ತುಂಡು ತುಂಡಾಗಿ ಕತ್ತರಿಸುತ್ತೇನೆ, ಜೀವಂತವಾಗಿ ಸುಡುತ್ತೇನೆ- ನಟಿಗೆ ಪ್ರಾಣ ಬೆದರಿಕೆ ಹಾಕಿದ ಆಗುಂತಕ..!

ಫೇಸ್ ಬುಕ್, ಇನ್ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕರು ಕಳೆದು ಹೋಗಿದ್ದಾರೆ. ಇದೇ ಹೊತ್ತಿನಲ್ಲಿ ಇಲ್ಲಿ ವಿಕೃತಿಗಳೂ ಹೆಚ್ಚಿಕೊಂಡಿವೆ. ಇಂಥವುಗಳಿಂದ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದು ಮಾತ್ರ ಹೆಣ್ಣುಮಕ್ಕಳು, ಮಹಿಳೆಯರು.

ಹೆಸರೇ ಗೊತ್ತಾಗದಂತೆ ಹೆಂಗಳೆಯರಿಗೆ ಅಶ್ಲೀಲವಾದ, ಕೆಟಾತಿಕೆಟ್ಟ ಸಂದೇಶಗಳನ್ನು ಕಳಿಸೋದು, ಕಿರುಕುಳ ಕೊಡುವುದನ್ನೇ ವೃತ್ತಿಯನ್ನಾಗಿಸಿ ಸಾಕಷ್ಟು ಸ್ತ್ರೀಯರ ಬಾಳಿಗೆ ಅನೇಕರು ಕಗ್ಗಂಟಾಗಿದ್ದಾರೆ. ಇಂತಹ ಸಾಕಷ್ಟು ಪ್ರಕರಣಗಳು ಈಗೀಗ ಹೆಚ್ಚು ಬೆಳಕಿಗೆ ಬರುತ್ತಿದ್ದು, ಸೈಬರ್ ಪೊಲೀಸರು ಸರಿಯಾಗಿಯೇ ಅಂತಹವರಿಗೆ ಬಿಸಿ ಮುಟ್ಟಿಸುವ ಕಾಯಕದಲ್ಲಿಯೂ ನಿರತರಾಗಿದ್ದಾರೆ. ಈ ಮಧ್ಯೆ ಪೊಲೀಸರು ಹಂಗೆ ತಿರುಗಿ ಹಿಂಗೆ ತಿರುಗುವಷ್ಟರಲ್ಲಿ ಪೊಲೀಸರ ಕಣ್ಣಿಗೂ ಮಣ್ಣೆರಚಿ ಅಲ್ಲಿಂದಿಲ್ಲೊಂದು ಪ್ರಕರಣಗಳು ನಡೆದುಹೋಗುತ್ತದೆ. ಇದಕ್ಕೆ ಏಜೆಂಲ್ ರಾಯ್ ಅವರ ಪ್ರಕರಣ ಮತ್ತೊಂದು ಉದಾಹರಣೆ.

Ghotala Actress Angel Rai Files Police Report After Receiving Death Threats

ಹೌದು, ಏಂಜೆಲ್ ರಾಯ್.. ಸೋಶಿಯಲ್ ಮೀಡಿಯಾ ಇನ್ ಫ್ಲೂಯೆನ್ಸರ್. ಇನ್‌ಸ್ಟಾಗ್ರಾಮ್‌ನಲ್ಲಿ 25.5 ಮಿಲಿಯುನ್ ಫಾಲೋವರ್ಸ್‌ಗಳನ್ನು ಹೊಂದಿರುವ ಚೆಲುವೆ. ಯೂಟ್ಯೂಬ್‌ನಲ್ಲಿ ಇವರನ್ನು 7.77 ಮಿಲಿಯನ್ ಜನ ಇಷ್ಟ ಪಡುತ್ತಾರೆ. ಘೋಟಾಲಾ ಎಂಬ ವೆಬ್ ಸರಣಿಯಲ್ಲಿ ಕೂಡ ಏಂಜೆಲ್ ಅಭಿನಯಿಸಿದ್ದಾರೆ. ಇನ್ನೇನು ಪ್ರಸಾರವಾಗಲಿರುವ ಈ ವೆಬ್ ಸರಣಿಯ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಇನ್ನು ಅನೇಕ ಹಿಂದಿ ಆಲ್ಬಂ ಹಾಡುಗಳಲ್ಲಿ ಕೂಡ ಏಂಜೆಲ್ ರಾಯ್ ಸೊಂಟ ಬಳುಕಿಸಿದ್ದಾರೆ.

ಇಂಥಾ ಏಂಜೆಲ್ ರಾಯ್‌ ಈಗ ಬಂಗೂರ್ ನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ನನಗೆ ಪ್ರಾಣ ಬೆದರಿಕೆ ಇದೆ ಎಂದು ಹೇಳಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾಮಿಕ ವ್ಯಕ್ತಿಯಿಂದ ನನಗೆ ಇಮೇಲ್ ಮೂಲಕ ಬೆದರಿಕೆಯ ಸಂದೇಶಗಳು ಬರುತ್ತಿವೆ ಎಂದು ಹೇಳಿರುವ ಏಂಜೆಲ್ ಮೊದಲಿಂದ ಕೂಡ ಈ ತರಹದ ಬೆದರಿಕೆಗಳು ನನಗೆ ಬರುತ್ತಿದ್ದವು ಆದರೆ ಮೊನ್ನೆ ಘೋಟಾಲಾ ಚಿತ್ರದ ಟ್ರೇಲರ್ ಬಿಡುಗಡೆಯಾದ ನಂತರ ಹೆಚ್ಚೆಚ್ಚು ಸಂದೇಶಗಳು ಬರುತ್ತಿವೆ ಎಂದು ಹೇಳಿದ್ದಾರೆ.

ಜೀವಂತವಾಗಿ ನಿನ್ನನ್ನು ಸುಡುತ್ತೇನೆ, ತುಂಡು ತುಂಡುಗಳಾಗಿ ಕತ್ತರಿಸುತ್ತೇನೆ ಎಂದು ಅಪರಿಚಿತ ವ್ಯಕ್ತಿ ನಿರಂತರವಾಗಿ ನನಗೆ ಇಮೇಲ್‌ಗಳನ್ನು ಮಾಡುತ್ತಿದ್ದು ನನ್ನ ಇನ್‌ಸ್ಟಾಗ್ರಾಮ್ ಖಾತೆಗೆ ಬಂದು ಅಲ್ಲಿಯೂ ಕೂಡ ಅಶ್ಲೀಲ ಸಂದೇಶಗಳನ್ನು ಕಳಿಸುತ್ತಿದ್ದಾನೆ ಎಂದು ಏಂಜೆಲ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 2023ರ ಅಗಸ್ಟ್ ಮತ್ತು 2024ರ ಮಾರ್ಚ್‌ನಲ್ಲಿ ಕೂಡ ನನಗೆ ಈ ತರಹದ ಬೆದರಿಕೆಗಳು ಬಂದಿದ್ದವು ಆಗ ನಾನು ಕೆಲ ಅಕೌಂಟ್‌ಗಳನ್ನು ಬ್ಲಾಕ್ ಮಾಡಿದ್ದೆ ಎಂದಿರುವ ಏಂಜೆಲ್ ಬೇರೆ ಬೇರೆ ಖಾತೆಗಳಿಂದ ಈಗ ಮತ್ತೆ ಸಂದೇಶವನ್ನು ಕಳಿಸಲಾಗುತ್ತಿದೆ ಹೀಗಾಗಿ ಈ ಬಾರಿ ದೂರು ದಾಖಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಸದ್ಯ ಏಂಜೆಲ್ ರಾಯ್ ನೀಡಿದ ದೂರಿನ ಅನ್ವಯ ಪೊಲೀಸರು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 75, 78, 79, 351(3), 352, 356(2) ಮತ್ತು ಐಟಿ ಕಾಯ್ದೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿಗಾಗಿ ಬಲೆ ಬೀಸಿದ್ದಾರೆ.ಇನ್ನು ಇದೆಲ್ಲದರ ನಡುವೆ ತಮ್ಮ ಘೋಟಾಲಾ ಚಿತ್ರದ ಪ್ರಚಾರಕ್ಕಾಗಿ ಏಂಜೆಲ್ ರಾಯ್ ಸುಖಾ ಸುಮ್ಮನೆ ಪ್ರಾಣ ಬೆದರಿಕೆಯ ನಾಟಕವನ್ನು ಮಾಡುತ್ತಿದ್ದಾರೆ ಈ ಮೂಲಕ ಪ್ರಚಾರವನ್ನು ಪಡೆಯುತ್ತಿದ್ದಾರೆ ಎನ್ನುವ ಅಭಿಪ್ರಾಯವನ್ನು ಕೂಡ ಮುಂಬೈನಲ್ಲಿ ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ನಿಜಕ್ಕೂ ಏಂಜೆಲ್‌ಗೆ ಪ್ರಾಣ ಬೆದರಿಕೆ ಸಂದೇಶಗಳು ಬಂದಿವೆಯಾ ? ಕೊಲ್ಲುವ ಬೆದರಿಕೆ ಹಾಕಿರುವ ಆ ವ್ಯಕ್ತಿ ಯಾರು ? ಎನ್ನುವುದು ಪೊಲೀಸರ ತನಿಖೆಯ ನಂತರವೇ ಗೊತ್ತಾಗಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X