IIFA Awards 2025: ವಿಕ್ರಾಂತ್ ಮೆಸ್ಸಿ ಅತ್ಯುತ್ತಮ ನಟ ಕೃತಿ ಸನೊನ್ ಅತ್ಯುತ್ತಮ ನಟಿ, ವಿಜೇತರ ಲಿಸ್ಟ್ ಇಲ್ಲಿದೆ..!

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರ ನೋಡಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರ ನೋಡಲು ನೆಟ್‌ಫ್ಲಿಕ್ಸ್ , ಅಮೆಜಾನ್, ಜೀ 5 ಹಾಟ್ ಸ್ಟಾರ್ ಹೀಗೆ ಹತ್ತು ಹಲವು ಓಟಿಟಿ ವೇದಿಕೆಗಳಿವೆ. ಈ ವೇದಿಕೆಗಳಲ್ಲಿ ಹಲವು ಚಿತ್ರಗಳು, ವೆಬ್ ಸರಣಿಗಳು ಪ್ರದರ್ಶನವಾಗುತ್ತವೆ.

ಹೀಗೆ ಪ್ರದರ್ಶನವಾಗುವ ಚಿತ್ರಗಳಲ್ಲಿ ಮತ್ತು ವೆಬ್ ಸರಣಿಗಳಲ್ಲಿ ಅತ್ಯುತ್ತಮವಾದದ್ದನ್ನು ಆಯ್ಕೆ ಮಾಡಿ ಐಫಾ { ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ } ಪ್ರತಿ ವರ್ಷ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಈ ವರ್ಷ ಕೂಡ ಈ ಪ್ರಶಸ್ತಿ ಪ್ರದಾನ ಸಮಾರಂಭ ರಾಜಸ್ತಾನದ ಜೈಪುರದಲ್ಲಿ ನಡೆದಿದ್ದು ನಿನ್ನೆ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾದ ಅತ್ಯುತ್ತಮ ಚಲನಚಿತ್ರ ಮತ್ತು ವೆಬ್ ಸರಣಿಗಳಿಗೆ ಪ್ರಶಸ್ತಿಯನ್ನು ನೀಡಲಾಗಿದೆ.

from-kriti-sanon-to-vikrant-massey-heres-the-full-winners-list-of-the-iifa-digital-awards-2025

ಹಾಗಿದ್ದರೆ ಯಾರಿಗೆಲ್ಲ ಈ ಬಾರಿಯ ಐಫಾ ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ನಾಯಕ ನಾಯಕಿ ಯಾರು ? ಬೆಸ್ಟ್ ಡೈರೆಕ್ಟರ್ ಪಟ್ಟ ಸಿಕ್ಕಿದ್ದು ಯಾರಿಗೆ ? ಯಾವ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿ ಸಿಕ್ಕಿದೆ ? ಯಾವುದು ದಿ ಬೆಸ್ಟ್ ವೆಬ್ ಸೀರಿಸ್ ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಮುಂದೆ ಓದಿ.

ಐಫಾ ಡಿಜಿಟಲ್ ಅವಾರ್ಡ್ಸ್ -2025 - ಚಲನಚಿತ್ರ ವಿಭಾಗ

ಅತ್ಯುತ್ತಮ ಚಿತ್ರ - ಅಮರ್ ಸಿಂಗ್ ಚಮ್ಕಿಲಾ

ಅತ್ಯುತ್ತಮ ನಿರ್ದೇಶಕ - ಇಮ್ತಿಯಾಜ್ ಅಲಿ { ಅಮರ್ ಸಿಂಗ್ ಚಮ್ಕಿಲಾ }

ಅತ್ಯುತ್ತಮ ನಟ - ವಿಕ್ರಾಂತ್ ಮೆಸ್ಸಿ { ಸೆಕ್ಟರ್ 36 }

ಅತ್ಯುತ್ತಮ ನಟಿ - ಕೃತಿ ಸನೋನ್ { ದೋ ಪತ್ತಿ }

ಅತ್ಯುತ್ತಮ ಪೋಷಕ ನಟಿ - ಅನುಪ್ರಿಯಾ ಗೋಯೆಂಕಾ { ಬರ್ಲಿನ್ }

ಅತ್ಯುತ್ತಮ ಪೋಷಕ ನಟ- ದೀಪಕ್ ಡೊಬ್ರಿಯಾಲ್ { ಸೆಕ್ಟರ್ 36 }

ಅತ್ಯುತ್ತಮ ಮೂಲ ಕಥೆ - ಕನ್ನಿಕಾ ದಿಲ್ಲೋನ್ { ದೋ ಪತ್ತಿ }

ಐಫಾ ಡಿಜಿಟಲ್ ಅವಾರ್ಡ್ಸ್ -2025 - ವೆಬ್ ಸರಣಿ ವಿಭಾಗ

ಅತ್ಯುತ್ತಮ ವೆಬ್ ಸರಣಿ - ಪಂಚಾಯತ್ ಸೀಸನ್ 3

ಅತ್ಯುತ್ತಮ ನಿರ್ದೇಶಕ - ದೀಪಕ್ ಕುಮಾರ್ ಮಿಶ್ರಾ { ಪಂಚಾಯತ್ ಸೀಸನ್ 3 }

ಅತ್ಯುತ್ತಮ ನಟ - ಜೀತೆಂದ್ರ ಕುಮಾರ್ { ಪಂಚಾಯತ್ ಸೀಸನ್ 3 }

ಅತ್ಯುತ್ತಮ ನಟಿ - ಶ್ರೇಯಾ ಚೌಧರಿ { ಬ್ಯಾಂಡಿಶ್ ಬ್ಯಾಂಡಿಟ್ಸ್ ಸೀಸನ್ 2 }

ಅತ್ಯುತ್ತಮ ಪೋಷಕ ನಟ - ಫೈಸಲ್ ಮಲ್ಲಿಕ್ { ಪಂಚಾಯತ್ ಸೀಸನ್ 3 }

ಅತ್ಯುತ್ತಮ ಪೋಷಕ ನಟಿ - ಸಂಜೀದಾ ಶೇಖ್ { ಹೀರಾಮಂಡಿ }

ಅತ್ಯುತ್ತಮ ಮೂಲ ಕಥೆ - ಪುನೀತ್ ಬಾತ್ರಾ ಮತ್ತು ಅರುಣಭ್ ಕುಮಾರ್ { ಕೋಟಾ ಫ್ಯಾಕ್ಟರಿ ಸೀಸನ್ 3 }

ಅತ್ಯುತ್ತಮ ಸ್ಕ್ರಿಪ್ಟ್ ರಹಿತ ಸರಣಿ - ಫ್ಯಾಬುಲಸ್ ಲೈವ್ಸ್ vs. ಬಾಲಿವುಡ್ ವೈವ್ಸ್

ಅತ್ಯುತ್ತಮ ಡಾಕ್ಯೂಮೆಂಟರಿ - ಫೇಮಸ್ { ಯೋ ಯೋ ಹನಿ ಸಿಂಗ್ }

ಅತ್ಯುತ್ತಮ ಶೀರ್ಷಿಕೆ ಗೀತೆ - ಅನುರಾಗ್ ಸೈಕಿಯಾ { ಮಿಸ್‌ಮ್ಯಾಚ್ಡ್ ಸೀಸನ್ 3 }

ಹೀಗೆ ನಾನಾ ವಿಭಾಗಗಳಲ್ಲಿ ನಿನ್ನೆ ಡಿಜಿಟಲ್ ಪ್ರಶಸ್ತಿಗಳನ್ನು ನೀಡಲಾಗಿದೆ. ಇನ್ನು ಈ ಪ್ರಶಸ್ತಿ ಸಮಾರಂಭದಲ್ಲಿ ನೋರಾ ಫತೇಹಿ, ಅಲಿ ಫಜಲ್, ಶ್ರೇಯಾ ಘೋಷಾಲ್, ಸಚಿನ್-ಜಿಗರ್ ಸೇರಿ ಅನೇಕರು ಹಾಡು ಹಾಡಿದ್ದಾರೆ. ಕುಣಿದಿದ್ದಾರೆ. ಅಪರಶಕ್ತಿ ಖುರಾನಾ ಮತ್ತು ಅಭಿಷೇಕ್ ಬ್ಯಾನರ್ಜಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದ್ದು ಈ ವರ್ಣರಂಜಿತ ಸಮಾರಂಭ ಜೀ 5ನಲ್ಲಿ ಮುಂದಿನ ವಾರ ಪ್ರಸಾರವಾಗಲಿದೆ.

More from Filmibeat

Read more about: iifa filmibeat news awards
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X