ನೆನಪುಗಳ ಬೆನ್ನೇರಿ ಹೊಸ ಸಾಹಸಕ್ಕೆ ಮುಂದಾದ ರಶ್ಮಿಕಾ ಮಂದಣ್ಣ, ಇನ್ಮೇಲೆ ಎಲ್ಲ ಘಮಘಮ

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜೀವನೋಪಾಯಕ್ಕೆ ಕಲಾವಿದರು ತಮ್ಮಲ್ಲಿನ ಕಲೆಯೊಂದನ್ನೇ ನಂಬಿಕೊಂಡಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ತಂತ್ರಜ್ಞರು ಮತ್ತು ಕಾರ್ಮಿಕರನ್ನು ಹೊರತು ಪಡಿಸಿದರೆ ಚಿತ್ರರಂಗವನ್ನಷ್ಟೇ ನೆಚ್ಚಿಕೊಂಡು ಕುಳಿತ ಸ್ಟಾರ್‌ಗಳು ಯಾರು ಇಲ್ಲ. ಎಲ್ಲರೂ ಒಂದಲ್ಲ ಒಂದು ಕಡೆ ತಮ್ಮ ದುಡ್ಡು ಹೂಡಿದ್ದಾರೆ. ಸಂಪಾದನೆಯ ಮಾರ್ಗ ಕಂಡುಕೊಂಡಿದ್ದಾರೆ.

ಕೆಲವರು ಬಟ್ಟೆ ಮಾರಿದರೆ.. ಇನ್ನು ಕೆಲವರು ಮೇಕಪ್ ಕಿಟ್ ಮಾರುತ್ತಿದ್ದಾರೆ. ಕೆಲವರು ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದರೆ ಮತ್ತೂ ಕೆಲವರು ಜನರಿಗೆಲ್ಲ ಎಣ್ಣೆ ಹೊಡೆಸಿ ದುಡ್ಡು ಮಾಡುತ್ತಿದ್ಧಾರೆ. ತಮ್ಮದೇ ವಿಸ್ಕಿ ಬ್ರ್ಯಾಂಡ್‌ಗಳನ್ನು ಶುರು ಮಾಡಿದ್ದಾರೆ. ಮತ್ತೂ ಕೆಲವರು ರಿಯಲ್ ಎಸ್ಟೇಟ್‌ ನಲ್ಲಿ ಹಣ ಹೂಡಿದ್ದಾರೆ. ಸದ್ಯ ಈ ಸಾಲಿಗೆ ಈಗ ರಶ್ಮಿಕಾ ಮಂದಣ್ಣ ಅಧಿಕೃತವಾಗಿ ಸೇರಿಕೊಂಡಿದ್ದಾರೆ.

From Screen to Scent Rashmika Mandanna Launches Dear Diary Perfume

ಹೌದು.. ಕಳೆದ ಕೆಲ ದಿನಗಳ ಹಿಂದೆ ರಶ್ಮಿಕಾ ತಮ್ಮ ತಾಯಿಯ ಆಶೀರ್ವಾದ ಬೇಡಿದ್ದರು. ಇಂದು ನಾನು ತುಂಬಾ ಮುಖ್ಯವಾದ ಕೆಲಸ ಮಾಡುತ್ತಿದ್ದೇನೆ,ಅಮ್ಮ ನೀವು ಹೇಳಿದ ಬ್ಯುಸಿನೆಸ್‌ ನಾನು ಆರಂಭಿಸುತ್ತಿದ್ದೇನೆ ಎಂದು ಹೇಳಿದ್ದರು. ರಶ್ಮಿಕಾ ಅವರ ಈ ನಡೆಯಿಂದ ಯಾವ ಬ್ಯುಸಿನೆಸ್ ಮಾಡಬಹುದೆಂಬ ಕುತೂಹಲ ಮನೆ ಮಾಡಿತ್ತು. ಆ ಕುತೂಹಲಕ್ಕೀಗ ಉತ್ತರ ಸಿಕ್ಕಿದ್ದು ರಶ್ಮಿಕಾ ''ಪರ್ಫ್ಯೂಮ್'' ವ್ಯಾಪಾರಕ್ಕೆ ಇಳಿದಿದ್ದಾರೆ. ಇಂದು ತಮ್ಮ ಈ ಹೊಸ ಸಾಹಸದ ಕುರಿತು ವಿಡಿಯೋ ಸಮೇತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ತಮ್ಮ ಬದುಕಿನಲ್ಲಿ 'ಪರ್ಫ್ಯೂಮ್' ಪಾತ್ರ ತುಂಬಾನೇ ದೊಡ್ಡದು ಎಂದು ಹೇಳಿರುವ ರಶ್ಮಿಕಾ 'ಪರ್ಫ್ಯೂಮ್' ಹಳೆಯ ನೆನಪುಗಳನ್ನು ಕೆದಕುತ್ತೆ ಎಂದು ಹೇಳಿದ್ದಾರೆ. ಆ ನೆನಪುಗಳೇ ಈ ಹೊಸ ಅಧ್ಯಾಯಕ್ಕೆ ಮುನ್ನುಡಿ ಎಂದು ಹೇಳಿದ್ದಾರೆ.

ತಮ್ಮ ಈ ಹೊಸ ಪ್ರಯತ್ನಕ್ಕೆ ರಶ್ಮಿಕಾ "ಡಿಯರ್ ಡೈರಿ" ಎಂದು ನಾಮಕರಣವನ್ನು ಮಾಡಿದ್ದು ಈ ಬ್ರ್ಯಾಂಡ್ ನಡಿ ಹಲವು ಎಡಿಷನ್ ಗಳನ್ನು ಬಿಟ್ಟಿದ್ದಾರೆ. ಈ ಎಡಿಷನ್ ಗೆ ಜನ ತಮ್ಮನ್ನು ಕರೆಯುವ ಹೆಸರನ್ನೇ ಇಟ್ಟಿದ್ದಾರೆ. ಆ ಹೆಸರುಗಳು ಇಂತಿವೆ. ‌'ನ್ಯಾಷನಲ್ ಕ್ರಶ್', 'ಇರೆಪ್ಲೇಸಬಲ್', 'ಕಾಂಟ್ರವರ್ಶಿಯಲ್'.

ಇನ್ನೂ ರಶ್ಮಿಕಾ‌ ನನ್ನ ನೆಚ್ಚಿನ ನಾಯಕಿ. ಹೀಗಾಗಿ ಅವರ ಈ ಹೊಸ ಪ್ರಯತ್ನ ಯಶಸ್ವಿಯಾಗಲು ನಾವು ಕೈ ಜೋಡಿಸೋಣ ಎಂದು ಯಾರಾದರೂ ಅಂದುಕೊಂಡಿದ್ದರೆ ಒಮ್ಮೆ ಪರ್ಸ್ ಅಥವಾ ಬ್ಯಾಂಕ್ ನಲ್ಲಿರುವ ಬ್ಯಾಲೆನ್ಸ್ ಚೆಕ್ ಮಾಡುವುದು ಉತ್ತಮ.

from-screen-to-scent-rashmika-mandanna-launches-dear-diary-perfume

ಯಾಕೆಂದರೆ 100ML ಪರ್ಪ್ಯೂಮ್​ಗೆ ರಶ್ಮಿಕಾ ₹2,599.00 ದರ ನಿಗದಿ ಮಾಡಿದ್ದಾರೆ. 10 ml ಪರ್ಪ್ಯೂಮ್ ಬೇಕು ಅಂದರೂ ಕೂಡ ನೀವು 599 ರೂಪಾಯಿ ಹಣ ನೀಡಬೇಕು. ಈ ದರ ಕೇಳಿಯೂ ಖರೀದಿ‌ ಮಾಡುವ ಮನಸ್ಸು ನೀವು ಮಾಡಿದರೆ https://deardiary.in ಗೆ ನೀವು ಲಗ್ಗೆ ಇಡಬಹುದು. ನಿಮ್ಮ ಇಷ್ಟದ ಎಡಿಷನ್ ಖರೀದಿಸಬಹುದು.

ಇನ್ನುಳಿದಂತೆ ಸದ್ಯ ರಶ್ಮಿಕಾ ಕೈಯಲ್ಲಿ ಹಲವಾರು ಅವಕಾಶಗಳಿವೆ. ವಿಶೇಷವಾಗಿ ಬಾಲಿವುಡ್‌ನಲ್ಲಿ ರಶ್ಮಿಕಾಗೆ ಚಿನ್ನದ ಬೇಡಿಕೆ ಇದೆ. ಹಲವಾರು ಜನ ರಶ್ಮಿಕಾ ಕಾಲ್ ಶೀಟ್‌ಗೆ ಕಾಯುತ್ತಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಆಯುಷ್ಮಾನ್ ಖುರಾನಾ ಜೊತೆ ರಶ್ಮಿಕಾ ಅಭಿನಯದ 'ಥಾಮಾ' ಬಿಡುಗಡೆಗೆ ಸಿದ್ಧವಾಗಿದೆ. ಮತ್ತೊಂದು ಕಡೆ ಹಿಂದೊಮ್ಮೆ ಮಾಡಿದ್ದ ತೆಲುಗು ಚಿತ್ರ 'ದಿ ಗರ್ಲ್‌ಫ್ರೆಂಡ್‌' ಬಿಡುಗಡೆಯ ಬಾಗಿಲಿನಲ್ಲಿದೆ. 'ಕಾಕ್‌ಟೈಲ್‌ 2'.. 'ಅನಿಮಲ್ 2' ಸೇರಿ ಹಲವು ಚಿತ್ರಗಳು ಸದ್ಯ ರಶ್ಮಿಕಾ ಅವರ ಬತ್ತಳಿಕೆಯಲ್ಲಿವೆ. ಇದರ ನಡುವೆ ಪುಷ್ಪಾ 3 ಚಿತ್ರದ ಕುರಿತು ಕೂಡ ಸುದ್ದಿ ಓಡಾಡುತ್ತಿದೆ.

ಏನೇ ಇರಲಿ ಸದ್ಯ ರಶ್ಮಿಕಾ ತಮ್ಮ ಹೊಸ ಬ್ರ್ಯಾಂಡ್‌ನ ಲಾಂಚ್ ಮಾಡಿದ್ದಾರೆ. ಈ ಮೂಲಕ ಬ್ಯುಸಿನೆಸ್‌ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಇಲ್ಲಿ ರಶ್ಮಿಕಾ ಅವರಿಗೆ ಎಷ್ಟರ ಮಟ್ಟಿಗೆ ಯಶಸ್ಸು ಸಿಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
From screen to scent! Rashmika Mandanna launches 'Dear Diary', her new fragrance brand. Explore signature perfumes crafted for unforgettable moments
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X