For Quick Alerts
  ALLOW NOTIFICATIONS  
  For Daily Alerts

  ಭಾರತ ಗೆದ್ರೆ ಬೆತ್ತಲಾಗು ಅಂತಾ ಕುಂದ್ರಾ ಹೇಳಿದ್ರಾ?: ಪೂನಂ ವಿರುದ್ಧ ಗೆಹನಾ ಗರಂ

  |

  ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಪೂನಂ ಪಾಂಡೆ ವಿರುದ್ಧ ಖ್ಯಾತ ಮಾಡೆಲ್ ಗೆಹನಾ ವಸಿಸ್ತ್ ಸಿಡಿದೆದ್ದಿದ್ದಾರೆ. 'ಈ ಕೇಸ್‌ನಲ್ಲಿ ರಾಜ್ ಕುಂದ್ರಾ ಮಾಸ್ಟರ್‌ಮೈಂಡ್, ಎಲ್ಲದಕ್ಕೂ ಶಿಲ್ಪಾ ಶೆಟ್ಟಿ ಪತಿಯೇ ಕಾರಣ' ಎಂದು ಪೂನಂ ದೂರಿದ್ದರು.

  ಇದಕ್ಕೆ ತಿರುಗೇಟು ಕೊಟ್ಟಿರುವ ಗೆಹನಾ, ''ರಾಜ್ ಕುಂದ್ರಾ ಸಂಸ್ಥೆ ಸ್ಥಾಪಿಸುವುದಕ್ಕೂ ಮೊದಲೇ ಪೂನಂ ಪಾಂಡೆ ಇಂತಹ ವಿಡಿಯೋಗಳಲ್ಲಿ ನಟಿಸಿದ್ದರು. 2011ರಲ್ಲಿ ಭಾರತ ಗೆದ್ದರೆ ಬೆತ್ತಲಾಗು ಅಂತಾ ಕುಂದ್ರಾ ಹೇಳಿದ್ರಾ ನಿನಗೆ?'' ಎಂದು ಗೆಹನಾ ಪ್ರಶ್ನಿಸಿದ್ದಾರೆ. ಇದೇ ಪ್ರಕರಣದಲ್ಲಿ ಗೆಹನಾ ಸಹ ಐದು ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದರು. ಜೈಲಿನಿಂದ ಹೊರಬಂದ ಬಳಿಕ ಬಹಳ ಕಷ್ಟ ಅನುಭವಿಸಿದೆ ಎಂದು ಹೇಳಿಕೊಂಡಿದ್ದರು. ಮುಂದೆ ಓದಿ...

  ಭಾರತ ಗೆದ್ದರೆ ಬೆತ್ತಲಾಗುತ್ತೇನೆ ಎಂದಿದ್ದು ಪೂನಂ

  ಭಾರತ ಗೆದ್ದರೆ ಬೆತ್ತಲಾಗುತ್ತೇನೆ ಎಂದಿದ್ದು ಪೂನಂ

  ಈ ಕೇಸ್‌ ಬಗ್ಗೆ ಹಿಂದೂಸ್ತಾನ್ ಟೈಮ್ಸ್‌ಗೆ ಮಾತನಾಡಿರುವ ಗೆಹನಾ, ''ರಾಜ್ ಕುಂದ್ರಾ ತನ್ನ ಸಂಸ್ಥೆ ಪ್ರಾರಂಭಿಸುವುದಕ್ಕೂ ಮೊದಲೇ ಪೂನಂ ಪಾಂಡೆ ಅಂತಹ ವಿಡಿಯೋಗಳಲ್ಲಿ ನಟಿಸಿದ್ದಾರೆ. ಆದರೆ, ಅಶ್ಲೀಲ ಜಗತ್ತಿಗೆ ನನ್ನನ್ನು ಕುಂದ್ರಾ ತಳ್ಳಿದರು ಎಂದು ಹೇಳಿದ್ರೆ ಜನರು ನಂಬಲು ಸಾಧ್ಯವೇ? 2011ರಲ್ಲಿ ಭಾರತ ಗೆದ್ದರೆ ಬೆತ್ತಲಾಗುತ್ತೇನೆ ಎಂದು ಹೇಳಿದ್ದಳು. ಆಗಿನ್ನು ಕುಂದ್ರಾ ಕಂಪನಿ ಶುರು ಮಾಡಲೇ ಇರಲಿಲ್ಲ.'' ಎಂದು ತಿರುಗೇಟು ಕೊಟ್ಟಿದ್ದಾರೆ.

  ಅವರು ಯಾವತ್ತೂ ನನಗೆ ಬಲವಂತ ಮಾಡಿಲ್ಲ: ರಾಜ್ ಕುಂದ್ರ ಪರನಿಂತ ಗೆಹನಾಅವರು ಯಾವತ್ತೂ ನನಗೆ ಬಲವಂತ ಮಾಡಿಲ್ಲ: ರಾಜ್ ಕುಂದ್ರ ಪರನಿಂತ ಗೆಹನಾ

  ಗಂಡನ ಜೊತೆಯಲ್ಲಿ ಎಂಎಂಎಸ್ ಮಾಡ್ತಾಳೆ

  ಗಂಡನ ಜೊತೆಯಲ್ಲಿ ಎಂಎಂಎಸ್ ಮಾಡ್ತಾಳೆ

  ''ಈಗ ಪೂನಂ ಪಾಂಡೆ, ರಾಜ್ ಕುಂದ್ರಾ ಜೊತೆಯಲ್ಲಿಲ್ಲ. ಪತಿ ಜೊತೆಯಲ್ಲಿದ್ದಾಳೆ, ಈಗಲೂ ಪತಿ ಜೊತೆ ಎಂಎಂಎಸ್ ವಿಡಿಯೋ ಮಾಡ್ತಾಳೆ. ಇದನ್ನೆಲ್ಲಾ ಕುಂದ್ರಾ ಮಾಡಲು ಹೇಳಿದ್ರಾ? ಒಬ್ಬ ಮನುಷ್ಯ ಸಿಲುಕಿಕೊಂಡಿದ್ದಾನೆ ಅಂದ್ರೆ ಎಲ್ಲರೂ ಪರಿಸ್ಥಿತಿ ಲಾಭ ಪಡೆಯಲು ಪ್ರಯತ್ನಿಸುತ್ತಾರೆ'' ಎಂದು ಗೆಹನಾ ವಸಿಸ್ತ್ ಟೀಕಿಸಿದ್ದಾರೆ.

  ಫೆಬ್ರವರಿಯಲ್ಲಿ ಬಂಧನವಾಗಿದ್ದ ಗೆಹನಾ

  ಫೆಬ್ರವರಿಯಲ್ಲಿ ಬಂಧನವಾಗಿದ್ದ ಗೆಹನಾ

  ಫೆಬ್ರವರಿಯಲ್ಲಿ ಮಾಡೆಲ್ ಗೆಹನಾ ಅವರನ್ನು ಇದೇ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಐದು ತಿಂಗಳ ಕಾಲ ಜೈಲಿನಲ್ಲೇ ಕಳೆದಿದ್ದರು. ಈ ಬಗ್ಗೆ ಮಾತನಾಡಿದ್ದ ಗೆಹನಾ "ನಾನು ಮಾಡದ ಅಪರಾಧಕ್ಕೆ ಅಮೂಲ್ಯವಾದ ಐದು ತಿಂಗಳು ಜೈಲಿನಲ್ಲಿ ಕಳೆದೆ. ನನ್ನ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ನನ್ನ ಮೊಬೈಲ್, ಲ್ಯಾಪ್ ಟ್ಯಾಪ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ನನ್ನ ಜೀವನವನ್ನು ನರಕಕ್ಕೆ ತಳ್ಳಲಾಗಿದೆ. ನಾನು ಜೈಲಿನಿಂದ ಹೊರಬಂದ ಬಳಿಕ ನನ್ನ ಬಳಿ ಹಣವಿರಲಿಲ್ಲ. ನಾನು ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದೇನೆ. ನಾನು ಆಸ್ಪತ್ರೆಗೂ ದಾಖಲಾಗಿದ್ದೆ" ಎಂದು ಅಳಲು ತೋಡಿಕೊಂಡಿದ್ದರು.

  ರಾಜ್‌ಕುಂದ್ರಾ ವಿರುದ್ಧ ಆಘಾತಕಾರಿ ವಿಷಯಗಳನ್ನು ಬಿಚ್ಚಿಟ್ಟ ಪೂನಂ ಪಾಂಡೆರಾಜ್‌ಕುಂದ್ರಾ ವಿರುದ್ಧ ಆಘಾತಕಾರಿ ವಿಷಯಗಳನ್ನು ಬಿಚ್ಚಿಟ್ಟ ಪೂನಂ ಪಾಂಡೆ

  ಶಿಲ್ಪಾ ಶೆಟ್ಟಿ ಪತಿ ವಿರುದ್ಧ ಆಘಾತಕಾರಿ ವಿಷಯಗಳನ್ನು ಬಿಚ್ಚಿಟ್ಟ ಪೂನಂ ಪಾಂಡೆ
  ಬೆದರಿಕೆ ಹಾಕಿ ಸಹಿ ಹಾಕಿಸಿಕೊಂಡಿದ್ದರು

  ಬೆದರಿಕೆ ಹಾಕಿ ಸಹಿ ಹಾಕಿಸಿಕೊಂಡಿದ್ದರು

  ''ಕುಂದ್ರಾ ಮತ್ತು ಸಹಚರರು ನನ್ನನ್ನು ಬೆದರಿಸಿ ಒಪ್ಪಂದಕ್ಕೆ ಸಹಿ ಮಾಡಿಸಿಕೊಂಡಿದ್ದರು. ಅವರು ಹೇಳಿದಂತೆ ಚಿತ್ರೀಕರಣ ಮಾಡಬೇಕಿತ್ತು. ಫೋಸ್ ಕೊಡಬೇಕಿತ್ತು. ಇಲ್ಲವಾದಲ್ಲಿ ನನ್ನ ಖಾಸಗಿ ಸಂಗತಿಗಳನ್ನು ಸೋರಿಕೆ ಮಾಡುವುದಾಗಿ ಹೇಳುತ್ತಿದ್ದರು. ನಾನು ಅವರ ಒಪ್ಪಂದಿಂದ ಹಿಂದಕ್ಕೆ ಸರಿದಾಗ ನನ್ನ ಖಾಸಗಿ ಸಂದೇಶಗಳನ್ನು ಲೀಕ್ ಮಾಡಿದರು. 'ಕಾಲ್ ಮಾಡಿ, ನಿಮಗಾಗಿ ನಾನು ನಗ್ನವಾಗಲು ಸಿದ್ದ' ಅಂತಹ ಸಂಭಾಷಣೆಗಳೊಂದಿಗೆ ವೈಯಕ್ತಿಕ ನಂಬರ್ ಸೋರಿಕೆ ಮಾಡಿದರು'' ಎಂದು ಪೂನಂ ಪಾಂಡೆ ಶಿಲ್ಪಾ ಶೆಟ್ಟಿ ಪತಿ ವಿರುದ್ಧ ಆರೋಪಿಸಿದ್ದರು.

  English summary
  Raj Kundra's Case: Actress Gehana Vasisth lashes out at Poonam Pandey for her allegation.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X