For Quick Alerts
  ALLOW NOTIFICATIONS  
  For Daily Alerts

  ಶಿಲ್ಪಾ ಶೆಟ್ಟಿ ಮನೆ ಬಂದ ಸುಂದರ ಗಣಪ!

  |

  ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟುತ್ತಿದೆ. ಕೊರೋನಾ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ಬಾರಿಯ ಗಣೇಶ ಹಬ್ಬ ಎಲ್ಲರಿಗೂ ಅತ್ಯಂತ ವಿಶೇಷವಾಗಿ ಇರಲಿದೆ.

  ಈಗಾಗಲೇ ಮಾರುಕಟ್ಟೆಗೆ ಗಣೇಶನ ಮೂರ್ತಿಗಳು ಬಂದು ಬಿಟ್ಟಿವೆ. ನಾನಾ ವಿನ್ಯಾಸದ, ಹಲವು ರೀತಿಯ, ಹಲವು ಬಣ್ಣಗಳ ಗಣೇಶ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದ್ದಾನೆ. ಮನೆಮನೆಗಳಲ್ಲಿ ಮಾತ್ರವಲ್ಲದೆ ಬೀದಿ-ಬೀದಿಗಳಲ್ಲಿ ಗಣೇಶನ ಮಹೋತ್ಸವ ನಡೆಯಲಿದೆ.

  ಹಬ್ಬ ಬಂತೂ ಅಂದ್ರೆ ಸಿನಿಮಾರಂಗದಲ್ಲಿ ವಿಶೇಷ ಸಂಭ್ರಮ ಕಳೆಗಟ್ಟುತ್ತದೆ. ಸಿನಮಾ ಮಂದಿ, ಹಬ್ಬದ ಪ್ರಯುಕ್ತ ಫೋಟೋ ಶೂಟ್ ಮಾಡಿಸಿ, ಹಬ್ಬ ಆಚರಿಸಿ ಸಂಭ್ರಮಿಸುತ್ತಾರೆ. ಜೊತೆಗೆ ತಮ್ಮ ಅಭಿಮಾನಿಗಳಿಗಾಗಿ ವಿಶ್ ಮಾಡುತ್ತಾರೆ. ಇನ್ನು ಬಾಲಿವುಡ್ ತಾರೆಯರಲ್ಲಿ, ಹಲವರು ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಅದರಲ್ಲೂ ನಟಿ ಶಿಲ್ಪಾ ಶೆಟ್ಟಿ ಮತ್ತು ಸಲ್ಮಾನ್ ಖಾನ್ ಮನೆಯಲ್ಲಿ ನಡೆಯುವ ಗಣೇಶ ಹಬ್ಬ ಬಹಳ ವಿಶೇಷವಾಗಿ ಗಮನ ಸೆಳೆಯುತ್ತದೆ.

  ಪ್ರತಿ ವರ್ಷದಂತೆ ಈ ವರ್ಷವೂ ಶಿಲ್ಪಾ ಶೆಟ್ಟಿ ಮನೆಯಲ್ಲಿ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಹೀಗಾಗಿ ನಿನ್ನೆಯೇ ರಾಜ್ ಕುಂದ್ರಾ ಗಣಪತಿ ತರುವುದಕ್ಕಾಗಿ ಮಾರುಕಟ್ಟೆಗೆ ಹೋಗಿದ್ದರು. ಈ ಸಮಯದಲ್ಲೂ ಅವರು ಮಾಸ್ಕ್ ಹಾಕಿಕೊಂಡು ಮುಖ ಮುಚ್ಚಿಕೊಂಡಿದ್ದರು.

  Ganesh Chaturthi 2022: Shilpa Shetty And Raj Kundra Welcome Ganapathi Idol To Home

  ರಾಜ್‌ ಕುಂದ್ರ ಮುಖ ಮುಚ್ಚಿಕೊಂಡಿರುವ ಫೋಟೋ, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಅಶ್ಲೀಲ ವಿಡಿಯೋಗೆ ಸಂಬಂಧಿಸಿದಂತೆ ಅವರು ಬಂಧನವಾಗಿದ್ದರು. ಹಲವು ದಿನಗಳ ಕಾಲ ಜೈಲಿನಲ್ಲಿ ಇದ್ದರು, ಜೈಲಿನಿಂದ ಆಚೆ ಬಂದ ಮೇಲೆ ಈ ರೀತಿಯಾಗಿ ಬದಲಾಗಿದ್ದಾರೆ. ಏರ್ ಪೋರ್ಟ್ ಸೇರಿದಂತೆ ಯಾವುದೇ ಸ್ಥಳದಲ್ಲಿ ರಾಜ್ ಕುಂದ್ರಾ ಕಂಡರೂ, ಮುಖಕ್ಕೆ ಪೂರ್ತಿ ಮಾಸ್ಕ್ ಹಾಕಿಕೊಂಡೆ ಇರುತ್ತಾರೆ. ಕ್ಯಾಮೆರಾಗಳಿಂದ ಆದಷ್ಟು ದೂರ ಇರಲು ಬಯಸುತ್ತಾರೆ.

  English summary
  Ganesh Chaturthi 2022: Shilpa Shetty And Raj Kundra Welcome Ganapathi Idol To Home, Know More,
  Tuesday, August 30, 2022, 19:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X