twitter
    For Quick Alerts
    ALLOW NOTIFICATIONS  
    For Daily Alerts

    ಬಾಲಿವುಡ್ 2014: ವರ್ಷದ ಕೆಟ್ಟ ನಟ, ನಟಿ ಪ್ರಶಸ್ತಿ ಪ್ರಕಟ

    |

    ಬಾಲಿವುಡ್ ಚಿತ್ರೋದ್ಯಮದಲ್ಲಿ ಏನು ಮಾಡಿದರೂ ಸುದ್ದಿ. ಉತ್ತಮವಾಗಿ ನಟಿಸಿದರೂ ಸುದ್ದಿ, ಕೆಟ್ಟದಾಗಿ ನಟಿಸಿದರೂ, ಲಿಪ್ ಲಾಕ್ ಮಾಡಿದರೂ, ಬಟ್ಟೆ ಬಿಚ್ಚಿದರೂ, ಮೈತುಂಬಾ ಬಟ್ಟೆ ಹಾಕಿಕೊಂಡರೂ ಎಲ್ಲವೂ ಸುದ್ದಿ.

    ಕಳೆದ ಕೆಲವು ವರ್ಷಗಳಿಂದ ಹಿಂದಿ ಚಿತ್ರೋದ್ಯಮದಲ್ಲಿ ವರ್ಷದ ಕೆಟ್ಟ ನಟ, ನಟಿಯರನ್ನು ಆಯ್ಕೆ ಮಾಡಿ ಅಂತಹಾ ಪುಣ್ಯಾತ್ಮರಿಗೆ ಪ್ರಶಸ್ತಿ ಕೊಡುವ ವಿಶಿಷ್ಟ ಸಂಪ್ರದಾಯ ಬಾಲಿವುಡ್ ನಲ್ಲಿದೆ.

    Random Magazine ಪ್ರಾಯೋಜಿಸುವ 'ಗೋಲ್ಡನ್ ಖೇಲಾ' ಹೆಸರಿನಲ್ಲಿ ನಡೆಯುವ 2014ರ ಸಾಲಿನ ಈ ಪ್ರಶಸ್ತಿ ಪ್ರಧಾನ ಸಮಾರಂಭ ಮುಂಬೈನಲ್ಲಿ ಮೊನ್ನೆ ಶನಿವಾರ (ಮಾ 21) ನಡೆದಿದೆ. (ನಾನು ಗೋಮಾಂಸ ತಿನ್ನುವ ಹಿಂದೂ)

    2009ರಿಂದ ಆರಂಭವಾಗಿರುವ ಈ ಪ್ರಶಸ್ತಿ ಪಟ್ಟಿಯಲ್ಲಿ ಕೆಟ್ಟ ನಟ, ನಟಿ, ಚಿತ್ರ ನಿರ್ದೇಶಕ, ಸಹನಟ, ಸಹನಟಿ, ಕಿರಿಕಿರಿಯಾಗುವ ಹಾಡು, ಸಾಹಿತ್ಯ ವಿಭಾಗದಲ್ಲಿನ ಕೆಟ್ಟ ಸಾಧನೆಗಾಗಿ ಪ್ರಶಸ್ತಿ ನೀಡಲಾಗುತ್ತದೆ.

    ಹಾಗಂತ ಚಿತ್ರ ಜಗತ್ತಿನಲ್ಲಿ ಇವರುಗಳು ಅಂಬೆಗಾಲು ಇಡುತ್ತಿರುವವರಂತೂ ಅಲ್ಲವೇ ಅಲ್ಲ. ಘಟಾನುಗಟಿಗಳ ಹೆಸರೂ ಈ ಪಟ್ಟಿಯಲ್ಲಿದೆ. ಹಾಗಾದರೆ, 2014ರ ಸಾಲಿನಲ್ಲಿ (ಬಿಡುಗಡೆಯಾದ ಚಿತ್ರಗಳು) ಈ ಪ್ರಶಸ್ತಿಗೆ ಭಾಜನರಾದವರು ಯಾರು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

    ವರ್ಷದ ಕೆಟ್ಟ ನಟಿ

    ವರ್ಷದ ಕೆಟ್ಟ ನಟಿ

    ಸತತವಾಗಿ ಸೋನಾಕ್ಷಿ ಸಿನ್ಹಾ ಈ ವಿಭಾಗದಲ್ಲಿ ಹ್ಯಾಟ್ರಿಕ್ ಸಾಧಿಸಿದ್ದಾರೆ . ಕಳೆದ ವರ್ಷದ ಲಿಂಗಾ, ಆಕ್ಷನ್ ಜ್ಯಾಕ್ಷನ್, ಹಾಲಿಡೇ ಚಿತ್ರದ ಕಳಪೆ ನಟನೆಗಾಗಿ ಸೋನಾಕ್ಷಿಗೆ ಈ ಪ್ರಶಸ್ತಿ ಲಭಿಸಿದೆ.

    ವರ್ಷದ ಕೆಟ್ಟ ಚಿತ್ರ

    ವರ್ಷದ ಕೆಟ್ಟ ಚಿತ್ರ

    ಸಾಜಿದ್ ಖಾನ್ ನಿರ್ದೇಶನದ 'ಹಂಶಕಲ್' ಕೆಟ್ಟ ಚಿತ್ರವಾಗಿ ಹೊರಹೊಮ್ಮಿದೆ. ಚಿತ್ರದ ಪ್ರಮುಖ ತಾರಾಗಣದಲ್ಲಿ ಸೈಫ್ ಆಲಿ ಖಾನ್, ರಿತೇಶ್ ದೇಶಮುಖ್, ಬಿಪಾಶ, ತಮನ್ನಾ ಮುಂತಾದವರಿದ್ದಾರೆ.

    ವರ್ಷದ ಕೆಟ್ಟ ನಟ

    ವರ್ಷದ ಕೆಟ್ಟ ನಟ

    ಆಲಿ ಅಬ್ಬಾಸ್ ಜಾಫರ್ ನಿರ್ದೇಶನದ 'ಗುಂಡೇ' ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ಅರ್ಜುನ್ ಕಪೂರ್ 2014ರ ವರ್ಷದ ಕೆಟ್ಟ ನಟನಾಗಿ ಹೊರಹೊಮ್ಮಿದ್ದಾರೆ.

    ವರ್ಷದ ಕೆಟ್ಟ ನಿರ್ದೇಶಕ

    ವರ್ಷದ ಕೆಟ್ಟ ನಿರ್ದೇಶಕ

    ಆಕ್ಷನ್ ಜ್ಯಾಕ್ಷನ್ ಚಿತ್ರದ ಕಳಪೆ ನಿರ್ದೇಶನಕ್ಕಾಗಿ ಪ್ರಭುದೇವ ಅವರಿಗೆ ವರ್ಷದ ಕೆಟ್ಟ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಅಜಯ್ ದೇವಗನ್, ಸೋನಾಕ್ಷಿ, ಯಾಮಿ ಗೌತಮ್ ಮುಂತಾದವರು ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.

    ಸ್ಪೆಷಲ್ ಅವಾರ್ಡ್

    ಸ್ಪೆಷಲ್ ಅವಾರ್ಡ್

    ಅಮೀರ್ ಖಾನ್ ಅಭಿನಯದ, ರಾಜಕುಮಾರ್ ಹಿರಾನಿ ನಿರ್ದೇಶನದ ಪಿಕೆ ಚಿತ್ರ ಕಾರಣವೇ ಇಲ್ಲದ ಕಾರಣಕ್ಕಾಗಿ ವಿವಾದ ಹುಟ್ಟಿಸಿದ ಚಿತ್ರ ಎನ್ನುವ ಕಾರಣಕ್ಕಾಗಿ ಪ್ರಶಸ್ತಿ ಪಡೆದಿದೆ.

    ಇತರ ಪ್ರಶಸ್ತಿಗಳು

    ಇತರ ಪ್ರಶಸ್ತಿಗಳು

    ಹೃತಿಕ್ ರೋಶನ್ ಅವರ ಬ್ಯಾಂಗ್ ಬ್ಯಾಂಗ್ ಕೆಟ್ಟ ಸೀಕ್ವೆಲ್, ದಿ ಎಕ್ಸ್ ಪೋಸ್ ಚಿತ್ರದ ಸಾಹಿತ್ಯಕ್ಕಾಗಿ ಶಬ್ಬೀರ್ ಅಹಮದ್, ಹೀರೋಪತ್ನಿ ಚಿತ್ರದ ಚೊಚ್ಚಲ ನಟನೆಗಾಗಿ ಟೈಗರ್ ಶ್ರೋಫ್, ಯಾರಿಯಾನ್ ಚಿತ್ರದ 'ಬ್ಲೂ ಹೇ ಪಾನಿ' ಕೆಟ್ಟ ಹಾಡಿನ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ.

    English summary
    Golden Kela Awards 2015: Sonakshi Sinha, Arjun Kapoor Take Worst Acting Trophies and Prabhudeva is a worst director.
    Tuesday, March 24, 2015, 9:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X