ಮರ್ಯಾದೆಯಿಂದ ರಣವೀರ್ ಸಿಂಗ್ 40 ಕೋಟಿ ಕೊಟ್ಟರೆ ಒಳ್ಳೆಯದು - ದೀಪಿಕಾ ಪಡುಕೋಣೆ ಗಂಡನಿಗೆ ಫರ್ಹಾನ್ ಅಖ್ತರ್ ಎಚ್ಚರಿಕೆ
ಹಣ ಕೆಲ ಒಮ್ಮೆ ಸಂಬಂಧದಲ್ಲಿ ಹುಳಿ ಹಿಂಡುತ್ತೆ. ವರ್ಷಾನುವರ್ಷದ ಪ್ರೀತಿ ಮತ್ತು ಸ್ನೇಹವನ್ನು ಕೂಡ ಮುರಿಯುವ ಶಕ್ತಿ ಈ ಹಣಕ್ಕಿದೆ. ಹಣ ಇದ್ದರೆ ವ್ಯಕ್ತಿಯ ವ್ಯಕ್ತಿತ್ವ ಹೇಗೆ ಇರಲಿ ಆ ವ್ಯಕ್ತಿಗೆ ಗೌರವ ಸಿಗುತ್ತೆ. ಇನ್ನು ಚಿತ್ರರಂಗದಲ್ಲಿ ಅನೇಕರ ಗುಣವಾಗುಣಗಳನ್ನು ನಿರ್ಧರಿಸುವುದು ಕೇವಲ ಹಣ ಮಾತ್ರ.
ಹಣದಾಸೆಗೆ ಇಲ್ಲಿ ಅನೇಕರು ಅನೇಕರಿಗೆ ಮಕ್ಮಲ್ ಟೋಪಿಯನ್ನು ಹಾಕಿದ್ದಾರೆ. ನಂಬಿಕೆ ದ್ರೋಹ ಎಸಗಿದ್ದಾರೆ. ಮತ್ತೂ ಕೆಲವರು ಸಂಬಂಧವನ್ನೇ ಕಡಿದುಕೊಂಡಿದ್ದಾರೆ. ಈ ಸಾಲಿನಲ್ಲಿ ದೀಪಿಕಾ ಪಡುಕೋಣೆಯ ಗಂಡ ರಣವೀರ್ ಸಿಂಗ್ ಮತ್ತು ಫರ್ಹಾನ್ ಅಖ್ತರ್ ಕೂಡ ಸೇರಿಕೊಂಡಿದ್ದಾರೆ ಎನ್ನುವುದೇ ಸದ್ಯದ ಬ್ರೇಕಿಂಗ್ ಮತ್ತು ಶಾಕಿಂಗ್ ಸಮಾಚಾರ.

ಹೌದು, ಅಸಲಿಗೆ ಕೆಲ ಚಿತ್ರಗಳ ಪಾತ್ರಗಳಲ್ಲಿ ಸಮ್ಮೋಹಕ ಶಕ್ತಿ ಇರುತ್ತೆ. ಆ ಪಾತ್ರಗಳು ಪ್ರೇಕ್ಷಕರನ್ನು ಆವರಿಸಿಕೊಂಡಿರುತ್ತವೆ. ಹೃದಯವನ್ನು ಗೆದ್ದಿರುತ್ತವೆ. ವರ್ಷಾನು ವರ್ಷಗಳಾದರೂ ಕೂಡಾ ಆ ಪಾತ್ರಗಳನ್ನು ಜನ ಮರೆಯುವುದಿಲ್ಲ. ಬದಲಿಗೆ ಮತ್ತೆ ಮತ್ತೆ ಅದೇ ಪಾತ್ರದಲ್ಲಿ ಅದೇ ಕಲಾವಿದರನ್ನು ನೋಡಲು ಜನ ಬಯಸುತ್ತಾರೆ. ಚಿತ್ರದ ಮುಂದುವರೆದ ಭಾಗಗಳನ್ನು ಮಾಡಿ ಎನ್ನುವ ಒತ್ತಾಯವನ್ನು ಮಾಡುತ್ತಾರೆ. ಆ ಪೈಕಿ ''ಡಾನ್ 3'' ಚಿತ್ರ ಕೂಡ ಒಂದು.
''ಡಾನ್ 3'' ಚಿತ್ರದ ಮೂಲಕ ಹಲವರು ಮತ್ತೊಮ್ಮೆ ಶಾರುಖ್ ಖಾನ್ ಅವರನ್ನು ''ಡಾನ್'' ರೂಪದಲ್ಲಿ ನೋಡಲು ಬಯಸಿದ್ದರು.ಆದರೆ, ನಿರ್ದೇಶಕ ಮತ್ತು ನಿರ್ಮಾಪಕ ಫರ್ಹಾನ್ ಅಖ್ತರ್ ಮಾತ್ರ ಈ ಬಾರಿ ಶಾರುಖ್ ಖಾನ್ ಬದಲಿಗೆ ರಣವೀರ್ ಸಿಂಗ್‌ಗೆ ಮಣೆ ಹಾಕಿದ್ದರು. ಚಿತ್ರದ ಚಿಕ್ಕ ಟೀಸರ್ ಕೂಡ ಬಿಡುಗಡೆ ಮಾಡಿದ್ದರು.
ಆದರೆ ಘೋಷಣೆ ಮಾಡಲಾಯ್ತಿಷ್ಟೇ, ''ಡಾನ್ 3'' ಎದ್ದೇಳಲೇ ಇಲ್ಲ. ಹೀಗಿರುವಾಗ ಬಂದ ''ಧುರಂಧರ್'' ಬಾಕ್ಸಾಫೀಸ್‌ನಲ್ಲಿ ಹೊಸದೊಂದು ಇತಿಹಾಸವನ್ನು ಬರೆಯಿತು. ರಣವೀರ್ ಸಿಂಗ್ ಅವರಿಗೆ ಬಾಲಿವುಡ್‌ನ ಬಾಕ್ಸಾಫೀಸ್ ಕಿಂಗ್ ಎಂಬ ಬಿರುದನ್ನು ಕೂಡ ತಂದು ಕೊಡ್ತು. ಸದ್ಯ ರಣವೀರ್ ಸಿಂಗ್ '' ಧುರಂಧರ್-2'' ಚಿತ್ರದ ಬಿಡುಗಡೆಯನ್ನು ಕಾತುರದಿಂದ ಎದುರು ನೋಡುತ್ತಿದ್ದಾರೆ. ಈ ಸಮಯದಲ್ಲಿ ಫರ್ಹಾನ್ ಅಖ್ತರ್ ದಿಗ್ಗನೆ ಎದ್ದು ಬಂದು 40 ಕೋಟಿ ಪರಿಹಾರ ನೀಡುವಂತೆ ರಣವೀರ್ ಸಿಂಗ್‌ಗೆ ದುಂಬಾಲು ಬಿದ್ದಿದ್ದಾರೆ.
''ವೆರೈಟಿ ಇಂಡಿಯಾ''ದ ವರದಿಯ ಪ್ರಕಾರ, ಫರ್ಹಾನ್ ಅಖ್ತರ್ ಒಡೆತನದ ಎಕ್ಸೆಲ್ ಎಂಟರ್‌ಟೈನ್ಮೆಂಟ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈಗಾಗಲೇ ಈ ಸಂಸ್ಥೆಯಲ್ಲಿ ಕೆಲಸ ಮಾಡುವ ಹಲವರಿಗೆ ಗೇಟ್ ಪಾಸ್ ಕೂಡ ನೀಡಲಾಗಿದೆ. ಕೆಲಸದಿಂದ ಕಿತ್ತೆಸೆಯಲಾಗಿದೆ. ಇದರ ನಡುವೆ ''ಡಾನ್ 3'' ಚಿತ್ರದ ಕೆಲಸದಕ್ಕೆ ಸಂಬಂಧಿಸಿದಂತೆ ತಾವು ಆಗಲೇ 40 ಕೋಟಿ ಖರ್ಚು ಮಾಡಿದ್ದಾಗೆ ಫರ್ಹಾನ್ ಅಖ್ತರ್ ವಾದ ಮಾಡುತ್ತಿದ್ದಾರೆ. ರಣವೀರ್ ಸಿಂಗ್ ಸಮ್ಮತಿಯ ಮೇರೆಗೆ ಚಿತ್ರದ ಕೆಲಸವನ್ನು ನಾವು ಆರಂಭ ಮಾಡಿದ್ದೇವು, ಆದರೆ ಹೇಳದೇ ಕೇಳದೇ ಏಕಾಏಕಿ ಚಿತ್ರದಿಂದ ರಣವೀರ್ ಸಿಂಗ್ ಹೊರ ನಡೆದಿದ್ದಕ್ಕೆ 40 ಕೋಟಿ ನಷ್ಟವಾಗಿದೆ ಎಂದು ಫರ್ಹಾನ್ ಅಖ್ತರ್ ದೂರುತ್ತಿದ್ದಾರೆ.

ಆದರೆ ಇದಕ್ಕೆ ರಣವೀರ್ ಸಿಂಗ್ ಹೇಳುವುದೇ ಬೇರೆ. ರಾಷ್ಟ್ರೀಯ ಮಾಧ್ಯಮಗಳ ವರದಿಯ ಪ್ರಕಾರ ''ಡಾನ್ 3'' ಚಿತ್ರಕ್ಕೆ ರಣವೀರ್ ಸಿಂಗ್ ತುಂಬಾನೇ ಉತ್ಸಾಹದಲ್ಲಿದ್ದರು. ಆದರೆ, ಕಥೆ ರಣವೀರ್ ಸಿಂಗ್ ಅವರಿಗೆ ಇಷ್ಟ ಆಗಲಿಲ್ಲ. ಕೆಲ ಬದಲಾವಣೆಗಳನ್ನು ರಣವೀರ್ ಸಿಂಗ್ ಹೇಳಿದರೂ ಕೂಡ ಫರ್ಹಾನ್ ಅಖ್ತರ್ ಕಿವಿಗೆ ಹಾಕಿಕೊಳ್ಳಲಿಲ್ಲ. ಬೇರೆ ವಿಧಿ ಇಲ್ಲದೇ ಚಿತ್ರದಿಂದ ಹೊರ ಬಂದ ರಣವೀರ್ ಸಿಂಗ್ ಸದ್ಯ ಆದ ಯಾವ ನಷ್ಟಕ್ಕೂ ನಾನು ಜವಾಬ್ಧಾರನಲ್ಲ ಎಂದು ಹೇಳುತ್ತಿದ್ದಾರೆ. ಯಾರಿಗೂ ನಾನು ಹಣ ಕೊಡುವುದಿಲ್ಲ ಎನ್ನುತ್ತಿದ್ದಾರೆ.
ಇನ್ನೂ ಇದೇ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಫರ್ಹಾನ್ ಅಖ್ತರ್ ಮತ್ತು ರಣವೀರ್ ಸಿಂಗ್ ನಡುವೆ ಈಗಾಗಲೇ ಹಲವು ಬಾರಿ ಮಾತುಕತೆಗಳು ಕೂಡ ಆಗಿವೆ. ಆದರೆ ಯಾವುದು ಫಲಪ್ರದವಾಗಲಿಲ್ಲ ಎಂದು ''ವೆರೈಟಿ ಇಂಡಿಯಾ'' ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.
ಸದ್ಯ ಈ ವಿವಾದ ಬಗೆಹರಿಸಲು ಭಾರತೀಯ ನಿರ್ಮಾಪಕರ ಗಿಲ್ಡ್ (PGI) ಮಧ್ಯ ಪ್ರವೇಶಿಸಿದ್ದು ಮುಂಬರುವ ದಿನಗಳಲ್ಲಿ ಏನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ. ಅಂದ್ಹಾಗೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಫರ್ಹಾನ್ ಅಖ್ತರ್ ಅಥವಾ ರಣವೀರ್ ಸಿಂಗ್ ಯಾವುದೇ ಅಧಿಕೃತವಾದ ಹೇಳಿಕೆಯನ್ನು ನೀಡಿಲ್ಲ.


Click it and Unblock the Notifications











