ಪ್ರತಿ ಹಂತದಲ್ಲೂ ಮೋಸ ಆಗಿದೆ ; ಮೂರೇ ತಿಂಗಳಿಗೆ ಮುರಿದು ಬಿತ್ತು ಪೃಥ್ವಿ ಶಾ ನಿಶ್ಚಿತಾರ್ಥ ? ಯಾರು ಈ ಆಕೃತಿ ಅಗರ್ವಾಲ್ ?

ಪ್ರೀತಿ ಎನ್ನುವ ಈ ಎರಡಕ್ಷರ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿದೆ. ಅನೇಕರಿಗೆ ಜೀವನ ನೀಡಿದೆ. ಇನ್ನೂ ಹಲವರ ಜೀವನ ಕಸಿದುಕೊಂಡಿದೆ. ಖುಷಿ, ನೋವು, ಸ್ವಾರ್ಥ, ಜಗಳ, ನಗು, ಮಾತು, ಮೌನ, ಆಸೆ, ಅಭಿಲಾಸೆ, ವಿರಹ, ಹೀಗೆ ಎಲ್ಲವೂ ಕೂಡ ಪ್ರೀತಿ ಹುಟ್ಟಿದ ದಿನವೇ ಚಿಗುರೊಡೆದು ಮರವಾಗಿ ಬೆಳೆಯುತ್ತದೆ. ಆದರೆ, ಈಗೀಗ ಈ ಪ್ರೀತಿಯ ಅರ್ಥ ಬದಲಾಗಿದೆ. ಅರ್ಥೈಸಿಕೊಳ್ಳುವ ರೀತಿ ಕೂಡ ಬದಲಾಗಿದೆ.

ಒಬ್ಬರ ಜೊತೆ ಪ್ರೀತಿಯಲ್ಲಿದ್ದರೂ ಮತ್ತೊಬ್ಬರ ಸಾಂಗತ್ಯ ಬಯಸುವವರ ಸಂಖ್ಯೆ ಹೆಚ್ಚಾಗಿದೆ. ಒಂದಿಲ್ಲೊಂದು ರೀತಿಯಲ್ಲಿ ಸಂಗಾತಿಗೆ ಮೋಸ ಮಾಡುವವರ ಸಂತತಿ ಕೂಡ ಹೆಚ್ಚಾಗಿದೆ. ಈ ಸಾಲಿನಲ್ಲಿ ಪೃಥ್ವಿ ಶಾ ಕೂಡ ಇದ್ದಾರೆ ಎನ್ನುವುದೇ ಈ ಕ್ಷಣದ ಚರ್ಚಿತ ವಿಷಯ.

From Ring to Rumors Prithvi Shaw-Akriti Agarwal Engagement Heading for a Split

ಹೌದು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಹಲವಾರು ಜ್ಯೋತಿಷಿಗಳ ಭವಿಷ್ಯ ನಿಜವಾಗಿದ್ದರೆ ಪೃಥ್ವಿ ಶಾ ಇವತ್ತು ಭಾರತ ಕ್ರಿಕೆಟ್ ತಂಡದಲ್ಲಿ ಮಿಂಚಬೇಕಿತ್ತು. 22ಯಾರ್ಡ್ ನ ಪಿಚ್ ನಲ್ಲಿ ಧಗಧಗಿಸಬೇಕಿತ್ತು. ಆದರೆ ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದನಂತೆ ಎಂಬ ಹಿರಿಯರ ಮಾತನ್ನು ಪೃಥ್ವಿ ಶಾ ಸಾಬೀತು ಮಾಡಿದರು. ಸ್ವಯಂ ಕೃತ ಅಪರಾಧಗಳಿಂದ ತಂಡದಿಂದಲೇ ಹೊರ ಬಿದ್ದರು. ಇವತ್ತು ಕೂಡ ಕಂಬ್ಯಾಕ್ ಮಾಡಲು ಪೃಥ್ವಿ ಶಾ ಅವರಿಂದ ಸಾಧ್ಯವಾಗಿಲ್ಲ.

ಇಂಥಾ ಪೃಥ್ವಿ ಶಾ ಈ ವರ್ಷದ ಆರಂಭದಲ್ಲಿ ಆಕೃತಿ ಅಗರ್ವಾಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಈಗ ಆಕೃತಿ ಹೃದಯ ಛಿದ್ರವಾದಂತೆ ಇದೆ. ಇದಕ್ಕೆ ಸಾಕ್ಷಿಯೇ ಆಕೃತಿ ಹಂಚಿಕೊಂಡು ಡಿಲೀಟ್ ಮಾಡಿರುವ ಪೋಸ್ಟ್.

ಯಾರು ಈ ಆಕೃತಿ ಅಗರ್ವಾಲ್ ?

ಆಕೃತಿ ಅಗರ್ವಾಲ್ ಮೂಲತಃ ಲಕ್ನೋದ ಲಡ್ಕೀ. ಕನಸೆಂಬ ಕುದುರೆಯನ್ನೇರಿ ಮಾಯಾನಗರಿ ಮುಂಬೈಗೆ ಬಂದ ಆಕೃತಿಯ ಹಣೆಬರಹ ಬದಲಾಗಿದ್ದು ಕೊರೊನಾ ಸಮಯದಲ್ಲಿ. ಕೊರೊನಾದಿಂದ ಇಡೀ ದೇಶ ಹೈರಾಣಾದಾಗ, ತಲ್ಲಣದ ವಾತಾವರಣ ನಿರ್ಮಾಣವಾದಾಗ ಆಕೃತಿ ಮೆಲ್ಲನೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಲು ಶುರು ಮಾಡಿದ್ದರು. ಲಿಂಪ್ ಸಿಂಕ್ ಮಾಡಿ ಡ್ಯಾನ್ಸ್ ವಿಡಿಯೋ ಹಂಚಿಕೊಳ್ಳತೊಡಗಿದರು.

ಇಷ್ಟೇ ಅಲ್ಲ ಲೈಫ್ ಸ್ಟೈಲ್‌ ಮತ್ತು ಫ್ಯಾಶನ್‌ಗೆ ಸಂಬಂಧಿಸಿದಂತೆ ವಿಡಿಯೋಗಳನ್ನು ಕೂಡ ಆಕೃತಿ ಶೇರ್ ಮಾಡಲು ಶುರು ಮಾಡಿದರು. ನೋಡ.. ನೋಡುತ್ತಾ.. ಇವರ ವಿಡಿಯೋಗಳು ವೈರಲ್ ಆದವು. ಹಿಂಬಾಲಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಯ್ತು. ಸದ್ಯ ಆಕೃತಿ ಅಗರ್ವಾಲ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ 32 ಲಕ್ಷಕ್ಕೂ ಅಧಿಕ ಜನ ಫಾಲೋ ಮಾಡ್ತಿದ್ಧಾರೆ. ಇಂದು ಪ್ರಭಾವಿ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಹೊರ ಹೊಮ್ಮಿದ್ಧಾರೆ.

from-ring-to-rumors-prithvi-shaw-akriti-agarwal-engagement-heading-for-a-split

ಇನ್ನು ಆಕೃತಿ ಸೋಶಿಯಲ್ ಮೀಡಿಯಾ ಸ್ಟಾರ್ ಮಾತ್ರವಲ್ಲ. ಇವರ ಸಾಧನೆ ಕೇವಲ ಮೊಬೈಲ್ ಸ್ಕ್ರೀನ್‌ಗೆ ಸೀಮಿತವಾಗಿಲ್ಲ. 2025ರಲ್ಲಿ ಆಕೃತಿ ಬಣ್ಣದ ಪ್ರಪಂಚಕ್ಕೆ ಕೂಡ ಬಂದರು. ತೆಲುಗಿನ ಸೈಕಲಾಜಿಕಲ್ ಥ್ರಿಲ್ಲರ್ ''ತ್ರಿಮುಖ'' ಚಿತ್ರಕ್ಕೆ ಬಣ್ಣ ಹಚ್ಚಿದರು. ಬೆಳ್ಳಿತೆರೆಗೆ ಪಾದಾರ್ಪಣೆಯನ್ನು ಮಾಡಿದರು.

ಈ ವರ್ಷದ ಆರಂಭದಲ್ಲಿ ತೆರೆಗೆ ಬಂದ ಈ ಚಿತ್ರದಲ್ಲಿ ಸನ್ನಿ ಲಿಯೋನ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದು ವಿಶೇಷ. ಬೆಳ್ಳಿತೆರೆ ಮಾತ್ರವಲ್ಲದೇ ಕಿರುತೆರೆಯನ್ನು ಕೂಡ ಪ್ರವೇಶ ಮಾಡಿರುವ ಆಕೃತಿ ಅಗರ್ವಾಲ್, ''ಚೋಟಿ ಸರ್ದಾನಿ'' ಎಂಬ ಶೋದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.

ಇಬ್ಬರ ಪ್ರೇಮಕಥೆ ಶುರುವಾಗಿದ್ಹೇಗೆ ?

ಆಕೃತಿ ಮತ್ತು ಪೃಥ್ವಿ ಶಾ ನಡುವೆ ಪ್ರೇಮದ ಸೇತುವೆಯನ್ನು ಇವರ ಸ್ನೇಹಿತರು ಕಟ್ಟಿದರು. ಸ್ನೇಹಿತರ ಮೂಲಕ ಪರಿಚಯವಾದ ಇಬ್ಬರು ಆ ನಂತರ ಆತ್ಮೀಯರಾದರು. ಆ ನಂತರ ಪೃಥ್ವಿ ಶಾ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಿಗೆ ಆಕೃತಿ ಕಾಮೆಂಟ್ ಮಾಡಲು ಶುರು ಮಾಡಿದರು. ಪೃಥ್ವಿ ಕೂಡ ಪ್ರತಿಕ್ರಿಯಿಸುತ್ತಿದ್ದರು.

ಆಗಲೇ ಇವರ ಸಂಬಂಧದ ಕುರಿತು ಹಲವರಿಗೆ ಅನುಮಾನ ಇತ್ತು. ಇನ್ನೂ 2023ರ ''ವ್ಯಾಲೆಂಟೈನ್ಸ್ ಡೇ''ಯಂದು ಆಕೃತಿ ಜೊತೆಗಿನ ಫೋಟೊ ಹಂಚಿಕೊಂಡಿದ್ದ ಪೃಥ್ವಿ ಶಾ "ನನ್ನ ಹೆಂಡತಿ" ಎಂದು ಬರೆದುಕೊಂಡಿದ್ದರು. ಆ ನಂತರ ಕೂಡಲೇ ಡಿಲೀಟ್ ಕೂಡ ಮಾಡಿದ್ದರು.

from-ring-to-rumors-prithvi-shaw-akriti-agarwal-engagement-heading-for-a-split

ಆ ಕಾಲಕ್ಕೆ ಈ ವಿಚಾರ ತುಂಬಾ ಸುದ್ದಿಯಾಗಿತ್ತು. ಆ ನಂತರ ಇಬ್ಬರು ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೇ ವರ್ಷ ಸಪ್ತಪದಿಯನ್ನು ಕೂಡ ತುಳಿಯಲಿದ್ದಾರೆ ಎಂದು ಹಲವರು ಅಂದುಕೊಂಡಿದ್ದರು. ಆದರೆ ಈಗ ಆಕೃತಿಯ ಈ ಪೋಸ್ಟ್ ಹತ್ತಾರು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ. ಚರ್ಚೆಗೆ ನಾಂದಿ ಹಾಡಿದೆ.

ಅವನೊಬ್ಬ ಮೋಸಗಾರ ಎಂದ ಆಕೃತಿ

ನಿಜ. ಮದುವೆ ಮುರಿದು ಬಿದ್ದಿದೆ ಎಂದು ಇಬ್ಬರು ಕೂಡ ಇಲ್ಲಿಯವರೆಗೆ ಹೇಳಿಲ್ಲ. ಆದರೆ, ಪೃಥ್ವಿ ಶಾ ಮತ್ತು ಆಕೃತಿ ನಡುವೆ ಏನೋ ಸರಿ ಇಲ್ಲ ಅನ್ನೋ ಗಾಸಿಪ್‌ಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ದಿನಗಳಿಂದ ಹರಿದಾಡ್ತಾನೇ ಇತ್ತು. ಇದಕ್ಕೆ ಪೂರಕವಾಗಿ ಈಗ ಆಕೃತಿ ತಮ್ಮ ಮನದ ಭಾವನೆಗಳನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಪದೇ ಪದೇ ಮೋಸ ಆಗಿದೆ ಎಂದು ಹೇಳಿದ್ದಾರೆ.


ಆಕೃತಿ ಪೋಸ್ಟ್‌ನಲ್ಲಿ ಏನಿದೆ..?

ನನಗೆ ತುಂಬಾ ಸಲ ಮೋಸ ಆಯ್ತು, ಆದ್ರೂ ನಾನು ಸುಮ್ಮನಿದ್ದೆ. ಈಗ ಒಂದು ಹೆಜ್ಜೆ ಮುಂದೆ ಇಟ್ಟ ಮೇಲೂ ಇವೆಲ್ಲ ನಿಜನಾ ಅಂತ ನಂಬೋಕೆ ಆಗ್ತಿಲ್ಲ. ಹರಿದಾಡ್ತಿರೋ ಎಲ್ಲಾ ವದಂತಿಗಳೂ ನೂರಕ್ಕೆ ನೂರು ನಿಜ. ಸೋಶಿಯಲ್ ಮೀಡಿಯಾದಲ್ಲಿ ಏನೇನ್ ತೋರಿಸ್ತಾ ಇದ್ದಾರೋ ಅದೆಲ್ಲಾ ನಿಜ ಎಂದು ಆಕೃತಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.


ಪೃಥ್ವಿ ಶಾ ಹೆಸರಿಲ್ಲ

ಆದರೆ ಇಲ್ಲಿ ಆಕೃತಿ ಎಲ್ಲಿಯೂ ಪೃಥ್ವಿ ಶಾ ಹೆಸರನ್ನಾಗಲಿ ಅಥವಾ ತಮ್ಮ ನಿಶ್ಚಿತಾರ್ಥದ ವಿಷಯವನ್ನಾಗಲಿ ಡೈರೆಕ್ಟಾಗಿ ಹೇಳಿಲ್ಲ. ಅದಾಗ್ಯೂ ಕೂಡ ಇಬ್ಬರ ಸಂಬಂಧದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಹಾಗಂತೆ-ಹೀಗಂತೆ ಎಂಬ ಮಾತು ಕೇಳಿ ಬರುತ್ತಿರುವ ಹಿನ್ನೆಲೆ ಇಬ್ಬರ ಸಂಬಂಧ ಮುರಿದು ಬಿದ್ದಿದೆ ಎಂದೇ ಹಲವರು ಅಂದುಕೊಂಡಿದ್ದಾರೆ. ನಿಜಾಂಶವೇನು ..? ಉತ್ತರ ಆಕೃತಿ ಅಗರ್ವಾಲ್ ಅವರೇ ಹೇಳಬೇಕು.

English summary
"Every rumour is true." Prithvi Shaw’s fiancée Akriti Agarwal drops a bombshell post alleging she was cheated on multiple times just months after engagement.
Read more about: cricket breakup
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X