For Quick Alerts
  ALLOW NOTIFICATIONS  
  For Daily Alerts

  ಮದುವೆ ಬಳಿಕ ನಟನೆಯಿಂದ ದೂರ ಸರಿದಿದ್ದೇಕೆ ಗೀತಾ ಬಸ್ರಾ; ಈ ಬಗ್ಗೆ ಹರ್ಭಜನ್ ಸಿಂಗ್ ಪತ್ನಿ ಹೇಳಿದ್ದೇನು?

  |

  ಮಾಜಿ ನಟಿ ಗೀತಾ ಬಸ್ರಾ ಮತ್ತು ಕ್ರಿಕೆಟಿಗ ಹರ್ಭಜನ್ ಸಿಂಗ್ ಸುಂದರ ಸೆಲೆಬ್ರಿಟಿ ಜೋಡಿಗಳಲ್ಲಿ ಒಂದು. ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾ ಮದುವೆಗೂ ಮುನ್ನ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದರು. ಆದರೆ ಹರ್ಭಜನ್ ಕೈ ಹಿಡಿಯುತ್ತಿದ್ದಂತೆ ನಟನೆಯಿಂದ ದೂರ ಸರಿಯುತ್ತಾರೆ.

  2016ರಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ ಗೀತಾ ಇದೀಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮೊದಲ ಮಗುವಿಗೆ ಹಿನಾಯಾ ಎಂದು ಹೆಸರಿಟ್ಟಿದ್ದಾರೆ. ಇತ್ತೀಚಿಗಷ್ಟೆ ಎರಡನೇ ಮಗುವಿನ ತಾಯಿ ಆಗುತ್ತಿರುವ ವಿಚಾರವನ್ನು ಗೀತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

  ಎರಡನೇ ಮಗುವಿನ ನಿರೀಕ್ಷೆಯಲ್ಲಿ ಗೀತಾ ಬಸ್ರಾ-ಹರ್ಭಜನ್ ಸಿಂಗ್ ದಂಪತಿಎರಡನೇ ಮಗುವಿನ ನಿರೀಕ್ಷೆಯಲ್ಲಿ ಗೀತಾ ಬಸ್ರಾ-ಹರ್ಭಜನ್ ಸಿಂಗ್ ದಂಪತಿ

  ಮದುವೆ ನಂತರ ನಟನೆಯಿಂದ ದೂರ ಸರಿದ ಬಗ್ಗೆ ಗೀತಾ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. ಕೆಲಸಕ್ಕೆ ಹೋಗಬೇಕು ಎನಿಸಿದಾಗ ಹೋಗಲು ಸಿದ್ಧವಿರುವುದಾಗಿ ಹೇಳಿದ್ದಾರೆ. 'ನಾನು ಕೆಲಸ ಮಾಡುವ ಅಮ್ಮನೊಂದಿಗೆ ಬೆಳೆದವಳು. ಕುಟುಂಬವನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ನಾವು ಇಂದು ಏನಾಗಿದ್ದೇವೋ ಅದು ಅಮ್ಮನಿಂದ. ಹಾಗಾಗಿ ನಾನು ಅವರನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳುತ್ತೇನೆ.' ಎಂದಿದ್ದಾರೆ.

  'ನನ್ನ ಜೀವನದಲ್ಲಿ ತಾಯಿಯಾಗಿರುವುದು ನಾನು ಹೊಂದಿದ ಅತ್ಯಂತ ಅರ್ಥಪೂರ್ಣವಾದ ಜೀವನ. ನಾನು ನನ್ನ ಮಗಳು ಹಿನಾಯಾ ಜೊತೆಗಿರುವ ಪ್ರತಿಯೊಂದು ಕ್ಷಣವನ್ನು ಪ್ರೀತಿಸುತ್ತೇನೆ. ಇದು ನನ್ನ ವೈಯಕ್ತಿಕ ಆಯ್ಕೆ. ನಾನು ಕೆಲಸ ಮಾಡಲು ಬಯಸಿಲ್ಲ. ನಾನು ತಾಯ್ತನವನ್ನು ತುಂಬಾ ಆನಂದಿಸುತ್ತಿದ್ದೀನಿ. ಸಮಯ ಬಂದಾಗ ನಾನು ಖಂಡಿತ ಕೆಲಸಕ್ಕೆ ಹೋಗುತ್ತೇನೆ' ಎಂದಿದ್ದಾರೆ.

  'ಲಾಕ್ ಡೌನ್ ನಲ್ಲಿ ಒಟ್ಟಿಗೆ ಕಳೆದ ಸಮಯದಷ್ಟು ನಾವು ಯಾವತ್ತು ಒಟ್ಟಿಗೆ ಕಳೆದಿರಲಿಲ್ಲ. ಈಗ ನನ್ನ ಸ್ನೇಹಿತರು ತಮಾಷೆ ಮಾಡುತ್ತಾರೆ, ಈಗ ನೀವು ಮದುವೆ ಆದ ದಂಪತಿಗಳಾಗಿ ಬದುಕುತ್ತಿದ್ದೀರ ಎಂದು' ಎಂದಿದ್ದಾರೆ.

  ಮರ ಕಡಿದು ಹೆಲಿ ಟೂರಿಸಂ ಮಾಡೋ ಸರ್ಕಾರದ ಯೋಜನೆಗೆ ದುನಿಯಾ ವಿಜಯ್ ಆಕ್ಷೇಪ | Filmibeat Kannada

  ಹರ್ಭಜನ್ ಮತ್ತು ಗೀತಾ 2015 ಅಕ್ಟೋಬರ್ 29ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 5 ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಈ ಜೋಡಿ ಬಳಿಕ ಪತಿ-ಪತ್ನಿಯರಾಗಿದ್ದಾರೆ. ಗೀತಾ ಮತ್ತು ಹರ್ಭಜನ್ ಸಿಂಗ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಜುಲೈನಲ್ಲಿ ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ.

  English summary
  Former Actress Geeta Basra reveals about her decision to not return to work after marrying cricketer Harbhajan Singh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X