ಸಲ್ಮಾನ್ ಖಾನ್ ಮನೆಯಲ್ಲಿ ಗಣೇಶೋತ್ಸವ: ಕತ್ರೀನಾ ಮಾಡಿದಳು ಯಡವಟ್ಟು

ಮುಂಬೈ, ಸೆಪ್ಟೆಂಬರ್ 14: ಅಭಿಮಾನಿಗಳ ಪ್ರೀತಿಯ ಭಾಯಿಜಾನ್ ಸಲ್ಮಾನ್ ಖಾನ್ ಮನೆಯಲ್ಲಿ ಭರ್ಜರಿಯಾಗಿ ಗಣೇಶೋತ್ಸವ ಆಚರಿಸಲಾಗಿದೆ. ಆದರೆ ಗಣೇಶೋತ್ಸವದಲ್ಲಿ ಭಾಗವಹಿಸಿದ್ದ ಕತ್ರೀನಾ ಕೈಫ್ ಒಂದು ಯಡವಟ್ಟು ಮಾಡಿ ಬಿಟ್ಟಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ಕಾರಣವಾಗಿದೆ.

ಸಲ್ಲು ಅವರ ಗ್ಯಾಲೆಕ್ಸಿ ನಿವಾಸದಲ್ಲಿ ಗಣೇಶೋತ್ಸವದಲ್ಲಿ ಭಾಗವಹಿಸಿದ್ದ ಕತ್ರೀನಾ ಕೈಫ್ ಗಣೇಶ ಮೂರ್ತಿಗೆ ಉಲ್ಟಾ ಆರತಿ ಮಾಡಿ ನೆಟ್ಟಿಗರ ಕೈಲಿ ಮಂಗಳಾರತಿ ಮಾಡಿಸಿಕೊಳ್ಳುತ್ತಿದ್ದಾರೆ. ಲಂಡನ್‌ನಲ್ಲಿ ಹುಟ್ಟಿ ಬೆಳೆದ ಬಾಲಿವುಡ್ ಬೆಡಗಿ ಕತ್ರೀನಾ ಈಗ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿ ಆಗಿದ್ದಾರೆ.

ಯಾವುದೇ ಧರ್ಮದ ಹಬ್ಬಗಳನ್ನಾದರೂ ಸಲ್ಮಾನ್ ಖಾನ್ ಮನೆಯಲ್ಲಿ ಭರ್ಜರಿಯಾಗಿ ಆಚರಿಸಲಾಗುತ್ತದೆ ಅದರಂತೆ ಈ ಬಾರಿ ಸಹ ಸಲ್ಲು ಭಾಯ್ ಅವರ ಮನೆಯಲ್ಲಿ ಗಣೇಶೋತ್ಸವ ಆಚರಿಸಲಾಯಿತು. ಸಲ್ಮಾನ್ ಖಾನ್, ಸಲ್ಮಾನ್ ಅವರ ತಾಯಿ, ಸಹೋದರಿ, ಸಹೋದರ ಅರ್ಬಾಜ್ ಖಾನ್, ಸೋಹೆಲ್ ಖಾನ್ ಮತ್ತು ಅವರ ಮಕ್ಕಳು ಗಣೇಶನಿಗೆ ಆರತಿ ಮಾಡಿ ಪೂಜೆ ಸಲ್ಲಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದೇ ವಿಡಿಯೋದಲ್ಲಿ ಕತ್ರಿನಾ ಕೈಫ್ ಆರತಿ ಮಾಡುತ್ತಿರುವ ವಿಡಿಯೋ ಸಹ ಇದ್ದು ಅದರಲ್ಲಿ ಅವರು ಎಡದಿಂದ ಬಲಕ್ಕೆ ಆರತಿ ಮಾಡುವ ಬದಲಿಗೆ ಬಲದಿಂದ ಎಡಕ್ಕೆ ಆರತಿ ಮಾಡಿದ್ದಾರೆ. ಟ್ರೋಲ್ ಮಾಡಲು ಕಾದು ಕುಳಿತಿದ್ದ ಟ್ರೋಲಿಗರಿಗೆ ಕತ್ರೀನಾ ಕಾಲು ಎಳೆಯಲು ಇಷ್ಟೆ ಸಾಕಾಗಿದೆ.

More from Filmibeat

English summary
Ganesha Festival celebrated in Salman Khan's home. Salman Khan brothers Sohail Khan, Arbaz Khan and Katrina Kaif also present in the celebrations. Katrina Kaif did arthi to Ganesh but in wrong way so she is getting trolled in social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X