41ನೇ ವಯಸ್ಸಿನಲ್ಲಿಯೂ ಕಲಿಯುವ ಹುಚ್ಚು, 2ನೇ ವರ್ಷದ ಸೈಕಾಲಜಿ ಪರೀಕ್ಷೆ ಬರೆಯಲು ವಿದ್ಯಾಭ್ಯಾಸ ಮಾಡುತ್ತಿರುವ ನಟ..!

ಶಿಕ್ಷಣ ಪ್ರತಿಯೊಬ್ಬರ ಮೂಲಭೂತ ಹಕ್ಕು. ಸುಸ್ಥಿರ ಅಭಿವೃದ್ದಿಯ ಸಾಧನ. ಅಸಮಾನತೆ - ತಾರತಮ್ಯ ನಿವಾರಣೆಗೆ ಪ್ರಬಲ ಅಸ್ತ್ರ. ಸಾಮಾಜಿಕ.. ಆರ್ಥಿಕ.. ತಾಂತ್ರಿಕ.. ಸಾಂಸ್ಕ್ರತಿಕ ಪ್ರಗತಿಯ ಚಾಲಕ ಶಕ್ತಿಯಾಗಿ ಶಿಕ್ಷಣ ಕಾರ್ಯ ನಿರ್ವಹಿಸುತ್ತೆ. ಹೀಗಾಗಿ ಕಲಿಕೆಗೆ ಅಂತ್ಯ ಇಲ್ಲ. ಅದೊಂದು ನಿರಂತರ ಪ್ರಕ್ರಿಯೆ ಎನ್ನುವ ಮಾತುಗಳನ್ನು ಅನೇಕರು ಹೇಳುತ್ತಲಿರುತ್ತಾರೆ. ಆದರೆ, ಅನೇಕ ಜನ ಕೈ ತುಂಬಾ ಸಂಬಳ

ಸಿಗುವ ಕೆಲಸ ಸಿಕ್ಕಿದ ನಂತರ ಕಲಿಕೆ ನಿಲ್ಲಿಸಿಬಿಡುತ್ತಾರೆ. ಸ್ಫರ್ಧಾತ್ಮಕ ಜಗತ್ತಿನಲ್ಲಿ ಈ ಮೂಲಕ ಔಟ್ ಡೇಟೆಡ್ ಆಗುತ್ತಾರೆ. ಇನ್ನು.. ಚಿತ್ರರಂಗಕ್ಕೆ ಬಂದರೆ ಇಲ್ಲಿ ಹಲವಾರು ಜನ ಕಾಲೇಜ್‌ನ ಮೆಟ್ಟಿಲನ್ನು ಕೂಡ ಹತ್ತಿಲ್ಲ. ಅದರಲ್ಲಿಯೂ ಸ್ಟಾರ್‌ಗಳ ಮಕ್ಕಳು ಎಲ್ಲ ಸೌಲಭ್ಯ ಇದ್ದರೂ ಕೂಡ ಕಲಿಯಲು ಹಿಂದೆ ಮುಂದೆ ನೋಡುತ್ತಾರೆ. ತಮ್ಮ ತಂದೆ ಅಥವಾ ತಾಯಿಯ ಪ್ರಭಾವಳಿಯನ್ನು ಬಳಸಿಕೊಂಡು ಚಿತ್ರರಂಗಕ್ಕೂ ಕೂಡ ಬಂದು ಬಿಡುತ್ತಾರೆ.

from-camera-to-classroom-harshvardhan-rane-prepares-for-psychology-exams-on-the-film-set

ಇದಕ್ಕೆ ಅಪವಾದ ಎನ್ನುವಂತೆ ಅಲ್ಲೊಬ್ಬರು.. ಇಲ್ಲೊಬ್ಬರು.. ಉನ್ನತ ಶಿಕ್ಷಣವನ್ನು ಪಡೆದಿದ್ದಾರೆ. ಲಕ್ಷಾಂತರ ರೂಪಾಯಿ ಸಂಬಳ ಬರುತ್ತಿದ್ದ ಕೆಲಸಕ್ಕೆ ಗುಡ್ ಬೈ ಹೇಳಿ ಬಣ್ಣದ ಲೋಕದ ಸೆಳೆತಕ್ಕೆ ಸಿಲುಕಿ ಚಿತ್ರರಂಗಕ್ಕೆ ಬಂದಿದ್ದಾರೆ.

ಬಿಲ್ಡರ್ ಆಗಿರಬಹುದು, ಎಂಜಿನಿಯರ್ ಆಗಿರಬಹುದು ಅಥವಾ ಉದ್ಯಮಿಯೇ ಆಗಿರಬಹುದು, ಕಲೆಯ ಸೆಳೆತದಿಂದ ಕೆಲಸ ಮತ್ತು ಹವ್ಯಾಸವನ್ನು ಕೂಡ ಕೆಲವರು ಬ್ಯಾಲೆನ್ಸ್ ಮಾಡಿಕೊಂಡು ಬಂದಿದ್ದಾರೆ.

ಆದರೆ ಇಲ್ಲೊಬ್ಬ ಸ್ಟಾರ್ ತನ್ನ ಹವ್ಯಾಸದ ಜೊತೆ ತನ್ನ ಅಭ್ಯಾಸವನ್ನು ಕೂಡ ಮುಂದುವರೆಸಿದ್ದಾರೆ. 41ರ ಪ್ರಾಯದಲ್ಲಿ ಸೈಕಾಲಜಿಯಲ್ಲಿ ಡಿಗ್ರಿ ಮಾಡಲು ಮುಂದಾಗಿದ್ದಾರೆ. ತಮ್ಮ ಚಿತ್ರದ ಚಿತ್ರೀಕರಣದ ನಡುವೆಯೂ ಎರಡನೇ ವರ್ಷದ ಮನಃಶಾಸ್ತ್ರದ ಪರೀಕ್ಷೆ ಬರೆಯಲು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ಧಾರೆ. ಆ ಸ್ಟಾರ್ ಬೇರೆ ಯಾರು ಅಲ್ಲ ಬದಲಿಗೆ ಹರ್ಷವರ್ಧನ್ ರಾಣೆ.

ಹೌದು, ಹರ್ಷವರ್ಧನ್ ರಾಣೆ.. ಸನಮ್ ತೇರಿ ಕಸಮ್ ಚಿತ್ರದ ಮೂಲಕ ಸ್ಟಾರ್ ಆದ ಸುರಸುಂದರಾಂಗ. ಆ ನಂತರ ಹಸೀನ್ ದಿಲ್‌ರುಬಾ.. ಪಲ್ಟನ್.. ಸೇರಿ ಮೂರು ನಾಲ್ಕು ಚಿತ್ರಗಳನ್ನು ಮಾಡಿರವ ಹರ್ಷವರ್ಧನ್ ರಾಣೆ ಸದ್ಯ ದೀವಾನಿಯತ್ ಎಂಬ ಚಿತ್ರವನ್ನು ಮಾಡುತ್ತಿದ್ಧಾರೆ. ಸೋನಂ ಬಜ್ವಾ ಈ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದು ಮಿಲಾಪ್ ಮಿಲನ್ ಜವೇರಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಸದ್ಯ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದೇ ಸಮಯದಲ್ಲಿ ಹರ್ಷವರ್ಧನ್ ರಾಣೆಯ ವಿದ್ಯಾಭ್ಯಾಸ ಕೂಡ ನಡೆಯುತ್ತಿದೆ. ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಹರ್ಷವರ್ಧನ್ ರಾಣೆ ಮನಃಶಾಸ್ತ್ರದ ಪಾಠಗಳನ್ನು ಓದುತ್ತಿದ್ದಾರೆ. ತಮಗೆ ನೀಡಲಾದ ಹೋಮ್‌ ವರ್ಕ್ ಕೂಡ ಮಾಡುತ್ತಿದ್ದಾರೆ.

ತಮ್ಮ ಈ ಕಲಿಕೆಯ ಹಂತದ ಫೋಟೊಗಳನ್ನು ಕೂಡ ಹರ್ಷವರ್ಧನ್ ರಾಣೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಕುರಿತು ಬರೆದುಕೊಂಡಿರುವ ಹರ್ಷವರ್ಧನ್ ರಾಣೆ ಒಂದು ಕಡೆ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಮತ್ತೊಂದೆಡೆ ಜೂನ್‌ನಲ್ಲಿ ಸೈಕಾಲಜಿಯ ಎರಡನೇ ವರ್ಷದ ಪರೀಕ್ಷೆಗಳು ನಡೆಯುತ್ತಿವೆ. ಈ ಸಮಯದಲ್ಲಿ ನಾನು ಚೆನ್ನಾಗಿ ಓದಲು ಬಯಸುತ್ತೇನೆ ಸದ್ಯ ನನ್ನ ತಲೆಯಲ್ಲಿ ಓಡುತ್ತಿರುವುದು ಅದು ಮಾತ್ರ ಎಂದು ಹೇಳಿದ್ದಾರೆ. ಪಾಸಾಗುವುದು ನನಗೆ ಮುಖ್ಯ ಅಲ್ಲ ಪರೀಕ್ಷೆಯಲ್ಲಿ ನಾನು ಟಾಪ್ ರ್ಯಾಂಕ್ ಪಡೆಯಬೇಕು ಎಂದು ಹೇಳಿದ್ದಾರೆ.

ಹರ್ಷವರ್ಧನ್ ರಾಣೆಯವರ ಈ ಓದಿನ ಹುಚ್ಚು ಮತ್ತು ಕಿಚ್ಚಿಗೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅನೇಕರು ಹರ್ಷವರ್ಧನ್‌ಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ನಿಮ್ಮಂತವರೇ ನಮಗೆ ಸ್ಫೂರ್ತಿ ಎನ್ನುತ್ತಿದ್ದಾರೆ. ನಿಜವಾದ ರೋಲ್ ಮಾಡೆಲ್ ನೀವು, ನಿಮ್ಮ ಮೇಲಿನ ಗೌರವ ಇನ್ನೂ ಹೆಚ್ಚಾಯ್ತು ಎನ್ನುವ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ.

More from Filmibeat

English summary
Actor Harshvardhan Rane, known for Sanam Teri Kasam, is preparing for his Psychology (Hons) exams in June while simultaneously shooting for his upcoming film Deewaniyat, co-starring Sonam Bajwa.
Read more about: life education actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X