ಜಾಹ್ನವಿ ಕಪೂರ್ ''ಪರಮ ಸುಂದರಿ''ಯಲ್ಲಿ ''ಯಶ್'' ಮಿಂಚಿಂಗ್, ಹುಚ್ಚೆದ್ದ ರಾಕಿ ಸೈನ್ಯ

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರರಂಗ ಅಂದರೆ ಕೇವಲ ಬಾಲಿವುಡ್ ಮಾತ್ರ ಎಂಬಂತೆ ಬಿಂಬಿಸಲಾಗುತ್ತಿತ್ತು. ಅಹಂಕಾರ ಅಕ್ಷರಶಃ ಬಾಲಿವುಡ್‌ನವರ ನೆತ್ತಿಗೇರಿದ್ದ ಕಾಲ ಅದು. ಆದರೆ ಈಗ ಕಾಲ ಬದಲಾಗಿದೆ. ದಕ್ಷಿಣ ಚಿತ್ರಗಳ ಅಬ್ಬರದ ಮುಂದೆ ಹಿಂದಿ ಉದ್ಯಮದ ಚಿತ್ರಗಳು ತರಗೆಲೆಗಳಂತೆ ಚದುರಿ ದಿಕ್ಕಾಪಾಲಾಗುತ್ತಿವೆ. ಸ್ವಲ್ಪ ಯಾಮಾರಿದರೂ ಬಾಲಿವುಡ್ಡಿಗೇ ಬಾಲಿವುಡ್ಡೇ ಬಾಗಿಲು ಹಾಕಿಕೊಂಡು ಹೋಗಬೇಕಾದ ಅಪಾಯ ಇದೆ.

ಹೀಗಾಗಿಯೇ ನಿಧಾಣವಾಗಿ ದಕ್ಷಿಣದವರನ್ನು ಇಂದ್ರ-ಚಂದ್ರ-ದೇವೇಂದ್ರ ಎಂದೆಲ್ಲಾ ಹೊಗಳಲು ಶುರು ಮಾಡಿರುವ ಹಿಂದಿ ಮಂದಿ ತಮ್ಮ ಚಿತ್ರದ ಗೆಲುವಿಗೆ ಈಗ ದಕ್ಷಿಣದ ಡೈರೆಕ್ಟರ್‌ಗಳಿಗೆ ಮಣೆ ಹಾಕಲು ಶುರು ಮಾಡಿದ್ದಾರೆ. ಇಷ್ಟೇ ಅಲ್ಲ ತಮ್ಮ ಚಿತ್ರಗಳಲ್ಲಿ ಸೌತ್ ಸ್ಟಾರ್ಸ್‌ಗಳ ಭಜನೆಯನ್ನು ಕೂಡ ಮಾಡಲು ಶುರು ಮಾಡಿದ್ದಾರೆ. ಇದಕ್ಕೆ ''ಪರಮ ಸುಂದರಿ'' ಸದ್ಯದ ತಾಜಾ ಉದಾಹರಣೆ.

From KGF to Param Sundari How a Janhvi Kapoor Dialogue Is Making Yash Fans Happy

ಹೌದು, ಬಾಲಿವುಡ್‌ನಲ್ಲಿ ''ಪರಮ ಸುಂದರಿ'' ಎಂಬ ಸಿನಿಮಾ ಬರ್ತಿದೆ. ಅತಿಲೋಕ ಸುಂದರಿ ''ಶ್ರೀದೇವಿ'' ಅವರ ಮಗಳು ''ಜಾಹ್ನವಿ ಕಪೂರ್'' ಮತ್ತು ಕಿಯಾರಾ ಅಡ್ವಾಣಿಯ ಗಂಡ ''ಸಿದ್ಧಾರ್ಥ್ ಮಲ್ಹೋತ್ರಾ'' ಈ ಚಿತ್ರದಲ್ಲಿ ನಾಯಕ-ನಾಯಕಿ ಪಾತ್ರವನ್ನು ನಿರ್ವಹಿಸಿದ್ದಾರೆ.

ದೆಹಲಿಯ ಹುಡುಗ ಮತ್ತು ಕೇರಳದ ಹುಡುಗಿಯ ಪ್ರೇಮಕಥೆಯನ್ನೊಂದಿರುವ ಈ ಚಿತ್ರದ ಟ್ರೇಲರ್ ಇಂದು [ ಆಗಸ್ಟ್ 12 ] ಬಿಡುಗಡೆಯಾಗಿದೆ. ಬಿಡುಗಡೆಯಾದ ಟ್ರೇಲರ್ ಭರವಸೆ ಹುಟ್ಟಿಸುವಂತೆ ಇದೆಯಾದರೂ ಸದ್ಯ ಈ ಟ್ರೇಲರ್‌ನಲ್ಲಿ ''ಯಶ್'' ಹೆಸರನ್ನು ಪ್ರಸ್ತಾಪಿಸಲಾಗಿದೆ. ಯಶ್ ಅಭಿಮಾನಿಗಳು ಹುಚ್ಚೆದ್ದು ಕುಣಿಯಲು ಇನ್ನೇನು ಬೇಕು ?

ಹೌದು, ಎರಡು ನಿಮಿಷ 40 ಸೆಕೆಂಡ್ ಇರುವ ಈ ಟ್ರೇಲರ್‌ನಲ್ಲಿ ''ಪರಮ'' ಮತ್ತು ''ಸುಂದರಿ''ಯ ಸರಸ.. ವಿರಸ.. ನಗು.. ಅಳು ಎಲ್ಲವನ್ನೂ ನಿರ್ದೇಶಕ ''ತುಷಾರ್ ಜಲೋಟಾ'' ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಯುವ ಸಮೂಹವನ್ನು ತಮ್ಮ ಚಿತ್ರದತ್ತ ಆಕರ್ಷಿಸುವ ಪ್ರಯತ್ನ ಮಾಡಿದ್ದಾರೆ.

ಮೇಲ್ನೋಟಕ್ಕೆ ''ಶಾರುಖ್ ಖಾನ್'' ಮತ್ತು ''ದೀಪಿಕಾ ಪಡುಕೋಣೆ'' ಅಭಿನಯದ ''ಚೆನ್ನೈ ಎಕ್ಸ್‌ಪ್ರೆಸ್'' ಚಿತ್ರದ ಎರಡನೇ ಭಾಗದಂತೆ ಈ ಚಿತ್ರ ಕಂಡರೂ ಕೂಡ ಈ ಟ್ರೇಲರ್ ಸದ್ಯ ಎಲ್ಲರ ಕಣ್ಮನ ಸೆಳೆಯುತ್ತಿದೆ. ಟ್ರೇಲರ್‌ಗೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.

From KGF to Param Sundari How a Janhvi Kapoor Dialogue Is Making Yash Fans Happy

ಇದೇ ಸಮಯದಲ್ಲಿ ''ಜಾಹ್ನವಿ ಕಪೂರ್'' ಹೇಳಿರುವ ಡೈಲಾಗ್ ಯಶ್ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಹೌದು, ಅಸಲಿಗೆ ಟ್ರೇಲರ್‌ನ ಕೊನೆಯಲ್ಲಿ ದಕ್ಷಿಣದ ದಿಗ್ಗಜರ ಹೆಸರನ್ನು ''ಜಾಹ್ನವಿ'' ತೆಗೆದುಕೊಂಡಿದ್ದಾರೆ. ಕೇರಳ ಮಲಯಾಳಂ ಅಂದರೆ ''ಮೋಹನ್ ಲಾಲ್'' ಎನ್ನುವ ''ಜಾಹ್ನವಿ'' ತಮಿಳು ಮತ್ತು ತಮಿಳು ನಾಡು ಅಂದರೆ ''ರಜಿನಿಕಾಂತ್'' ಎಂದು ಹೇಳಿದ್ದಾರೆ. ಆ ನಂತರ ''ಪುಷ್ಪ''ದ 'ತಗ್ಗದೆ ಲೇ' ಸ್ಟೈಲ್‌ನಲ್ಲಿ ಆಂಧ್ರ ತೆಲುಗು ಅಂದರೆ ''ಅಲ್ಲು ಅರ್ಜುನ್'' ಎನ್ನುವ ''ಜಾಹ್ನವಿ'' ಆ ನಂತರ ಕರ್ನಾಟಕ ಕನ್ನಡ ಅಂದರೆ ''ಯಶ್'' ಎಂದು ಹೇಳಿದ್ದಾರೆ. ''ಕೆಜಿಎಫ್‌''ನ ಸಿಗರೇಟ್ ಸೇದುವ ಸ್ಟೈಲ್‌ನ್ನು ಮಾಡಿ ತೋರಿಸಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೊನೆಯ ಚಿಕ್ಕ ಡೈಲಾಗ್‌ನ್ನು ಬಿಟ್ಟು ಬಿಡದಂತೆ ನೋಡ್ತಿರುವ ''ಯಶ್'' ಅಭಿಮಾನಿಗಳು, ಆ ಚಿಕ್ಕ ತುಣುಕನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಅಭಿಮಾನದ ಪ್ರದರ್ಶನ ಮಾಡುತ್ತಿದ್ದಾರೆ. ''ಯಶ್'' ಅಂದರೆ ''ಕನ್ನಡ ಚಿತ್ರರಂಗ''ದ ಗುರುತು, ಪರಿಚಯ, ಮುಖ ಎಂದು ಸಂಭ್ರಮ ಪಡುತ್ತಿದ್ದಾರೆ.

More from Filmibeat

English summary
Sidharth Malhotra-Janhvi Kapoor's "Param Sundari" trailer is out, and Yash fans are thrilled. See why a powerful dialogue is winning hearts and creating a massive buzz online.
Read more about: yash jahnvi kapoor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X