ಲವರ್ ಅನ್ಸಾರಿ ಜತೆ ವಿವಾಹವಾಗಿ ಮತಾಂತರ ಹೊಂದಿದ ಅಶ್ಲೀಲ ವಿಡಿಯೊ ದೂರಿನಲ್ಲಿ ಆರೋಪಿಯಾಗಿದ್ದ ನಟಿ ವಂದನಾ!
ಸುದ್ದಿಯಲ್ಲಿದ್ದಾರೆ. ಹೌದು, ಈ ನಟಿ ತನ್ನ ಪ್ರಿಯಕರ ಫೈಜಾನ್ ಅನ್ಸಾರಿ ಜತೆ ವಿವಾಹವಾಗಿರುವುದು ಸದ್ಯ ವೈರಲ್ ಆಗಿದೆ.
ನಟಿ ಗೆಹಾನಾ ವಸಿಷ್ಟ್ ನಿಜವಾದ ಹೆಸರು ವಂದನಾ ತಿವಾರಿ. ಮೂಲತಃ ಛತ್ತೀಸ್ ಗಢದ ಈಕೆ ಹಿಂದಿ ಹಾಗೂ ತೆಲುಗು ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ನಟಿಯಾಗಿ ಕಡಿಮೆ ಚಿತ್ರಗಳಲ್ಲಿ ನಟಿಸಿರುವ ಗೆಹಾನಾ ವಸಿಷ್ಟ್ ಐಟಂ ಡಾನ್ಸರ್ ಆಗಿಯೇ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಚಿತ್ರಗಳ ಜತೆಗೆ ಧಾರಾವಾಹಿ ಹಾಗೂ ಜಾಹೀರಾತುಗಳಲ್ಲಿಯೂ ಈ ನಟಿ ನಟಿಸಿದ್ದಾರೆ. ಕಳೆದ ವರ್ಷ ಅತಿಯಾಗಿ ಸದ್ದು ಮಾಡಿದ್ದ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅಶ್ಲೀಲ ಚಿತ್ರಗಳ ವಿವಾದದಲ್ಲಿ ಈ ನಟಿಯ ಹೆಸರೂ ಸಹ ತಳುಕು ಹಾಕಿಕೊಂಡಿತ್ತು.
ಹೌದು, ರಾಜ್ ಕುಂದ್ರಾ ಅಶ್ಲೀಲ ವಿಡಿಯೊಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಹಲವರನ್ನು ಬಂಧಿಸಲಾಗಿತ್ತು. ಅದರಲ್ಲಿ ಈ ನಟಿ ಕೂಡ ಆರೋಪಿಯಾಗಿದ್ದರು. ಬಳಿಕ ಜಾಮೀನನ್ನು ಸಹ ಪಡೆದುಕೊಂಡಿದ್ದರು.
ಹೀಗೆ ಅಶ್ಲೀಲ ವಿಡಿಯೊ ಆರೋಪಕ್ಕೆ ಒಳಗಾಗಿದ್ದ ನಟಿ ಈಗ ಮದುವೆಯಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವುದರ ಮೂಲಕ ಮತ್ತೊಮ್ಮೆ ವಿವಾದಕ್ಕೆ ಒಳಗಾಗಿದ್ದಾರೆ. ತಮ್ಮ ಬಹು ದಿನಗಳ ಗೆಳೆಯ ಫೈಜಾನ್ ಅನ್ಸಾರಿ ಜತೆ ಮುಸ್ಲಿಂ ಸಂಪ್ರದಾಯದಲ್ಲಿಯೇ ವಿವಾಹವಾಗಿರುವ ಗೆಹ್ಲಾನಾ ವಸಿಷ್ಟ್ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿರುವುದಕ್ಕೂ ವಿವಾಹಕ್ಕೂ ಯಾವುದೇ ಸಂಬಂಧವಿಲ್ಲ ಎಂದ ಹೇಳಲಾಗುತ್ತಿದೆ.
ಗೆಹಾನಾ ವಸಿಷ್ಟ್ ತಮ್ಮ ಸ್ವಂತ ನಿರ್ಧಾರದಿಂದ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದ್ದಾರೆ ಎಂದು ಮಾಹಿತಿಗಳು ಹರಿದಾಡುತ್ತಿವೆ. ಸದ್ಯ ಗೆಹಾನಾ ವಸಿಷ್ಟ್ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿ ಕೆಲಸ ಮಾಡುತ್ತಿದ್ದು, ವೆಬ್ ಸರಣಿಗಳಲ್ಲಿಯೂ ಸಹ ನಟಿಸಿದ್ದಾರೆ. ಈಕೆ ನಟನೆಯ 'ಗಂಧಿ ಬಾತ್ 3' ಎಂಬ ವೆಬ್ ಸರಣಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.
ಇನ್ನು ಅಶ್ಲೀಲ ವಿಡಿಯೊ ಕೇಸ್‌ನಲ್ಲಿ ಆರೋಪಿಯಾಗಿದ್ದ ಗೆಹಾನಾ ವಸಿಷ್ಟ್ ಜಾಮೀನು ಪಡೆದ ನಂತರ ಹೊರಬಂದು ರಾಜ್ ಕುಂದ್ರಾ ಬಂಧವನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಿದ್ದಳು. ನಾನು ನಟಿಸಿರುವುದು ಬೋಲ್ಡ್ ದೃಶ್ಯದಲ್ಲಿಯೇ ಹೊರತು ಅಶ್ಲೀಲ ಚಿತ್ರದಲ್ಲಲ್ಲ ಎಂದು ವಾದ ಮಾಡಿದ್ದಳು.
ಅಲ್ಲದೇ ಇನ್ಸ್ಟಾಗ್ರಾಮ್‌ನಲ್ಲಿ ಬಟ್ಟೆ ಧರಿಸದೇ ಲೈವ್ ಬಂದಿದ್ದ ನಟಿ ಗೆಹಾನಾ ವಸಿಷ್ಟ್ ನಾನು ಈಗ ಬಟ್ಟೆ ಧರಿಸದೇ ಲೈವ್ ಬಂದಿದ್ದೇನೆ, ಇದನ್ನೂ ಸಹ ಅಶ್ಲೀಲ ಅಂತ ಯಾಕೆ ಕರೆಯುವುದಿಲ್ಲ, ಇದು ಕೇವಲ ಬೋಲ್ಡ್ ಲುಕ್ ಅಷ್ಟೇ ಎಂದು ತಾನು ಮಾಡಿದ್ದ ಪಾತ್ರವನ್ನು ವಹಿಸಿಕೊಂಡಿದ್ದಳು.


Click it and Unblock the Notifications











