3ವರ್ಷ 7ಬ್ಲಾಕ್‌ಬಸ್ಟರ್‌ ; ಚಿತ್ರರಂಗದಿಂದ ದಿಢೀರ್ ಕಣ್ಮರೆಯಾದ ಈ ಸ್ಟಾರ್ ನಟಿ ಈಗ ದುಬೈನಲ್ಲಿ ರಿಯಲ್ ಎಸ್ಟೇಟ್ ಏಜೆಂಟ್

ಬಣ್ಣದ ಲೋಕದಲ್ಲಿ ಒಮ್ಮೊಮ್ಮೆ ಯಶಸ್ಸು ಹೇಗೆ ಸ್ವೀಕರಿಸಬೇಕೆನ್ನುವುದೇ ಕೆಲವರಿಗೆ ಗೊತ್ತಾಗುವುದಿಲ್ಲ. ಜಾತಕದಲ್ಲಿ ರಾಜಯೋಗ ಇದ್ದರೂ ಕೂಡ ಇಂತಹದ್ದೊಂದು ಕರ್ಮಕ್ಕಾಗಿ ರಾಜಯೋಗ ಬರಬೇಕಿತ್ತಾ ಎಂದು ನಮಗೆ ಅನಿಸುವ ರೀತಿಯಲ್ಲಿ ಯಶಸ್ಸು ದಾರುಣತೆಗಳನ್ನು ನಿರ್ಮಾಣ ಮಾಡಿರುತ್ತೆ. ಹೀಗಾಗಿಯೇ ಜೀವನದಲ್ಲಿ ನಿರಾಸೆಯನ್ನು ಹೊಂದಿ, ಕೆಲವರು ದುಶ್ಚಟಗಳಿಗೆ ಬಲಿಯಾಗುತ್ತಾರೆ. ಇನ್ನು ಕೆಲವರು ಲೌಕಿಕ ಬದುಕನ್ನು ತೊರೆಯುವ ಪ್ರಯತ್ನ ಮಾಡುತ್ತಾರೆ. ಸಿಕ್ಕ ಯಶಸ್ಸನ್ನು...

ಸಂಭಾಳಿಸಲು ಆಗದೇ ಖಿನ್ನತೆಗೊಳಗಾಗಿ ಬದುಕಲು ಸಾಧ್ಯವಾಗದೇ ಬದುಕಿಗೆ ಇತಿಶ್ರೀ ಹಾಡುತ್ತಾರೆ. ಮತ್ತೂ ಕೆಲವರು ಆಧ್ಯಾತ್ಮದ ಹಾದಿಯಲ್ಲಿ ಸಾರ್ಥಕ ಬದುಕನ್ನು ಕಂಡಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಇನ್ನೂ ಕೆಲವರು ಹಣ, ಕೀರ್ತಿ, ಯಶಸ್ಸನ್ನು ನೀಡಿದ ಚಿತ್ರರಂಗದಿಂದ ದೂರವಾಗುತ್ತಾರೆ. ಬೇರೆ ದೇಶದಲ್ಲಿ ಬಿಡಾರ ಹೂಡತ್ತಾರೆ. ಅಲ್ಲಿ ತಮ್ಮದೇ ಆದ ವ್ಯಾಪಾರ-ವ್ಯವಹಾರವನ್ನು ಶುರು ಮಾಡುತ್ತಾರೆ. ಅದರಲ್ಲಿ ಯಶಸ್ಸನ್ನು ಕೂಡ ಪಡೆಯುತ್ತಾರೆ. ಉದಾಹರಣೆಗೆ ರಿಮಿ ಸೇನ್.

From Dhoom Diva to Dubai Deals Rimi Sen Re-Emerges in Real Estate Fans Label Her Unrecognizable

ಹೌದು. ರಿಮಿ ಸೇನ್.. ಒಂದ್ಕಾಲದಲ್ಲಿ ಪ್ರಿಯಾಂಕ ಚೋಪ್ರಾ, ಕತ್ರಿನಾ ಕೈಫ್ ಮತ್ತು ದೀಪಿಕಾ ಪಡುಕೋಣೆ ಅವರನ್ನು ಸೆಡ್ಡು ಹೊಡೆದಿದ್ದ ಬೆಂಗಾಲಿ ಬೆಡಗಿ. ''ಹಂಗಾಮಾ''.. ''ಧೂಮ್''.. ''ಫಿರ್ ಹೇರಾ ಪೇರಿ''.. ''ಗರಮ್ ಮಸಾಲಾ''.. ''ಕ್ಯೂಂ ಕೀ''.. ''ಧೂಮ್ 2''.. ''ಗೋಲ್‌ಮಾಲ್''.. ಹೀಗೆ ಒಂದಾದ ಮೇಲೊಂದು ಸಿನಿಮಾದಲ್ಲಿ, ಒಬ್ಬರಾದ ಮೇಲೊಬ್ಬರಂತೆ ಸೂಪರ್ ಸ್ಟಾರ್‌ಗಳ ಜೊತೆ ಕಾಣಿಸಿಕೊಂಡಿದ್ದವರು ರಿಮಿ ಸೇನ್. ಮೂರು ವರ್ಷದಲ್ಲಿ 07 ಹಿಟ್ ಸಿನಿಮಾ ನೀಡಿದ ಹೆಗ್ಗಳಿಕೆ ಕೂಡ ಇವರದ್ದು.

ಆದರೆ, ದುರಾದೃಷ್ಟ. ಖ್ಯಾತಿಯ ಉತ್ತುಂಗದಲ್ಲಿದ್ದ ರಿಮಿ ಸೇನ್, 2009ರ ಸುಮಾರು ದೊಪ್ಪನೆ ನೆಲಕ್ಕೆ ಬಿದ್ದರು. ಅವಕಾಶಗಳ ಕೊರತೆ ಎದುರಿಸಿದರು. 2011ರ ನಂತರ ಬಾಲಿವುಡ್‌ನಿಂದ ಸಂಪೂರ್ಣವಾಗಿ ಕಣ್ಮರೆಯಾದರು. ಅಲ್ಲಿಂದಾಚೆ ''ಬಿಗ್ ಬಾಸ್'' ಮತ್ತು ''ಜಲಕ್ ದಿಕ್ಲಾ ಜಾ'' ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ರಿಮಿ ಸೇನ್, ಚಿತ್ರಕ್ಕೆ ಬಣ್ಣ ಹಚ್ಚಿ 15 ವರ್ಷಗಳೇ ಉರುಳಿವೆ.

ಇಂಥಾ ರಿಮಿ ಸೇನ್ ಸದ್ಯ ಚಿತ್ರರಂಗದಿಂದ ದೂರವಾಗಿ ದುಬೈನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದಾರೆ. ಈ ಉದ್ಯಮಕ್ಕೆ ಬಂದಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ತಮ್ಮ ರಿಯಲ್ ಎಸ್ಟೇಟ್ ಅನುಭವವನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ''ಬಿಲ್ಡ್ ಕ್ಯಾಪ್ಸ್‌ ರಿಯಲ್ ಎಸ್ಟೇಟ್‌' ಎಲ್‌ಎಲ್‌ಸಿ''ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರಿಮಿ ಸೇನ್ ದುಬೈ ಎಲ್ಲರನ್ನೂ ಪ್ರೀತಿಯಿಂದ ಬರಮಾಡಿಕೊಳ್ಳುತ್ತದೆ ಎಂದು ಹೇಳಿದ್ದಾರೆ. ಈ ಕಾರಣಕ್ಕೆ ಇಲ್ಲಿ 95% ವಲಸಿಗರೇ ಇದ್ದಾರೆ ಎಂದಿದ್ದಾರೆ.

From Dhoom Diva to Dubai Deals Rimi Sen Re-Emerges in Real Estate Fans Label Her Unrecognizable

ಇಲ್ಲಿ ಮಸೀದಿಗಳು ಮಾತ್ರವಲ್ಲ, ದೇವಾಲಯಗಳೂ ಕೂಡ ಇವೆ ಎಂದು ಹೇಳಿರುವ ರಿಮಿ ಸೇನ್, ದುಬೈ ಎಲ್ಲರ ಬಗ್ಗೆಯೂ ಯೋಚನೆ ಮಾಡುತ್ತೆ, ಜನರ ಬದುಕು ಇಲ್ಲಿ ಉತ್ತಮವಾಗಿದೆ, ಸುಲಭವಾಗಿದೆ ಮತ್ತು ಆರಾಮದಾಯಕವಾಗಿದೆ ಎಂದಿದ್ದಾರೆ.

ನಮ್ಮ ದೇಶದಲ್ಲಿ (ಭಾರತ) ಇಂತಹ ನೆಮ್ಮದಿಯ ವಾತಾವರಣ ಕಾಣಿಸುವುದಿಲ್ಲ ಎಂದು ಹೇಳಿರುವ ರಿಮಿ ಸೇನ್, ಅಲ್ಲಿ ಸರ್ಕಾರ ರಾತ್ರೋರಾತ್ರಿ ನೀತಿಗಳನ್ನು ಬದಲಾಯಿಸುತ್ತೆ. ಆ ಮೂಲಕ ಜನರನ್ನು ಸಂಕಷ್ಟಕ್ಕೆ ನೂಕುತ್ತೆ ಎಂದು ಹೇಳಿದ್ದಾರೆ. ಭಾರತದಲ್ಲಿ ಕುಂತರು, ನಿಂತರು, ತೆರಿಗೆ.. ಅಂತ್ಯ ಇಲ್ಲದಷ್ಟು ಸಮಸ್ಯೆಗಳಿವೆ ಎಂದು ಹೇಳಿರುವ ರಿಮಿ ಸೇನ್ ಭಾರತ ಈಗ ವ್ಯಾಪಾರ-ಸ್ನೇಹಿ ರಾಷ್ಟ್ರವಾಗಿ ಉಳಿದಿಲ್ಲ ಎಂದು ಹೇಳಿದ್ಧಾರೆ.

ದುಬೈನಲ್ಲಿನ ಮಾರುಕಟ್ಟೆಯನ್ನು ಕೂಡ ಕೊಂಡಾಡಿರುವ ರಿಮ್ಮಿ ಸೇನ್, ಇಲ್ಲಿನ ರಿಯಲ್ ಎಸ್ಟೇಟ್ ಉದ್ಯಮ ತುಂಬಾ ಶಿಸ್ತಿನಿಂದ ಕೂಡಿದೆ ಎಂದು ಹೇಳಿದ್ದಾರೆ. ಇಲ್ಲಿ ಏಜೆಂಟ್‌ಗಳು ಮತ್ತು ಏಜೆನ್ಸಿಗಳೊಂದಿಗೆ ಮಾತ್ರ ಕೆಲಸ ಮಾಡಬೇಕು. ಡೆವಲಪರ್‌ಗಳು ಮತ್ತು ಏಜೆನ್ಸಿಗಳು ತಮ್ಮ ಪಾತ್ರವನ್ನು ನಿರ್ವಹಿಸುವುದರಿಂದ ಇಲ್ಲಿ ಒಂದು ಸರಿಯಾದ ವ್ಯವಸ್ಥೆ ಇದೆ ಎಂದು ಹೇಳಿರುವ ರಿಮಿ ಸೇನ್ ದುಬೈನ ರಿಯಲ್ ಎಸ್ಟೇಟ್‌ ಉದ್ಯಮಕ್ಕೂ ಭಾರತದ ರಿಯಲ್ ಎಸ್ಟೇಟ್ ಉದ್ಯಮಕ್ಕೂ ಅಜಗಜಾಂತರ ವ್ಯತ್ಯಾಸ ಇದೆ ಎಂದಿದ್ದಾರೆ.

ದುಬೈನಲ್ಲಿ ರಿಯಲ್ ಎಸ್ಟೇಟ್ ಏಜೆಂಟ್‌ಗಳನ್ನು ಆರ್ಥಿಕ ಸಲಹೆಗಾರರಂತೆ ಪರಿಗಣಿಸಲಾಗುತ್ತದೆ ಎಂದು ಹೇಳಿರುವ ರಿಮಿ ಸೇನ್, ಭಾರತದಲ್ಲಿ ಸಂಪೂರ್ಣ ತದ್ವಿರುದ್ದ, ಅಲ್ಲಿ ನೀವು ಯಾರ ಹತ್ತಿರವಾದರೂ ಹೋಗಿ ಎರಡು ತಿಂಗಳ ಬ್ರೋಕರೇಜ್ ಹಣ ಕೇಳಿದರೆ ನೀವು ಯಾವುದೋ ಅಪರಾಧ ಎಸಗಿದವರಂತೆ ನಿಮ್ಮನ್ನು ನೋಡಲಾಗುತ್ತೆ ಎಂದಿದ್ದಾರೆ.

From Dhoom Diva to Dubai Deals Rimi Sen Re-Emerges in Real Estate Fans Label Her Unrecognizable

ಅಂದ್ಹಾಗೇ ರಿಮಿ ಸೇನ್ ಈಗ ಮೊದಲಿನಂತೆ ಇಲ್ಲ ಇವರ ಮುಖಚಹರೆ ಸಂಪೂರ್ಣವಾಗಿ ಬದಲಾಗಿದೆ. ಎದುರುಗಡೆ ಬಂದರು ಕೂಡ ಇವರನ್ನು ಈಗ ಗುರುತು ಹಿಡಿಯುವುದು ಕಷ್ಟ. ಹೀಗಾಗಿಯೇ ಹಲವರು ರಿಮಿ ಸೇನ್ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ತಮ್ಮ ಸುಂದರವಾದ ಮುಖ ಹಾಳು ಮಾಡಿಕೊಂಡರು ಎಂದು ಎರಡು ವರ್ಷದ ಹಿಂದೆ ಚರ್ಚೆ ಮಾಡಿದ್ದರು.

ಆ ಸಮಯದಲ್ಲಿ ''ಹಿಂದೂಸ್ತಾನ್ ಟೈಮ್ಸ್''ಗೆ ಪ್ರತಿಕ್ರಿಯೆ ನೀಡಿದ್ದ ರಿಮಿ ಸೇನ್ ಯಾರಾದರೂ ಅಪರಾಧ ಮಾಡಿ ಆ ನಂತರ ಓಡಿ ಹೋಗದ ಹೊರತು ಪ್ಲಾಸ್ಟಿಕ್ ಸರ್ಜರಿ ಮಾಡುವ ಅಗತ್ಯ ಇಲ್ಲ ಎಂದು ಹೇಳಿದ್ದರು. ಭಾರತದ ಹೊರಗೆ ಅನೇಕ ಉತ್ತರಮ ವೈದ್ಯರಿದ್ದಾರೆ. ಅವರು ಫೇಸ್‌ಲಿಫ್ಟ್‌ನಲ್ಲಿ ಉತ್ತಮರಾಗಿದ್ದಾರೆ ಎಂದು ಹೇಳಿದ್ದ ರಿಮಿ ಸೇನ್ ನಾನು ಕೇವಲ ಬೊಟೊಕ್ಸ್ ಪಿಆರ್‌ಪಿ ಚಿಕಿತ್ಸೆ ಮಾತ್ರ ಮಾಡಿಸಿದ್ದೇನೆ ಎಂದಿದ್ದರು. ನಿಮಗೆ ನನ್ನ ಈ ರೂಪಾಂತರ ಇಷ್ಟವಾಗದೇ ಇದ್ದರೆ, ಎಲ್ಲಿ ನಾನು ಎಡವಿದ್ದೇನೆ ಎನ್ನುವುದನ್ನು ನನಗೆ ಹೇಳಿ, ಆಗ ನಾನು ನನ್ನ ವೈದ್ಯರಿಗೆ ಅವರು ಎಲ್ಲಿ ತಪ್ಪು ಮಾಡಿದ್ದಾರೆ ಎಂದು ಹೇಳಬಹುದು, ತಪ್ಪುಗಳನ್ನು ಸರಿಪಡಿಸಿ ಎಂದು ಕೂಡ ಹೇಳಬಹುದು ಎಂದು ಹೇಳಿದ್ದರು. ಇಂತಹ ರಿಮಿ ಸೇನ್ ಈಗ ಸಂದರ್ಶನದ ಮೂಲಕ ಸುದ್ದಿಯಲ್ಲಿದ್ದಾರೆ. ಸದ್ದು ಮಾಡುತ್ತಿದ್ದಾರೆ.

More from Filmibeat

English summary
From Bollywood star to Dubai property mogul! Rimi Sen addresses "unrecognizable" look rumors and explains why she traded films for real estate. Read more here.
Read more about: business actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X