For Quick Alerts
  ALLOW NOTIFICATIONS  
  For Daily Alerts

  ನಟಿ ರಶ್ಮಿಕಾ ಮಂದಣ್ಣ ವತಿಯಿಂದ ಡಬಲ್‌ ಧಮಾಕ ಸುದ್ದಿ!

  |

  ನಟಿ ರಶ್ಮಿಕಾ ಮಂದಣ್ಣ ಸದ್ಯ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು ಸೇರಿದಂತೆ ರಶ್ಮಿಕಾ ಬಾಲಿವುಡ್ ಸಿನಿಮಾಗಳಲ್ಲೂ ಫುಲ್‌ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಸಿನಿಮಾ ಅಪ್ಡೇಟ್‌ಗಾಗಿ ಕಾಯುತ್ತಿದ್ದ ಪ್ರೇಕ್ಷಕರಿಗೆ ಸದ್ಯ ಬಂಪರ್‌ ಸುದ್ದಿ ಸಿಕ್ಕಿದೆ. ರಶ್ಮಿಕಾ ಅಭಿನಯದ ಎರಡೂ ಸಿನಿಮಾಗಳಿಂದ ಬಂಪರ್‌ ಸುದ್ದಿ ಹೊರ ಬಂದಿದೆ. ಟಾಲಿವುಡ್‌ನಲ್ಲಿ ರಶ್ಮಿಕಾಳ "ಪುಷ್ಪ" ಸಿನಿಮಾ ಸದ್ದು ಮಾಡುತ್ತಾ ಇದ್ದರೆ. ಬಾಲಿವುಡ್‌ನಲ್ಲಿ "ಮಿಷನ್‌ ಮಜ್ನು" ಸದ್ದು ಜೋರಾಗಿದೆ.

  ದೀಪಾವಳಿಗೆ ಸಂಭ್ರಮ ಹೆಚ್ಚಿಸಲಿದೆ ತೆಲುಗಿನ ಪುಷ್ಪ!

  ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್‌ ಅಭಿನಯದ ಪುಷ್ಪ ಸಿನಿಮಾ ಸಿಹಿ ಸುದ್ದಿಯನ್ನ ಕೊಟ್ಟಿದೆ. ದೀಪಾವಳಿಯ ಪ್ರಯುಕ್ತ ಇದೇ ನವೆಂಬರ್‌ 4ಕ್ಕೆ ಪುಷ್ಪ ಸಿನಿಮಾದ ಹೊಸ ಟೀಸರ್ ರಿಲೀಸ್‌ ಆಗ್ತಿದೆ. ಈಗಾಗಲೇ ಪುಷ್ಪ ಟ್ರೇಲರ್‌ ಮತ್ತು ಹಾಡುಗಳಿಂದ ಎಲ್ಲರ ಮನಗೆದ್ದಿದೆ. ಅಲ್ಲು ಅರ್ಜುನ್‌ ಮತ್ತು ಸುಕುಮಾರ್‌ ಕಾಂಬಿನೇಷನ್‌ ಅನ್ನುವ ಕಾರಣಕ್ಕೇನೆ ಪುಷ್ಪ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಅದರಲ್ಲೂ ಚಿತ್ರದ ಒಂದಷ್ಟು ತುಣುಕುಗಳು ರಿಲೀಸ್‌ ಆದ ಬಳಿಕ ಸಿನಿಮಾದ ಮೇಲೆ ಎಲ್ಲಿಲ್ಲದ ನಿರೀಕ್ಷೆ ಹುಟ್ಟಿಸಿದೆ. ಇನ್ನೂ ಇತ್ತೀಚೆಗೆ ರಿಲೀಸ್‌ ಆದ ಸಾಮಿ ಹಾಡು ಕೂಡ ಸಿಕ್ಕಾಪಟ್ಟೆ ಸದ್ದು ಮಾಡಿದೆ.

  ಸಾಮಿ ಹಾಡಿನಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಅಭಿಮಾನಿ ಬಳಗ ಮೆಚ್ಚಿ ಕೊಂಡಾಡಿದೆ. ರಶ್ಮಿಕಾ ಹಳ್ಳಿ ಹುಡುಗಿಯಾಗಿ ರಾ ಲುಕ್‌ ನಲ್ಲಿ ಭರ್ಜರಿ ಸ್ಟೆಪ್ಸ್‌ ಹಾಕಿದ್ದಾರೆ, ರಶ್ಮಿಕ ಡಾನ್ಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಮೂಲಕ ರಶ್ಮಿಕಾ ಸಿನಿಮಾ ರಂಗದಲ್ಲಿ ಮತ್ತೊಂದು ದಾಖಲೆ ಮಾಡಲಿದ್ದಾರೆ. ಪುಷ್ಪ ರಶ್ಮಿಕಾ ಸಿನಿಮಾ ಜೀವನದಲ್ಲಿ ಒಂದು ಮೈಲಿಗಲ್ಲಾಗಿ ಉಳಿಯಲಿದೆ.

  ರಶ್ಮಿಕಾ ಮೊದಲ ಬಾಲಿವುಡ್‌ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್

  ನಟಿ ರಶ್ಮಿಕಾ ಮಂದಣ್ಣ ಸ್ಯಾಂಡಲ್‌ವುಡ್‌ ಬಳಿಕ ತಮಿಳು, ತೆಲುಗಿನಲ್ಲಿ ಮಾತ್ರವಲ್ಲದೇ ಬಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ಬಾಲಿವುಡ್‌ನ ಮಿಷನ್‌ ಮಜ್ನು ಸಿನಿಮಾದ ಮೂಲಕ ತಮ್ಮ ಬಿಟೌನ್‌ ಜರ್ನಿಯನ್ನು ರಶ್ಮಿಕಾ ಶುರು ಮಾಡಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ನಟ ಸಿದ್ಧಾರ್ಥ್ ಮಲ್ಹೋತ್ರ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಮಿಷನ್‌ ಮಜ್ನು ತೆರೆಗೆ ಬರೋಕೆ ಸಜ್ಜಾಗಿದೆ. 2022 ಮೇ 13 ರಂದು ಮಿಷನ್‌ ಮಜ್ನು ತೆರೆಗೆ ಬರಲಿದೆ. ಈ ವಿಚಾರವನ್ನು ಚಿತ್ರತಂಡ ಅಧಿಕೃತವಾಗಿ ಪ್ರಕಟ ಮಾಡಿದೆ. ಈ ಚಿತ್ರದೊಂದಿಗೆ ರಶ್ಮಿಕಾ ಮಂದಣ್ಣ ಅಮಿತಾಬ್‌ ಬಚ್ಚನ್‌ ಜೊತೆಗೆ ಗುಡ್‌ ಬೈ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಾ ಇದ್ದಾರೆ. ಸದ್ಯ ರಶ್ಮಿಕಾಳ ಮೊದಲ ಬಾಲಿವುಡ್‌ ಸಿನಿಮಾ ಆಕೆಯ ಕೈ ಹಿಡಿಯುತ್ತಾ..? ಚಿತ್ರ ರಿಲೀಸ್‌ ಬಳಿಕ ಬಾಲಿವುಡ್‌ನಲ್ಲಿ ರಶ್ಮಿಕಾಗೆ ಆಫರ್‌ಗಳು ಹೆಚ್ಚಾಗುತ್ತವೆಯಾ ಎನ್ನುವ ಬಗ್ಗೆ ಕುತೂಹಲ ಮೂಡಿದೆ. ಬಾಲಿವುಡ್‌ನಲ್ಲಿ ಮೊದಲ ಚಿತ್ರ ರಶ್ಮಿಕಾಗೆ ಸಕ್ಸಸ್ ಕೊಟ್ಟರೆ ಆಕೆಯನ್ನು ಬಾಲಿವುಡ್‌ನಲ್ಲೇ ಠಿಕಾಣಿ ಹೂಡೋದ್ರಲ್ಲಿ ನೋ ಡೌಟ್.

  ಇದೆಷ್ಟೇ ಅಲ್ಲಾ ನಟಿ ರಶ್ಮಿಕಾಗೆ ಅದಾಗಲೇ ಸಾಲು ಸಾಲು ಆಫರ್‌ಗಳು ಬಾಲಿವುಡ್‌ನಲ್ಲಿ ಬರುತ್ತಿವೆ ಅಂತೆ. ರಶ್ಮಿಕಾ ಕೂಡ ಒಂದಷ್ಟು ಕತೆಗಳನ್ನ ಕೇಳುತ್ತಾರೆ. ಆದ್ರೆ ಸದ್ಯ ರಶ್ಮಿಕಾ ತಮ್ಮ ಮೊದಲ ಬಾಲಿವುಡ್‌ ಚಿತ್ರದ ರಿಲೀಸ್‌ಗಾಗಿ ಕಾಯುತ್ತಿದ್ದಾರೆ. ಮೊದಲ ಸಿನಿಮಾದಲ್ಲಿ ಬಿಟೌನ್‌ ಪ್ರೇಕ್ಷಕರ ಜೊತೆಗೆ, ಬಿಟೌನ್‌ ಮಂದಿ ಆಕೆಯನ್ನ ಹೇಗೆ ಸ್ವೀಕರಿಸಲಿದ್ದಾರೆ ಅನ್ನೋ ಕುತೂಹ ಸ್ವತಃ ರಶ್ಮಿಕಾಗೂ ಇದೆ.

  ಅದೇನೆ ಆದರೂ ಕನ್ನಡ ಸಿನಿಮಾ ರಂಗದಿಂದ ನಾಯಕಿಯಾಗಿ ಪ್ರಯಾಣ ಆರಂಭಿಸಿದ ರಶ್ಮಿಕಾ ಇಂದು ಬಾಲಿವುಡ್‌ಲ್ಲೂ ಬ್ಯುಸಿರುವುದು
  ಕನ್ನಡಿಗರಿಗೂ ಹೆಮ್ಮೆ.

  English summary
  Good News From Rashmika Mandanna Movies,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X