Genelia D’souza: ಮದುವೆ ಬಳಿಕ ಜೆನಿಲಿಯಾ ಸಿನಿಮಾದಿಂದ ದೂರ ಉಳಿಯೋಕೆ ಏನು ಕಾರಣ?

By ಫಿಲ್ಮಿಬೀಟ್ ಡೆಸ್ಕ್

ಒಂದು ಕಾಲದಲ್ಲಿ ಜೆನಿಲಿಯಾ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡಿದ್ದವು. ಯಾರಾದರೂ ಲವ್ ಸ್ಟೋರಿ ಸಿನಿಮಾ ಮಾಡಬೇಕು ಅಂತ ನಿರ್ಧರಿಸಿದ್ದರೆ, ಆ ಸಿನಿಮಾದಲ್ಲಿ ನಟಿಸುವಂತೆ ಜೆನಿಲಿಯಾಗೆ ಒಂದು ಆಫರ್ ಹೋಗುತ್ತಿತ್ತು. ಆ ಮಟ್ಟಿಗೆ ದಕ್ಷಿಣ ಭಾರತದಲ್ಲಿ ಕ್ರೇಜ್ ಹುಟ್ಟು ಹಾಕಿದ್ದ ನಟಿ.

ಜೆನಿಲಿಯಾ ತೆಲುಗು ಸಿನಿಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಸಿದ್ಧಾರ್ಥ್ ಜೊತೆ ನಟಿಸಿದ 'ಬೊಮ್ಮರಿಲ್ಲೂ' ಇಂದಿಗೂ ಅದೆಷ್ಟೋ ಸಿನಿಮಾ ಮಂದಿಯ ಫೇವರಿಟ್. ತೆಲುಗು ಜೊತೆ ಜೊತೆಗೆ ತಮಿಳು ಹಾಗೂ ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ.

Actress Genelia D’souza

ಇಷ್ಟೊಂದು ಜನಪ್ರಿಯತೆ ಪಡೆದ ನಟಿ ಮದುವೆ ಬಳಿಕ ಸಿನಿಮಾದಿಂದ ದೂರವೇ ಉಳಿದು ಬಿಟ್ಟರು. 2012ರಲ್ಲಿ ಜೆನಿಲಿಯಾ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದಿವಂಗತ ವಿಲಾಸ್ ರಾವ್ ದೇಶ್‌ಮುಖ್ ಅವರ ಪುತ್ರ ಹಾಗೂ ಬಾಲಿವುಡ್ ನಟ ರಿತೇಶ್ ದೇಶ್‌ಮುಖ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಮದುವೆ ಬಳಿಕ ನಾಯಕಿಯರು ಸಿನಿಮಾದಿಂದ ದೂರ ಉಳಿಯುತ್ತಾರೆ ಅನ್ನೋ ಆರೋಪವಿದೆ. ಇಂತಹ ಆರೋಪಗಳ ಪಟ್ಟಿಯಲ್ಲಿ ಜೆನಿಲಿಯಾ ಡಿಸೋಜಾ ಕೂಡ ಸೇರಿಕೊಂಡರು. 2012ರಿಂದ ಜೆನಿಲಿಯಾ ಡಿಸೋಜಾ ಸಿನಿಮಾಗಳಲ್ಲಿ ನಟಿಸಿದ್ದು ತೀರಾ ವಿರಳ. ಆದ್ರೀಗ ಮತ್ತೆ ಸಿನಿಮಾಗಳ ಕಡೆಗೆ ಮುಖ ಮಾಡಿದ್ದಾರೆ.

Actress Genelia D’souza

ಈ ಸಂದರ್ಭದಲ್ಲಿ ಜೆನಿಲಿಯಾಗೆ ಸಿನಿಮಾದಿಂದ ದೂರ ಉಳಿದಿದ್ದಕ್ಕೆ ಕಾರಣ ಪತಿಯೇ ಎಂದು ಪ್ರಶ್ನೆ ಮಾಡಿದ್ದರು. ರಿತೇಶ್ ದೇಶ್‌ಮುಖ ಅವರಿಂದಾಗಿಯೇ ಸಿನಿಮಾದಿಂದ ದೂರ ಉಳಿದಿದ್ದರು ಎಂದು ಕೆಲವರು ಟೀಕೆ ಕೂಡ ಮಾಡಿದ್ದರು. ಅದಕ್ಕೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಉತ್ತರ ಕೊಟ್ಟಿದ್ದಾರೆ.

ಜೆನಿಲಿಯಾಗೆ ಮದುವೆ ಬಳಿಕ ಸಿನಿಮಾದಿಂದ ದೂರು ಉಳಿಯುವುದಕ್ಕೆ ನಿರ್ಧರಿಸಿದ್ದರು. ಅದಕ್ಕೆ ಕಾರಣವಿದೆ. ಮದುವೆ ಬಳಿಕ ಪತಿ, ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಬೇಕು ಎಂದು ನಿರ್ಧರಿಸಿದ್ದರು. ಅಲ್ಲದೆ, ಸಿನಿಮಾಗಳೂ ಅವರಿಗೆ ಇಷ್ಟ ಆಗುತ್ತಿರಲಿಲ್ಲ. ಈ ಕಾರಣಕ್ಕೆ ಸಿನಿಮಾಗಳಿಂದ ದೂರ ಉಳಿದಿದ್ದರೇ ವಿನ: ಪತಿ ಒತ್ತಾಯಕ್ಕೆ ಅಲ್ಲ ಅನ್ನೋದನ್ನು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

ಜೆನಿಲಿಯಾ ಸುಮಾರು 11 ವರ್ಷಗಳ ಬಳಿಕ ಮತ್ತೆ ಸಿನಿಮಾರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಇತ್ತೀಚೆಗಷ್ಟೇ ಜಿಯೋ ಸಿನಿಮಾಗಾಗಿ 'ಟ್ರೈಯಲ್ ಪಿರಿಯಡ್' ಅನ್ನೋ ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೆ ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಅಭಿನಯದ 'ಜೂನಿಯರ್' ಸಿನಿಮಾದಲ್ಲಿ ನಟಿಸುವ ಮೂಲಕ ದಕ್ಷಿಣ ಭಾರತದ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ಜೆನಿಲಿಯಾ ಕೇವಲ ತೆಲುಗು, ತಮಿಳಿನಲ್ಲಿ ಅಷ್ಟೇ ಅಲ್ಲ. ಕನ್ನಡದ 'ಸತ್ಯ ಇನ್ ಲವ್' ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ಗೆ ನಾಯಕಿಯಾಗಿದ್ದರು. ಈ ಸಿನಿಮಾ ಮೂಲಕ ಕನ್ನಡಿಗರಿಗೂ ಹತ್ತಿರವಾಗಿದ್ದರು. ಮತ್ತೆ 'ಜೂನಿಯರ್' ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

More from Filmibeat

English summary
Genelia D’souza quit acting after marriage what was the main reason
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X