ಅವಕಾಶಗಳಿಲ್ಲದೇ 'ಬಾರ್ ಡ್ಯಾನ್ಸರ್‌' ಆದ ನಟಿ, ಥಾಯ್ಲೆಂಡ್‌ ನೈಟ್‌ಕ್ಲಬ್‌ನಲ್ಲಿ ಬಿಂದಾಸ್ ಸ್ಟೆಪ್ಸ್ ಹಾಕಿದ ಚೆಲುವೆ

ಚಿತ್ರರಂಗದಲ್ಲಿ ಮಿಂಚುವುದು.. ಮೆರೆಯುವುದು.. ಸುಲಭ ಅಲ್ಲ.ಯಾಕೆಂದರೆ.. ತಾಳ್ಮೆ ಬೇಡುವ ಕ್ಷೇತ್ರ ಇದು. ಇಲ್ಲಿ ಅವಕಾಶಗಳು ಸುಲಭವಾಗಿ ದಕ್ಕುವುದಿಲ್ಲ. ಗೆಲುವು ಕೂಡ ಬಹುಬೇಗ ಒಲಿಯುವುದಿಲ್ಲ. ಹೀಗಾಗಿಯೇ ಅನೇಕರು ಬಂದ ದಾರಿಗೆ ಸುಂಕ ಇಲ್ಲ ಎನ್ನುವಂತೆ ಇಲ್ಲಿ ಮರಳಿದ್ದಾರೆ. ಚಿತ್ರರಂಗದ ಸಹವಾಸ ಬೇಡ ಎಂದು ಬೇರೆ ಬೇರೆ ಕ್ಷೇತ್ರದತ್ತ ವಾಲಿದ್ದಾರೆ. ಇನ್ನೂ ಕೆಲವರು ತಮ್ಮದೇ ಆದ ಉದ್ಯಮವನ್ನು ಶುರು ಮಾಡಿ ಬೇರೆಯವರಿಗೆ ಕೂಡ ಉದ್ಯೋಗ ನೀಡಿದ್ದಾರೆ. ಬೆಳೆದಿದ್ದಾರೆ.

ಆದರೆ..ಇದರ ನಡುವೆ ಇಲ್ಲೊಬ್ಬರು ಚಿತ್ರರಂಗದಲ್ಲಿ ಮಿಂಚುವ ಕನಸೊತ್ತು ಬಂದು, ತಮ್ಮ ಕನಸು ನನಸಾಗದ ಕಾರಣ, ಅವಕಾಶ ಸಿಗದ ಕಾರಣ, ''ಬಾರ್ ಡ್ಯಾನ್ಸರ್'' ಆದ್ರಾ ಎನ್ನುವ ಅನುಮಾನ ಸದ್ಯಕ್ಕೆ ಹಲವರನ್ನು ಕಾಡುತ್ತಿದೆ. ಆ ಚೆಲುವೆ ಬೇರೆ ಯಾರು ಅಲ್ಲ ಬದಲಿಗೆ ''ಅಂಜಲಿ ಅರೋರಾ'' ಎನ್ನುವುದೇ ವಿಪರ್ಯಾಸ.

From Kacha Badam to Bar Dance Anjali Arora s Viral Videos Raise Questions About Her Career Path

ಹೌದು ಅಂಜಲಿ ಅರೋರಾ.. ಸದ್ಯ ಬ್ಯಾನ್ ಆಗಿರುವ ''ಟಿಕ್ ಟಾಕ್'' ಮೂಲಕ ಒಂದು ಕಾಲದಲ್ಲಿ ಬೆಳಕಿಗೆ ಬಂದ ಪ್ರತಿಭೆ. ಎರಡು ಮೂರು ವರ್ಷದ ಹಿಂದೆ ಬೀದಿ ಬದಿಯಲ್ಲಿ ಕಡಲೆಕಾಯಿ ಮಾರುವ ಪಶ್ಚಿಮ ಬಂಗಾಳದ ''ಭುಬನ್ ಭಡ್ಯಾಕರ್'' ಕಡಲೆಕಾಯಿ ಮಾರಲು ಹೆಣೆದಿದ್ದ ಹಾಡು ''ಕಚ್ಚಾ ಬಾದಾಮ್'' ಎಂಬ ಹಾಡು ಬಂದಿತ್ತಲ್ಲಾ..

ಆ ಹಾಡಿಂದ ಭುಬನ್ ಪಡೆದಿದ್ದೆಷ್ಟು .. ಕಳೆದುಕೊಂಡಿದ್ದೆಷ್ಟು .. ಅನ್ನುವುದು ಬೇರೆ ವಿಚಾರವಾದರೂ, ಭುಬನ್ ಬಾಯಿಂದ ಉದುರಿದ್ದ ಹಾಡನ್ನ ಹಾಡಿ, ಅದಕ್ಕೆ ರೀಲ್ಸ್ ಮಾಡಿ ಅಸಂಖ್ಯಾತ ಜನ ಬದುಕು ಕಟ್ಟಿಕೊಂಡರು. ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಪಾಪ್ಯುಲರ್ ಆದರು. ಆ ಪೈಕಿ ಈ ಅಂಜಲಿ ಅರೋರಾ ಕೂಡ ಒಬ್ಬರು.

''ಕಚ್ಚಾ ಬಾದಾಮ್'' ಹಾಡಿಗೆ ಟಿಕ್ ಟಾಕ್ ಮಾಡುವ ಮೂಲಕ ಸೊಶಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್‌ ಆಗಿ ಹೊರ ಹೊಮ್ಮಿದ ಅಂಜಲಿ, 2022ರಲ್ಲಿ ಗೂಗಲ್ ನಲ್ಲಿ ಅತೀ ಹೆಚ್ಚು ಬಾರಿ ಹುಡುಕಲಾದ ಸೆಲೆಬ್ರಿಟಿಗಳ ಸ್ಥಾನದಲ್ಲಿ ಕೂಡ ಕಾಣಿಸಿಕೊಂಡರು. ''ಲಾಕ್ ಅಪ್'' ರಿಯಾಲಿಟಿ ಶೋನಲ್ಲಿ ಕೂಡ ಪ್ರತ್ಯಕ್ಷವಾದರು. ಇಷ್ಟೇ ಯಾಕೆ..''ಬಿಗ್ ಬಾಸ್'' ಮನೆಯೊಳಗೆ ಕೂಡ ಹೋಗಿ ಬಂದರು. ನೋಡ.. ನೋಡುತ್ತಾ.. ಕೇವಲ 24ರ ಪ್ರಾಯದಲ್ಲಿಯೇ, ಒಂದಲ್ಲ..ಎರಡಲ್ಲ.. ನಾಲ್ಕು ಕೋಟಿ ಮನೆಯ ಒಡತಿಯಾದರು.

ಇಂಥಾ ಅಂಜಲಿ ಅರೋರಾ ಸದ್ಯ ಥಾಯ್ಲೆಂಡ್‌ನ ''ಡ್ಯಾನ್ಸ್ ಕ್ಲಬ್‌'ನಲ್ಲಿ ಡ್ಯಾನ್ಸ್ ಮಾಡಿದ್ದಾರೆ. 2002ರಲ್ಲಿ ತೆರೆಗೆ ಬಂದಿದ್ದ ಅಮಿತಾಬ್ ಬಚ್ಚನ್.. ಸಂಜಯ್ ದತ್ ಅಭಿನಯದ ''ಕಾಂಟೆ'' ಚಿತ್ರದ ಚಾರ್ಟ್ ಬಸ್ಟರ್‌ ಹಾಡು ''ಓ ಸಾಕಿ ಸಾಕಿ ರೇ''ಗೆ ತಮ್ಮ ಸೊಂಟ ಬಳುಕಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಹಲವಾರು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಹಲವಾರು ಪ್ರಶ್ನೆಗಳನ್ನು ಕೂಡ ಈ ವಿಡಿಯೋ ಹುಟ್ಟು ಹಾಕಿದೆ.

ಇದೇ ಬದುಕಿನ ವಾಸ್ತವ. ವೈರಲ್ ಆದ ಮಾತ್ರಕ್ಕೆ ಹಣೆಬರಹ ಬದಲಾಗುವುದಿಲ್ಲ, ಅಬ್ಬಬ್ಬಾ ಅಂದರೆ ಆ ಖ್ಯಾತಿ ಮತ್ತು ಹೆಸರು ಒಂದೆರಡು ವರ್ಷ ಇರುತ್ತೆ, ಅಷ್ಟರಲ್ಲಿಯೇ ಸಾಧ್ಯವಾದಷ್ಟು ಉದ್ಯಮ ಪ್ರಾರಂಭ ಮಾಡುವ ಆಲೋಚನೆ ಮಾಡಬೇಕು ಇಲ್ಲವಾದರೆ ಬೇರೆ ಗೌರವಾನ್ವಿತ ವೃತ್ತಿ ಬದುಕನ್ನು ಆಯ್ಕೆ ಮಾಡಿಕೊಳ್ಳಬೇಕು, ಇಲ್ಲದೇ ಇದ್ದರೆ ಹೀಗೆ ದುಬೈಗೆ ತೆರಳುವುದು, ಪಟ್ಟಾಯದಲ್ಲಿ ಕುಣಿಯುವುದು ಮಾಡಬೇಕಾಗುತ್ತೆ, ಜೀವನ ಸಾಗಿಸಲು ಅದೇ ಏಕೈಕ ಮಾರ್ಗವಾಗುತ್ತೆ ಎಂದು ಹಲವರು ಹೇಳಿದರೆ ರೀಲ್‌ದಿಂದ ಡೀಲ್‌ವರೆಗೆ ಪಟ್ಟಾಯಾದಲ್ಲಿ ತಮ್ಮ ಪ್ರತಿಭೆಯನ್ನು ಅಂಜಲಿ ಅರೋರಾ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಇನ್ನು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಕೆಲವರು ಅಂಜಲಿ ಅರೋರಾ ಪರ ವಕಲಾತ್ತು ವಹಿಸಿದ್ದು ಡ್ಯಾನ್ಸ್ ಅಂದರೆ ಆಕೆಗೆ ಪಂಚಪ್ರಾಣ. ಅದರಲ್ಲಿ ಆಕೆ ಪ್ರವೀಣೆ. ಹೀಗಾಗಿ ಡ್ಯಾನ್ಸ್‌ ಮೂಲಕ ತನ್ನ ಭವಿಷ್ಯವನ್ನು ಆಕೆ ಭದ್ರ ಮಾಡಿಕೊಳ್ಳುತ್ತಿದ್ದಾಳೆ, ಪ್ರಾಮಾಣಿಕ ಜೀವನ ನಡೆಸುತ್ತಿದ್ದಾಳೆ ಎಂಬ ಮಾತುಗಳನ್ನಾಡುತ್ತಿದ್ದಾರೆ ನಿಮ್ಮ ಸಾಧನೆ ಏನು ? ಎಂದು ಪ್ರಶ್ನೆ ಮಾಡುತ್ತಿದ್ಧಾರೆ.ಸದ್ಯ ಅಂಜಲಿ ಅರೋರಾ ಥಾಯ್ಲೆಂಡ್‌ನ ನೈಟ್‌ ಕ್ಲಬ್‌ನಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

More from Filmibeat

English summary
Viral videos of Anjali Arora dancing in a Thailand club are circulating online. Is the "Kacha Badam" fame star changing her career? Dive into the full story and see the videos.
Read more about: viral video actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X