ಧರ್ಮಗುರು ಗಂಡನ ಆದೇಶ ; ಇಸ್ಲಾಂ ಧರ್ಮದ ಆಳ ಅರಿಯಲು 'ಮದರಸಾ' ಸೇರಿಕೊಂಡ 'ಕೂಲ್' ನಟಿ ಸನಾ ಖಾನ್

ಪ್ರೀತಿಗೆ ಎಲ್ಲರನ್ನು ಎಲ್ಲವನ್ನೂ ಜಯಿಸುವಂತಹ ನಿಗೂಢವಾದ ಶಕ್ತಿ ಇದೆ. ಪ್ರತಿಯೊಂದು ಧರ್ಮದಲ್ಲಿಯೂ ಈ ಪ್ರೀತಿಯ ಪರಿಕಲ್ಪನೆಗೆ ಅಪಾರವಾದ ಆದ್ಯತೆ ಇದೆ. ಇನ್ನು ನಿಜವಾದ ಪ್ರೀತಿಯ ಆಳಕ್ಕೆ ಇಳಿದು ನೋಡಿದಾಗ ಅದರ ಅರ್ಥ ಹುಡುಕುತ್ತಾ ಹೋದಾಗ ಪ್ರೀತಿ ಎನ್ನುವುದು ಮನಸಿಂದ ಬರಬೇಕೆ ಹೊರತು ಆ ಪ್ರೀತಿ ಒತ್ತಾಯಪೂರ್ವಕವಾಗಿರಬಾರದು ಎಂಬ ವಿಚಾರದ ಅರಿವು ಆಗುತ್ತೆ.

ಹೀಗೆ ಪ್ರೀತಿಯನ್ನು ಅರಿತುಕೊಂಡು ಪ್ರೀತಿಯನ್ನು ಅರ್ಥ ಮಾಡಿಕೊಂಡು ಪ್ರೀತಿಗೋಸ್ಕರ ತನ್ನ ವೃತ್ತಿಯನ್ನೇ ತ್ಯಾಗ ಮಾಡಿ ಮುಸ್ಲಿಂ ಧರ್ಮಗುರುವಿನ ಕೈಯನ್ನು ಹಿಡಿದವರು ಸನಾ ಖಾನ್.

From Glitz to Guidance Sana Khan Enrolls in Madrasa Her Choice or Her Husband s

ಹೌದು ಸನಾ ಖಾನ್.. ಒಂದ್ಕಾಲದ ಬಾಲಿವುಡ್‌ನ ಚೆಲುವೆ.''ಯೆಹಿ ಹೈ ಹೈ ಸೊಸೈಟಿ'' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬಂದ ಸನಾ ಖಾನ್ ''ಬಾಂಬೆ ಟು ಗೋವಾ''.. ''ಧನ್ ಧನಾ ಧನ್ ಗೋಲ್''.. ಚಿತ್ರಗಳಲ್ಲಿ ಐಟಂ ಹಾಡುಗಳಿಗೆ ಹೆಜ್ಜೆ ಹಾಕಿದರು. ಸಲ್ಮಾನ್ ಖಾನ್ ಜೊತೆ ''ಜೈಹೋ'' ಶರ್ಮನ್ ಜೋಶಿ, ರಜ್‌ನೀಶ್ ದುಗ್ಗಲ್ ಜೊತೆ ''ವಜಾ ತುಮ್ ಹೋ'' ಚಿತ್ರವನ್ನು ಮಾಡಿದರು.

ಇನ್ನು ''ಬಿಗ್ ಬಾಸ್‌-6''ನೇ ಸೀಸನ್‌ನಲ್ಲಿ ಸ್ಫರ್ಧಿಯಾಗಿ ಭಾಗವಹಿಸಿದ್ದ ಸನಾ ಖಾನ್, 97 ದಿನ ಮನೆಯಲ್ಲಿದ್ದರು. ಆ ನಂತರ ಹತ್ತು ಹಲವು ರಿಯಾಲಿಟಿ ಶೋಗಳಲ್ಲಿ ಕೂಡ ಕಾಣಿಸಿಕೊಂಡರು. ಇದೆಲ್ಲದರ ನಡುವೆ ದಕ್ಷಿಣಕ್ಕೆ ವಲಸೆ ಬಂದ ಸನಾ ಖಾನ್, ತೆಲುಗು, ತಮಿಳು, ಮಲಯಾಳಂನಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡರು. 2011ರಲ್ಲಿ ತೆರೆಗೆ ಬಂದ ಗೋಲ್ಡನ್ ಸ್ಟಾರ್ ಗಣೇಶ್ ನಿರ್ದೇಶನದ ಚೊಚ್ಚಲ ಚಿತ್ರ ''ಕೂಲ್''ನಲ್ಲಿ ನಾಯಕಿಯಾಗುವ ಮೂಲಕ ಕನ್ನಡಿಗರ ಹೃದಯ ಗೆಲ್ಲುವ ಪ್ರಯತ್ನವನ್ನು ಕೂಡ ಸನಾ ಮಾಡಿದ್ದರು.

ಆದರೆ. ಅದೇನಾಯ್ತೋ..2020ರ ಆಸು ಪಾಸು ಮಾನವೀಯತೆ ಮೇಲೆ ಕೆಲಸ ಮಾಡಿಕೊಂಡು, ಸೃಷ್ಟಿದಾತ ಹೇಳಿದ ನಿಯಮಗಳನ್ನು ಪಾಲಿಸುತ್ತೇನೆ. ನನಗೆ ಚಿತ್ರೋದ್ಯಮ ಹೆಸರು, ಹಣ, ಗೌರವ ಎಲ್ಲವನ್ನು ನೀಡಿದೆ.

ಆದರೆ ಮನುಷ್ಯ ಹೆಸರು, ಹಣ ಮಾಡಲು ಭೂಮಿಗೆ ಬರುವುದಾ? ನನಗೆ ಇದು ಗೊತ್ತಾಯ್ತು. ಹೆಸರು, ಹಣಕ್ಕೋಸ್ಕರ ಇಡೀ ಜೀವನವನ್ನು ಕಳೆಯುವುದಲ್ಲ. ಹೀಗಾಗಿ ನಾನು ಬಣ್ಣದಲೋಕದಿಂದ ದೂರ ಹೋಗುವೆ ಎಂದು ಹೇಳಿ ಮೇಕಪ್ ಕಳಚಿ ಬಿಟ್ಟರು ಸನಾ ಖಾನ್.

From Glitz to Guidance Sana Khan Enrolls in Madrasa Her Choice or Her Husband s

ಆ ನಂತರ ನವೆಂಬರ್ 21-2020ರಂದು ಮುಸ್ಲಿಂ ಧರ್ಮ ಗುರು ಮುಫ್ತಿ ಅನಾಸ್ ಸೈಯದ್ ಜೊತೆ ಸೂರತ್‌ನಲ್ಲಿ ಮದುವೆಯಾದರು. ಅಲ್ಲಾರಿಂದ ಇಬ್ಬರೂ ಪ್ರೀತಿಸಿದೆವು, ಅಲ್ಲಾರಿಂದಾಗಿ ಮದುವೆಯಾದೆವು, ಈ ಜಗತ್ತಿನಲ್ಲಿ ಅಲ್ಲಾ ನಮ್ಮಿಬ್ಬರನ್ನು ಒಟ್ಟಾಗಿ ಇಡಲಿ ಎಂದು ಪ್ರಾರ್ಥಿಸಿದ್ದರು. ನಾನು ಅನೇಕ ವರ್ಷಗಳ ಕಾಲ ಪ್ರಾರ್ಥಿಸಿದ ಫಲವಾಗಿ ಇಂತಹ ಗಂಡ ಸಿಕ್ಕಿದ್ದಾನೆ ಎಂದು ಹೇಳಿದ್ದರು. ಜುಲೈ 5-2023ರಲ್ಲಿ ತಮ್ಮ ಮೊದಲ ಮಗುವಿಗೆ ಜನ್ಮವನ್ನು ನೀಡಿದ್ದರು. ಕಳೆದ ವರ್ಷದ ಆರಂಭದಲ್ಲಿ ಮತ್ತೊಂದು ಗಂಡು ಮಗುಗೆ ಕೂಡ ಜನ್ಮ ನೀಡಿದರು.

ಇಂಥಾ ಸನಾ ಖಾನ್‌ಗೆ ಈಗ 37 ವರ್ಷ. ಮದುವೆ ಆಗಿ ಆರು ವರ್ಷವಾಗಿದೆ. ಈಗ ಸನಾ ಖಾನ್ ಅವರಿಗೆ ಇಸ್ಲಾಂ ಧರ್ಮವನ್ನು ಇನ್ನೂ ಆಳವಾಗಿ ಅಧ್ಯಯನ ಮಾಡಬೇಕೆಂದು ಅನಿಸಿದೆ. ಹೀಗಾಗಿ ಬಣ್ಣದ ಪ್ರಪಂಚದಿಂದ ದೂರ ಆಗಿ ಆಧ್ಯಾತ್ಮಿಕ ಮಾರ್ಗದಲ್ಲಿ ಮುನ್ನಡೆಯುತ್ತಿರುವ ಸನಾ ಖಾನ್ ಸದ್ಯ ಮದರಸಾಗೆ ಸೇರಿಕೊಂಡಿದ್ದಾರೆ. ತಮ್ಮದೇ ಯೂಟ್ಯೂಬ್‌ನ ಪಾಡ್‌ಕಾಸ್ಟ್‌ನಲ್ಲಿ ಈ ವಿಚಾರವನ್ನು ಹೇಳಿದ್ದಾರೆ.

ಜೀವನದಲ್ಲಿ ಮಾರ್ಗದರ್ಶಕರ ಅವಶ್ಯಕತೆ ಇದೆ ಎಂದು ಹೇಳಿರುವ ಸನಾ, ನನ್ನ ಪತಿ ಯಾವಾಗಲೂ ಇಸ್ಲಾಂ ಧರ್ಮದ ಅಧ್ಯಯನಕ್ಕೆ ಪ್ರೋತ್ಸಾಹಿಸುತ್ತಾರೆ. ಈಗ ಅವರ ಪ್ರೇರಣೆಯಿಂದ ಮದರಸಾ ಸೇರಿದ್ದೇನೆ ಎಂದು ಹೇಳಿದ್ದಾರೆ. ಆನ್‌ಲೈನ್‌ನಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದೇನೆ ಎಂದಿದ್ದಾರೆ.

ಮುಂದುವರೆದು ನನ್ನ ಈ ನಿರ್ಧಾರದ ಹಿಂದೆ ಯಾರ ಒತ್ತಡವೂ ಇಲ್ಲ. ಯಾವ ಒತ್ತಾಯವೂ ಇಲ್ಲ ಎಂದು ಹೇಳಿರುವ ಸನಾ ಖಾನ್ ನಾನು ಸ್ವಇಚ್ಚೆಯಿಂದ ಮದರಸಾ ಸೇರಿದ್ದೇನೆ ಎಂದು ಹೇಳಿದ್ದಾರೆ. ಸದ್ಯ ಸನಾ ಖಾನ್ ಅವರ ಈ ವಿಡಿಯೋ ವೈರಲ್ ಆಗಿದ್ದು ಹಲವು ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

From Glitz to Guidance Sana Khan Enrolls in Madrasa Her Choice or Her Husband s

More from Filmibeat

English summary
Is Sana Khan’s move to a madrasa her own spiritual journey or her husband’s wish? Get the real story behind her decision to leave fame for faith and study Islam.
Read more about: sana khan religion
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X