ಬೆಂಗಳೂರಿನ ದಯಾನಂದ ಸಾಗರ್ ಕಾಲೇಜ್ ವಿದ್ಯಾರ್ಥಿಯ ಜೊತೆ ಸದ್ದಿಲ್ಲದೇ ಮದುವೆಯಾದ ಖ್ಯಾತ ಬಾಲಿವುಡ್ ನಟಿ
ಪ್ರೀತಿ ಅಂದರೆ ಅದು ನಾಟಕವೂ ಅಲ್ಲ. ಆಟಿಕೆಯೂ ಅಲ್ಲ. ಈ ಪ್ರೀತಿ ಯಾರ ಮೇಲೆ ಯಾವಾಗ ಬೇಕಾದರೂ ಹೇಗೆ ಬೇಕಾದರೂ ಆಗಬಹುದು. ಎಲ್ಲರೂ ತನ್ನ ಕೈಹಿಡಿಯುವ ಸಂಗಾತಿ ಹೀಗಿರಬೇಕು. ಹಾಗಿರಬೇಕು ಎಂದು ಕನಸಿನ ಮೂಟೆಯನ್ನೇ ಹೊತ್ತು ಸಾಗುತ್ತಾರೆ. ಚಿತ್ರರಂಗದಲ್ಲಿರುವವರು ಕೂಡ ಇದರಿಂದ ಹೊರತಾಗಿಲ್ಲ. ಇದಕ್ಕೆ ಕೈಗನ್ನಡಿ ಎನ್ನುವಂತೆ ಬಣ್ಣದ ಲೋಕದಲ್ಲಿ ಅನೇಕರು ಪ್ರೀತಿಯಲ್ಲಿ ಬಿದ್ದಿದ್ದಾರೆ.
ಅನುಷ್ಕಾ ಶರ್ಮಾ.. ದೀಪಿಕಾ ಪಡುಕೋಣೆ.. ಹೀಗೆ ಖ್ಯಾತ ಖ್ಯಾತ ನಾಯಕಿಯರೆಲ್ಲಾ ಈ ಪ್ರೇಮ ಪಾಶದಲ್ಲಿ ಸಿಲುಕಿದ್ದಾರೆ. ಮದುವೆಯಾಗಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ. ಸದ್ಯ ಈ ಸಾಲಿಗೆ ಅವಿಕಾ ಗೋರ್ ಕೂಡ ಸೇರಿಕೊಂಡಿದ್ದಾರೆ.

ಹೌದು, ಅವಿಕಾ ಗೋರ್.. ಹಿಂದಿಯಲ್ಲಿ ಬಾಲಿಕಾ ವಧು ಎಂದೇ ಜನಪ್ರಿಯವಾದ ಚೆಲುವೆ. ಬಾಲಕಿ ಆನಂದಿ ಪಾತ್ರವನ್ನು ಇವರು ನಿರ್ವಹಿಸಿದ್ದರು. ಆ ನಂತರ 2013ರಲ್ಲಿ ''ಉಯ್ಯಾಲಾ ಜಂಪಾಲಾ'' ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದ ಅವಿಕಾ ಕನ್ನಡದಲ್ಲಿ ಮಾಸ್ಟರ್ ಕಿಶನ್ ನಿರ್ದೇಶನದ ''ಕೇರ್ ಆಫ್ ಫುಟ್‌ಫಾತ್ 2'' ಚಿತ್ರದಲ್ಲಿ ಕೂಡ ಅಭಿನಯಿಸಿದ್ದರು.
ಈ ಮೂಲಕ ಕನ್ನಡದಲ್ಲಿ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದರು. ಅಪ್ಪು ಅಭಿನಯದ 'ನಟಸಾರ್ವಭೌಮ' ಚಿತ್ರದಲ್ಲಿನ ತಾಜಾ ಸಮಾಚಾರ ಹಾಡಿನಲ್ಲಿ ಕೂಡ ಇವರು ಕಾಣಿಸಿಕೊಂಡಿದ್ದರು.
ಇಂಥಾ ಅವಿಕಾ ಗೋರ್ ಸದ್ಯ ತಮ್ಮ ಬಹುಕಾಲದ ಗೆಳೆಯ ಮಿಲಿಂದ್ ಚಂದ್ವಾನಿ ಜೊತೆ ಸಪ್ತಪದಿ ತುಳಿದಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆದ ಈ ಮದುವೆ ಸಮಾರಂಭಕ್ಕೆ ಬಾಲಿವುಡ್‌ನ ಸ್ಟಾರ್ ನಾಯಕಿ ಸೋನಾಲಿ ಬೇಂದ್ರೆ.. ಹಿನಾ ಖಾನ್.. ರಾಕಿ ಜೈಸ್ವಾಲ್.. ರೂಬಿನಾ ದಿಲೈಕ್.. ಅಭಿನವ್ ಶುಕ್ಲಾ.. ಗುರ್ಮಿತ್ ಚೌಧರಿ.. ದೇಬಿನಾ ಬ್ಯಾನರ್ಜಿ.. ಸುದೇಶ್ ಲೆಹ್ರಿ.. ಸ್ವರಾ ಭಾಸ್ಕರ್ ಸೇರಿ ಹಲವರು ಸಾಕ್ಷಿಯಾಗಿದ್ದು ವಿಶೇಷ.

ಅಂದ್ಹಾಗೇ ಅವಿಕಾ ಮತ್ತು ಮಿಲಿಂದ್ 2020ರಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಲವ್ ಅಟ್ ಫಸ್ಟ್ ಸೈಟ್ ಎಂಬಂತೆ ಮೊದಲ ನೋಟದಲ್ಲಿಯೇ ಅವಿಕಾ ಹೃದಯದಲ್ಲಿ ಪ್ರೀತಿ ಚಿಗುರಿತ್ತು. ಅಲ್ಲಿಂದ ಮಾನಸಿಕವಾಗಿ ಮಿಲಿಂದ್‌ಗೆ ಅವಿಕಾ ಶರಣಾಗಿದ್ದರು. ಖುದ್ದು ಈ ವಿಚಾರವನ್ನು ಅವಿಕಾ ಹೇಳಿದ್ದಾರೆ ಕೂಡ.
ಇನ್ನು. ವಿಶೇಷ ಅಂದರೆ ಅವಿಕಾ ಹೃದಯ ಗೆದ್ದ ಮಿಲಿಂದ್ ಬೇರೆ ಯಾರು ಅಲ್ಲ. ಬದಲಿಗೆ ಬೆಂಗಳೂರಿನ ದಯಾನಂದ ಸಾಗರ್ ಕಾಲೇಜ್‌ನ ವಿದ್ಯಾರ್ಥಿ. ದಯಾನಂದ ಸಾಗರ್ ಕಾಲೇಜ್ ಆಫ್ ಎಂಜಿನಿಯರಿಂಗ್ ನಲ್ಲಿ ಪದವಿಯನ್ನು ಪಡೆದವರು. ಇನ್ಫೋಸಿಸ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೂಡ ಕೆಲಸವನ್ನು ಇವರು ಮಾಡಿದ್ದಾರೆ.
ಇನ್ನೂ ಮಿಲಿಂದ್ ಅವರ ಲಿಂಕ್ಡ್‌ಇನ್ ಖಾತೆಯ ಪ್ರಕಾರ ಕುಕು ಎಫ್‌ಎಂನಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಮಿಲಿಂದ್ ಕಾರ್ಯನಿರ್ವಹಿಸಿದ್ದಾರೆ. ಇದಕ್ಕೂ ಮುನ್ನ BYJU'S ಮತ್ತು ಓಲಾ ಎಲೆಕ್ಟ್ರಿಕ್ ಕಂಪನಿಯಲ್ಲಿಕೂಡ ಬೆವರು ಸುರಿಸಿದ್ದಾರೆ. ಇದಲ್ಲದೇ ಮಿಲಿಂದ್ ಪ್ರಸಿದ್ಧ ರಿಯಾಲಿಟಿ ಶೋ 'ರೋಡೀಸ್ ರಿಯಲ್ ಹೀರೋಸ್'ನಲ್ಲಿಯೂ ಕೂಡ ಭಾಗವಹಿಸಿದ್ದರು.
'ರಿಪಬ್ಲಿಕ್ ಟಿವಿ' ವರದಿಯ ಪ್ರಕಾರ ಸದ್ಯ ಕಾರ್ಪೋರೇಟ್ ಪ್ರಪಂಚಕ್ಕೆ ಗುಡ್ ಬೈ ಹೇಳಿರುವ ಮಿಲಿಂದ್ ಚಂದ್ವಾನಿ ಈಗ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ. ಕ್ಯಾಂಪ್ ಡೈರೀಸ್ ಎಂಬ ಸರ್ಕಾರೇತರ ಸಂಸ್ಥೆಯನ್ನು ಹುಟ್ಟು ಹಾಕಿರುವ ಮಿಲಿಂದ್ ತಮ್ಮ ಈ ಸಂಸ್ಥೆಯ ಮೂಲಕ ಹಿಂದುಳಿದ ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಇದಲ್ಲದೇ ಟೀಚ್ ಫಾರ್ ಇಂಡಿಯಾ ಮತ್ತು ಐಟೀಚ್ ಸ್ಕೂಲ್ ಎಂಬ ಲಾಭರಹಿತ ಸಂಸ್ಥೆಗಳನ್ನು ಕೂಡ ಇವರು ಪ್ರಾರಂಭಿಸಿದ್ದಾರೆ. ಸದ್ಯ ಮಿಲಿಂದ್ ಮತ್ತು ಅವಿಕಾ ಗೋರ್ ಅವರಿಗೆ ಹಲವರು ಶುಭಾಶಯಗಳನ್ನು ಕೋರುತ್ತಿದ್ದಾರೆ.


Click it and Unblock the Notifications











