»   » ಅಬ್ಬಬ್ಬಾ.! ಕಿರುತೆರೆ ನಟಿ ನಿಯಾ ಅವರದ್ದು ಇದೆಂತಹ ಅವತಾರ

ಅಬ್ಬಬ್ಬಾ.! ಕಿರುತೆರೆ ನಟಿ ನಿಯಾ ಅವರದ್ದು ಇದೆಂತಹ ಅವತಾರ

By ಸೋನು ಗೌಡ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಹಿಂದಿ ವಾಹಿನಿ ಜೀ ಟಿ.ವಿ ವಾಹಿನಿಯಲ್ಲಿ ಪ್ರಸಾರವಾಗುವ 'ಜಮೈ ರಾಜಾ' ಧಾರಾವಾಹಿಯ ರೋಶನಿ ಪಾತ್ರಧಾರಿ ಹಿಂದಿ ಕಿರುತೆರೆ ನಟಿ ನಿಯಾ ಶರ್ಮಾ ಅವರು ಇತ್ತೀಚೆಗೆ ನಡೆದ 'ಗೋಲ್ಡ್ ಆವಾರ್ಡ್ಸ್ 2016' ಅದ್ದೂರಿ ಸಮಾರಂಭದಲ್ಲಿ ಎಲ್ಲರ ಕಣ್ಣಿಗೆ ಆಹಾರವಾಗಿದ್ದು, ಮಾತ್ರವಲ್ಲದೇ ಎಲ್ಲರೂ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.

  ಕಿರುತೆರೆ ನಟ-ನಟಿಯರಿಗೆ ನೀಡುವ ಪ್ರಶಸ್ತಿ ಸಮಾರಂಭವಾದ 'ಗೋಲ್ಡ್ ಆವಾರ್ಡ್ಸ್' ನಲ್ಲಿ ನಟಿ ನಿಯಾ ಶರ್ಮಾ ಅವರು ಹಾಕಿಕೊಂಡು ಬಂದಿದ್ದ ಮೆಟಾಲಿಕ್ ಕಫ್ತಾನ್ ಸ್ಟೈಲಿಷ್ ಗೌನ್ ನಿಂದಾಗಿ ಭಾರಿ ಸುದ್ದಿಯಾಗಿದ್ದಾರೆ.[ಕಾನ್ ಸಿನಿಮೋತ್ಸವದಲ್ಲಿ ಮಾಡೆಲ್ ಬೆಲ್ಲಾಳ ಗೌನ್ ತಂದಿತ್ತ ಫಜೀತಿ]

  ಗೌನ್ ಗೆ ತಕ್ಕಂತೆ ಮ್ಯಾಚಿಂಗ್ ಆಗುವ ಸಿಲ್ವರ್ ಕಲರ್ ಹೈ ಹೀಲ್ಸ್ ಹಾಕಿಕೊಂಡು ಬಂದಿದ್ದ ನಿಯಾ ಶರ್ಮಾ ಅವರು ಬರೀ ಹೆಸರಿಗೆ ಮಾತ್ರ ಗೌನ್ ಧರಿಸಿ ಬಂದಿದ್ದರು. ಯಾಕೆಂದರೆ ಆ ಗೌನ್ ನಲ್ಲಿ ನಿಯಾ ಅವರ ಬೆನ್ನಿನ ಜೊತೆಗೆ ಕೆಲ ಭಾಗಗಳು ಕೂಡ ಪ್ರದರ್ಶನಗೊಂಡಿತ್ತು. ಒಟ್ನಲ್ಲಿ ಇಡೀ ಆವಾರ್ಡ್ ಫಂಕ್ಷನ್ ನಲ್ಲಿ ಎಲ್ಲರ ದೃಷ್ಟಿ ನಿಯಾ ಅವರ ಮೇಲಿತ್ತು ಅಂದ್ರೆ ತಪ್ಪಾಗ್ಲಿಕ್ಕಿಲ್ಲ.

  ಜೂನ್ 9 ರಂದು ಮುಂಬೈ ನಲ್ಲಿ ನಡೆದ '9ನೇ ಜೀ ಟಿ.ವಿ ಬೋರೊಪ್ಲಸ್ ಗೋಲ್ಡ್ ಆವಾರ್ಡ್ಸ್ 2016' ಪ್ರಶಸ್ತಿ ಸಮಾರಂಭದಲ್ಲಿ ನಟಿ ರೋಶನಿ ಅಲಿಯಾಸ್ ನಿಯಾ ಶರ್ಮಾ ತಮ್ಮ ಡ್ರೆಸ್ಸ್ ಮೂಲಕ ಇಡೀ ಧಾರಾವಾಹಿ ಲೋಕದಲ್ಲಿ ಸಂಚಲನ ಸೃಷ್ಟಿ ಮಾಡಿದ್ದಾರೆ.

  ಇಲ್ಲಿಯವರೆಗೆ ಯಾವುದೇ ಸಾರ್ವಜನಿಕ ಸಮಾರಂಭಕ್ಕೂ ಇಷ್ಟು ಹಾಟ್ ಅಂಡ್ ಸೆಕ್ಸಿ ಡ್ರೆಸ್ಸ್ ಧರಿಸದ ನಟಿ ನಿಯಾ ಶರ್ಮಾ ಅವರು ಈ ಬಾರಿ ಮಾತ್ರ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

  ಅಂದಹಾಗೆ ಈ ವಿಶೇಷ ಉಡುಪನ್ನು ಡಿಸೈನ್ ಮಾಡಿದ್ದು, ನಿಯಾ ಶರ್ಮಾ ಅವರ ಪರ್ಸನಲ್ ಕಾಸ್ಟ್ಯೂಮ್ ಡಿಸೈನರ್ ಶಾಹೀದ್ ಅಮೀರ್ ಅವರಂತೆ. ಖುದ್ದು ಶಾಹೀದ್ ಅಮೀರ್ ಅವರೇ ನಿಂತು ಡಿಸೈನ್ ಮಾಡಿರುವ ಈ ಉಡುಪನ್ನು ಹಾಕಿ ನಿಯಾ ಅವರು ಫುಲ್ ಖುಷ್ ಆಗಿದ್ದಾರೆ.

  'ಈ ಡ್ರೆಸ್ಸ್ ನಲ್ಲಿ ನಾನು ಎಷ್ಟು ಹಾಟ್ ಆಗಿ ಮತ್ತು ಎಷ್ಟು ಕೆಟ್ಟದಾಗಿ ಕಾಣಿಸುತ್ತೀನೋ ನನಗಂತೂ ಗೊತ್ತಿಲ್ಲ. ಆದರೆ ನಾನಂತೂ ಈ ಬಟ್ಟೆಯಲ್ಲಿ ತುಂಬಾನೇ ಆರಾಮಾಗಿ ಇದ್ದೇನೆ' ಎಂದು ಕಿರುತೆರೆ ನಟಿ ನಿಯಾ ಶರ್ಮಾ ಅವರು ಹೇಳಿಕೊಂಡಿದ್ದಾರೆ.

  'ಗೋಲ್ಡ್ ಆವಾರ್ಡ್ಸ್' ಸಮಾರಂಭದಲ್ಲಿ ನಿಯಾ ಶರ್ಮಾ ಅವರು ಸ್ಪೆಷಲ್ ಗೌನ್ ಧರಿಸಿ ಫೋಸ್ ಕೊಟ್ಟ ಪರಿ ನೋಡಿ ಕೆಳಗಿನ ಸ್ಲೈಡುಗಳಲ್ಲಿ...

  -
  -
  -
  -
  -
  -
  -
  -
  -
  -

  English summary
  9th Zee TV Boroplus Gold Awards 2016: Hindi Serial 'Jamai Raja' fame Actress Nia Sharma's bold avatar at the Red Carpet. Actress Nia Sharma exposed a little more than expected during the annual ‘Gold Awards’. The small screen hottie turned heads at the red carpet by creating her bold style statement in a metallic Kaftan style gown.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more