For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ವಿರುದ್ಧ ವಂಚನೆ ಪ್ರಕರಣ: ಸ್ಪಷ್ಟನೆ ನೀಡಿದ ಸಂಸ್ಥೆ

  |

  ಸಲ್ಮಾನ್ ಖಾನ್ ಒಡೆತನದ 'ಬೀಯಿಂಗ್ ಹ್ಯೂಮನ್' ಸಂಸ್ಥೆಯಿಂದ ವಂಚನೆ ಆಗಿದೆ ಎಂದು ಚಂಡೀಘಡದ ವ್ಯಾಪ್ಯಾರಿಯೊಬ್ಬ ಸಲ್ಮಾನ್ ಖಾನ್, ಸೇರಿದಂತೆ 9 ಮಂದಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಇದರಲ್ಲಿ ಸಲ್ಮಾನ್ ಖಾನ್ ಸಹೋದರಿ ಅಲ್ವಿರಾ ಖಾನ್ ಸಹ ಸೇರಿದ್ದಾರೆ.

  ಚಂಡೀಘಡದ ಆಭರಣ ವ್ಯಾಪಾರಿ ಅರುಣ್ ಗುಪ್ತಾ ಎಂಬುವರನ್ನು ಸಂಪರ್ಕಿಸಿದ್ದ 'ಬೀಯಿಂಗ್ ಹ್ಯೂಮನ್' ಸಂಸ್ಥೆಯ ಕೆಲವು ಸಿಬ್ಬಂದಿ 'ಬೀಯೀಂಗ್ ಹ್ಯೂಮನ್‌' ಬ್ರ್ಯಾಂಡ್‌ನ ಆಭರಣ ಬಿಡುಗಡೆ ಆಗಿದ್ದು ನಿಮ್ಮ ಅಂಗಡಿಗೆ ಅದನ್ನು ಕೊಡಲಾಗುತ್ತದೆ ಎಂದಿದ್ದರು. ಅಂತೆಯೇ 2018 ರಲ್ಲಿ ಎರಡು ಕೋಟಿ ಹಣ ನೀಡಿ ಆಭರಣ ದಾಸ್ತಾನು ಕೊಡುವಂತೆ ಕೋರಿದ್ದರು, ಹಾಗೂ ಅಂಗಡಿಯನ್ನು ನವೀಕರಣಗೊಳಿಸಿದ್ದರು. ಅಂಗಡಿ ತೆರೆಯುವ ವೇಳೆಗೆ, ವಿಶೇಷ ಆಭರಣಗಳನ್ನು ಅಂಗಡಿಗೆ ಸಪ್ಲೈ ಮಾಡುವ ಜೊತೆಗೆ ಸಲ್ಮಾನ್ ಖಾನ್ ಖುದ್ದಾಗಿ ಬಂದು ಅಂಗಡಿ ಉದ್ಘಾಟನೆ ಮಾಡುತ್ತಾರೆ ಎಂದು ಸಹ ಅರುಣ್‌ಗೆ ಹೇಳಲಾಗಿತ್ತು. ಆದರೆ ಆಭರಣಗಳು ಬಂದಿಲ್ಲ, ಸಲ್ಮಾನ್ ಖಾನ್ ಸಹ ಬಂದಿಲ್ಲ'' ಎಂದು ಅರುಣ್ ಗುಪ್ತಾ ದೂರು ನೀಡಿದ್ದಾರೆ.

  ''ಆ ಸಮಯದಲ್ಲಿ ಸಲ್ಮಾನ್ ಖಾನ್ ಜೊತೆಗೆ ಮೀಟಿಂಗ್ ಸಹ ಏರ್ಪಾಡು ಮಾಡಿದ್ದರು. ಸಲ್ಮಾನ್ ಖಾನ್ ಸಹ ತಾವು ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ನನಗೆ ವಂಚನೆ ಆದಾಗ ಸಾಕಷ್ಟು ಪತ್ರಗಳನ್ನು ಸಲ್ಮಾನ್ ಖಾನ್‌ಗೆ ಬರೆದೆ ಆದರೆ ಅವರು ಉತ್ತರ ನೀಡಲಿಲ್ಲ'' ಎಂದು ದೂರಿನಲ್ಲಿ ಅರುಣ್ ಗುಪ್ತಾ ಉಲ್ಲೇಖ ಮಾಡಿದ್ದಾರೆ.

  ದೂರಿನ ಆಧಾರದ ಮೇಲೆ ಸಲ್ಮಾನ್ ಖಾನ್, ಸಂಸ್ಥೆಯ ಸಿಇಒ ಅಲ್ವಿರಾ ಹಾಗೂ ಇತರೆ ಏಳು ಮಂದಿ ಸಿಬ್ಬಂದಿಯ ವಿರುದ್ಧ ಚಂಡೀಘಡ ಪೊಲೀಸರ ಬಳಿ ದೂರು ದಾಖಲಿಸಿದ್ದರು. ಪೊಲೀಸರು ಸಲ್ಮಾನ್ ಖಾನ್ ಹಾಗೂ ಇತರರಿಗೆ ಸಮನ್ಸ್ ಜಾರಿ ಮಾಡಿ ಜುಲೈ 13ರ ಒಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.

  ಕೊರೋನ ಕಾರಣದಿಂದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ ಶಿವಣ್ಣ! | Filmibeat Kannada

  ಇದೀಗ ಈ ಬಗ್ಗೆ 'ಬೀಯಿಂಗ್ ಹ್ಯೂಮನ್' ಅಧಿಕೃತ ಹೇಳಿಕೆ ಹೊರಡಿಸಿದ್ದು, ಅರುಣ್ ಗುಪ್ತಾ ಜೊತೆಗೆ ಆಗಿರುವ ಒಪ್ಪಂದಕ್ಕೂ ಸಲ್ಮಾನ್ ಖಾನ್‌ಗೂ ಸಂಬಂಧವಿಲ್ಲ ಎಂದಿದೆ. ಸಲ್ಮಾನ್ ಖಾನ್‌ಗೆ ಮಾತ್ರವಲ್ಲ ದೂರಿನಲ್ಲಿ ಉಲ್ಲೇಖಿಸಲಾದ ಯಾರಿಗೂ ಈ ಪ್ರಕರಣಕ್ಕೆ ಸಂಬಂಧವಿಲ್ಲ ಎಂದಿದೆ ಸಂಸ್ಥೆ. ಪ್ರಕರಣವು ನ್ಯಾಯಾಲಯದಲ್ಲಿರುವ ಕಾರಣ ಈ ಪ್ರಕರಣದ ಬಗ್ಗೆ ಹೆಚ್ಚಿನ ವಿಷಯ ಹೇಳಲಾಗುವುದಿಲ್ಲ'' ಎಂದು ಸಹ ಸಂಸ್ಥೆ ಹೇಳಿದೆ.

  English summary
  Chandigarh businessman Arun Gupta gave fraud complaint against Salman Khan. Police issue summons to Salman Khan. Now Being Human company gave clarification about the case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X