ತಮ್ಮದೇ ವಾಟರ್ ಬಾಟಲ್ ಬ್ಯುಸಿನೆಸ್ ಶುರುಮಾಡಿದ ಖ್ಯಾತ ನಟಿ, 750ML ನೀರಿನ ಬೆಲೆ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜೀವನೋಪಾಯಕ್ಕೆ ಕಲಾವಿದರು ತಮ್ಮಲ್ಲಿನ ಕಲೆಯೊಂದನ್ನೇ ನಂಬಿಕೊಂಡಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ತಂತ್ರಜ್ಞರು ಮತ್ತು ಕಾರ್ಮಿಕರನ್ನು ಹೊರತು ಪಡಿಸಿದರೆ ಚಿತ್ರರಂಗವನ್ನಷ್ಟೇ ನೆಚ್ಚಿಕೊಂಡು ಕುಳಿತ ಸ್ಟಾರ್‌ಗಳು ಯಾರು ಇಲ್ಲ. ಎಲ್ಲರೂ ಒಂದಲ್ಲ ಒಂದು ಕಡೆ ತಮ್ಮ ದುಡ್ಡು ಹೂಡಿದ್ದಾರೆ. ಸಂಪಾದನೆಯ ಮಾರ್ಗ ಕಂಡುಕೊಂಡಿದ್ದಾರೆ.

ಕೆಲವರು ಬಟ್ಟೆ ಮಾರಿದರೆ.. ಇನ್ನು ಕೆಲವರು ಮೇಕಪ್ ಕಿಟ್ ಮಾರುತ್ತಿದ್ದಾರೆ. ಕೆಲವರು ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದರೆ ಮತ್ತೂ ಕೆಲವರು ಜನರಿಗೆಲ್ಲ ಎಣ್ಣೆ ಹೊಡೆಸಿ ದುಡ್ಡು ಮಾಡುತ್ತಿದ್ಧಾರೆ. ತಮ್ಮದೇ ವಿಸ್ಕಿ ಬ್ರ್ಯಾಂಡ್‌ಗಳನ್ನು ಶುರು ಮಾಡಿದ್ದಾರೆ. ಮತ್ತೂ ಕೆಲವರು ರಿಯಲ್ ಎಸ್ಟೇಟ್‌ ನಲ್ಲಿ ಹಣ ಹೂಡಿದ್ದಾರೆ. ತೀರಾ ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ ತಮ್ಮದೇ ''ಪರ್ಫ್ಯೂಮ್'' ಬ್ರ್ಯಾಂಡ್ ಶುರು ಮಾಡಿದ್ದಾರೆ.

From Actress to Entrepreneur Bhumi Pednekar s New Backbay Water Brand Has a Shocking Price Tag

ಹೀಗೆ ಹಲವರು ಹಲವು ರೀತಿಯ ಉದ್ಯಮಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಸಾಲಿಗೆ ಈಗ ಭೂಮಿ ಪೆಡ್ನೇಕರ್ ಕೂಡ ಸೇರಿಕೊಂಡಿದ್ದಾರೆ. ಹೌದು, ಭೂಮಿ ಪೆಡ್ನೇಕರ್.. ಒಂದ್ಕಾಲದ ಗಜಗಾಮಿನಿ. ''ಧಮ್ ಲಗಾಕೇ ಐಸಾ'' ಚಿತ್ರದ ಮೂಲಕ ಚಿತ್ರರಂಗವನ್ನ ಪ್ರವೇಶಿಸಿದ ಭೂಮಿ, ಆ ನಂತರ ''ಟಾಯ್ಲೆಟ್ - ಏಕ್ ಪ್ರೇಮ್ ಕತಾ'' ಚಿತ್ರ ಬಂದಾಗ ಬಳುಕುವ ಬಳ್ಳಿಯಂತೆ ಆಗಿದ್ದರು.

ಭೂಮಿಯಲ್ಲಾದ ಈ ಬದಲಾವಣೆಯನ್ನ ಕಂಡು, ಆ ಕಾಲಕ್ಕೆ.. ಅನೇಕರು ನಿಬ್ಬೇರಗಾಗಿದ್ದರು. ಭೂಮಿ ಪೆಡ್ನೇಕರ್ ಅವರ ಶ್ರದ್ಧೆ-ಹಠ ಮೆಚ್ಚಿ ಒಳ್ಳೇಯ ಮಾತುಗಳನ್ನಾಡಿದ್ದರು.

ಆ ನಂತರ ಒಂದಾದ ಮೇಲೊಂದು ಚಿತ್ರಗಳನ್ನು ಮಾಡಿದ 2019ರ ನಂತರ ವರ್ಷಕ್ಕೆ ಮೂರು ನಾಲ್ಕು ಚಿತ್ರಗಳಲ್ಲಿ ಕಾಣಿಸಿಕೊಂಡರು. ಸದ್ಯ ಭೂಮಿ ಪೆಡ್ನೇಕರ್ ಚಿತ್ರರಂಗಕ್ಕೆ ಬಂದು 9 ವರ್ಷಗಳಾಗಿವೆ. ಈ 9 ವರ್ಷದ ಪ್ರಯಾಣದಲ್ಲಿ ಒಂದಿಷ್ಟು ದುಡ್ಡು ಸಂಪಾದನೆ ಮಾಡಿರುವ ಭೂಮಿ ಇದೀಗ ತಮ್ಮ ಸಹೋದರಿ ಸಮೀಕ್ಷಾ ಜೊತೆ ಸೇರಿ ತಮ್ಮದೇ ನೀರಿನ ಬಾಟಲಿಯ ಬ್ರ್ಯಾಂಡ್‌ನ ಹೊರ ತಂದಿದ್ದಾರೆ. ಇದಕ್ಕೆ ಇವರು ಇಟ್ಟಿರುವ ಹೆಸರು ''ಬ್ಯಾಕ್‌ಬೇ''.

ತಮ್ಮ ಈ ಹೊಸ ಸಾಹಸ ಮತ್ತು ಸಾಧನೆಯ ಕುರಿತು ''ಸಿಎನ್‌ಬಿಸಿ- ಟಿವಿ 18''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಭೂಮಿ, ಹಿಮಾಚಲದಲ್ಲಿ ನಮ್ಮದೇ ಆದ ನೀರುನ ಸ್ಥಾವರವನ್ನು ಸ್ಥಾಪಿಸಿದ್ದೇವೆ, ನಮ್ಮ ಈ ಹೊಸ ಪ್ರಯತ್ನದ ಕುರಿತು ನಮಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

From Actress to Entrepreneur Bhumi Pednekar s New Backbay Water Brand Has a Shocking Price Tag

ಇನ್ನೂ ನಮ್ಮ ಈ ಉತ್ಪಾದನಾ ಘಟಕದಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಕ್ಕಿದ್ದು ದಿನಕ್ಕೆ 45,000 ಬಾಕ್ಸ್‌ಗಳನ್ನು ನಾವು ಉತ್ಪಾದಿಸುವಷ್ಟು ಸಾಮರ್ಥ್ಯವನ್ನು ಹೊಂದಿದ್ದೇವೆ ಎಂದು ಹೇಳಿರುವ ಭೂಮಿ, ನಾವು ನಮ್ಮ ನೀರನ್ನು ಪ್ಲಾಸ್ಟಿಕ್‌ನಲ್ಲಿ ಅಥವಾ ಗಾಜಿನ ಬಾಟಲಿಯಲ್ಲಿ ಮಾರುತ್ತಿಲ್ಲ. ಬದಲಿಗೆ ''ಗೇಬಲ್ ಟಾಪ್ ಪೇಪರ್ ಪ್ಯಾಕೇಜಿಂಗ್'' ಮೂಲಕ ಮಾರುತ್ತಿದ್ದೇವೆ, ನಮ್ಮ ನೀರಿನ ಕ್ಯಾಪ್ ಬಯೋ ಕ್ಯಾಪ್‌ದಿಂದ ಕೂಡಿದೆ ಎಂದು ಹೇಳಿದ್ದಾರೆ.

ಮುಂದುವರೆದು 2030ರ ಸಮಯದಲ್ಲಿ ನೀರಿನ ವ್ಯಾಪಾರ 3 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆ ಇದೆ, ಈ ಹಿನ್ನೆಲೆ ಮುಂಬರುವ ನಾಲ್ಕು ವರ್ಷಗಳಲ್ಲಿ ನಾವು ನೂರು ಕೋಟಿಯ ಗಡಿಯನ್ನು ತಲುಪುವ ಯೋಜನೆ ಹಾಕಿಕೊಂಡಿದ್ದೇವೆ ಎಂದಿರುವ ಭೂಮಿ ಪೆಡ್ನೇಕರ್, ಸ್ಕೂಲ್-ಕಾಲೇಜ್, ಚಿತ್ರಮಂದಿರ, ವಿಮಾನ ನಿಲ್ದಾಣ, ರೆಸ್ಟೋರೆಂಟ್ ಹೀಗೆ ಮುಂದಿನ 15 ವರ್ಷದಲ್ಲಿ ಕಣ್ಣು ಹಾಯಿಸಿದ ಜಾಗದೆಲ್ಲಲ್ಲಾ ನಮ್ಮ ''ಬ್ಯಾಕ್‌ಬೇ'' ವಾಟರ್ ಬಾಟಲ್ ಕಾಣುವಂತಾಗಬೇಕು, ಅದೇ ನಮ್ಮ ಗುರಿ ಎಂದು ಹೇಳಿದ್ದಾರೆ.

ಅಂದ್ಹಾಗೇ ಭೂಮಿ ಪೆಡ್ನೇಕರ್ ಅವರ ಈ ''ಬ್ಯಾಕ್‌ಬೇ'' ನೀರಿನ ಬಾಟಲ್ ಸಾಮಾನ್ಯರಿಗೆ ಅಲ್ಲ. ಯಾಕೆಂದರೆ.. ನೈಸರ್ಗಿಕ ಖನಿಜಯುಕ್ತ 500ML ನೀರಿಗೆ 150 ರೂಪಾಯಿ ಮತ್ತು 750ML ನೀರಿಗೆ 200 ರೂಪಾಯಿ ದರವನ್ನು ಭೂಮಿ ಪೆಡ್ನೇಕರ್ ನಿಗದಿ ಮಾಡಿದ್ದಾರೆ. ಸದ್ಯಕ್ಕೆ ನೀರಿನ ಈ ದರವನ್ನು ಕೇಳಿ ಅನೇಕರು ಶಾಕ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಭೂಮಿ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

More from Filmibeat

English summary
From actress to entrepreneur, Bhumi Pednekar and her sister Samiksha unveil their new venture, 'Backbay'—a sustainable, premium water brand. Discover their mission to redefine hydration with eco-friendly packaging.
Read more about: business actress water
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X