ನನ್ನ ಕುತ್ತಿಗೆ, ಬೆನ್ನು ; ಎಲ್ಲರೆದುರೇ ಆ ವ್ಯಕ್ತಿ ನನ್ನ ಮೇಲೆ ಕೈಯಾಡಿಸಿದ - ಹಿಂದೆ ತಿರುಗಿದರೆ ; ನಟಿ ಕಣ್ಣೀರು
ಇಂದು ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪುರುಷನಿಗೆ ಸರಿ ಸಮಾನವಾಗಿ ಮಹಿಳೆ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾಳೆ. ಸಾಮಾಜಿಕವಾಗಿ.. ಆರ್ಥಿಕವಾಗಿ... ರಾಜಕೀಯವಾಗಿ.. ಆರ್ಥಿಕವಾಗಿ ಮಹಿಳೆ ಸಬಲಳಾಗುತ್ತಿದ್ದಾಳೆ ಎನ್ನುವುದಕ್ಕೆ ಹಲವಾರು ಉದಾಹರಣೆಗಳಿವೆ. ಆ ಕ್ಷೇತ್ರ.. ಈ ಕ್ಷೇತ್ರ ಎಂದಲ್ಲ. ಹಲವು ಕ್ಷೇತ್ರಗಳಲ್ಲಿ ಪುರುಷನನ್ನೇ ಮಹಿಳೆ ಮೀರಿ ನಿಂತಿದ್ದಾಳೆ. ಆದರೆ, ಕಾಲ ಎಷ್ಟೇ ಬದಲಾದರು ಕೂಡ ಮಹಿಳೆಯರ ಮೇಲಿನ ಶೋಷಣೆ...
ದೌರ್ಜನ್ಯ ಮಾತ್ರ ಇವತ್ತು ಕೂಡ ಕಡಿಮೆಯಾಗಿಲ್ಲ. ಕೆಲಸ ಮಾಡುವ ಕಛೇರಿಗಳಿಂದ ಹಿಡಿದು ಸಾರ್ವಜನಿಕ ಸ್ಥಳದವರೆಗೆ .. ಪರಿಚಿತರಿಂದಲೇ ದೌರ್ಜನ್ಯ ಅಪರಿಚಿತರಿಂದ ಲೈಂ*ಗಿಕ ಕಿರುಕುಳ, ಶೋಷಣೆ ನಡೆಯುತ್ತಲೇ ಇವೆ. ಕೆಲವು ಮಹಿಳೆಯರು ಆ ಕ್ಷಣದಲ್ಲಿಯೇ ಇಂತಹ ನೀಚ ಕೆಲಸಗಳನ್ನು ಖಂಡಿಸಿದರೆ ಇನ್ನೂ ಕೆಲವರು ಮರ್ಯಾದೆಗೆ ಹೆದರಿ ಸುಮ್ಮನಾಗುತ್ತಾರೆ. ಇನ್ನು ಕೆಲವರು ಸಮಯ ಸಂದರ್ಭ ಬಂದಾಗ ತಮ್ಮ ಕಹಿ ಅನುಭವ ಹಂಚಿಕೊಳ್ಳುತ್ತಾರೆ. ಉದಾಹರಣೆಗೆ ಗಿರಿಜಾ ಓಕ್ ಗೋಡ್‌ಬೋಲೆ.

ಹೌದು, ಗಿರಿಜಾ ಓಕ್ ಗೋಡ್‌ಬೋಲೆ... ಮರಾಠಿಯ ಚೆಲುವೆ. ಕಳೆದ ಹದಿನೈದು ಇಪ್ಪತ್ತು ದಿನಗಳಿಂದ ಸೋಶಿಯಲ್ ಮೀಡಿಯಾವನ್ನು ಆವರಿಸಿಕೊಂಡಿರುವ ನೀಲಿ ಸೀರೆಯ ನೀರೆ.
ಕಳೆದ ಎರಡು ದಶಕಗಳಲ್ಲಿ ಹಲವು ಚಿತ್ರ ಮತ್ತು ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದರೂ ಕೂಡ ಸಿಗದ ಜನಪ್ರಿಯತೆ, ಇವರಿಗೆ ಕೇವಲ ಒಂದೇ ಒಂದು ಸಂದರ್ಶನದ ಮೂಲಕ ಸಿಕ್ಕಿದೆ. ಅಮೇರಿಕನ್ ನಟಿ ಸಿಡ್ನಿ ಸ್ವೀನಿ ಹಾಗೂ ಇಟಾಲಿಯನ್ ಮಾಡೆಲ್ ಮೋನಿಕಾ ಬೆಲ್ಲುಸಿ ಜೊತೆ ಗಿರಿಜಾ ಓಕ್ ಅವರನ್ನು ಅನೇಕರು ಹೋಲಿಕೆ ಮಾಡುತ್ತಿದ್ದಾರೆ. ಗಿರಿಜಾ ಸೌಂದರ್ಯದ ಮುಂದೆ ಇವರಿಬ್ಬರು ಏನೇನು ಅಲ್ಲ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಇಂಥಾ ಗಿರಿಜಾ ಗೋಡ್‌ಬೋಲೆ ''ದಿ ಲಲ್ಲನ್ ಟಾಪ್''ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಬಾಲ್ಯದ ಕಹಿ ಅನುಭವ ಹಂಚಿಕೊಂಡಿದ್ದಾರೆ. ರೇಲ್ವೆಯಲ್ಲಿ ಆಗುಂತಕನೊಬ್ಬನಿಂದ ತಾವು ಆತಂಕಕ್ಕೆ ಒಳಗಾಗಿದ್ದನ್ನು ಹೇಳಿದ್ದಾರೆ.
ಈ ಕುರಿತು ಸಂದರ್ಶನದಲ್ಲಿ ಮಾತನಾಡಿರುವ ಗಿರಿಕಾ ಓಕ್ ಗೋಡ್ಬೋಲೆ ರೈಲುಗಳಲ್ಲಿ ಮಹಿಳೆಯರನ್ನು ಮುಟ್ಟುವುದು, ಬೇಕು ಬೇಕಂತಲೇ ಡಿಕ್ಕಿ ಹೊಡೆಯುವುದು ಎಲ್ಲವೂ ಸಾಮಾನ್ಯವಾಗಿದೆ ಎಂದು ಹೇಳಿದ್ದಾರೆ.

ಮುಂದುವರೆದು ನಾನೊಮ್ಮೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದೆ, ಆ ಸಮಯದಲ್ಲಿ ಅದೆಲ್ಲಿಂದ ಬಂದ ಎನ್ನುವುದೇ ನನಗೆ ಗೊತ್ತಿಲ್ಲ, ಬಂದವನೇ ಸೀದಾ ನನ್ನ ಹಿಂದೆ ನಿಂತುಕೊಂಡ ಎಂದು ಹೇಳಿರುವ ಗಿರಿಜಾ ಆ ನಂತರ ತನ್ನ ಬೆರಳಿನಿಂದ ನನ್ನ ಕುತ್ತಿಗೆಯನ್ನು ಮುಟ್ಟಿದ, ನನ್ನ ಬೆನ್ನ ಮೇಲೆ ಕೈಯಾಡಿಸಿದ, ಇಷ್ಟೇ ಅಲ್ಲ ನನ್ನ ಸೊಂಟದ ಭಾಗ ಮತ್ತು ನನ್ನ ಪೃಷ್ಠದ ಮೇಲೆ ಕೂಡ ತನ್ನ ಬೆರಳಾಡಿಸಿದ ಎಂದು ಹೇಳಿದ್ದಾರೆ. ನನಗೇನಾಯ್ತು.. ಏನಾಗ್ತಿದೆ.. ಎಂದು ಅರಿತು ಹಿಂದೆ ತಿರುಗಿ ನೋಡುವಷ್ಟರಲ್ಲಿಯೇ ಆತ ಓಡಿ ಹೋಗಿದ್ದ, ಕಣ್ಮರೆಯಾಗಿದ್ದ ಎಂದು ಹೇಳಿರುವ ಗಿರಿಜಾ ಆ ವ್ಯಕ್ತಿಯನ್ನು ನಾನು ನೋಡಲು ಇಲ್ಲ, ಯಾರೆಂದೂ ಕಂಡು ಹಿಡಿಯಲು ಕೂಡ ಆಗಲಿಲ್ಲ ಎಂದು ತಮ್ಮ ಈ ಕಹಿ ಘಟನೆ ನೆನೆದು ಭಾವುಕರಾಗಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ತಮ್ಮ ಬಾಲ್ಯದ ಮತ್ತೊಂದು ಘಟನೆಯನ್ನು ಹಂಚಿಕೊಂಡಿರುವ ಗಿರಿಜಾ,ನನ್ನ ತಾಯಿ ತುಂಬಾ ಗಟ್ಟಿಗಿತ್ತಿ, ಇಂತಹದ್ದನ್ನೆಲ್ಲಾ ಅವರು ಸಹಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ. ನನ್ನ ಶಾಲೆಯಲ್ಲಿ ನನಗೆ ಹುಡುಗನೊಬ್ಬ ನಿರಂತರವಾಗಿ ತೊಂದರೆ ಕೊಡುತ್ತಿದ್ದ, ನನ್ನ ತಾಯಿ ಆತನಿಗೆ ಕಪಾಳಮೋಕ್ಷ ಮಾಡಿದ್ದರು ಎಂದು ಹೇಳಿರುವ ಗಿರಿಜಾ ಈ ಘಟನೆಯಿಂದ ಧೈರ್ಯಶಾಲಿಯಾಗಿ ಬದುಕಬೇಕು, ಸ್ವತಂತ್ರವಾಗಿ ನೆಲೆಯೂರಬೇಕು ಎನ್ನುವುದು ನನಗೆ ಮನದಟ್ಟಾಯ್ತು ಎಂದು ಹೇಳಿದ್ದಾರೆ.
ಯಾರಾದರೂ ಉದ್ದೇಶಪೂರ್ವಕವಾಗಿ ತಳ್ಳಿದರೆ, ಅಸಭ್ಯವಾಗಿ ಸ್ಪರ್ಶಿಸಿದರೆ - ನಾವೆಲ್ಲ ಜನಸಂದಣಿ ಇರುವ ಸ್ಥಳ ಎಂದುಕೊಂಡು ಸುಮ್ಮನಾಗುತ್ತೇವೆ, ಇದೆಲ್ಲ ಇದ್ದಿದ್ದೇ ಎಂದುಕೊಳ್ಳುತ್ತೇವೆ, ಆದರೆ ನನ್ನ ತಾಯಿ ಹಾಗಿರಲಿಲ್ಲ. ಅಲ್ಲಿಯೇ ತಿರುಗಿ ಬಿದ್ದು ಮುಟ್ಟಿದ ತಪ್ಪಿಗೆ ಆ ವ್ಯಕ್ತಿ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಡುತ್ತಿದ್ದರು, ಕತ್ತು ಪಟ್ಟಿ ಹಿಡಿದು ಅಲ್ಲಿಯೇ ಜಗಳಕ್ಕೆ ಇಳಿಯುತ್ತಿದ್ದರು ಎಂದು ಕೂಡ ಗಿರಿಜಾ ಓಕ್ ಗೋಡ್‌ಬೋಲೆ ಈ ಸಂದರ್ಶನದಲ್ಲಿ ಹೇಳಿದ್ದಾರೆ.


Click it and Unblock the Notifications











