ಒಂದೂವರೆ ವರ್ಷದಲ್ಲಿ 85 KG ತೂಕ ಇಳಿಸಿದ ದೈತ್ಯ ಡ್ಯಾನ್ಸರ್

By Bharath Kumar

ಗಣೇಶ್ ಆಚಾರ್ಯ......ಬಾಲಿವುಡ್ ನ ದೈತ್ಯ ಕೊರಿಯೋಗ್ರಫರ್. ಸುಮಾರು 2 ದಶಕಗಳಿಂದ ಬಾಲಿವುಡ್ ನಲ್ಲಿ ಕೊರಿಯೋಗ್ರಫಿ ಮಾಡುತ್ತಿರುವ ಗಣೇಶ್ ಸ್ಟಾರ್ ಕಲಾವಿದ. ಗಣೇಶ್ ಆಚಾರ್ಯ ತೂಕ ಬರೋಬ್ಬರಿ 200 ಕೆಜಿ ಇತ್ತು. ಆದ್ರೀಗ ಅವರ ತೂಕದಲ್ಲಿ ಬರೋಬ್ಬರಿ 85 ಕೆಜಿ ಇಳಿಸಿಕೊಂಡಿದ್ದಾರೆ.

ಇದು ಕೇವಲ ಒಂದೂವರೆ ವರ್ಷದಲ್ಲಿ ಆಗಿರುವ ಬದಲಾವಣೆ. ಸ್ವತಃ ಗಣೇಶ್ ಆಚಾರ್ಯ ಅವರೇ ತಮ್ಮ ವರ್ಕೌಟ್ ವಿಡಿಯೋಗಳನ್ನ instagram ನಲ್ಲಿ ಪೋಸ್ಟ್ ಮಾಡಿದ್ದಾರೆ.

Ganesh Acharya 85 Kg Weight Loss in 1.5 Years

ಆಚಾರ್ಯ ಅವರು ಈ ಅದ್ಭುತ ಬದಲಾವಣೆ ನೋಡಿ ಬಾಲಿವುಡ್ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಗಣೇಶ್ ಅಚಾರ್ಯ ಅನೇಕರಿಗೆ ಸ್ಪೂರ್ತಿ ಎಂದು ಅವರ ಸಾಧನೆಯನ್ನ ಕೊಂಡಾಡುತ್ತಿದ್ದಾರೆ.

Ganesh Acharya 85 Kg Weight Loss in 1.5 Years

ಇನ್ನು ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಗಣೇಶ್ ಅಚಾರ್ಯ ''ಡ್ಯಾನ್ಸ್ ಎನ್ನುವುದು ನನ್ನ ಫ್ಯಾಷನ್. ನಾನು ದಪ್ಪವಾಗಿದ್ದಾಗಲೂ ಡ್ಯಾನ್ಸ್ ಮಾಡುತ್ತಿದ್ದೆ, ಈಗ ಸ್ಲಿಮ್ ಆಗಿರುವುದರಿಂದ ಮತ್ತಷ್ಟು ಎನರ್ಜಿ ಹೆಚ್ಚಾಗಲಿದೆ. ಸಂತೋಷವಾಗ್ತಿದೆ'' ಎಂದು ಸಂತಸ ಹಂಚಿಕೊಂಡಿದ್ದಾರೆ.

Ganesh Acharya 85 Kg Weight Loss in 1.5 Years

ಗಣೇಶ್ ಆಚಾರ್ಯ ಬಾಲಿವುಡ್ ನ ಬಹುತೇಕ ಸ್ಟಾರ್ ನಟಿರಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಸಲ್ಮಾನ್ ಖಾನ್, ಶಾರೂಖ್ ಖಾನ್, ಹೃತಿಕ್ ರೋಷನ್, ಕತ್ರಿನಾ ಕೈಫ್ ಚಿತ್ರಗಳಲ್ಲಿ ನೃತ್ಯ ಸಂಯೋಜನೆ ಮಾಡಿದ್ದಾರೆ. ಕತ್ರಿನಾ ಕಾಣಿಸಿಕೊಂಡಿದ್ದ ಅಗ್ನಿಪತ್ ಚಿತ್ರದ 'ಚಿಕ್ನಿ ಚಮೇಲಿ' ಹಾಡು ಗಣೇಶ್ ಅಚಾರ್ಯ ಅವರ ಖ್ಯಾತಿಯನ್ನ ಹೆಚ್ಚಿಸಿತ್ತು.

ಗಣೇಶ್ ಆಚಾರ್ಯ ಅವರ ಹೇಳಿ ಕೇಳಿ ಮೊದಲೇ ಡ್ಯಾನ್ಸರ್. 200 KG ಇದ್ದಾಗಲೇ ಹಾಗೆ, ಇನ್ನು 85 KG ಕಡಿಮೆ ಆಗಿದ್ದಾರೆ ಮುಂದೆ ಮತ್ಯಾವ ರೀತಿಯ ಹಾಡುಗಳನ್ನ ಅವರಿಂದ ನೋಡಬಹುದು ಅಲ್ವಾ.....!

English summary
Ganesh Acharya's weight had touched 200kg when he decided he just had to lose all that weight. One and a half years and a lot of work later, the immensely talented Bollywood dance choreographer has reportedly lost 85kg, and he's logged it all on Instagram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X