Gadar 2: ನಾಳೆ ಗದರ್ 2 ಬಿಡುಗಡೆ: ಸಿನಿಮಾ ನೋಡಲು ಇಲ್ಲಿವೆ ಐದು ಕಾರಣಗಳು

ಸನ್ನಿ ಡಿಯೋಲ್, ಅಮೀಶಾ, ಪಟೇಲ್ ಮತ್ತು ಉತ್ಕರ್ಷ್ ಶರ್ಮಾ ಅಭಿನಯದ ಗದರ್ 2 ಬೆಳ್ಳಿ ಪರದೆಯ ಮೇಲೆ ಬರಲು ಸಿದ್ಧವಾಗಿದೆ. ಗದರ್ 2 ಚಲನಚಿತ್ರವು 2001 ರಲ್ಲಿ ಬಿಡುಗಡೆಯಾದ ಗದರ್: ಏಕ್ ಪ್ರೇಮ್ ಕಥಾ ಚಿತ್ರದ ಸೀಕ್ವೆಲ್ ಆಗಿದೆ. ಚಿತ್ರದಲ್ಲಿ ತಾರಾ ಸಿಂಗ್ ಪಾತ್ರದಲ್ಲಿ ಸನ್ನಿ ಡಿಯೋಲ್ ಮತ್ತು ಸಕೀನಾ ಪಾತ್ರದಲ್ಲಿ ಅಮೀಶಾ ಪಟೇಲ್ ನಟಿಸುತ್ತಿದ್ದಾರೆ. ಉತ್ಕರ್ಷ್ ಶರ್ಮಾ ಅವರು ಮಗ ಚರಂಜಿತ್ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ನೋಡಲು ಇಲ್ಲಿವೆ ಐದು ಕಾರಣಗಳು.

ಗದರ್ ಎಂದಬುದು ಚಿತ್ರರಂಗದಲ್ಲಿ ಮೊದಲೇ ಇರುವ ಬ್ರಾಂಡ್!

ಗದರ್: ಏಕ್ ಪ್ರೇಮ್ ಕಥಾ 2001 ರಲ್ಲಿ ಬಿಡುಗಡೆಯಾದಾಗ, ಅದು ಬ್ಲಾಕ್‌ಬಸ್ಟರ್ ಸಿನಿಮಾವಾಗಿ ಬಾಲಿವುಡ್‌ನಲ್ಲಿ ತನ್ನದೇ ಆದ ಒಂದು ಸ್ಥಾನವನ್ನು ಕಟ್ಟಿಕೊಂಡಿದೆ. ಗದರ್ 2 ನೋಡಲು ಮೊದ ಅಂಶವೇ ಅದರ ಬ್ರ್ಯಾಂಡ್. ಈ ಚಿತ್ರವು ಮುಂದಿನ ವರ್ಷಗಳಲ್ಲಿ ಪ್ರೇಕ್ಷಕರ ನೆನಪಿನಲ್ಲಿ ಉಳಿಯುತ್ತದೆ ಮತ್ತು ಜನರಿಂದ ಪ್ರೀತಿ ಗಳಿಸಲಿದೆ ಎಂಬುದರಲ್ಲಿ ಸಂದೇಹವಿಲ್ಲ.

Gadar 2 release: Five reasons why you should watch Gadar 2

ಆಕರ್ಷಕ ಕಥಾಹಂದರ

2001 ರ ಗದರ್: ಏಕ್ ಪ್ರೇಮ್ ಕಥಾ ಬಿಡುಗಡೆಯಾದಾಗ, ಜನರು ಕುಟುಂಬದ ಜೊತೆಗೆ ಸಿನಿಮಾ ಥಿಯೇಟರ್‌ಗೆ ಲಗ್ಗೆಯಿಟ್ಟಿದ್ದರು. ಇದಕ್ಕೆ ಕಾರಣ ಈ ಸಿನಿಮಾದ ಕಥೆಯು ಭಾರತದ ವಿಭಜನೆಯ ಘಟನೆಯನ್ನು ಆಧರಿಸಿದೆ. ಇದು ಅನೇಕ ಕುಟುಂಬಗಳು ಸಾಕ್ಷಿಯಾದ ಹೃದಯವಿದ್ರಾವಕ ಘಟನೆಯ ಮೇಲೆ ಆಧರಿಸಿದೆ. ಹಾಗಾಗಿ ಮತ್ತೊಮ್ಮೆ ಪ್ರೇಕ್ಷಕರು ಗದರ್ 2 ಕಥೆಯನ್ನು ಅಪ್ಪಿಕೊಳ್ಳಲಿದ್ದಾರೆ ಎನ್ನುವ ಭರವಸೆಯಲ್ಲಿದೆ ಚಿತ್ರತಂಡ.

ಸಿನಿಮಾದ ಗೀತೆಗಳು

ಗದರ್: ಏಕ್ ಪ್ರೇಮ್ ಕಥಾ ಚಿತ್ರದ ಮೈ ನಿಕ್ಲಾ ಗಡ್ಡಿ ಲೇಕೆ ಹಾಡು ಬಿಡುಗಡೆಯಾದಾಗಿನಿಂದ, ಅದು ಎಲ್ಲರ ಪ್ಲೇಲಿಸ್ಟ್‌ನಲ್ಲಿದೆ ಎಂಬುದರಲ್ಲಿ ಸಂದೇಹವಿಲ್ಲ. ಈ ಹಾಡಿನ ಜನಪ್ರಿಯತೆ ಕಾರಣಕ್ಕೆ ನಿರ್ಮಾಪಕರು ಮತ್ತೆ ಬೆಳ್ಳಿತೆರೆಯಲ್ಲಿ ಸಾಂಪ್ರದಾಯಿಕ ಹಾಡನ್ನು ಕೇಳುವ ಅವಕಾಶವನ್ನು ಪ್ರೇಕ್ಷಕರಿಗೆ ನೀಡಿದ್ದಾರೆ.

ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್

22 ವರ್ಷಗಳ ನಂತರ, ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ತಾರಾ ಸಿಂಗ್ ಮತ್ತು ಸಕೀನಾ ಆಗಿ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಸಹಜವಾಗಿ ಅವರ ಕೆಮಿಸ್ಟ್ರಿ ನೋಡಲು ಯಾರು ತಾನೆ ಬಯಸುವುದಿಲ್ಲ. ತಾರಾ ಸಿಂಗ್ ಅವರ ಬಾಯಿಂದ "ಮೇಡಂ ಜೀ" ಎಂಬುದನ್ನು ಕೇಳಲು ಮತ್ತು ಸಕೀನಾ ಅವರ ಸೌಂದರ್ಯವನ್ನು ಮತ್ತೊಮ್ಮೆ ನೋಡಲು ಥಿಯೇಟರ್‌ಗೆ ಭೇಟಿ ನೀಡಲೇಬೇಕು.

Gadar 2 release: Five reasons why you should watch Gadar 2

ಸನ್ನಿ ಡಿಯೋಲ್ ಅವರ ಭರವಸೆ

ಸನ್ನಿ ಡಿಯೋಲ್ 2001 ರ ಚಲನಚಿತ್ರದಲ್ಲಿ ತಮ್ಮ ಸಾಂಪ್ರದಾಯಿಕ ಆಕ್ಷನ್ ಡೈಲಾಗ್‌ಗಳಿಂದ ಜನಪ್ರಿಯರಾದರು. ಹೊಸ ಸಿನಿಮಾದ ಟ್ರೇಲರ್ ಕೂಡ ಸನ್ನಿ ಡಿಯೋಲ್ ಅವರ ಆಕ್ಷನ್ ಸೀನ್‌ಗಳ ಒಂದು ಝಲಕ್ ನೀಡಿದೆ. ನೀವು ಚಿತ್ರಮಂದಿರಗಳಲ್ಲಿ ಸಿನಿಮಾ ನೋಡದಿದ್ದರೇ ತಾರಾ ಸಿಂಗ್‌ರ ಆಕ್ಷನ್ ಸೀಕ್ವೆನ್ಸ್‌ಗಳನ್ನು ಎಂಜಾಯ್ ಮಾಡಲಾರಿರಿ. ಇನ್ನು, ಗದರ್ 2 ನೋಡಲು ಇರುವ ಮತ್ತೊಂದು ಪ್ರಮುಖ ಕಾರಣವೆಂದರೆ ತಾರಾ ಸಿಂಗ್ ತನ್ನ ಪ್ರೀತಿ ಮತ್ತು ಕುಟುಂಬಕ್ಕಾಗಿ ಹೋರಾಡುವುದು. ಹೀಗಾಗಿ ಮಿಸ್ ಮಾಡದೇ ತಾರಾ ಸಿಂಗ್, ಸಕೀನಾ ಪ್ರೇಮವನ್ನು ಮತ್ತೆ ಕಣ್ತುಂಬಿಕೊಳ್ಳಿ. ಸಿನಿಮಾ ಆಗಸ್ಟ್ 11 ರಂದು ತೆರೆಗೆ ಬರಲಿದೆ.

More from Filmibeat

English summary
Gadar 2 release: Five reasons why you should watch Sunny Deol, Ameesha Patel and Utkarsh Sharma starrer Gadar 2. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X