Jawan: G20 ಶೃಂಗಸಭೆಯಿಂದ ಶಾರುಖ್‌ ಖಾನ್ ಅವರ ಜವಾನ್ ಕಲೆಕ್ಷನ್‌ಗೆ ಎಫೆಕ್ಟ್!?

ನಟ ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ಜವಾನ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಕಿಂಗ್ ಖಾನ್ ಅಭಿಮಾನಿಗಳು ಜವಾನ್‌ಗಾಗಿ ತುದಿಗಾಲ ಮೇಲೆ ನಿಂತಿದ್ದು, ಮೊದಲ ದಿನದ ಮೊದಲ ಶೋ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಇದೇ ವೇಳೆ ದೆಹಲಿಯಲ್ಲಿ G20 ಶೃಂಗಸಭೆ ನಡೆಯುತ್ತಿದೆ.

ಎಸ್... ಅಟ್ಲಿ ನಿರ್ದೇಶನದ ಶಾರುಖ್ ಖಾನ್, ವಿಜಯ್ ಸೇತುಪತಿ ಮತ್ತು ನಯನತಾರಾ ನಟನೆಯ ಜವಾನ್ G20 ಶೃಂಗಸಭೆಗೆ ಎರಡು ದಿನ ಇರುವಂತೆ ಸೆಪ್ಟಂಬರ್ 7 ರಂದು ಬಿಡುಗಡೆಯಾಗುತ್ತಿದೆ. ಅಮೆರಿಕಾ ಅಧ್ಯಕ್ಷ ಜೋ ಬಿಡನ್ ಸೇರಿದಂತೆ ಹಲವಾರು ರಾಷ್ಟ್ರಗಳ ಮುಖ್ಯಸ್ಥರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ಕಾರಣದಿಂದ ಸಭೆಯ ಅಕ್ಕಪಕ್ಕ ನಿರ್ಬಂದ ಇರಲಿದೆ. ಥಿಯೇಟರ್‌ಗಳನ್ನು ಕೂಡ ಬಂದ್ ಮಾಡಲಾಗುತ್ತದೆ.

G20 summit impact on Shah Rukh Khan’s latest film Jawan

ಜವಾನ್ ಮೇಲೆ G20 ಶೃಂಗಸಭೆ ಪರಿಣಾಮ?

ಜವಾನ್ ಕೋಲ್ಕತ್ತಾದಲ್ಲಿ ಬೆಳಗ್ಗೆ 5 ಗಂಟೆಗೆ, ಜೈಪುರದಲ್ಲಿ ಬೆಳಗ್ಗೆ 6 ಗಂಟೆಗೆ ಮೊದಲ ಪ್ರದರ್ಶನವಾಗಲಿದೆ. ಮೊದಲ ದಿನವೇ 65 - 70 ಕೋಟಿ ಕಲೆಕ್ಷನ್ ಮಾಡಲಿದೆ ಎಂಬ ವರದಿಗಳು ಹರಿದಾಡುತ್ತಿವೆ. ಇದರ ಬೆನ್ನಲ್ಲೇ, ದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು G20 ಶೃಂಗಸಭೆ ನಡೆಯಲಿದೆ. ವಿಶ್ವದ ಪ್ರಭಾವಿ ನಾಯಕರು ಇದರಲ್ಲಿ ಭಾಗವಹಿಸಲಿದ್ದು, ಎನ್‌ಡಿಎಂಸಿ ಪ್ರದೇಶದ ಭಾಗದಲ್ಲಿ ನಿರ್ಬಂಧಗಳನ್ನು ವಿಧಿಸಲಾಗುತ್ತದೆ.

G20 ಶೃಂಗಸಭೆಯ ನಿರ್ಬಂಧಗಳಿಂದಾಗಿ ಮಧ್ಯ ದೆಹಲಿಯಲ್ಲಿ ಥಿಯೇಟರ್‌ಗಳನ್ನು ಮುಚ್ಚಲಾಗುತ್ತದೆ. ಶೃಂಗಸಭೆಯ ಸಮಯದಲ್ಲಿ ಪಿವಿಆರ್ ಪ್ಲಾಜಾ, ರಿವೋಲಿ, ಓಡಿಯನ್ ಮತ್ತು ಇಸಿಎಕ್ಸ್ ಚಾಣಕ್ಯಪುರಿ ಎಂಬ ನಾಲ್ಕು ಚಿತ್ರಮಂದಿರಗಳನ್ನು ಮುಚ್ಚಲಾಗುತ್ತದೆ.

ಆದರೆ, ಕೇವಲ ನಾಲ್ಕು ಥಿಯೇಟರ್‌ಗಳನ್ನು ಮುಚ್ಚುವುದರಿಂದ ಸಿನಿಮಾ ಮೇಲೆ ಅಂತಹ ಪರಿಣಾಮ ಬೀರುವುದಿಲ್ಲ ಎಂಬ ಮಾರುಗಳು ಕೇಳಿ ಬರುತ್ತಿವೆ. ಈ ನಾಲ್ಕು 2,000 ಆಸನಗಳ ಸಾಮರ್ಥ್ಯದ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಾಗಿವೆ. ವಾರಾಂತ್ಯವಾದರೂ ಕೂಡ ಅದರ ನಷ್ಟವನ್ನೂ ಸರಿದೂಗಿಸಬಹುದು ಎಂಬುದು ಮಾಲೀಕರ ವಿಶ್ವಾಸ.

G20 summit impact on Shah Rukh Khan’s latest film Jawan

ಮೊದಲ ದಿನ 65 ರಿಂದ 70 ಕೋಟಿ ಕಲೆಕ್ಷನ್

ಬಾದ್‌ಷಾ ಶಾರುಖ್ ಖಾನ್ ಅವರ ಜವಾನ್ ಮೊದಲ ದಿನ 65 ರಿಂದ 70 ಕೋಟಿಯ ಆರಂಭಿಕ ಕಲೆಕ್ಷನ್ ಕಾಣಬಹುದು ಎಂದು ವರದಿಯಾಗಿದೆ. ವರ್ಷದ ಮೊದಲ ಹಿಟ್ ಪಠಾಣ್ ಮೊದಲ ದಿನ 55 ಕೋಟಿ ಗಳಿಸಿ ದಾಖಲೆ ನಿರ್ಮಿಸಿತ್ತು. ಅದನ್ನು ಜವಾನ್ ಮುರಿಯುವ ಸಾಧ್ಯತೆಯಿದೆ.

ಈಗಾಗಲೇ 7, 50,000 ಟಿಕೆಟ್‌ಗಳನ್ನು ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಮಾರಾಟ ಮಾಡಲಾಗಿದ್ದು, ಜವಾನ್ ಉತ್ತಮ ಆರಂಭ ಪಡೆದುಕೊಂಡಿದೆ ಎಂದು ಆನ್‌ಲೈನ್ ಟಿಕೆಟ್ ಬುಕಿಂಗ್ ಪ್ಲಾಟ್‌ಫಾರ್ಮ್ ಬುಕ್‌ಮೈಶೋ ಮಾಹಿತಿ ನೀಡಿದೆ. ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಒಂದೇ ಸಮಯದಲ್ಲಿ ಜವಾನ್ ಬಿಡುಗಡೆಯಾಗಲಿದೆ.

ಬಾಲಿವುಡ್‌ನಲ್ಲಿ ಮಾತ್ರವಲ್ಲದೇ ಈ ಬಾರಿ ಶಾರುಖ್ ಖಾನ್ ಸಿನಿಮಾಗೆ ದಕ್ಷಿಣ ಭಾರತದವರು ಕಾತುರದಿಂದ ಕಾಯುತ್ತಿದ್ದಾರೆ. ಅದಕ್ಕೆ ಕಾರಣ ಸಿನಿಮಾದಲ್ಲಿ ಅತಿ ಹೆಚ್ಚಾಗಿ ಸೌತ್‌ನವರೆ ಇರುವುದು. ನಟಿ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ ಸೇರಿದಂತೆ ಹಲವು ಘಟಾನುಘಟಿಗಳು ದಕ್ಷಿಣ ಭಾರತದವರು. ಜೊತೆಗೆ ಸಂಗೀತ ನಿರ್ದೇಶಕ ಅರವಿಂದ್ ರವಿಚಂದರ್ ಮತ್ತು ಸಿನಿಮಾ ನಿರ್ದೇಶಕ ಅಟ್ಲಿ ಕೂಡ ಇಲ್ಲಿನವರೆ.

ಹೀಗಾಗಿ ದಕ್ಷಿಣ ಭಾರತದಲ್ಲಿಯೂ ಜವಾನ್ ಹವಾ ಜೋರಾಗಿದೆ. ಚಿತ್ರದ ಸುಮಾರು 30 ರಿಂದ 35 ಪ್ರತಿಶತದಷ್ಟು ಬ್ಯುಸಿನೆಸ್ ಇಲ್ಲಿಂದಲೇ ಆಗಲಿದೆ. ಸೌತ್‌ನಲ್ಲಿಯೂ ಜವಾನ್ ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿಯೇ ನಡೆದಿದೆ. ಮೊದಲ ದಿನದಲ್ಲಿ ದಕ್ಷಿಣ ಭಾರತದಿಂದ ಸುಮಾರು 20 ರಿಂದ 25 ಕೋಟಿ ರೂಪಾಯಿ ಕಲೆಕ್ಷನ್ ಆಗುವ ಅಂದಾಜಿದೆ.

More from Filmibeat

English summary
G20 summit impact on Shah Rukh Khan’s Jawan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X