ಗಂಗೂಬಾಯಿಯಾದ ಆಲಿಯಾ ಭಟ್: ಸೂಪರಾಗಿದೆ ಫಸ್ಟ್ ಲುಕ್
ನಟಿ ಆಲಿಯಾ ಭಟ್ ಮತ್ತೊಂದು ಸವಾಲಿನ ಪಾತ್ರಕ್ಕೆ ಸಿದ್ಧವಾಗಿದ್ದಾರೆ. ಅವರ ಮುಂದಿನ ಸಿನಿಮಾ 'ಗಂಗೂಬಾಯಿ ಕಾಥಿಯಾವಾಡಿ' ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಸಂಕ್ರಾಂತಿ ಹಬ್ಬದ ವಿಶೇಷವಾಗಿ ಇಂದು ಫಸ್ಟ್ ಲುಕ್ ಹೊರ ಬಂದಿದೆ. ಸಿನಿಮಾ ಪೋಸ್ಟರ್ ನಲ್ಲಿ ಆಲಿಯಾ ಲುಕ್ ಗಮನ ಸೆಳೆಯುತ್ತಿದೆ. ಒಂದು ಕಲರ್ ಫುಲ್, ಮತ್ತೊಂದು ಬ್ಲಾಕ್ ಅಂಡ್ ವೈಟ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಆಲಿಯಾ ಕಾಸ್ಟೂಮ್, ಮೇಕಪ್ ಎಲ್ಲವೂ ತುಂಬ ಚೆನ್ನಾಗಿದೆ.
'ಗಂಗೂಬಾಯಿ ಕಾಥಿಯಾವಾಡಿ' 'ಕ್ವೀನ್ಸ್ ಆಫ್ ಮುಂಬೈ' ಎಂಬ ಪುಸ್ತಕವನ್ನು ಆಧಾರಿತ ಕಥೆ ಹೊಂದಿದೆ. ಪತ್ರಕರ್ತ ಹುಸೇನ್ ಝೈದಿ ಈ ಪುಸ್ತಕವನ್ನು ಬರೆದಿದ್ದಾರೆ. 60ರ ದಶಕದಲ್ಲಿ ನಡೆಯುವ ಕಥೆ ಇದಾಗಿದೆ. 'ಕಾಮಾಟಿಪುರ ಮೇಡಂ' ಎಂದೇ ಬಿರುದು ಪಡೆದಿದ್ದ ಗಂಗೂಬಾಯಿ ಜೀವನ ಕುರಿತ ಸಿನಿಮಾವಿದು.

ಸಂಜಯ್ ಲೀಲಾ ಬನ್ಸಾಲಿ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. 'ಪದ್ಮಾವತಿ' ಬಳಿಕ ಬನ್ಸಾಲಿ 'ಇನ್ಯಾಅಲ್ಲಾಹ್' ಸಿನಿಮಾವನ್ನು ಶುರು ಮಾಡಿದ್ದರು. ಆದರೆ, ಕಾರಣಾಂತರಗಳಿಂದ ಆ ಸಿನಿಮಾ ತಡ ಆಗಿದ್ದು, ಅದಕ್ಕೂ ಮುಂಚೆಯೇ ಈ ಸಿನಿಮಾ ಬರುತ್ತಿದೆ.
ಸಪ್ಟೆಂಬರ್ 11, 2020ಕ್ಕೆ 'ಗಂಗೂಬಾಯಿ ಕಾಥಿಯಾವಾಡಿ' ಬಿಡುಗಡೆಯಾಗುತ್ತಿದೆ. ಮೊದಲ ಬಾರಿಗೆ ಬನ್ಸಾಲಿ ಸಿನಿಮಾದಲ್ಲಿ ಆಲಿಯಾ ನಟಿಸುತ್ತಿದ್ದು, ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.


Click it and Unblock the Notifications











