Gadar 2 and OMG 2: ಗದರ್ ಮತ್ತು ಓಎಂಜಿ ಸೀಕ್ವೆಲ್‌ಗಳ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತೆ?

ಶುಕ್ರವಾರ (ಆಗಸ್ಟ್ 11) ರಂದು ಬಿಡುಗಡೆಯಾದ ಸನ್ನಿ ಡಿಯೋಲ್ ಅಭಿನಯದ ಗದರ್ 2: ದಿ ಕಥಾ ಕಂಟಿನ್ಯೂಸ್ ಬಾಕ್ಸ್ ಆಫೀಸ್‌ನಲ್ಲಿ ಒಂದೇ ದಿನಕ್ಕೆ 40 ಕೋಟಿ ರೂ.ಗಳನ್ನು ಬಾಚಿಕೊಂಡಿದ್ದು, ಉತ್ತಮ ಆರಂಭ ಮಾಡಿದೆ. ಆದರೆ, ಇದರ ಜೊತೆಗೆ ಬಿಡುಗಡೆಯಾಗಿರುವ ಅಕ್ಷಯ್ ಕುಮಾರ್ ಮತ್ತು ಪಂಕಜ್ ತ್ರಿಪಾಠಿ ಅವರ ಓಎಂಜಿ 2 ಉತ್ತಮ ಆರಂಭದಲ್ಲಿಯೂ ಒಂದು ದಿನಕ್ಕೆ 10 ಕೋಟಿ ಗಳಿಸಿದೆ.

ಗದರ್ 2, 2001 ರ ಬ್ಲಾಕ್‌ಬಸ್ಟರ್ ಸಿನಿಮಾ ಗದರ್: ಏಕ್ ಪ್ರೇಮ್ ಕಥಾದ ಸೀಕ್ವೆಲ್, ತಾರಾ ಸಿಂಗ್ ಆಗಿ ಸನ್ನಿ ಡಿಯೋಲ್ ಮತ್ತು ಸಕೀನಾ ಪಾತ್ರದಲ್ಲಿ ಅಮೀಶಾ ಪಟೇಲ್ ಮತ್ತೆ ಬೆಳ್ಳಿ ತೆರೆ ಮೇಲೆ ರಾರಾಜಿಸಿದ್ದಾರೆ. ಮತ್ತೊಂದೆಡೆ, ಓ ಮೈ ಗಾಡ್ 2 ಪರೇಶ್ ರಾವಲ್ ಮತ್ತು ಅಕ್ಷಯ್ ನಟಿಸಿದ 2012 ರ ಓ ಮೈ ಗಾಡ್ ಚಿತ್ರದ ನಂತರ ಅಮಿತ್ ರೈ ನಿರ್ದೇಶನದ ಸೀಕ್ವೆಲ್ ಆಗಿದೆ.

gadar-2-and-omg-2-box-office-collection

ವರದಿಗಳ ಪ್ರಕಾರ, ಒಂದೇ ದಿನದಲ್ಲಿ ಗದರ್ 2 2023 ರ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿರುವ ಬಾಲಿವುಡ್ ಚಿತ್ರವಾಗಿದೆ. ಓ ಮೈ ಗಾಡ್ 2 ಪಟ್ಟಿಯಲ್ಲಿ ಎಂಟನೇ ಸ್ಥಾನವನ್ನು ಪಡೆದುಕೊಂಡಿದೆ. ಶಾರುಖ್ ಖಾನ್ ಅವರ ಪಠಾನ್ (57 ಕೋಟಿ ನೆಟ್) ಇನ್ನೂ 2023 ರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪ್ರಭಾಸ್ ಅಭಿನಯದ ಆದಿಪುರುಷ ಚಿತ್ರವು 37 ಕೋಟಿ (ಹಿಂದಿಯಲ್ಲಿ) ಸಂಗ್ರಹದೊಂದಿಗೆ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

ಇನ್ನಯ, ಅಕ್ಷಯ್ ಕುಮಾರ್, ಯಾಮಿ ಗೌತಮ್ ಮತ್ತು ಪಂಕಜ್ ತ್ರಿಪಾಠಿ ನೇತೃತ್ವದ ಓಎಂಜಿ 2 ಶನಿವಾರ ಮಲ್ಟಿಪ್ಲೆಕ್ಸ್‌ಗಳಲ್ಲಿ ಅತ್ಯುತ್ತಮ ಟ್ರೆಂಡ್ ಹುಟ್ಟುಹಾಕಿದೆ. ಆರಂಭಿಕ ಟ್ರೆಂಡ್‌ಗಳ ಪ್ರಕಾರ ಎರಡನೇ ದಿನದಲ್ಲಿ 50 % ಜಿಗಿತ ಕಾಣಿಸುತ್ತಿದೆ. ಶನಿವಾರ ರಾತ್ರಿಯ ಶೋಗಳಲ್ಲಿ ಹೆಚ್ಚು ಬುಕ್ಕಿಂಗ್ ಜೊತೆಗೆ 14 ಕೋಟಿ ರೂ.ಗಳತ್ತ ಸಿನಿಮಾ ದಾಪುಗಾಲು ಹಾಕುತ್ತಿದೆ.

ಗದರ್ 2 ನಂತಹ ಸಿನಿಮಾ ಪೈಪೋಟಿಯ ಹೊರತಾಗಿಯೂ ಓ ಮೈ ಗಾಡ್ ಸಿನಿಮಾದ ಎರಡು ದಿನಗಳ ಒಟ್ಟು ಮೊತ್ತವು 23 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ವಿಶೇಷವಾಗಿ ಮುಂಬೈ ಮತ್ತು ದೆಹಲಿಯಲ್ಲಿ ಸಿನಿಮಾಗೆ ಹೆಚ್ಚಿನ ಥಿಯೇಟರ್‌ಗಳಿಗೆ ಆಗ್ರಹ ಕೇಳಿ ಬರುತ್ತಿದೆ. ಭಾನುವಾರದಿಂದ ಪ್ರದರ್ಶನವನ್ನು ಹೆಚ್ಚಿಸುವ ಮಾತುಕತೆಗಳು ಈಗಾಗಲೇ ಪ್ರಾರಂಭವಾಗಿವೆ.

gadar-2-and-omg-2-box-office-collection

ಓಎಂಜಿ 2 ಕಲೆಕ್ಷನ್

ಶುಕ್ರವಾರ: 9.25 ಕೋಟಿ ರೂ

ಶನಿವಾರ: ರೂ 14.00 ಕೋಟಿ (ಆರಂಭಿಕ ಪ್ರವೃತ್ತಿಗಳು)

ಒಟ್ಟು: 23.25 ಕೋಟಿ ರೂ

ಒಂದು ದಿನದಲ್ಲಿ ಅಧಿಕ ಕಲೆಕ್ಷನ್ ಮಾಡಿದ 2023 ರ ಪಟ್ಟಿಯಲ್ಲಿ ಶಾರುಖ್ ಖಾನ್ ಅವರ ಪಠಾನ್ (57 ಕೋಟಿ ನೆಟ್) ಅಗ್ರಸ್ಥಾನದಲ್ಲಿದೆ ಮತ್ತು ಪ್ರಭಾಸ್ ಅಭಿನಯದ ಆದಿಪುರುಷ ಚಿತ್ರವು 37 ಕೋಟಿ ಗಳಿಸಿ (ಹಿಂದಿಯಲ್ಲಿ) ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಸಲ್ಮಾನ್ ಖಾನ್ ಅವರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ (ರೂ. 15.81 ಕೋಟಿ ) ನಾಲ್ಕನೇ ಸ್ಥಾನದಲ್ಲಿದ್ದರೆ, ರಣಬೀರ್ ಕಪೂರ್ ಅಭಿನಯದ ತು ಜೂಠಿ ಮೈನ್ ಮಕ್ಕರ್ (ರೂ. 15.73 ಕೋಟಿ), ರಣವೀರ್ ಸಿಂಗ್-ಆಲಿಯಾ ಭಟ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ (ರೂ. 11.11) ಕೋಟಿ ) ಮತ್ತು ಅಜಯ್ ದೇವಗನ್ ಅವರ ಭೋಲಾ (ರೂ. 10.5 ಕೋಟಿ) ನಂತರದ ಸ್ಥಾನದಲ್ಲಿವೆ.

More from Filmibeat

English summary
Day 1 Box Office Collection Gadar 2 and OMG 2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X