ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಅಪ್ ಲೋಡ್ ಮಾಡುತ್ತಿದ್ದ ಖ್ಯಾತ ರೂಪದರ್ಶಿ ಮತ್ತು ನಟಿ ಗೆಹನಾ ಅರೆಸ್ಟ್

ಅಶ್ಲೀಲ ವಿಡಿಯೋ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತಿದ್ದ ಆರೋಪದ ಮೇಲೆ ಖ್ಯಾತ ನಟಿ ಮತ್ತು ರೂಪದರ್ಶಿ ಗೆಹನಾ ವಸಿಷ್ಠ ಅವರನ್ನು ಮುಂಬೈ ಕ್ರೈಂ ಬ್ರಾಂಚ್ ಪೋಲೀಸರು ಬಂಧಿಸಿದ್ದಾರೆ. ಆಕೆಯ ಜೊತೆ ಇನ್ನು ಅನೇಕ ರೂಪದರ್ಶಿಯರು ಸೇರಿಕೊಂಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

ಗೆಹನಾ ವಿಚಾರಣೆ ನಡೆಸಿದ ಪೊಲೀಸರು, ಇದುವರೆಗೂ ಸುಮಾರು 87ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ, ತನ್ನ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ಅಲ್ಲದೆ ಆಕೆಯ ವೆಬ್ ಸೈಟ್ ಗೆ ಚಂದಾದಾರಲಾಗಲು 2000 ರೂ. ಪಾವತಿಸಬೇಕು ಎನ್ನುವ ಮಾಹಿತಿಯನ್ನು ಮುಂಬೈ ಪೊಲೀಸರು ಬಹಿರಂಗ ಪಡಿಸಿದ್ದಾರೆ.

ಬಂಧಿತರಲ್ಲಿ ವಯಸ್ಕ ಸಿನಿಮಾ ನಿರ್ದೇಶನ ಮಾಡುತ್ತಿದ್ದ ನಿರ್ದೇಶಕ, ನಿರ್ಮಾಪಕ ಮತ್ತು ಗ್ರಾಫಿಕ್ಸ್ ಡಿಸೈನರ್, ಕ್ಯಾಮರಾ ಮ್ಯಾನ್ ಸೇರಿದಂತೆ ಇಡೀ ತಂಡವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಅವರ ಬ್ಯಾಂಕ್ ಖಾತೆಯನ್ನು ಸೀಸ್ ಮಾಡಿದ್ದಾರೆ.

Gehana vasisth has been arrested by Mumbai police for alleged role in porn video racket

ಗೆಹನಾ ಮತ್ತು ಆಕೆಯ ಗ್ಯಾಂಗ್ ಅಶ್ಲೀಲ ದೃಶ್ಯಗಳಲ್ಲಿ ನಟಿಸುವಂತೆ ಒತ್ತಾಯ ಮಾಡುತ್ತಿದ್ದರು ಎಂದು ಬಂಧಿತರಲ್ಲಿ ಮೂವರು ದೂರು ನೀಡಿದ್ದಾರೆ. ರಕ್ಷಿಸಿದ ಸಂತ್ರಸ್ತೆಯರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಗೆಹನಾ ಮಿಸ್ ಏಷ್ಯಾ ಬಿಕಿನಿ ಕಿರಿಟವನ್ನು ಗೆದ್ದುಕೊಂಡಿದ್ದಾರೆ. ಅನೇಕ ಜಾಹೀರಾತು ಗಳಲ್ಲಿಯೂ ಮಿಂಚಿದ್ದಾರೆ. ಹಿಂದಿ ಮತ್ತು ತೆಲುಗು ಸಿನಿಮಾರಂಗದಲ್ಲೂ ಗೆಹನಾ ಗುರುತಿಸಿಕೊಂಡಿದ್ದಾರೆ. ವಯಸ್ಕ ವೆಬ್ ಸೀರಿಸ್ ನಲ್ಲೂ ಗೆಹನಾ ನಟಿಸಿದ್ದಾರೆ. ತನ್ನದೇ ಆದ ಮೊಬೈಲ್ ಅಪ್ಲಿಕೇಶನ್ ಹೊಂದಿರುವ ಗೆಹನಾ ಆಗಾಗ ಅಶ್ಲೀಲ ವಿಡಿಯೋಗಳನ್ನು ಹರಿಬಿಡುತ್ತಿರುತ್ತಾರೆ.

Recommended Video

ಸಲಾರ್ ಗೆ ಎಂಟ್ರಿ ಕೊಟ್ಟ ಕನ್ನಡದ ಸ್ಟಾರ್ ವಿಲನ್ | Filmibeat Kannada

More from Filmibeat

English summary
Famous Model and Actress Gehana vasisth has been arrested by Mumbai police for alleged role in porn video racket.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X