Taapsee Pannu: ಗಣೇಶ ಚತುರ್ಥಿಯಂದು 3.5 ಕೋಟಿ ಮೌಲ್ಯದ ಐಷಾರಾಮಿ ಮರ್ಸಿಡಿಸ್ ಮನೆಗೆ ತಂದ ತಾಪ್ಸಿ ಪನ್ನು
ಸೌತ್ ಸಿನಿಮಾಗಳಿಂದ ಬಾಲಿವುಡ್‌ಗೆ ಕಾಲಿರಿಸಿದ ನಟಿ ತಾಪ್ಸಿ ಪನ್ನು ಮತ್ತೊಮ್ಮೆ ತಮ್ಮ ಕಾರ್ ಕಲೆಕ್ಷನ್ ವಿಷಯದಿಂದ ಸುದ್ದಿಯಲ್ಲಿದ್ದಾರೆ. ನಟಿ ಗಣೇಶ ಹಬ್ಬದ ಸಂಭ್ರಮದಲ್ಲಿ ತಮ್ಮ ಮನೆಗೆ 3.5 ಕೋಟಿ ಮೌಲ್ಯದ ಐಷಾರಾಮಿ ಕಾರನ್ನು ಮನೆಗೆ ತಂದಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ.
ಈ ಬಾರಿ ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ 3.5 ಕೋಟಿ ಮೌಲ್ಯದ ಐಷಾರಾಮಿ ಮರ್ಸಿಡಿಸ್ - ಮೇಬ್ಯಾಕ್ ಜಿಎಲ್‌ಎಸ್600 ಎಸ್‌ಯುವಿ ಯನ್ನು ಖರೀದಿಸಿದ್ದಾರೆ. ನಟಿ ತಾಪ್ಸಿ ಪನ್ನು ತನ್ನ ಹೊಸ ಕಾರಿನ ಜೊತೆಗೆ ಪೋಸ್ ನೀಡುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ತಾಪ್ಸಿ
ಚಿತ್ರದಲ್ಲಿ, ನಟಿ ತನ್ನ ಮರ್ಸಿಡಿಸ್ - ಮೇಬ್ಯಾಕ್ ಎಸ್‌ಯುವಿ ಪಕ್ಕದಲ್ಲಿ ಲೈಟ್ ಪಿಂಕ್ ಬಣ್ಣದ ಕುರ್ತಾ ಸೆಟ್‌ನಲ್ಲಿ ನಿಂತು ಫೋಟೋಗೆ ಫೋಸ್ ನೀಡಿದ್ದಾರೆ. ಹೊಸ ಕಾರು ಪಲ್ಲಾಡಿಯಮ್ ಸಿಲ್ವರ್ ಶೇಡ್‌ನಲ್ಲಿದ್ದು, Mercedes-Maybach GLS 600 ಒಳಗೆ ಐಷಾರಾಮಿ ಸೌಕರ್ಯಗಳು ಇವೆ.
ಎಸ್‌ಯುವಿ ಲೌಂಜ್ ಶೈಲಿಯ ಸೀಟ್‌ಗಳು, ವೆಂಟಿಲೇಟೆಡ್ ಮಸಾಜ್ ಸೀಟ್‌ಗಳು, ಎಲೆಕ್ಟ್ರಾನಿಕ್ ಪನೋರಮಿಕ್ ಸ್ಲೈಡಿಂಗ್ ಸನ್‌ರೂಫ್, ಬರ್ಮೆಸ್ಟರ್ ಸೌಂಡ್ ಸಿಸ್ಟಮ್, ವರ್ಚುವಲ್ ಹೆಲ್ಪರ್ ಮತ್ತು ಶಾಂಪೇನ್ ಬಾಟಲಿಗಳನ್ನು ಸಂಗ್ರಹಿಸಲು ಸಣ್ಣ ರೆಫ್ರಿಜರೇಟರ್ ಕೂಡ ಕಾರಿನಲ್ಲಿವೆ.
ಮರ್ಸಿಡಿಸ್ ಮೇಬ್ಯಾಕ್ GLS 600 AWD ಆಲ್ ವೀಲ್ ಡ್ರೈವ್ ತಂತ್ರಜ್ಞಾನ ಹೊಂದಿದೆ. ಅಬ್ಸಿಡಿಯನ್ ಕಪ್ಪು, ಪೋಲಾರ್ ವೈಟ್, ಕ್ಯಾವನ್‌ಸೈಟ್ ಬ್ಲೂ, ಡಿಸೈನೊ ಡೈಮಂಡ್ ವೈಟ್ ಬ್ರೈಟ್, ಮೊಜಾವೆ ಸಿಲ್ವರ್, ಡಿಸೈನೊ ಹಯಸಿಂತ್ ರೆಡ್ ಮತ್ತು ಸೆಲ್ನೈಟ್ ಗ್ರೇ ಮುಂತಾದ 14 ಆಕರ್ಷಕ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಇದು ಹಲವಾರು ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಇದರ ಜೊತೆಗೆ ನಮಗೆ ಬೇಕಾದ ರೀತಿ ಕಸ್ಟಮೈಸ್ ಮಾಡಿಸಿಕೊಳ್ಳಬಹುದು ಎಂಬ ಮಾಹಿತಿಯಿದೆ.

ನಟಿ ತಾಪ್ಸಿ ಪನ್ನು ಅವರಿಗೆ ಕಾರ್ ಕಲರಕ್ಷನ್ ಬಗ್ಗೆ ಹೆಚ್ಚು ಆಸಕ್ತಿಯಿದೆ. ಅವರ ಬಳಿ ಹೊಸ ಮರ್ಸಿಡಿಸ್ - ಮೇಬ್ಯಾಕ್ ಜಿಎಲ್‌ಎಸ್600 ಹೊರತಾಗಿ, ಈಗಾಗಲೇ ಮರ್ಸಿಡಿಸ್ ಬೆನ್ಜ್ ಜಿಎಲ್‌ಇ, ಜೀಪ್ ಕಂಪಾಸ್, ಬಿಎಂಡಬ್ಲ್ಯೂ 3 ಸೀರಿಸ್ ಮತ್ತು ಆಡಿ ಅ8ಎಲ್ ಸೇರಿದಂತೆ ಇತರ ಹಲವಾರು ಕಾರುಗಳಿವೆ.
ಈ ಐಷಾರಾಮಿ ಕಾರನ್ನು ಬಾಲಿವುಡ್ ನಟ ನಟಿಯರಾದ ಆಯುಷ್ಮಾನ್ ಖುರಾನಾ, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಕೃತಿ ಸನನ್, ಅಜಯ್ ದೇವಗನ್, ಆದಿತ್ಯ ರಾಯ್ ಕಪೂರ್, ಅರ್ಜುನ್ ಕಪೂರ್, ಶಿಲ್ಪಾ ಶೆಟ್ಟಿ ಮತ್ತು ತೆಲುಗು ಚಿತ್ರರಂಗದ ರಾಮ್ ಚರಣ್ ಸೇರಿದಂತೆ ಅನೇಕರು ಹೊಂದಿದ್ದು ಅವರ ಪಟ್ಟಿಗೆ ತಾಪ್ಸಿ ಸೇರಿದ್ದಾರೆ.
ತಾಪ್ಸಿ ಪನ್ನು ಮುಂದಿನ ಸಿನಿಮಾಗಳು
ನಟಿ ತಾಪ್ಸಿ ಪನ್ನು ಸಿನಿಮಾಗಳನ್ನು ನೋಡುವುದಾದರೆ ರಾಜ್‌ಕುಮಾರ್ ಹಿರಾನಿಯವರ 'ಡುಂಕಿ'ಯಲ್ಲಿ ನಟ ಶಾರುಖ್ ಖಾನ್ ಎದುರು ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಈ ಸಿನಿಮಾ 2023 ರ ಕ್ರಿಸ್‌ಮಸ್‌ಗೆ ಬಿಡುಗಡೆಯಾಗಲಿದೆ ಎಂದು ಚಿತ್ರತಂ ಹೇಳಿದೆ. ಇದರ ಜೊತೆಗೆ ಅವರ ಒಟಿಟಿಯಲ್ಲಿ ಹಿಟ್ ಆಗಿದ್ದ ಹಸೀನ್ ದಿಲ್ರುಬಾದ ಸೀಕ್ವೆಲ್ ಆಯಿ ಹಸೀನ್ ದಿಲ್ರುಬಾ ಸಿನಿಮಾ ಕೂಡ ಮುಂದಿನ ವರ್ಷ ತೆರೆಗೆ ಬರಲಿದೆ.


Click it and Unblock the Notifications









