For Quick Alerts
  ALLOW NOTIFICATIONS  
  For Daily Alerts

  ರಾಜ್ ಕುಂದ್ರಾ ಕೇಸ್: ಮಾಡೆಲ್ ಗೆಹನಾ ವಸಿಸ್ತ್‌ಗೆ ರಿಲೀಫ್ ನೀಡಿದ ಸುಪ್ರೀಂ

  |

  ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ಬಂಧನ ಕೇಸ್‌ಗೆ ಸಂಬಂಧಿಸಿದಂತೆ ಮಾಡೆಲ್ ಗೆಹನಾ ವಸಿಸ್ತ್‌ಗೆ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದರು. ಈ ಕೇಸ್ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಆದರೆ, ನಟಿಗೆ ಈ ಕೇಸ್‌ನಲ್ಲಿ ಬಂಧನದ ಭೀತಿ ಉಂಟಾಯಿತು. ಹಾಗಾಗಿ, ಪೊಲೀಸರ ವಿಚಾರಣೆಗೆ ಹೋಗುವುದಕ್ಕೂ ಮುಂಚೆ ನ್ಯಾಯಾಲಯಕ್ಕೆ ಹೋಗಿ ನಿರೀಕ್ಷಣಾ ಜಾಮೀನು ಅರ್ಜಿಗೆ ಹಾಕಿದರು. ಆದರೆ, ಮುಂಬೈ ಸೆಷನ್ಸ್ ನ್ಯಾಯಾಲಯ ಹಾಗೂ ಹೈ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಸಿಕ್ಕಿಲ್ಲ.

  ತದನಂತರ ಸುಪ್ರೀಂಕೋರ್ಟ್‌ಗೆ ಮೆಟ್ಟಿಲೇರಿದ್ದ ನಟಿ ಗೆಹನಾಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ರಾಜ್ ಕುಂದ್ರಾ ಕೇಸ್‌ನಲ್ಲಿ ಗೆಹನಾಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ವಿಚಾರಣೆ ವೇಳೆ ನಟಿಯನ್ನು ಬಂಧಿಸುವಂತಿಲ್ಲ ಎಂದು ಕೋರ್ಟ್ ಸೂಚಿಸಿದ್ದು, ಗೆಹನಾ ಈಗ ವಿಚಾರಣೆಗೆ ಹೋಗುತ್ತಿದ್ದಾರೆ. ಮುಂದೆ ಓದಿ...

  ವಿಚಾರಣೆಗೆ ಹಾಜರಾಗುತ್ತಿದ್ದೇನೆ

  ವಿಚಾರಣೆಗೆ ಹಾಜರಾಗುತ್ತಿದ್ದೇನೆ

  ಈ ಸಂಬಂಧ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ, ''ಗೌರವಾನ್ವಿತ ಭಾರತದ ಸರ್ವೋಚ್ಚ ನ್ಯಾಯಾಲಯ ನನಗೆ ಮಧ್ಯಂತರ ಜಾಮೀನು ನೀಡಿದ್ದು, ತನಿಖಾ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಲು ಕೆಲವು ಷರತ್ತು ವಿಧಿಸಿದೆ. ಈ ಹಿನ್ನೆಲೆ ನಾನು ಸೆಪ್ಟೆಂಬರ್ 23 ರಂದು ಬೆಳಿಗ್ಗೆ 11 ಗಂಟೆಗೆ ಬೈಕುಲ್ಲಾದ ತನಿಖಾ ಸಂಸ್ಥೆ ಮುಂದೆ ಹಾಜರಾಗುತ್ತಿದ್ದೇನೆ." ಎಂದು ಪೋಸ್ಟ್ ಹಾಕಿದ್ದಾರೆ.

  ರಾಜ್ ಕುಂದ್ರಾ ಬಂಧನ ಕೇಸ್: ಇಡಿ ಎಂಟ್ರಿ, ನಟಿ ಗೆಹನಾಗೆ ಸಮನ್ಸ್ರಾಜ್ ಕುಂದ್ರಾ ಬಂಧನ ಕೇಸ್: ಇಡಿ ಎಂಟ್ರಿ, ನಟಿ ಗೆಹನಾಗೆ ಸಮನ್ಸ್

  ನಾನು ಯಾವುದೇ ತಪ್ಪು ಮಾಡಿಲ್ಲ

  ನಾನು ಯಾವುದೇ ತಪ್ಪು ಮಾಡಿಲ್ಲ

  ಮಧ್ಯಂತರ ಜಾಮೀನು ಪಡೆದ ನಂತರ ಖಾಸಗಿ ವೆಬ್‌ಸೈಟ್‌ವೊಂದರ ಜೊತೆ ಮಾತನಾಡಿದ ಗೆಹಾನಾ ''ತಾನು ಯಾವಾಗಲೂ ಸತ್ಯವನ್ನೇ ಮಾತನಾಡುತ್ತಿದ್ದೇನೆ. ಯಾರನ್ನೂ ದಾರಿ ತಪ್ಪಿಸಿಲ್ಲ ಅಥವಾ ಯಾವುದೇ ವಂಚನೆ ಮಾಡಿಲ್ಲ'' ಎಂದು ಹೇಳಿದರು. ಈ ಟೈಮ್ಸ್‌ಗೆ ಪ್ರತಿಕ್ರಿಯೆ ನೀಡಿರುವ ನಟಿ, ''ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು ಸಿಕ್ಕಿರುವುದು ಸಂತಸ ತಂದಿದೆ. ದಯವಿಟ್ಟು ನನ್ನನ್ನು ನಂಬಿರಿ, ನಾನು ಯಾರನ್ನೂ ದಾರಿ ತಪ್ಪಿಸಿಲ್ಲ, ನಾನು ಮೋಸ ಮಾಡಿಲ್ಲ. ನಾನು ಯಾವಾಗಲೂ ಸರಿಯಾಗಿದ್ದೇನೆ ಮತ್ತು ನನಗೆ ಸರಿ ಎನಿಸಿದ್ದನ್ನು ಮಾಡಿದ್ದೇನೆ, ಅದಕ್ಕಾಗಿಯೇ ನನಗೆ ಒಳ್ಳೆಯದಾಗುತ್ತಿದೆ'' ಎಂದಿದ್ದಾರೆ.

  ಗೆಹನಾ ಬಂಧನ ಆಗಿತ್ತು

  ಗೆಹನಾ ಬಂಧನ ಆಗಿತ್ತು

  ಅಂದ್ಹಾಗೆ, ನಟಿ ಗೆಹನಾ ವಿರುದ್ಧ ಅದಾಗಲೇ ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದೆ. ಕಳೆದ ಫೆಬ್ರವರಿಯಲ್ಲಿ ದೂರು ದಾಖಲಾಗಿತ್ತು. ಆಗ ಬಂಧನ ಸಹ ಅಗಿತ್ತು. ಸುಮಾರು ಐದು ತಿಂಗಳು ಜೈಲಿನಲ್ಲಿ ಗೆಹನಾ ಸಮಯ ಕಳೆದಿದ್ದರು. ಆ ಬಗ್ಗೆ ಮಾತನಾಡಿದ್ದ ನಟಿ "ನಾನು ಮಾಡದ ಅಪರಾಧಕ್ಕೆ ಅಮೂಲ್ಯವಾದ ಐದು ತಿಂಗಳು ಜೈಲಿನಲ್ಲಿ ಕಳೆದೆ. ನನ್ನ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ನನ್ನ ಮೊಬೈಲ್, ಲ್ಯಾಪ್ ಟ್ಯಾಪ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ನನ್ನ ಜೀವನವನ್ನು ನರಕಕ್ಕೆ ತಳ್ಳಲಾಗಿದೆ. ನಾನು ಜೈಲಿನಿಂದ ಹೊರಬಂದ ಬಳಿಕ ನನ್ನ ಬಳಿ ಹಣವಿರಲಿಲ್ಲ. ನಾನು ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದೇನೆ. ನಾನು ಆಸ್ಪತ್ರೆಗೂ ದಾಖಲಾಗಿದ್ದೆ" ಎಂದು ತನ್ನ ಅಳಲು ತೋಡಿಕೊಂಡಿದ್ದರು.

  ಅವರು ಯಾವತ್ತೂ ನನಗೆ ಬಲವಂತ ಮಾಡಿಲ್ಲ: ರಾಜ್ ಕುಂದ್ರ ಪರನಿಂತ ಗೆಹನಾಅವರು ಯಾವತ್ತೂ ನನಗೆ ಬಲವಂತ ಮಾಡಿಲ್ಲ: ರಾಜ್ ಕುಂದ್ರ ಪರನಿಂತ ಗೆಹನಾ

  ರಾಜ್ ಕುಂದ್ರಾ ಬೆಂಬಲಕ್ಕೆ ನಿಂತಿದ್ದ ಗೆಹನಾ

  ರಾಜ್ ಕುಂದ್ರಾ ಬೆಂಬಲಕ್ಕೆ ನಿಂತಿದ್ದ ಗೆಹನಾ

  ಇನ್ನು ರಾಜ್ ಕುಂದ್ರಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಗೆಹನಾ, ''ಬೋಲ್ಡ್ ಮತ್ತು ಎರೋಟಿಕಾ ಸಿನಿಮಾಗಳನ್ನು ಪೋರ್ನ್ ಸಿನಿಮಾಗಳಿಗೆ ಹೋಲಿಸಬೇಡಿ. ರಾಜ್ ಕುಂದ್ರಾ ಮತ್ತು ನನ್ನನ್ನು ಒಂದೇ ಪ್ರಕರಣದಲ್ಲಿ ಬಂಧಿಸಲಾಗಿದೆ. ಒಂದೇ ತನಿಖೆ ನಡೆಯುತ್ತಿದೆ. ರಾಜ್ ಕುಂದ್ರಾ ಕಂಪೆನಿಯಲ್ಲಿ ಏನು ಮಾಡುತ್ತಾರೆ ಎನ್ನುವುದು ನನಗೆ ಗೊತ್ತಿದೆ. ರಾಜ್ ಕುಂದ್ರಾ ನಿರ್ಮಿಸಿದ ಆಪ್ ಗಳಲ್ಲಿ ಮೂರು ಚಿತ್ರಗಳಲ್ಲಿ ನಾನು ನಟಿಸಿದ್ದೇನೆ. ಅವರು ಎಂದಿಗೂ ನನಗೆ ಇದನ್ನೆ ಮಾಡಿ ಎಂದು ಒತ್ತಾಯ ಮಾಡಿಲ್ಲ. ನಾನು ಮಾಡಿದ ಕೆಲಸದ ಪ್ರಕಾರ ನನಗೆ ಸಂಬಳ ನೀಡಲಾಗಿದೆ" ಎಂದು ಹೇಳಿದ್ದಾರೆ.

  English summary
  Bollywood actress Gehana Vasisth gets interim bail by SC in alleged porn film case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X