾಶಿಯರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ದುರುಳರು ಟಿಕೆಟ್ ಚೆಕರ್‌ಗಳ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, 3.50 ಬೆಲೆಯ ಸ್ಕ್ರೀನ್ ಅನ್ನು ಹರಿದಿರುವುದಾಗಿ ಹೇಳಿದ್ದಾರೆ. ಪೊಲೀಸರು ಪ್ರಕರಣದ ದಾಖಲಿಸಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಮಧುರೈನಲ್ಲಿ ವಿಜಯ್ ನಟನೆಯ 'ಬೀಸ್ಟ್' ಸಿನಿಮಾ ಪ್ರದರ್ಶಿಸುತ್ತಿದ್ದ ಚಿತ್ರಮಂದಿರದ ಪರದೆಗೆ ಕೆಲವು ವಿಜಯ್ ಅಭಿಮಾನಿಗಳೇ ಬೆಂಕಿ ಇಟ್ಟಿದ್ದಾಗಿ ವರದಿ ಆಗಿತ್ತು. 'ಬೀಸ್ಟ್' ಸಿನಿಮಾ ಚೆನ್ನಾಗಿಲ್ಲವೆಂದು ಆರೋಪಿಸಿ ಅಭಿಮಾನಿಗಳು ಅಸಮಾಧಾನಗೊಂಡು ಚಿತ್ರಮಂದಿರದ ಪರದೆಗೆ ಬೆಂಕಿ ಹಚ್ಚಿದ್ದರು.
ಕೆಜಿಎಫ್ 2 ಸಿನಿಮಾವು ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಾತ್ರವೇ ಅಲ್ಲದೆ, ಮಹಾರಾಷ್ಟ್ರ, ಗುಜರಾತ್, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಸ, ಅಸ್ಸಾಂ ಇನ್ನೂ ಕೆಲವು ರಾಜ್ಯಗಳಲ್ಲಿ ಬಿಡುಗಡೆ ಆಗಿದೆ. ಸಿನಿಮಾಕ್ಕೆ ಬಹುತೇಕ ಎಲ್ಲ ರಾಜ್ಯಗಳಲ್ಲಿಯೂ ಪ್ರೀತಿ ವ್ಯಕ್ತವಾಗಿದೆ. ಪಶ್ಚಿಮ ಬಂಗಾಳದಲ್ಲಿ 'ಕೆಜಿಎಫ್' ಅಭಿಮಾನಿಯೊಬ್ಬ ಸಿನಿಮಾ ನೋಡಲು 145 ಕಿ.ಮೀ ನಡೆದುಕೊಂಡು ಬಂದಿದ್ದು ದೇಶವ್ಯಾಪಿ ಸುದ್ದಿಯಾಗಿತ್ತು. ಒಟ್ಟಾರೆ ದೇಶದಾದ್ಯಂತ ಸಿನಿಮಾ ಚೆನ್ನಾಗಿ ಓಡುತ್ತಿದೆ.


Click it and Unblock the Notifications











