Ganesh Chaturthi 2023: ಗಣಪತಿ ಬಪ್ಪ ಮೋರೆಯ: ಸಲ್ಲು- ಶಾರುಖ್ ಮನೆಯಲ್ಲಿ ಗಣೇಶ ಹಬ್ಬದ ಸಡಗರ
ದೇಶ ವಿದೇಶಗಳಲ್ಲಿ ಗೌರಿ-ಗಣೇಶ ಹಬ್ಬದ ಸಡಗರ ಜೋರಾಗಿದೆ. ಸಿನಿಮಾ ತಾರೆಯರು ಕೂಡ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಮಾಡಿ ಹಬ್ಬದ ಸಂಭ್ರಮದಲ್ಲಿ ಮುಳುಗಿ ತೇಲುತ್ತಿದ್ದಾರೆ. ಪ್ರತಿವರ್ಷ ಬಾಲಿವುಡ್ ತಾರೆಯರ ಮನೆಗಳಲ್ಲಿ ವಿನಾಯಕನಿಗೆ ವಿಶೇಷ ಪೂಜೆ ನಡೆಯುತ್ತದೆ.
ಮುಸ್ಲಿಮರಾದರೂ ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಕೂಡ ಮನೆಗೆ ಗಣಪನನ್ನು ಸ್ವಾಗತಿಸುತ್ತಾರೆ. ಪೂಜೆ ಮಾಡಿ ಗಜಾನನ ಕೃಪೆಗೆ ಪಾತ್ರರಾಗುತ್ತಾರೆ. ಸಲ್ಮಾನ್ ಖಾನ್ ತಮ್ಮ ಸಹೋದರಿ ಅರ್ಪಿತಾ ಖಾನ್ ಮನೆಯಲ್ಲಿ ಹಬ್ಬ ಆಚರಿಸುತ್ತಾರೆ. ಸದ್ಯ ಮನೆಯಲ್ಲಿ ಗಣೇಶ ಮೂರ್ತಿಗೆ ಆರತಿ ಬೆಳಗಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಸಲ್ಲು ಸಹೋದರರು, ಪೋಷಕರು ಗಣೇಶನಿಗೆ ಪೂಜೆ ಮಾಡಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇನ್ನು ಬಾಲಿವುಡ್‌ನಲ್ಲಿ ಹಬ್ಬದ ಸಂಭ್ರಮದಲ್ಲಿ ತಾರೆಯರು ಒಂದೆಡೆ ಸೇರುತ್ತಾರೆ. ಅರ್ಪಿತಾ ಮನೆಯಲ್ಲಿ ಗಣೇಶ ಹಬ್ಬ ಆಚರಣೆಗೆ ಬಾಲಿವುಡ್ ತಾರೆಯರೆಲ್ಲಾ ಆಗಮಿಸುತ್ತಾರೆ.
ಇನ್ನು 'ಜವಾನ್' ಸಿನಿಮಾ ಮೂಲಕ ಬಾಕ್ಸಾಫೀಸ್ ಶೇಕ್ ಮಾಡುತ್ತಿರುವ ಶಾರುಖ್ ಖಾನ್ ಮನೆಗೆ ಗಜಮುಖನನ್ನು ಸ್ವಾಗತಿಸಿದ್ದಾರೆ. ಆ ಫೋಟೊವನ್ನು ಹಂಚಿಕೊಂಡಿದ್ದು ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯ ಕೋರಿದ್ದಾರೆ. ಕಿಂಗ್ ಖಾನ್ ಪೋಸ್ಟ್ ವೈರಲ್ ಆಗ್ತಿದೆ.
ಇನ್ನು ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ನಿವಾಸದಲ್ಲಿ ಪ್ರತಿವರ್ಷ ಗಣೇಶ ಹಬ್ಬದ ಸಡಗರ ಜೋರಾಗಿರುತ್ತದೆ. ಈ ಪೂಜೆಯಲ್ಲಿ ಬಾಲಿವುಡ್ ತಾರೆಯರು ಭಾಗಿ ಆಗುತ್ತಾರೆ. ಸಲ್ಮಾನ್ ಖಾನ್, ನಿರ್ದೇಶಕ ಅಟ್ಲಿ ದಂಪತಿ, ರಣ್‌ವೀರ್- ದೀಪಿಆ ದಂಪತಿ, ಅನನ್ಯಾ ಪಾಂಡೆ, ಬೋನಿ ಕಪೂರ್, ಖುಷಿ ಕಪೂರ್, ಹಿರಿಯ ನಟಿ ರೇಖಾ, ಶ್ರದ್ಧಾ ಕಪೂರ್, ಅಜಯ್ ದೇವಗನ್, ರಶ್ಮಿಕಾ ಮಂದಣ್ಣ ಸೇರಿದಂತೆ ಹಲವರು ಅಂಬಾನಿ ನಿವಾಸಕ್ಕೆ ಭೇಟಿ ನೀಡಿ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.
ಇನ್ನುಳಿದಂತೆ ಶಿಲ್ಪಾ ಶೆಟ್ಟಿ, ಅಕ್ಷಯ್ ಕುಮಾರ್, ಅನುಷ್ಕಾ ಶರ್ಮಾ, ಕಾರ್ತಿಕ್ ಆರ್ಯನ್, ವರುಣ್-ನತಾಶಾ ಸೇರಿದಂತೆ ಸಾಕಷ್ಟು ಜನ ಬಾಲಿವುಡ್ ನಟ-ನಟಿಯರು ತಮ್ಮ ಮನೆಗಳಲ್ಲಿ ಗಣೇಶನನ್ನು ಆರಾಧಿಸಿದ್ದಾರೆ.


Click it and Unblock the Notifications











