ನನ್ನ ತಪ್ಪಿನಿಂದಲೇ ಅಮೀರ್ ಖಾನ್ ನನ್ನಿಂದ ದೂರಾದ: ರಾಮ್ ಗೋಪಾಲ್ ವರ್ಮಾ
ರಾಮ್ ಗೋಪಾಲ್ ವರ್ಮಾ ಈಗ ನಿರ್ದೇಶನದ ಮೇಲೆ ಹಿಡಿತ ಕಳೆದುಕೊಂಡಿರಬಹುದು ಆದರೆ ಎರಡು ದಶಕದ ಹಿಂದೆ ಭಾರತೀಯ ಸಿನಿಮಾ ದಿಕ್ಕನ್ನೇ ಬದಲಾಯಿಸಿದವರು ಅವರು.
ಶಿವ, ಸತ್ಯ, ರಂಗೀಲಾ, ಕಂಪೆನಿ, ರೋಡ್, ಕ್ಷಣ-ಕ್ಷಣಂ, ಗಾಯಂ, ಭೂತ್ ಇಂಥಹಾ ಹಲವು ಕಲ್ಟ್ ಸಿನಿಮಾಗಳ ಮೂಲಕ ಭಾರತೀಯ ಸಿನಿಮಾಕ್ಕೆ ಭಿನ್ನ ದಿಕ್ಕು ನೀಡಿದ್ದರು ರಾಮ್ ಗೋಪಾಲ್ ವರ್ಮಾ.
ಅಮೀರ್ ಖಾನ್ ಜೀವನದ ಭಾರಿ ಯಶಸ್ವಿ ಸಿನಿಮಾಗಳಲ್ಲಿ ಒಂದಾದ 'ರಂಗೀಲಾ' ನಿರ್ದೇಶಿಸಿದ್ದ ರಾಮ್ ಗೋಪಾಲ್ ವರ್ಮಾ ಆ ನಂತರ ಅಮೀರ್ ಜೊತೆ ಒಂದೂ ಸಿನಿಮಾ ಮಾಡಲಿಲ್ಲ. ಇಬ್ಬರೂ ಪರಸ್ಪರ ದೂರವಾಗಿಯೇ ಉಳಿದುಬಿಟ್ಟರು. ಹೀಗೆ ಆಗಲು ನಾನು ಮಾಡಿದ ತಪ್ಪೇ ಕಾರಣ ಎಂದು ರಾಮ್ ಗೋಪಾಲ್ ವರ್ಮಾ ಇತ್ತೀಚೆಗೆ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಮ್ ಗೋಪಾಲ್ ವರ್ಮಾ, 'ನಾನು ಮಾಡಿದ ತಪ್ಪಿನಿಂದ ಅಮೀರ್ ಖಾನ್‌ಗೆ ಬಹಳ ಬೇಸರವಾಯ್ತು. ನಾನೂ ಅವರು ದೂರಾಗುವಂತೆ ಆಯಿತು' ಎಂದಿದ್ದಾರೆ.
''ಅಮೀರ್ ಖಾನ್‌ಗಿಂತಲೂ ಸಿನಿಮಾದ ಸಣ್ಣ ಸೀನ್‌ನಲ್ಲಿ ಬರುವ ಹೋಟೆಲ್‌ನ ವೇಯ್ಟರ್ ಪಾತ್ರಧಾರಿ ಚೆನ್ನಾಗಿ ನಟಿಸಿದ್ದಾನೆ'' ಎಂದು ನಾನು ಹೇಳಿದ್ದೇನೆಂದು ಪತ್ರಿಕೆಗಳು ವರದಿ ಮಾಡಿದವು. ನಾನು ಹೇಳಿದ ಮಾತನ್ನು ತಪ್ಪಾಗಿ ಪತ್ರಕರ್ತನೊಬ್ಬ ಕೋಟ್ ಮಾಡಿದ' ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ.

ಇಡೀಯ ಘಟನೆ ವಿವರಿಸಿದ ಆರ್‌ಜಿವಿ
ಇಡೀಯ ಘಟನೆಯನ್ನು ವಿವರಿಸಿರುವ ಆರ್‌ಜಿವಿ, 'ನಾನು ಖಾಲಿದ್ ಮೊಹಮ್ಮದ್‌ಗೆ ಸಂದರ್ಶನ ನೀಡುತ್ತಿರಬೇಕಾದರೆ ಸಿನಿಮಾದ ಹೋಟೆಲ್ ಸೀನ್ ಬಗ್ಗೆ ಮಾತನಾಡುತ್ತಾ ಆ ಸೀನ್‌ನಲ್ಲಿ ಅಮೀರ್ ಒಂದು ಸಂಭಾಷಣೆ ಹೇಳುತ್ತಾರೆ ಆ ಸಂಭಾಷೆಣೆಗೆ ಆ ವೇಯ್ಟರ್ ಪಾತ್ರಧಾರಿ ಚೆನ್ನಾಗಿ ಸ್ಪಂದಿಸುತ್ತಾನೆ ಅಲ್ಲಿ ಅಮೀರ್‌ಗಿಂತ ವೇಯ್ಟರ್ ಚೆನ್ನಾಗಿ ನಟಿಸಿದ್ದಾನೆ ಎಂದು ತಾಂತ್ರಿಕ ವಿಷಯವನ್ನು ಅರ್ಥ ಮಾಡಿಸಲು ಯತ್ನಿಸಿದ್ದೆ' ಎಂದಿದ್ದಾರೆ.

ನಾನು ಸ್ಪಷ್ಟನೆ ನೀಡಲು ಸಹ ಆಗಲಿಲ್ಲ: ಆರ್‌ಜಿವಿ
ಮುಂದುವರೆದು, 'ಆದರೆ ಮೊಹಮ್ಮದ್ ಖಲೀದ್, 'ಅಮೀರ್‌ಗಿಂತಲೂ ವೇಯ್ಟರ್ ಚೆನ್ನಾಗಿ ನಟಿಸಿದ್ದಾನೆ' ಎಂಬ ಹೆಡ್‌ಲೈನ್ ನೀಡಿ ವರದಿ ಮಾಡಿಬಿಟ್ಟರು. ಖಾಲಿದ್‌ಗೂ ಅಮೀರ್‌ಗೂ ಮಧ್ಯೆ ಕೆಲವು ಸಮಸ್ಯೆಗಳು ಸಹ ಇದ್ದವು ಆ ಸಮಯದಲ್ಲಿ. ಆಗ ನನಗೆ ಸ್ಪಷ್ಟೀಕರಣ ನೀಡಲು ಸಾಧ್ಯವಾಗಲಿಲ್ಲ. ಅಮೀರ್ ನನ್ನನ್ನು ಸಂಪರ್ಕಿಸಲು ಯತ್ನಿಸಿದರಾದರೂ ಆಂಧ್ರದಲ್ಲಿ ಶೂಟಿಂಗ್‌ನಲ್ಲಿದ್ದ ನಾನು ಅವರಿಗೆ ಸಿಗಲಿಲ್ಲ. ಹಾಗಾಗಿ ನಾನು ಬೇಕೆಂದೇ ಈ ರೀತಿಯ ಹೇಳಿಕೆ ನೀಡಿದ್ದೇನೆ ಎಂದು ಅಮೀರ್‌ಗೆ ಎನಿಸಿಬಿಟ್ಟಿತು' ಎಂದಿದ್ದಾರೆ ಆರ್‌ಜಿವಿ.

ಅಮೀರ್ ಖಾನ್‌ಗೆ ಅರ್ಥೈಸಲು ಯತ್ನಿಸಿದೆ
'ಆ ನಂತರ ನಾನು ಅಮೀರ್ ಅನ್ನು ಭೇಟಿಯಾದಾಗ ಹೇಳಿದೆ. ಇಡೀಯ ವಿಶ್ವವೇ ರಂಗೀಲಾ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದೆ. ನನ್ನ ಈ ಹೇಳಿಕೆಯಿಂದ ಏನೂ ವ್ಯತ್ಯಾಸವಾಗುವುದಿಲ್ಲ. ಅಲ್ಲದೆ ನೀವು ಇಷ್ಟು ಚೆನ್ನಾಗಿ ನಟಿಸಿದ್ದಾರ ಅದಾಗ್ಯೂ ನಾನು ಈ ರೀತಿಯ ಹೇಳಿಕೆ ಕೊಟ್ಟಿದ್ದೇನೆಂದರೆ ಜನ ನನ್ನನ್ನೇ ಬೈದುಕೊಳ್ಳುತ್ತಾರೆ ನಿಮ್ಮನ್ನಲ್ಲ ಇದನ್ನು ಇಲ್ಲಿಗೆ ಬಿಟ್ಟುಬಿಡಿ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ' ಎಂದು ಅರ್ಥ ಮಾಡಿಸಲು ಯತ್ನಿಸಿದೆ' ಎಂದಿದ್ದಾರೆ ವರ್ಮಾ.
Recommended Video

ನನಗೂ ಅಮೀರ್ ಖಾನ್‌ಗೂ ಸೆಟ್ ಆಗುವುದಿಲ್ಲ: ಆರ್‌ಜಿವಿ
'ಅಮೀರ್ ಖಾನ್ ಒಬ್ಬ ಅದ್ಭುತ ನಟ. ಬಹಳ ಶ್ರಮಜೀವಿ, ಬಹಳ ತಾಳ್ಮೆಯ ಮನುಷ್ಯ ಆದರೆ ನಾನು ಬಹಳ ಆತುರದವನು. ನನಗೆ ಅಮೀರ್‌ಗೆ ವ್ಯಕ್ತಿತ್ವದಲ್ಲಿ ಹೋಲಿಕೆಯೇ ಇಲ್ಲ. ಹಾಗಾಗಿ ನಾವು ಮುಂದೆ ಸಿನಿಮಾ ಮಾಡಲು ಸಹ ಸಾಧ್ಯವಾಗಲಿಲ್ಲ. ನಾನೂ ಅವರನ್ನು ಭೇಟಿಯಾಗಲಿಲ್ಲ. ಅವರೂ ನನ್ನನ್ನು ಭೇಟಿಯಾಗಲಿಲ್ಲ' ಎಂದಿದ್ದಾರೆ ವರ್ಮಾ.


Click it and Unblock the Notifications










