ಡಿವೋರ್ಸ್‌ ವದಂತಿಗೆ ಫುಲ್ ಸ್ಟಾಪ್ ; 2ನೇ ಬಾರಿ ಗರ್ಭಿಣಿಯಾದ ದೀಪಿಕಾ- 18 ತಿಂಗಳಲ್ಲೇ ಮತ್ತೊಂದು ಗುಡ್ ನ್ಯೂಸ್

ಕನ್ನಡದ ''ಐಶ್ವರ್ಯ'' ಚಿತ್ರದಿಂದ ವೃತ್ತಿ ಬದುಕು ಶುರು ಮಾಡಿ ಆ ನಂತರ ಬಾಲಿವುಡ್‌ಗೆ ವಲಸೆ ಹೋಗಿ ಅಲ್ಲಿಯೇ ಬದುಕು ಕಟ್ಟಿಕೊಂಡವರು ದೀಪಿಕಾ ಪಡುಕೋಣೆ. ''ಓಂ ಶಾಂತಿ ಓಂ'' ಚಿತ್ರದ ಮೂಲಕ, ಹಿಂದಿ ಚಿತ್ರರಂಗವನ್ನ ಪ್ರವೇಶಿಸಿದ ದೀಪಿಕಾ ಅದಕ್ಕೂ ಮುನ್ನ ಮಾಡೆಲ್ ಆಗಿ ಮಿಂಚು ಹರಿಸಿದವರು. ಬಿಕಿನಿಯಲ್ಲಿ ವರೈಟಿ ವರೈಟಿ ಫೋಸ್ ಕೊಟ್ಟು ಕಣ್ಮನ ಸೆಳೆದವರು. ಇಷ್ಟೇ ಅಲ್ಲ.. ಸೈಕಲ್ ಗ್ಯಾಪ್‌ನಲ್ಲಿ ಆಲ್ಬಂ ಹಾಡುಗಳಿಗೆ ಕೂಡ ಸೊಂಟ ಬಳುಕಿಸಿದವರು ದೀಪಿಕಾ ಪಡುಕೋಣೆ.

ಇಂಥಾ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಮಾತು ಕಳೆದ ಕೆಲ ದಿನಗಳಿಂದ ಕೇಳಿ ಬರುತ್ತಿತ್ತು. ಇಬ್ಬರ ನಡೆ ಕೂಡ ಕೇಳಿ ಬರುತ್ತಿದ್ದ ಈ ಅಂತೆ-ಕಂತೆಗೆ ಪೂರಕವಾಗಿಯೇ ಇತ್ತು. ''ಧುರಂಧರ್'' ಕುರಿತು ದೀಪಿಕಾ ಬಹಿರಂಗವಾಗಿ ಎಲ್ಲಿಯೂ ಮಾತನಾಡಲಿಲ್ಲ. ಎಲ್ಲರ ಕಣ್ಣೀಗೆ ಕಾಣಿಸುವಂತೆ ಗಂಡನ ಗೆಲುವನ್ನು ಅದ್ಧೂರಿಯಾಗಿ ಸಂಭ್ರಮಿಸಲಿಲ್ಲ. ಇಬ್ಬರು ಜೊತೆಯಲ್ಲಿ ಮೀನೂಟ ಮಾಡಿದ್ದು ಬಿಟ್ಟರೆ ಜೊತೆಯಲ್ಲಿ ಹೆಚ್ಚಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.

From Dua to Duo Deepika and Ranveer Announce Baby No 2

ಇನ್ನೂ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಸೈದ್ದಾಂತಿಕ ಅಭಿಪ್ರಾಯಗಳು ಬೇರೆ ಬೇರೆ. ಇಬ್ಬರ ಈ ಸೈದ್ದಾಂತಿಕ ನಿಲುವಿನಿಂದಾಗಿ ಉರಿಯುವ ಬೆಂಕಿಗೆ ''ಧುರಂಧರ್ 2'' ಗೆಲುವಿನಿಂದಾಗಿ ತುಪ್ಪ ಸುರಿದಂತಾಗಿತ್ತು. ಸೈದ್ಧಾಂತಿಕ ಸಂಘರ್ಷ ಇವರ ದಾಂಪತ್ಯದ ಮೇಲೆ ಪ್ರಭಾವ ಬೀರುತ್ತಿದೆಯಾ ಎನ್ನುವ ಮಾತು ಗಲ್ಲಿಯಿಂದ ದೆಹಲಿಯವರೆಗೆ ಕೇಳಿ ಬಂದಿತ್ತು. ಇದಕ್ಕೆ ಪುರಾವೆ ಎಂಬಂತೆ ''ರೆಡ್ಡಿಟ್‌''ನಲ್ಲಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಅವರ ದಾಂಪತ್ಯ ಜೀವನಕ್ಕೆ ಸಂಬಂಧಿಸಿದಂತೆ ಚರ್ಚೆ ಕಾವೇರಿತ್ತು.

ಇದೀಗ ಈ ಎಲ್ಲ ಊಹಾಪೋಹಗಳಿಗೆ ದೀಪಿಕಾ ಪಡುಕೋಣೆ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ಅಕ್ಷಯಾ ತೃತೀಯಾದಂದು ತಾವು ಎರಡನೇ ಬಾರಿ ಗರ್ಭಿಣಿಯಾಗಿರುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಈ ಗುಡ್ ನ್ಯೂಸ್ ನೀಡಿರುವ ದೀಪಿಕಾ ಪಡುಕೋಣೆ, ತಮ್ಮ ಮಗಳು ದುವಾ ಕೈಯಲ್ಲಿ ಪ್ರೆಗ್ನೆನ್ಸಿ ಕಿಟ್ ನೀಡಿ ಆ ಫೋಟೊವನ್ನು ಹಂಚಿಕೊಂಡಿದ್ಧಾರೆ. ಸದ್ಯ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದ್ದು, ಪರಿಣಿತಿ ಚೋಪ್ರಾ, ಅರ್ಮಾನ್ ಮಲ್ಲಿಕ್, ನಿಲ್ ನಿತಿನ್ ಮುಖೇಶ್, ಮನೀಶ್ ಪೌಲ್, ಅನನ್ಯಾ ಪಾಂಡೆ ಸೇರಿ ಚಿತ್ರರಂಗದ ಹಲವರು ಶುಭ ಕೋರುತ್ತಿದ್ದಾರೆ.

From Dua to Duo Deepika and Ranveer Announce Baby No 2

ಅಂದ್ಹಾಗೇ ನವೆಂಬರ್ 14- 2018 ರಂದು ಇಟಲಿಯ ಲೇಕ್ ಕೋಮೋದ ವಿಲ್ಲಾ ಡೆಲ್ ಬಾಲ್ಬಿಯಾನೆಲ್ಲೋದಲ್ಲಿ ಮದುವೆಯ ಬಂಧನಕ್ಕೊಳಗಾಗಿದ್ದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ 18 ತಿಂಗಳ ಹಿಂದೆ ತಮ್ಮ ಮಗಳನ್ನು ಬರ ಮಾಡಿಕೊಂಡಿದ್ದರು. ದುವಾ ಎಂದು ನಾಮಕರಣ ಮಾಡಿದ್ದರು. ಕಳೆದ ದೀಪಾವಳಿ ಹಬ್ಬದಂದು ತಮ್ಮ ಮಗಳನ್ನು ತಮ್ಮ ಅಭಿಮಾನಿಗಳಿಗೆ, ಹಿತೈಶಿಗಳಿಗೆ ಪರಿಚಯಿಸಿದ್ದರು.

ಈಗ 18 ತಿಂಗಳ ನಂತರ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮತ್ತೊಮ್ಮೆ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ದುವಾ ಅಕ್ಕ ಆಗಿ ಬಡ್ತಿ ಪಡೆಯುತ್ತಿದ್ದಾಳೆ ಎಂದು ಅಭಿಮಾನಿಗಳು ಸದ್ಯ ಸಂಭ್ರಮ ಪಡುತ್ತಿದ್ದಾರೆ.

ಇನ್ನುಳಿದಂತೆ ದೀಪಿಕಾ ಪಡುಕೋಣೆ ಸದ್ಯ ಶಾರುಖ್ ಖಾನ್ ಅಭಿನಯದ ''ಕಿಂಗ್'' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಲ್ಲು ಅರ್ಜುನ್ ಅಭಿನಯದ ''ರಾಕಾ'' ಚಿತ್ರದಲ್ಲಿಯೂ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸದ್ಯ ''ಧುರಂಧರ್'' ಗೆಲುವಿನ ಅಲೆಯಲ್ಲಿರುವ ರಣವೀರ್ ಸಿಂಗ್ ''ಪ್ರಳಯ್'' ಎಂಬ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಜೋಡಿಗೆ ಹೃತ್ಪೂರ್ವಕ ಅಭಿನಂದನೆಗಳು!

`

English summary
DeepVeer fans, rejoice! Deepika Padukone and Ranveer Singh just announced their second pregnancy 1.6 years after baby Dua. See the adorable post taking over the internet.`
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X