twitter
    For Quick Alerts
    ALLOW NOTIFICATIONS  
    For Daily Alerts

    ಸಲ್ಮಾನ್ ಖಾನ್ ಮನೆಯಲ್ಲಿ ಗಣೇಶೋತ್ಸವ: ಕತ್ರೀನಾ ಮಾಡಿದಳು ಯಡವಟ್ಟು

    |

    ಮುಂಬೈ, ಸೆಪ್ಟೆಂಬರ್ 14: ಅಭಿಮಾನಿಗಳ ಪ್ರೀತಿಯ ಭಾಯಿಜಾನ್ ಸಲ್ಮಾನ್ ಖಾನ್ ಮನೆಯಲ್ಲಿ ಭರ್ಜರಿಯಾಗಿ ಗಣೇಶೋತ್ಸವ ಆಚರಿಸಲಾಗಿದೆ. ಆದರೆ ಗಣೇಶೋತ್ಸವದಲ್ಲಿ ಭಾಗವಹಿಸಿದ್ದ ಕತ್ರೀನಾ ಕೈಫ್ ಒಂದು ಯಡವಟ್ಟು ಮಾಡಿ ಬಿಟ್ಟಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ಕಾರಣವಾಗಿದೆ.

    ಸಲ್ಲು ಅವರ ಗ್ಯಾಲೆಕ್ಸಿ ನಿವಾಸದಲ್ಲಿ ಗಣೇಶೋತ್ಸವದಲ್ಲಿ ಭಾಗವಹಿಸಿದ್ದ ಕತ್ರೀನಾ ಕೈಫ್ ಗಣೇಶ ಮೂರ್ತಿಗೆ ಉಲ್ಟಾ ಆರತಿ ಮಾಡಿ ನೆಟ್ಟಿಗರ ಕೈಲಿ ಮಂಗಳಾರತಿ ಮಾಡಿಸಿಕೊಳ್ಳುತ್ತಿದ್ದಾರೆ. ಲಂಡನ್‌ನಲ್ಲಿ ಹುಟ್ಟಿ ಬೆಳೆದ ಬಾಲಿವುಡ್ ಬೆಡಗಿ ಕತ್ರೀನಾ ಈಗ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿ ಆಗಿದ್ದಾರೆ.

    ಸಲ್ಮಾನ್ ಜತೆ ನಿರೂಪಕಿಯಾಗಲು ನಾನು ಸಿದ್ಧ ಎಂದ ಕತ್ರೀನಾ, ಆದರೆ...ಸಲ್ಮಾನ್ ಜತೆ ನಿರೂಪಕಿಯಾಗಲು ನಾನು ಸಿದ್ಧ ಎಂದ ಕತ್ರೀನಾ, ಆದರೆ...

    ಯಾವುದೇ ಧರ್ಮದ ಹಬ್ಬಗಳನ್ನಾದರೂ ಸಲ್ಮಾನ್ ಖಾನ್ ಮನೆಯಲ್ಲಿ ಭರ್ಜರಿಯಾಗಿ ಆಚರಿಸಲಾಗುತ್ತದೆ ಅದರಂತೆ ಈ ಬಾರಿ ಸಹ ಸಲ್ಲು ಭಾಯ್ ಅವರ ಮನೆಯಲ್ಲಿ ಗಣೇಶೋತ್ಸವ ಆಚರಿಸಲಾಯಿತು. ಸಲ್ಮಾನ್ ಖಾನ್, ಸಲ್ಮಾನ್ ಅವರ ತಾಯಿ, ಸಹೋದರಿ, ಸಹೋದರ ಅರ್ಬಾಜ್ ಖಾನ್, ಸೋಹೆಲ್ ಖಾನ್ ಮತ್ತು ಅವರ ಮಕ್ಕಳು ಗಣೇಶನಿಗೆ ಆರತಿ ಮಾಡಿ ಪೂಜೆ ಸಲ್ಲಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ನವರಾತ್ರಿ ಸಂದರ್ಭದಲ್ಲಿ ಲವ್ ರಾತ್ರಿ, ಸಲ್ಮಾನ್ ಗೆ ಸಂಕಷ್ಟ ನವರಾತ್ರಿ ಸಂದರ್ಭದಲ್ಲಿ ಲವ್ ರಾತ್ರಿ, ಸಲ್ಮಾನ್ ಗೆ ಸಂಕಷ್ಟ

    ಇದೇ ವಿಡಿಯೋದಲ್ಲಿ ಕತ್ರಿನಾ ಕೈಫ್ ಆರತಿ ಮಾಡುತ್ತಿರುವ ವಿಡಿಯೋ ಸಹ ಇದ್ದು ಅದರಲ್ಲಿ ಅವರು ಎಡದಿಂದ ಬಲಕ್ಕೆ ಆರತಿ ಮಾಡುವ ಬದಲಿಗೆ ಬಲದಿಂದ ಎಡಕ್ಕೆ ಆರತಿ ಮಾಡಿದ್ದಾರೆ. ಟ್ರೋಲ್ ಮಾಡಲು ಕಾದು ಕುಳಿತಿದ್ದ ಟ್ರೋಲಿಗರಿಗೆ ಕತ್ರೀನಾ ಕಾಲು ಎಳೆಯಲು ಇಷ್ಟೆ ಸಾಕಾಗಿದೆ.

    English summary
    Ganesha Festival celebrated in Salman Khan's home. Salman Khan brothers Sohail Khan, Arbaz Khan and Katrina Kaif also present in the celebrations. Katrina Kaif did arthi to Ganesh but in wrong way so she is getting trolled in social media.
    Monday, August 26, 2019, 17:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X