For Quick Alerts
  ALLOW NOTIFICATIONS  
  For Daily Alerts

  ಆರ್ಯನ್ ಖಾನ್ ಬಂಧನದ ಬಗ್ಗೆ ಮೌನ ಮುರಿದ ಗೌರಿ ಖಾನ್: ಕರಾಳ ಕ್ಷಣಗಳ ಬಗ್ಗೆ ಹೇಳಿದ್ದೇನು?

  |

  ಕಾಫಿ ವಿತ್ ಕರಣ್ ಸೀಸನ್ 7 ಬಾರೀ ಸಂಚಲನ ಸೃಷ್ಟಿಸುತ್ತಿದೆ. ಪ್ರತಿ ಎಪಿಸೋಡ್‌ನಲ್ಲೂ ಒಂದಲ್ಲ ಒಂದು ಹಲ್‌ಚಲ್ ಎಬ್ಬಿಸುವ ಸುದ್ದಿಗಳು ಸಂದರ್ಶನದಿಂದ ಹೊರಬರುತ್ತಲೇ ಇರುತ್ತೆ. ಈ ಬಾರಿ ಶಾರುಖ್ ಖಾನ್ ಪುತ್ರಿ ಹಾಗೂ ಮಹೀಪ್ ಕಪೂರ್ ಈ ಟಾಕ್‌ ಶೋಗೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು.

  ಕರಣ್‌ ಜೋಹರ್ ನಡೆಸಿಕೊಡುವ ಈ ಟಾಕ್ ಶೋ ಡಿಸ್ನಿ+ ಹಾಟ್ ಸ್ಟಾರ್‌ನಲ್ಲಿ ಬೇಜಾನ್ ಸೌಂಡ್ ಮಾಡುತ್ತಿದೆ. ಪುತ್ರ ಆರ್ಯನ್ ಡ್ರಗ್ ಕೇಸ್ ಬಳಿಕ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಪತ್ನಿ ಗೌರಿ ಖಾನ್ ಇದೇ ಮೊದಲ ಬಾರಿಗೆ ಶೋ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.

  ಕಳೆದ ವರ್ಷ ಪುತ್ರ ಆರ್ಯನ್ ಖಾನ್ ಅನ್ನು ಡ್ರಗ್ ಕೇಸ್‌ನಲ್ಲಿ ಬಂಧಿಸಿದ ದಿನದಿಂದ ತಂದೆ-ತಾಯಿ ಇಬ್ಬರೂ ಮೌನವಹಿಸಿದ್ದರು. ಶಾರುಖ್ ಖಾನ್ ಆಗಲಿ, ಗೌರಿ ಖಾನ್ ಆಗಲಿ ಇಬ್ಬರೂ ಮಗನ ಬಂಧನದ ಬಗ್ಗೆ ಮನ ಬಿಚ್ಚಿ ಎಲ್ಲೂ ಮಾತಾಡಿರಲಿಲ್ಲ. ಕಾಫಿ ವಿತ್ ಕರಣ್ ಟಾಕ್ ಶೋನಲ್ಲಿ ಗೌರಿ ಖಾನ್ ಇದೇ ಮೊದಲ ಬಾರಿಗೆ ಪುತ್ರ ಬಗ್ಗೆ ಬಗ್ಗೆ ಮಾತಾಡಿದ್ದಾರೆ. ಈ ಹೇಳಿಕೆಗಳು ಎಲ್ಲೆಡೆ ವೈರಲ್ ಆಗುತ್ತಿವೆ.

   ಕರಣ್ ಶೋನಲ್ಲಿ ಗೌರಿ ಖಾನ್

  ಕರಣ್ ಶೋನಲ್ಲಿ ಗೌರಿ ಖಾನ್

  ಬಾಲಿವುಡ್‌ ಕಿಂಗ್ ಖಾನ್ ಶಾರುಖ್ ಪತ್ನಿ ಗೌರಿ ಖಾನ್ ಕೆಲವು ದಿನಗಳಿಂದ ಹೆಚ್ಚಾಗಿ ಕ್ಯಾಮರಾ ಮುಂದೆ ಕಾಣಿಸಿಕೊಂಡಿರಲಿಲ್ಲ. ಆರ್ಯನ್ ಖಾನ್ ಬಂಧನದಿಂದ ನೊಂದಿದ್ದ ಗೌರಿ ಖಾನ್ ಸಂದರ್ಶನಗಳನ್ನೂ ನೀಡಿರಲಿಲ್ಲ. ಇಗ ಇದೇ ಮೊದಲ ಬಾರಿಗೆ 'ಕಾಫಿ ವಿತ್ ಕರಣ್ ಸೀಸನ್ 7'ನಲ್ಲಿ ಭಾಗಿಯಾಗಿದ್ದಾರೆ. ಈ ಅವಕಾಶವನ್ನು ಬಳಸಿಕೊಂಡ ಕರಣ್ ಜೋಹರ್, ಪುತ್ರನ ಬಂಧನದ ಬಗ್ಗೆ ಗೌರಿ ಖಾನ್ ಬಳಿ ಕೇಳಿದ್ದರು. ಕರಣ್ ಜೋಹರ್ ಕೇಳಿದ ಪ್ರಶ್ನೆಗೆ ಗೌರಿ ಖಾನ್ ಕೂಡ ಮನಬಿಚ್ಚಿ ಮಾತಾಡಿದ್ದಾರೆ.

   ಇದ್ದಕ್ಕಿಂತ ಕೆಟ್ಟದ್ದು ಏನಿಲ್ಲ

  ಇದ್ದಕ್ಕಿಂತ ಕೆಟ್ಟದ್ದು ಏನಿಲ್ಲ

  ಕಳೆದ ವರ್ಷ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ ಕೇಸ್‌ನಲ್ಲಿ ಬಂಧನವಾಗಿತ್ತು. ಇದು ಶಾರುಖ್ ಖಾನ್ ಹಾಗೂ ಗೌರಿ ಖಾನ್ ಬದುಕಿನ ಅತ್ಯಂತ ಕಠಿಣ ಕ್ಷಣಗಳು ಎಂದು ಗೌರಿ ಖಾನ್ ಶೋನಲ್ಲಿ ಹೇಳಿದ್ದಾರೆ. " ನಾವು ಇದಕ್ಕಿಂತ ಕೆಟ್ಟದನ್ನು ಅನುಭವಿಸಲು ಸಾಧ್ಯವೇ ಇಲ್ಲ. ನಾವು ಪ್ರತಿಯೊಬ್ಬರ ಪರವಾಗಿ ನಿಂತಿದ್ದೆವು. ಸದ್ಯ ನಾವೀಗ ಉತ್ತಮ ಹಂತದಲ್ಲಿ ಇದ್ದೇವೆ. ಅಲ್ಲದೆ ಕಷ್ಟದ ಸಮಯದಲ್ಲಿ ಸ್ನೇಹಿತರು, ಸಹೋದ್ಯೋಗಿಗಳು ಎಲ್ಲರೂ ಬೆಂಬಲಿಸಿದ್ದರು. ಅವರಿಗೆ ಅಬಾರಿಯಾಗಿದ್ದೇನೆ." ಎಂದು ಗೌರಿ ಖಾನ್ ಟಾಕ್ ಶೋನಲ್ಲಿ ಹೇಳಿದ್ದಾರೆ.

   ಡ್ರಗ್ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದ ಆರ್ಯನ್

  ಡ್ರಗ್ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದ ಆರ್ಯನ್

  ಕಳೆದ ವರ್ಷ ಅಕ್ಟೋಬರ್ 02ರಂದು ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅನ್ನು ಎನ್‌ಸಿಬಿ ಅಧಿಕಾರಿಗಳು ಡ್ರಗ್ ಕೇಸ್‌ ಮೇಲೆ ಬಂಧಿಸಿದ್ದರು. ಆರ್ಯನ್ ಜೊತೆ ಸ್ನೇಹಿತರಾದ ಅರ್ಬಾಜ್ ಮರ್ಚೆಂಟ್, ಮುನ್‌ಮುನ್ ಧಮೆಚಾ, ಕೂಡ ಡ್ರಗ್ ಕೇಸ್‌ನಲ್ಲಿ ಬಂಧಿಸಲಾಗಿತ್ತು. ಐಶಾರಾಮಿ ಕ್ರ್ಯೂಸ್‌ನಲ್ಲಿ ಶಾರುಖ್ ಪುತ್ರ ಆರ್ಯನ್ ಖಾನ್ ಸ್ನೇಹಿತರೊಂದಿಗೆ ಡ್ರಗ್ ಪಾರ್ಟಿ ಮಾಡುತ್ತಿದ್ದರು ಎಂಬ ಆರೋಪವನ್ನು ಎದುರಿಸಿದ್ದರು. ಕೇಸ ದಾಖಲಿಸಿದ ಬಳಿಕ ಜೈಲಿಗೂ ಕಳುಹಿಸಲಾಗಿತ್ತು.

   ಆರ್ಯನ್ ಖಾನ್ ಜಾಮೀನು

  ಆರ್ಯನ್ ಖಾನ್ ಜಾಮೀನು

  ಡ್ರಗ್ ಪಾರ್ಟಿ ಆರೋಪದ ಮೇಲೆ ಶಾರುಖ್ ಪುತ್ರ ಆರ್ಯನ್ ಖಾನ್‌ನನ್ನು ಜೈಲಿಗೆ ಕಳುಹಿಸಲಾಗಿತ್ತು. ಹೆಚ್ಚು ಕಡಿಮೆ ಒಂದು ತಿಂಗಳ ಕಾಲ ಜೈಲಿನಲ್ಲಿದ್ದ ಆರ್ಯನ್ ಜಾಮೀನಿಗಾಗಿ ಹೋರಾಟ ನಡೆದಿತ್ತು. ಮುಂಬೈನ ಪ್ರತಿಷ್ಠಿತ ವಕೀಲರು ಆರ್ಯನ್ ಪರವಾಗಿ ಹೋರಾಟ ಮಾಡಿದ್ದರು. ಸತೀಶ್ ಮಾನೆಶಿಂಧೆ, ಅಮಿತ್ ದೇಸಾಯಿ ಮತ್ತು ಮುಕುಲ್ ರೊಹ್ಟಗಿ ಜಾಮೀನಿಗಾಗಿ ವಾದ ಮಂಡಿಸಿದ್ದರು. ಕೊನೆಗೆ ಎನ್‌ಸಿಬಿ ಶಾರುಖ್ ಪುತ್ರನಿಗೆ ಕ್ಲೀನ್ ಚಿಟ್ ನೀಡಿದ್ದಾರೆ.

  English summary
  Gauri Khan Opens Up On Aryan Khan's Arrest In Drugs Case In Koffee With Karan 7, Know More.
  Thursday, September 22, 2022, 17:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X