For Quick Alerts
  ALLOW NOTIFICATIONS  
  For Daily Alerts

  ಸತ್ಯ ಇನ್ ಲವ್ ಬೆಡಗಿ ಜೆನಿಲಿಯಾಗೆ ಗಂಡುಮಗು

  By Rajendra
  |

  ಕನ್ನಡದ 'ಸತ್ಯ ಇನ್ ಲವ್' ಚಿತ್ರದಲ್ಲಿ "ಲವ್ಲಿ, ಲವ್ಲಿ, ಲವ್ಲಿ ಸಖತ್ತು ಫೇರ್ ಅಂಡ್ ಲವ್ಲಿ..." ಎಂದು ಕುಣಿದಿದ್ದ ಬೆಡಗಿ ಜೆನಿಲಿಯಾ ಡಿಸೋಜಾ ಅಮ್ಮನಾಗಿದ್ದಾರೆ. ಈ ಬಗ್ಗೆ ಅವರ ಪತಿ ರಿತೇಶ್ ದೇಶ್ ಮುಖ್ ಟ್ವೀಟಿಸಿದ್ದು, 'It's a BBBOOOOYYYYYY!!!!!!!!' ಎಂದಿದ್ದಾರೆ.

  ಚೊಚ್ಚಲ ಮಗುಗಿನ ಸಂಭ್ರಮದಲ್ಲಿ ಈ ತಾರಾದಂಪತಿಗಳು ತೇಲಾಡುತ್ತಿದ್ದಾರೆ. ಮಂಗಳವಾರ (ನ.25) ಜೆನಿಲಿಯಾ ಅವರು ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಈ ಮೂಲಕ ರಿತೇಶ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. [ಕಂದನ ನಿರೀಕ್ಷೆಯಲ್ಲಿ ಚೊಚ್ಚಲ ಗರ್ಭಿಣಿ ಜೆನಿಲಿಯಾ]

  2003ರಿಂದ ರಿತೇಶ್ ಮತ್ತು ಜೆನಿಲಿಯಾ ಪ್ರೇಮಿಸಿಕೊಳ್ಳುತ್ತಿದ್ದರು. 2012ರಲ್ಲಿ ಮದುವೆಯಾಗುವ ಮೂಲಕ ಇವರಿಬ್ಬರ ಪ್ರೇಮ ಸಂಬಂಧಕ್ಕೆ ಅಧಿಕೃತ ಮುದ್ರೆ ಬಿದ್ದಿತ್ತು. ಬಾಲಿವುಡ್ ನ ಕ್ಯೂಟ್ ದಂಪತಿಗಳೆಂದೇ ಕರೆಸಿಕೊಂಡಿದ್ದಾರೆ.

  ಇತ್ತೀಚೆಗೆ ಸಲ್ಮಾನ್ ಖಾನ್ ತಂಗಿ ಅರ್ಪಿತಾ ಅವರ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಜೆನಿಲಿಯಾ ಹಾಗೂ ರಿತೇಶ್ ಕಾಣಿಸಿಕೊಂಡಿದ್ದರು. ಅಭಿಷೇಕ್ ಬಚ್ಚನ್ ಸೇರಿದಂತೆ ಕರಣ್ ಜೋಹರ್, ಲಾರಾ ದತ್ತ, ಬಿಪಾಶಾ ಬಸು ಅವರು ಜೆನಿಲಿಯಾ ಹಾಗೂ ರಿತೇಶ್ ಅವರಿಗೆ ಶುಭಕೋರಿದ್ದಾರೆ.

  ಜೆನಿಲಿಯಾ ಐದು ಭಾಷೆಗಳಲ್ಲಿ ಮಿಂಚಿ ಪಡ್ಡೆಗಳ ಕಣ್ಣು ಕುಕ್ಕಿದವರು. ಬಾಲಿವುಡ್, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಚಿತ್ರರಂಗಗಳಲ್ಲಿ ಒಂದು ಸುತ್ತು ಹಾಕಿಕೊಂಡು ಬಂದವರು. ಈಗ ಚೊಚ್ಚಲ ತಾಯ್ತನದ ಸುಖವನ್ನು ಅನುಭವಿಸುತ್ತಿದ್ದಾರೆ. (ಏಜೆನ್ಸೀಸ್)

  English summary
  Riteish Deshmukh and his wife Genelia D'Souza welcomed a baby boy on November 25. The happy father tweeted: 'It's a BBBOOOOYYYYYY!!!!!!!!'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X