'ಗೋಲ್ಡ್' ಮತ್ತು 'ಸತ್ಯಮೇವ ಜಯತೇ'ಯ ಎಂಟ್ರಿಗೆ ಬಾಕ್ಸ್ ಆಫೀಸ್ ಚಿಂದಿ
ಸ್ವಾತಂತ್ಯ ದಿನಾಚರಣೆಯ ವಿಶೇಷವಾಗಿ ಬಾಲಿವುಡ್ ನಲ್ಲಿ ಎರಡು ಸೂಪರ್ ಹಿಟ್ ಸಿನಿಮಾಗಳು ತೆರೆಕಂಡಿವೆ. ಈ ಎರಡು ಚಿತ್ರಗಳು ಮೊದಲ ದಿನವೇ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಿವೆ.
ಹೌದು, ಅಕ್ಷಯ್ ಕುಮಾರ್ ಅಭಿನಯದ 'ಗೋಲ್ಡ್' ಹಾಗೂ ಜಾನ್ ಅಬ್ರಹಾಂ ಅಭಿನಯದ 'ಸತ್ಯ ಮೇವ ಜಯತೇ' ಚಿತ್ರಗಳು ಒಪನಿಂಗ್ ದಿನವೇ ಕೆಲಕ್ಷನ್ ನಲ್ಲಿ ಕಮಾಲ್ ಮಾಡಿದೆ. ಈ ಎರಡು ಸಿನಿಮಾ ಸೇರಿ ಮೊದಲ ದಿನ (ಆಗಸ್ಟ್ 15) ಸುಮಾರು 45.5 ಕೋಟಿ ಕಲೆಕ್ಷನ್ ಮಾಡಿದೆ.
ಎರಡು ಚಿತ್ರಗಳಿಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಎರಡು ಚಿತ್ರಗಳು ದೇಶಭಕ್ತಿಯ ಕಥಾಹಂದರ ಹೊಂದಿರುವುದು ವಿಶೇಷ. ಹೀಗಾಗಿ, ಬಿಟೌನ್ ಪ್ರೇಕ್ಷಕರು ಸ್ವಾತಂತ್ಯ ದಿನಾಚರಣೆಯನ್ನ ಈ ಚಿತ್ರಗಳ ಜೊತೆ ಆಚರಿಸಿದ್ದಾರೆ.

ಬಾಲಿವುಡ್ ನ ಖ್ಯಾತ ಚಿತ್ರ ವಿಶ್ಲೇಶಕ ತರಣ್ ಆದರ್ಶ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಮೊದಲ ದಿನ 'ಗೋಲ್ಡ್' ಸಿನಿಮಾ 25.25 ಕೋಟಿ ಗಳಿಕೆ ಕಂಡಿದೆಯಂತೆ. ಇದು ಅಕ್ಷಯ್ ಕುಮಾರ್ ಸಿನಿಮಾದ ದೊಡ್ಡ ಕಲೆಕ್ಷನ್ ಕೂಡ ಆಗಿದೆ.
ಇನ್ನು ಜಾನ್ ಅಬ್ರಹಾಂ, ಐಶಾ ಶರ್ಮಾ, ಮನೋಜ್ ಬಾಜಪಾಯ್ ಅಭಿನಯದಲ್ಲಿ ತೆರೆಕಂಡಿರುವ 'ಸತ್ಯಮೇವ ಜಯತೇ' ಸಿನಿಮಾ ಮೊದಲ ದಿನ 20.52 ಕೋಟಿ ಕಲೆಕ್ಷನ್ ಮಾಡಿದೆ.
ಈ ವರ್ಷದಲ್ಲಿ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಪೈಕಿ ಗೋಲ್ಡ್ ಮೂರನೇ ಸ್ಥಾನ ಹಾಗೂ ಸತ್ಯಮೇವಜಯತೇ ಐದನೇ ಸ್ಥಾನ ಪಡೆದುಕೊಂಡಿದೆ. ಮೊದಲ ಸ್ಥಾನದಲ್ಲಿ 'ಸಂಜು' (34.75), 'ರೇಸ್-3' (29.17), 'ಗೋಲ್ಡ್' (25.25), 'ಭಾಗಿ-2' (25.10), 'ಸತ್ಯಮೇವಜಯತೇ' (20.52) ಚಿತ್ರಗಳಿವೆ.


Click it and Unblock the Notifications











